For Quick Alerts
  ALLOW NOTIFICATIONS  
  For Daily Alerts

  ಸಂದರ್ಶನ: ಸಿಹಿಕಹಿ ಚಂದ್ರು ಡಬಲ್ ಗೇಮ್ ಆಡ್ತಿದ್ದಾರೆ ಎಂದ ದಯಾಳ್.!

  By Naveen
  |

  'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮದಲ್ಲಿ ಸಖತ್ ರೆಬೆಲ್ ಆಗಿ ಇದ್ದವರು ನಿರ್ದೇಶಕ ದಯಾಳ್ ಪದ್ಮನಾಭನ್. ಏನೇ ಆದರೂ, ದಯಾಳ್ ಪದ್ಮನಾಭನ್ ಫೈನಲ್ ಗೆ ಹೋಗುತ್ತಾರೆ ಎಂಬ ನಿರೀಕ್ಷೆ ಇದ್ದರೂ, ಮೂರೇ ವಾರಕ್ಕೆ 'ದೊಡ್ಮನೆ'ಯಿಂದ ದಯಾಳ್ ಹೊರಗೆ ಬಂದುಬಿಟ್ಟರು. ಅಂದ್ಹಾಗೆ, ಈ ಬಾರಿಯ 'ಬಿಗ್ ಬಾಸ್' ನಿಂದ ಔಟ್ ಆದ ಮೊದಲ ಸೆಲಿಬ್ರಿಟಿ ಕೂಡ ಇದೇ ದಯಾಳ್ ಪದ್ಮನಾಭನ್.

  'ಬಿಗ್ ಬಾಸ್' ಮನೆಯಲ್ಲಿನ ತಮ್ಮ ಅನುಭವ, ಅಲ್ಲಿನ ಗಲಾಟೆ, ಡಬಲ್ ಗೇಮ್, ಕಾಮನ್ ಮ್ಯಾನ್ ಮತ್ತು ತಮ್ಮ ಮೇಲೆ ಬಂದ ಟ್ರೋಲ್ ಗಳ ಬಗ್ಗೆ ಇದೀಗ ದಯಾಳ್ ಮನಬಿಚ್ಚಿ ಮಾತನಾಡಿದ್ದಾರೆ.

  ಅಂದಹಾಗೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಹೊರ ಬಂದ ನಿರ್ದೇಶಕ ದಯಾಳ್ ಪದ್ಮನಾಭನ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸಂದರ್ಶನ ನೀಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ...

  ಸಂದರ್ಶನ : ನವೀನ.ಎಂ.ಎಸ್

  'ಬಿಗ್ ಬಾಸ್' ಮನೆಯಲ್ಲಿ ನಿಮ್ಮ ಅನುಭವ...

  'ಬಿಗ್ ಬಾಸ್' ಮನೆಯಲ್ಲಿ ನಿಮ್ಮ ಅನುಭವ...

  - ತುಂಬ ಒಳ್ಳೆಯ ಅನುಭವ... ಗೊತ್ತಿಲ್ಲದ ಜನರ ಜೊತೆ, ನಾವು ನಮ್ಮತನವನ್ನು ಕಳೆದುಕೊಳ್ಳದೆ ಇರುವುದು ತುಂಬ ಗ್ರೇಟ್ ಎಕ್ಸ್ ಪೀರಿಯನ್ಸ್. ನಾನು ತುಂಬ ಖುಷಿ ಪಟ್ಟೆ.

  'ಬಿಗ್ ಬಾಸ್'ಗೆ ಹೋಗಬೇಕು ಅಂತ ನಿಮಗೆ ಅನಿಸಿದ್ದು ಯಾಕೆ.?

  'ಬಿಗ್ ಬಾಸ್'ಗೆ ಹೋಗಬೇಕು ಅಂತ ನಿಮಗೆ ಅನಿಸಿದ್ದು ಯಾಕೆ.?

