»   » ಸಂದರ್ಶನ: ಎಡಿಟರ್ ಶ್ರೀಕಾಂತ್ ಬದ್ಮಾಶ್ ರಿವರ್ಸ್ ಸ್ಕ್ರೀನ್ ಪ್ಲೇ ಬಗ್ಗೆ

ಸಂದರ್ಶನ: ಎಡಿಟರ್ ಶ್ರೀಕಾಂತ್ ಬದ್ಮಾಶ್ ರಿವರ್ಸ್ ಸ್ಕ್ರೀನ್ ಪ್ಲೇ ಬಗ್ಗೆ

By: ಮಹೇಶ್ ಮಲ್ನಾಡ್
Subscribe to Filmibeat Kannada

ಬದ್ಮಾಶ್ ಚಿತ್ರ ಏಕೆ ನೋಡಬೇಕು? ಚಿತ್ರತಂಡ, ಧನಂಜಯ್, ಆಕಾಶ್ ಬಗ್ಗೆ ಉಗ್ರಂ ಖ್ಯಾತಿಯ ಸಂಕಲನಕಾರ ಶ್ರೀಕಾಂತ್ ಹೇಳಿದ್ದೇನು? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ ಪೂರ್ಣ ಪ್ರಮಾಣದ ಸಂದರ್ಶನ ವಿಡಿಯೋದಲ್ಲಿ ನೋಡಿ, ಇಲ್ಲಿ ಸಂದರ್ಶನದ ಸ್ಯಾಂಪಲ್ ನೀಡಲಾಗಿದೆ.

ಚಿತ್ರ ಏಕೆ ನೋಡಬೇಕು?
ಬದ್ಮಾಶ್ ಒಳ್ಳೆ ಕಥೆ, ಮೇಕಿಂಗ್ ಇದೆ, ಪ್ರಡ್ಯೂಸರ್ ನಿಂದ ಲೈಟ್ ಬಾಯ್ ತನಕ ಎಲ್ಲರೂ ಹಾರ್ಡ್ ವರ್ಕ್ ಮಾಡಿದ್ದಾರೆ. ಇಷ್ಟಪಟ್ಟು ಕೆಲ್ಸ ಮಾಡಿದ್ದಾರೆ. ಹೀಗಾಗಿ ಚಿತ್ರದ ಗೆಲುವಿನ ನಿರೀಕ್ಷೆ ಎಲ್ಲರಿಗೂ ಸಹಜವಾಗಿದೆ.

ಈ ಚಿತ್ರ ಒಪ್ಪಿಕೊಳ್ಳಲು ಏನು ಕಾರಣ?
ಈ ಚಿತ್ರ ಒಪ್ಪಿಕೊಳ್ಳಲು ಕಥೆ ಮುಖ್ಯ. ಈ ಚಿತ್ರದ ಸೆಕೆಂಡ್ ಹಾಫ್ ನಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇದೆ ಇದು ಹೊಸ ರೀತಿ ಪ್ರಯೋಗ.

ಈ ಚಿತ್ರದ ಎಡಿಟಿಂಗ್ ಎಷ್ಟು ಚಾಲೆಂಜಿಂಗ್ ಇತ್ತು?
ಈ ಚಿತ್ರದ ಶುರುವಾಗಿ ಎರಡೂವರೆ ವರ್ಷ ಆಯಿತು. ನಿರ್ಮಾಪಕ ರವಿ ಕಶ್ಯಪ್ ಯುಎಸ್ ನಲ್ಲಿದ್ದಾರೆ. ಆದ್ರೆ, ಎಡಿಟಿಂಗ್ ಗೆ ಎರಡು ಮೂರು ತಿಂಗಳು ಹಿಡಿಯಿತು, ಚೆನ್ನೈನಲ್ಲಿ ಫೈನಲ್ ಕಾಪಿ ನೋಡಿದ ಮೇಲೆ ಎಲ್ಲರಿಗೂ ಸಕತ್ ಥ್ರಿಲ್ ಕೊಟ್ಟಿತು.

Badmaash Film Editor Srikanth Interview- Filmibeat Kannada Exclusive

ಧನಂಜಯ್ ಬಗ್ಗೆ
ಈ ಚಿತ್ರದಲ್ಲಿ ಹತ್ತು ರೀತಿ ಗೆಟಪ್ ಇದೆ. ಇಷ್ಟು ದಿನ ಮಾಡಿದ ಸಿನಿಮಾ ಬಿಟ್ಟು ಇದು ಬೇರೆಯದೇ ರೀತಿಯಾದ ಮೈಲೇಜ್ ಸಿಗಲಿದೆ. ಕೆರಿಯರ್ ನಲ್ಲಿ ಬೆಸ್ಟ್ ಸಿನಿಮಾ ಆಗಲಿದೆ.