  - 'ಬಿಗ್ ಬಾಸ್'ಗೆ ಹೋಗಬೇಕು ಎನ್ನುವುದು ನನಗೆ ಇರಲಿಲ್ಲ. ಅವಕಾಶ ಬಂತು ಅದನ್ನು ಒಪ್ಪಿಕೊಳ್ಳಬೇಕು ಅನಿಸಿತು. ಅದೇ ರೀತಿ 'ಬಿಗ್ ಬಾಸ್' ಮನೆಯಲ್ಲಿ ಎಲ್ಲ ನಿಯಮಗಳನ್ನು ಪಾಲಿಸಿ ನಾನು ನಾನಾಗಿ ಇದ್ದೆ. ಅಲ್ಲಿ ನಾನು ಆಟ ಆಡಲಿಲ್ಲ.

  'ಬಿಗ್ ಬಾಸ್' ಮನೆಗೆ ಹೋಗುವ ಮುನ್ನ, 'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ ಏನಾದರೂ ವ್ಯತ್ಯಾಸ ಆಗಿದ್ಯಾ.?

  'ಬಿಗ್ ಬಾಸ್' ಮನೆಗೆ ಹೋಗುವ ಮುನ್ನ, 'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ ಏನಾದರೂ ವ್ಯತ್ಯಾಸ ಆಗಿದ್ಯಾ.?

  - ಖಂಡಿತ.. ಟ್ರೋಲ್ ಗಳು.. ಈ ರೀತಿಯ ವಿಷಯವನ್ನು ನಿಭಾಯಿಸುವ ಶಕ್ತಿ ಬಂದಿದೆ. ಮುಂಚೆ ಇದಕ್ಕೆ ತುಂಬ ತಲೆ ಕೆಡಿಸಿಕೊಳ್ಳುತ್ತಿದೆ. ಈಗ ಹಾಗಿಲ್ಲ. ಇಷ್ಟ ಪಡುವ ಜನ ಇದ್ದಷ್ಟು, ಬೈಯುವ ಜನ ಕೂಡ ಇರುತ್ತಾರೆ. ಅದನ್ನೆಲ್ಲ ಎದುರಿಸುವ ಮನಃಸ್ಥಿತಿ ಬಂದಿದೆ.

  'ಬಿಗ್ ಬಾಸ್' ಮನೆಯಲ್ಲಿ ನೀವು ಕಲಿತಿರುವ ಪಾಠ...

  'ಬಿಗ್ ಬಾಸ್' ಮನೆಯಲ್ಲಿ ನೀವು ಕಲಿತಿರುವ ಪಾಠ...

  - ನಾವು ನಮ್ಮನ್ನು ಅರ್ಥ ಮಾಡಿಕೊಳ್ಳುವವರ ಜೊತೆ ಮಾತ್ರ ಬಾಳಬೇಕು ಎಂಬುದನ್ನು ಅಲ್ಲಿಂದ ಕಲಿತೆ.

  ನೀವು ಔಟ್ ಆಗಿದ್ದು ನಿಮ್ಮಿಂದ ನಂಬುವುದಕ್ಕೆ ಆಗಲಿಲ್ಲ ಅಂತ ಕಾಣುತ್ತೆ...

  ನೀವು ಔಟ್ ಆಗಿದ್ದು ನಿಮ್ಮಿಂದ ನಂಬುವುದಕ್ಕೆ ಆಗಲಿಲ್ಲ ಅಂತ ಕಾಣುತ್ತೆ...

  - ಹೌದು.. ನನಗೂ ನಂಬುವುದಕ್ಕೆ ಆಗಿರಲಿಲ್ಲ.. ಪ್ರಾರಂಭದಲ್ಲಿ ಎಲ್ಲ ಸ್ಪರ್ಧಿಗಳಿಗೂ ನಿಮ್ಮ ಪ್ರಕಾರ ಪ್ರಬಲ ಪ್ರತಿಸ್ಪರ್ಧಿ ಯಾರು ಅಂತ ಕೇಳಿದರು. ಆಗ 70% ಜನ ನನ್ನ ಹೆಸರು ಹೇಳಿದ್ದರು. ಎಲ್ಲರಿಗೂ ಗೊತ್ತಿದೆ ನಾನು ಟಫ್ ಪ್ಲೇಯರ್ ಅಂತ. ಸೋ.. ಅದಕ್ಕೆ ಎಲ್ಲರಿಗೂ ಶಾಕ್ ಆಗಿದೆ. ಆದರೆ ನಾನು ಅದರ ಬಗ್ಗೆ ತುಂಬ ತಲೆ ಕೆಡಿಸಿಕೊಂಡಿಲ್ಲ.

  ನೀವು ಫಿನಾಲೆ ವರೆಗೂ ಹೋಗ್ತೀರಾ ಅಂತ ಅನೇಕರು ಭಾವಿಸಿದ್ದರು. ಆದ್ರೆ, ಮೂರೇ ವಾರಕ್ಕೆ ಹೊರಗೆ ಬಂದುಬಿಟ್ಟರಲ್ಲ...

  ನೀವು ಫಿನಾಲೆ ವರೆಗೂ ಹೋಗ್ತೀರಾ ಅಂತ ಅನೇಕರು ಭಾವಿಸಿದ್ದರು. ಆದ್ರೆ, ಮೂರೇ ವಾರಕ್ಕೆ ಹೊರಗೆ ಬಂದುಬಿಟ್ಟರಲ್ಲ...

  - ಅಂತಿಮ ತೀರ್ಪು ವಾಹಿನಿ ಮತ್ತು ಜನರ ವೋಟ್ ಅಂತ ಹೇಳುತ್ತಾರೆ. ಆದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ವಾಹಿನಿ ಅಥವಾ ಜನರು.. ಇಬ್ಬರಲ್ಲಿ ಯಾರ ನಿರ್ಧಾರ ಆಗಿದ್ದರೂ ಅದು ನ್ಯಾಯ ಅಂತ ನನಗೆ ಅನಿಸುತ್ತದೆ. ನಾನು ಈ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸೋ.. ನೋ ಕಾಮೆಂಟ್ಸ್.

  ಹಾಲನ್ನು ಎತ್ತಿಟ್ಟ ನಿರ್ಧಾರ ಈಗಲೂ ನಿಮಗೆ ಸರಿ ಅನ್ಸುತ್ತಾ.?

  ಹಾಲನ್ನು ಎತ್ತಿಟ್ಟ ನಿರ್ಧಾರ ಈಗಲೂ ನಿಮಗೆ ಸರಿ ಅನ್ಸುತ್ತಾ.?

  - ಸುದೀಪ್ ಅವರ ಜೊತೆ ಕೂಡ ಇದನ್ನು ಸ್ಪಷ್ಟ ಪಡಿಸಿದ್ದೇನೆ. ಜನರು 24 ಗಂಟೆಗಳಲ್ಲಿ 66 ನಿಮಿಷಗಳನ್ನು ಮಾತ್ರ ನೋಡುತ್ತಾರೆ. ನಮ್ಮಲ್ಲಿ ಏನೇನೋ ಮಾತುಕತೆ ಆಗಿರುತ್ತದೆ. ಆದರೆ ಅದರಲ್ಲಿ ಕೆಲವನ್ನು ಮಾತ್ರ ಪ್ರಸಾರ ಮಾಡುತ್ತಾರೆ. ನಾನು ಈಗಲೂ ಹೇಳುತ್ತೇನೆ ಈ ಘಟನೆಯಲ್ಲಿ ತಪ್ಪು ಮಾಡಿರುವ ಭಾವನೆ ನನ್ನಲ್ಲಿ ಇಲ್ಲ. ನಾನು ಒಬ್ಬನೇ ಅದನ್ನು ಮಾಡಿಲ್ಲ. ಅಲ್ಲಿ ಇದ್ದ ಒಳ್ಳೆಯ ಕಾರಣ ಎಲ್ಲರಿಗೂ ತಲುಪಿಲ್ಲ ಅಷ್ಟೆ.

  ನಿಮ್ಮ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ತುಂಬಾ ನೆಗೆಟಿವ್ ಕಾಮೆಂಟ್ಸ್ ಬರ್ತಿದೆ. ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆ..

  ನಿಮ್ಮ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ತುಂಬಾ ನೆಗೆಟಿವ್ ಕಾಮೆಂಟ್ಸ್ ಬರ್ತಿದೆ. ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆ..

  - ಫೇಸ್ ಬುಕ್ ನಲ್ಲಿ ನೆಗೆಟಿವ್ ಯಾವ ರೀತಿ ಬರುತ್ತದೆ ಅದೇ ರೀತಿ ಪಾಸಿಟಿವ್ ಕಾಮೆಂಟ್ಸ್ ಕೂಡ ಬರುತ್ತದೆ. ಎಷ್ಟೋ ಜನ ನಾನು ದಯಾಳ್ ಅವರಿಗಾಗಿ ಮಾತ್ರ ಕಾರ್ಯಕ್ರಮ ನೋಡಿದೆ ಎಂದು ಹೇಳಿದ್ದಾರೆ. ಪಾಸಿಟಿವ್ ಇದ್ದ ಮೇಲೆ ನೆಗೆಟಿವ್ ಕೂಡ ಇರುತ್ತದೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

  ಸಮೀರಾಚಾರ್ಯಗೆ ಸೂಪರ್ ಅಧಿಕಾರ ಕೊಟ್ಟು ಬಂದ್ರಿ. ಅವರು ಅದನ್ನ ಸರಿಯಾಗಿ ಉಪಯೋಗಿಸಿಕೊಂಡಿದ್ದಾರಾ.?

  ಸಮೀರಾಚಾರ್ಯಗೆ ಸೂಪರ್ ಅಧಿಕಾರ ಕೊಟ್ಟು ಬಂದ್ರಿ. ಅವರು ಅದನ್ನ ಸರಿಯಾಗಿ ಉಪಯೋಗಿಸಿಕೊಂಡಿದ್ದಾರಾ.?

  - ಸಮೀರಾಚಾರ್ಯ ಏನು ಎಂದು ಜನರಿಗೆ ತಿಳಿಯಬೇಕು. ಅದಕ್ಕೆ ಅವರಿಗೆ ಕೊಟ್ಟೆ. ಅದನ್ನು ಅವರು ಜನರಲ್ ಆಗಿ ಉಪಯೋಗಿಸುತ್ತಾರಾ ಅಥವಾ ಸ್ವಾರ್ಥಕ್ಕಾಗಿ ಬಳಸುತ್ತಾರಾ ನೋಡಬೇಕಿತ್ತು. ಅದನ್ನು ಅವರು ಜಾಣ್ಮೆಯಿಂದ ಉಪಯೋಗಿಸಿಕೊಂಡರು.

  ಅಲ್ಲಿರುವವರ ಪೈಕಿ ಯಾರು ಡಬಲ್ ಗೇಮ್ ಆಡ್ತಿದ್ದಾರೆ.?

  ಅಲ್ಲಿರುವವರ ಪೈಕಿ ಯಾರು ಡಬಲ್ ಗೇಮ್ ಆಡ್ತಿದ್ದಾರೆ.?

  - ಸಿಹಿ ಕಹಿ ಚಂದ್ರು ಸರ್.. ದಿವಾಕರ್.. ಜಯ ಶ್ರೀನಿವಾಸನ್ ಮತ್ತು ನಿವೇದಿತಾ ಡಬಲ್ ಗೇಮ್ ಮಾಡುತ್ತಿದ್ದಾರೆ ಅಂತ ಅನಿಸುತ್ತದೆ.

  'ಬಿಗ್ ಬಾಸ್' ಮನೆಯಲ್ಲಿ ನಿಜವಾಗಲೂ, ಕಾಮನ್ ಮ್ಯಾನ್ - ಸೆಲೆಬ್ರಿಟಿ ಅಂತ ಇದ್ಯಾ.? ಅಥವಾ ಅದು ಗೇಮ್ ಪ್ಲಾನ್ ನಾ.?

  'ಬಿಗ್ ಬಾಸ್' ಮನೆಯಲ್ಲಿ ನಿಜವಾಗಲೂ, ಕಾಮನ್ ಮ್ಯಾನ್ - ಸೆಲೆಬ್ರಿಟಿ ಅಂತ ಇದ್ಯಾ.? ಅಥವಾ ಅದು ಗೇಮ್ ಪ್ಲಾನ್ ನಾ.?

  - ಇಲ್ಲ.. ಒಂದೇ ರೀತಿಯಾದ ಕ್ಷೇತ್ರದಲ್ಲಿರುವವರು ಸಾಮಾನ್ಯವಾಗಿಯೇ ಹತ್ತಿರ ಆಗುತ್ತಾರೆ. ಅದೇ ರೀತಿ ಅಲ್ಲಿ ಕೂಡ ಆಗಿದೆ.

  'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ, ಫ್ಯಾಮಿಲಿ ಯಿಂದ ಸಿಕ್ಕ ಪ್ರತಿಕ್ರಿಯೆ ಏನು.?

  'ಬಿಗ್ ಬಾಸ್' ಮನೆಗೆ ಹೋಗಿ ಬಂದ್ಮೇಲೆ, ಫ್ಯಾಮಿಲಿ ಯಿಂದ ಸಿಕ್ಕ ಪ್ರತಿಕ್ರಿಯೆ ಏನು.?

  - ತಪ್ಪು ಮಾಡಿ ಹೋಗಿದ್ದರೆ ನಮ್ಮ ಕುಟುಂಬ ನಮ್ಮನ್ನು ಯಾವ ರೀತಿ ನೋಡುತ್ತಾರೆ ಎನ್ನುವ ಭಾವ ಕಾಡುತ್ತಿತ್ತು. ಆದರೆ ನಾನು ಆ ರೀತಿ ನಡೆದುಕೊಂಡಿಲ್ಲ. ನನ್ನ ಬಗ್ಗೆ ನನ್ನ ಕುಟುಂಬಕ್ಕೆ ಗೊತ್ತು. ನಾನು ಏನೇ ಮಾಡಿದರೂ ಅವರಿಗೆ ಉತ್ತರಿಸಬೇಕಾಗುತ್ತದೆ.

  ನಿಮ್ಮ ಪ್ರಕಾರ ಈ ಬಾರಿ ಯಾರು ಗೆಲ್ಲಬೇಕು?

  ನಿಮ್ಮ ಪ್ರಕಾರ ಈ ಬಾರಿ ಯಾರು ಗೆಲ್ಲಬೇಕು?

  - ಅನುಪಮ ಅಥವಾ ಜೆ.ಕೆ (ಕಾರ್ತಿಕ್ ಜಯರಾಮ್) ಗೆಲ್ಲಬೇಕು

  ಸಮೀರಾಚಾರ್ಯಗೆ ಸೂಪರ್ ಅಧಿಕಾರ ಕೊಟ್ಟ ದಯಾಳ್: ಏನ್ ಆಶ್ಚರ್ಯ.!

  ಕಾಮನ್ ಮ್ಯಾನ್ ಮೇಲೆ ಮಾತ್ರ ನೀವು ಕೋಪಿಸಿಕೊಳ್ತಿದ್ರಲ್ಲ...

  ಕಾಮನ್ ಮ್ಯಾನ್ ಮೇಲೆ ಮಾತ್ರ ನೀವು ಕೋಪಿಸಿಕೊಳ್ತಿದ್ರಲ್ಲ...

  - ಕಾಮನ್ ಮ್ಯಾನ್ ಮೇಲೆ ನಾನು ಕೋಪಿಸಿಕೊಂಡೆ ಎನ್ನುವುದು ತಪ್ಪು. ಕಾಮನ್ ಮ್ಯಾನ್ ನನ್ನನ್ನು ಕೋಪಿಸಿಕೊಳ್ಳುವ ಹಾಗೆ ಮಾಡಿದರು. ರಿಯಾಝ್ ಕಾಮನ್ ಮ್ಯಾನ್ ಅಲ್ಲ.. ಅವರು ಒಬ್ಬ ಆರ್.ಜೆ ಆಗಿ ಬಂದಿದ್ದಾರೆ. ನಾನು ಈ ತಂಡದಲ್ಲಿ ಇರುವುದಕ್ಕೆ ನಾಚಿಕೆ ಆಗುತ್ತದೆ ಅಂತ ಹೇಳಿದೆ. ಆದರೆ ಕಾಮನ್ ಮ್ಯಾನ್ ಇರುವ ತಂಡದಲ್ಲಿ ಇರುವುದಕ್ಕೆ ನಾಚಿಕೆ ಅಂತ ಹೇಳಿಲ್ಲ. ಗೇಮ್ ನ ವಿರುದ್ಧವಾಗಿ ರಿಯಾಝ್ ನಡೆದುಕೊಂಡರು. ಅದಕ್ಕೆ ನಾನು ಪ್ರತಿಕ್ರಿಯೆ ನೀಡಿದೆ.

  'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

  ಯಾವುದೇ ಪ್ಲಾನಿಂಗ್ ಇಲ್ಲದೆ 'ಬಿಗ್ ಬಾಸ್' ಮನೆಗೆ ಹೋದ್ರಿ. ಈಗ ನಿಮಗೆ ಒಂದು ಐಡಿಯಾ ಬಂದಿರುತ್ತೆ. ಮತ್ತೆ 'ಬಿಗ್ ಬಾಸ್' ನಿಮ್ಮನ್ನ ಕರೆದ್ರೆ.?

  ಯಾವುದೇ ಪ್ಲಾನಿಂಗ್ ಇಲ್ಲದೆ 'ಬಿಗ್ ಬಾಸ್' ಮನೆಗೆ ಹೋದ್ರಿ. ಈಗ ನಿಮಗೆ ಒಂದು ಐಡಿಯಾ ಬಂದಿರುತ್ತೆ. ಮತ್ತೆ 'ಬಿಗ್ ಬಾಸ್' ನಿಮ್ಮನ್ನ ಕರೆದ್ರೆ.?

  - ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟರೆ ಖಂಡಿತ ಹೋಗುತ್ತೇನೆ. ನಾನು ಎಂತಹ ಆಟಗಾರ ಎಂದು ತೋರಿಸುತ್ತೇನೆ.

  'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ

  ನಿಮ್ಮ ಹಠವೇ ನಿಮಗೆ ಮೈನಸ್ ಪಾಯಿಂಟ್ ಆಯ್ತಾ.?

  ನಿಮ್ಮ ಹಠವೇ ನಿಮಗೆ ಮೈನಸ್ ಪಾಯಿಂಟ್ ಆಯ್ತಾ.?

  - ಅದು ವಾಹಿನಿಯ ನಿರ್ಧಾರವೋ ಅಥವಾ ಜನರ ನಿರ್ಧಾರವೋ ಗೊತ್ತಿಲ್ಲ. ನಾನು ಆಟದಲ್ಲಿಯೂ ಹಠ ತೋರಿಸುತ್ತಿದೆ. ನನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದಕ್ಕೆ ಸಾಧ್ಯ ಇಲ್ಲ.

  ಅಚ್ಚರಿ.! 'ಬಿಗ್ ಬಾಸ್' ಮನೆಯಿಂದ ಮೊದಲ ಸೆಲೆಬ್ರಿಟಿ ಔಟ್.!

  ನೀವು ಯಾರಿಗೆ ಮಿಸ್ ಮಾಡದೆ ವೋಟ್ ಮಾಡುತ್ತೀರಾ.?

  ನೀವು ಯಾರಿಗೆ ಮಿಸ್ ಮಾಡದೆ ವೋಟ್ ಮಾಡುತ್ತೀರಾ.?

  - ಅನುಪಮಾಗೆ ವೋಟ್ ಹಾಕುತ್ತೇನೆ. ಅನುಪಮ ಕೂಡ ನನ್ನ ರೀತಿ ಆಟ ಆಡುತ್ತಿದ್ದಾಳೆ. ಅವಳು ಅವಳಾಗಿ ಮನೆ ಒಳಗೆ ಇದ್ದಾಳೆ. ಅದ್ದರಿಂದ ಅವಳಿಗೆ ಸಪೋರ್ಟ್ ಮಾಡುತ್ತೇನೆ.

  English summary
  Bigg Boss Kannada 5: Eliminated Contestant Dayal Padmanabhan Interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X