ನಿರ್ದೇಶಕ ಆಕಾಶ್ ಹಾಗೂ ಟೆಕ್ಕಿಗಳ ತಂಡ

ಎಲ್ಲರಲ್ಲೂ ಹೊಸತನದ ಹುಡುಕಾಟವಿದೆ. ಸಿನಿಮಾ ಬಗ್ಗೆ ಒಳ್ಳೆ Passion ಇಟ್ಟುಕೊಂಡಿದ್ದಾರೆ. ಸಿನಿಮಾ ಬಗ್ಗೆ ಆಸಕ್ತಿವಹಿಸಿಕೊಂಡು ಪ್ರಚಾರ ನಡೆಸುತ್ತಿರುವ ರೀತಿಯೇ ಎಲ್ಲರನ್ನು ಗಮನ ಸೆಳೆಯುತ್ತಿದೆ. 10 ಮಾರುತಿ ವ್ಯಾನ್ ತೆಗೆದುಕೊಂಡು ಹಳೆ ಕಾಲದಲ್ಲಿ ಮಾಡುವಂತೆ ಹಳ್ಳಿ ಹಳ್ಳಿಗೂ ಹೋಗಿ ಚಿತ್ರದ ಪ್ರಚಾರ ಮಾಡಿದ್ದಾರೆ.

ಸೆನ್ಸಾರ್ ಕಟ್ ಬಗ್ಗೆ ನಿಮ್ಮ ಅನಿಸಿಕೆ
ಸೆನ್ಸಾರ್ ಅವರು ಸಾಮಾನ್ಯವಾಗಿ ತಪ್ಪಾಗಿ ಕೊಡುವುದಿಲ್ಲ. ಇವತ್ತಿನ ಮಕ್ಕಳಿಗೆ ಕೆಟ್ಟ ಪದಗಳು ತಲುಪಬಾರದು ಎಂಬ ಉದ್ದೇಶ ಇರುತ್ತದೆ. ನಾನು ಇಷ್ಟು ದಿನ ಮಾಡಿದ ಸಿನಿಮಾಗಳಲ್ಲಿ ಉಗ್ರಂ, ರಥಾವರ, ಇಷ್ಟಕಾಮ್ಯ ಯಾವುದೇ ಇರಬಹುದು ಸೀನ್ ಡಿಲೀಟ್ ವಂಥ ಸನ್ನಿವೇಶ ಬರಲಿಲ್ಲ. ಈಗ ಬದ್ಮಾಶ್ ನಲ್ಲಿ 'ಗಂಗೂಲಿ' ಪದ ತೆಗೆದು ಹಾಕುವಂತೆ ಸೂಚಿಸಿದರು.

ಉಗ್ರಂಗೆ ರಾಜ್ಯ ಪ್ರಶಸ್ತಿ ಬಂದ ಬಗ್ಗೆ
ನಾನು 19ವರ್ಷದಿಂದ ಸಿನಿಮಾರಂಗದಲ್ಲಿದ್ದೇನೆ ನನ್ನನ್ನು ಗುರುತಿಸಿದ್ದು ತಡವಾಯಿತು ಎಂದು ಅನ್ನಿಸಿಲ್ಲ. ಇಂಡಸ್ಟ್ರಿ ಎಲ್ಲವನ್ನು ಕೊಟ್ಟಿದೆ. ಈ ಅವಾರ್ಡ್ ಉಗ್ರಂ ಟೀಂನ ಎಲ್ಲರಿಗೂ ಸಲ್ಲಬೇಕು. ಡೈರೆಕ್ಟರ್ ಆ ರೀತಿ ಶೂಟ್ ಮಾಡದಿದ್ದರೆ ನಾವು ಎಡಿಟ್ ಮಾಡಲು ಆಗುತ್ತಿರಲಿಲ್ಲ.

ಬದ್ಮಾಶ್ ಚಿತ್ರದ ಬಗ್ಗೆ
ಚಿತ್ರದ ಟೀಸರ್ ನೋಡಿ ಸಲ್ಮಾನ್ ಖಾನ್ ಅವರು ಮೆಚ್ಚಿಕೊಂಡರು. 1 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿತು. ತೆಲುಗು ಚಿತ್ರರಂಗದ ಪಿವಿಪಿ ಪಿಕ್ಚರ್ಸ್, ಅಲ್ಲು ಅರ್ಜುನ್ ಫ್ಯಾಮಿಲಿ ಹಾಗೂ ನಾಗಚೈತನ್ಯ ಅವರು ಮಾತನಾಡಿದ್ದಾರೆ. ಪಿವಿಪಿ ಅವರು ಚಿತ್ರವನ್ನು ವೀಕ್ಷಿಸಿ ಮೆಚ್ಚಿದ್ದಾರೆ. ಎಲ್ಲರಿಗೂ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಟೆಕ್ನಿಕಲ್ ಸೌಂಡ್ ಚಿತ್ರ ಬಂದಿರುವುದು ಖುಷಿಕೊಟ್ಟಿದೆ.

English summary
Filmibeat Kannada Exclusive: Badmaash Film editor Srikanth interview. Srikanth, who worked as editor for Ugramm shares his experience and joy of working with director Akash and Actor Dhananjay. Badmaash used reverse screen play in the second half which is makes it unique.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada