»   » ಹುಟ್ಟುಹಬ್ಬದ ಸಡಗರದಲ್ಲಿ ಸೃಜನ್ ಜೊತೆ ಒಂದ್ ಸಿಂಪಲ್ ಟಾಕ್.!

ಹುಟ್ಟುಹಬ್ಬದ ಸಡಗರದಲ್ಲಿ ಸೃಜನ್ ಜೊತೆ ಒಂದ್ ಸಿಂಪಲ್ ಟಾಕ್.!

By: ಹರ್ಷಿತಾ ರಾಕೇಶ್
Subscribe to Filmibeat Kannada

'ಮಜಾ ಟಾಕೀಸ್' ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆ ಮನಗಳಲ್ಲಿ 'ಮಜಾ ಸ್ಟಾರ್' ಆಗಿ ಜನಪ್ರಿಯತೆ ಗಳಿಸಿರುವ ಸೃಜನ್ ಲೋಕೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಜನ್ಮದಿನದಂದೇ ಸೃಜನ್ ಲೋಕೇಶ್ ಅಭಿನಯಿಸುತ್ತಿರುವ 'ಗೋಲ್ ಮಾಲ್ ಬ್ರದರ್ಸ್' ಚಿತ್ರದ ಮುಹೂರ್ತ ಸಮಾರಂಭ ಇವತ್ತು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು.

ಕುಚ್ಚಿಕ್ಕು ಗೆಳೆಯ ಸೃಜನ್ ಲೋಕೇಶ್ ಗೆ ವಿಶ್ ಮಾಡಿ, 'ಗೋಲ್ ಮಾಲ್ ಬ್ರದರ್ಸ್' ಮುಹೂರ್ತದ ಶಾಟ್ ಗೆ ಕ್ಲಾಪ್ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದು ವಿಶೇಷ. ['ಟಾಕಿಂಗ್ ಸ್ಟಾರ್' ಬರ್ತ್ ಡೇಗೆ 'ಚಾಲೆಂಜಿಂಗ್ ಸ್ಟಾರ್' ಸ್ಪೆಷಲ್ ಗೆಸ್ಟ್]

ಒಂದ್ಕಡೆ ಬರ್ತಡೆ, ಇನ್ನೊಂದ್ಕಡೆ ಹೊಸ ಚಿತ್ರದ ಲಾಂಚ್. ಡಬ್ಕಿ ಡಬಲ್ ಖುಷಿಯಲ್ಲಿದ್ದ ಸೃಜನ್ ಲೋಕೇಶ್ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತಿಗೆ ಸಿಕ್ಕಿದ್ರು. ಆಗ ನಡೆದ 'ಸಿಂಪಲ್ ಟಾಕ್' ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

* ಹ್ಯಾಪಿ ಬರ್ತಡೆ ಸೃಜನ್...

- ಥ್ಯಾಂಕ್ಯು ಸೋ ಮಚ್.
* 'ಮಜಾ ಸ್ಟಾರ್'ಗೆ ಇವತ್ತು ತುಂಬಾ ಮಜಾ ಬಂದ್ಹಾಗಿದೆ.?
- ಮಜಾ ಅನ್ನೋದಕ್ಕಿಂತ ಹೆಚ್ಚು ಇವತ್ತು ತುಂಬಾ ಖುಷಿ ಇದೆ. ವೆರಿ ಹ್ಯಾಪಿ.

* ಬರ್ತಡೆ ಸೆಲೆಬ್ರೇಷನ್ ಹೇಗೆ ನಡೀತಿದೆ. ಸ್ಪೆಷಲ್ ಗಿಫ್ಟ್ ಏನಾದ್ರೂ.?

- ಇದಕ್ಕಿಂತ ಸ್ಪೆಷಲ್ ಗಿಫ್ಟ್ ಸಿಗೋದಕ್ಕೆ ಸಾಧ್ಯ ಇಲ್ಲ. ಯಾಕಂದ್ರೆ ನನ್ನ ಹುಟ್ಟುಹಬ್ಬದ ದಿನ 'ಗೋಲ್ ಮಾಲ್ ಬ್ರದರ್ಸ್' ಸಿನಿಮಾ ಲಾಂಚ್ ಆಗಿದೆ. ಹೀಗಾಗಿ ಇದು ನನ್ನ 'ದಿ ಮೋಸ್ಟ್ ಸ್ಪೆಷಲ್ ಬರ್ತಡೆ'. ['ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!]

* ನಿಮ್ಮ ಬೆಸ್ಟ್ ಫ್ರೆಂಡ್ ದರ್ಶನ್ ಬಂದು ನಿಮಗೆ ವಿಶ್ ಮಾಡಿ, ನಿಮ್ಮ ಸಿನಿಮಾ 'ಗೋಲ್ ಮಾಲ್ ಬ್ರದರ್ಸ್' ಮುಹೂರ್ತಕ್ಕೆ ಕ್ಲಾಪ್ ಮಾಡಿದ್ರು.!

- ಅದೇ ಖುಷಿ ನನಗೆ. ಅವರು ಮಡಿಕೇರಿಯಲ್ಲಿ ಶೂಟಿಂಗ್ ಮಾಡಬೇಕಿತ್ತು. ಆ ಶೆಡ್ಯೂಲ್ ನಿಂದ ಸ್ವಲ್ಪ ಗ್ಯಾಪ್ ತಗೊಂಡು, ನನಗಾಗಿ ಸಮಯ ಮಾಡಿಕೊಂಡು ಇಲ್ಲಿಗೆ ಬಂದು ವಿಶ್ ಮಾಡಿದ್ರು. ದರ್ಶನ್ ಹಾಗೂ ನನ್ನ ಅಮ್ಮ ಇಬ್ಬರೂ ಒಟ್ಟಿಗೆ ಕ್ಲಾಪ್ ಮಾಡಿದ್ದು ನನಗೆ ಖುಷಿ ಆಯ್ತು. [ಚಾಲೆಂಜಿಂಗ್ ಸ್ಟಾರ್ ಗಜ ಮತ್ತು ಟಾಕಿಂಗ್ ಸ್ಟಾರ್ ಸುಜ!]

* 'ಗೋಲ್ ಮಾಲ್ ಬ್ರದರ್ಸ್' ಏನೆಲ್ಲಾ ಗೋಲ್ ಮಾಲ್ ಮಾಡ್ತಾರೆ.?

- ಹೀರೋಯಿನ್ ಗಳಿಗೆ ನಾವು ಗೋಲ್ ಮಾಲ್ ಮಾಡ್ತೀವಿ. ಹೇಗೆ ಮಾಡ್ತೀವಿ ಅನ್ನೋದನ್ನ ಸಿನಿಮಾದಲ್ಲಿ ನೋಡಿ...

* 'ಗೋಲ್ ಮಾಲ್ ಬ್ರದರ್' ಆಗಿ ನಿಮ್ಮ ಪಾತ್ರದ ಬಗ್ಗೆ ಹೇಳಿ...

ಮೂರು ಜನ ಅವಕಾಶವಾದಿ. ಅದು ಕಾಮಿಡಿ ಟ್ರ್ಯಾಕ್ ನಲ್ಲಿ ಸಾಗಲಿದೆ.

* ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಲ್ಲಿ 'ಗೋಲ್ ಮಾಲ್ ಸೀರೀಸ್' ಹಿಟ್ ಆಗಿದೆ. ಅದಕ್ಕೂ ಇದಕ್ಕೂ ಎಲ್ಲಾದರೂ ಲಿಂಕ್ ಇದ್ಯಾ.?

- ಖಂಡಿತ ಇಲ್ಲ. ಹೀರೋಗಳು ಮಾಡುವ 'ಗೋಲ್ ಮಾಲ್'ಗಳೇ ಈ ಸಿನಿಮಾ.

* ಸೃಜ ಜೊತೆ ಚಿಕ್ಕು(ಚಿಕ್ಕಣ್ಣ) ಹೇಗೆ ಅಂತ.?

- ಚಿಕ್ಕು...ಅವನೂ ತರ್ಲೆ, ನಾನೂ ತರ್ಲೆ. ಹೀಗಾಗಿ ಡಬಲ್ ತರ್ಲೆ ಇರುತ್ತೆ ಸಿನಿಮಾದಲ್ಲಿ.

* 'ಮಜಾ ಸ್ಟಾರ್' ಈಗ 'ಟಾಕಿಂಗ್ ಸ್ಟಾರ್' ಆಗಿದ್ದು ಹೇಗೆ.?

- ಇದುವರೆಗೂ ಎಲ್ಲರೂ 'ಮಜಾ ಸ್ಟಾರ್' ಅಂತ ಕರೀತಾಯಿದ್ದರು. ಈಗ ದರ್ಶನ್ ಅವರು ಕೊಟ್ಟಂತ ಹೆಸರು 'ಟಾಕಿಂಗ್ ಸ್ಟಾರ್'.

* ತುಂಬಾ ಮಾತಾಡ್ತೀರಾ ಅಂತ್ಲಾ.?

- ನನ್ನ ಬಂಡವಾಳವೇ ಮಾತು. ಅದು ಬಿಟ್ಟು ಬೇರೇನೂ ಬರಲ್ಲ ನನಗೆ.

* ನಿಮ್ಮ ಪ್ರಾಣಿ ಪ್ರೀತಿ ಬಗ್ಗೆ ಹೇಳಿ...

- ನನಗಿಂತ ಜಾಸ್ತಿ ದರ್ಶನ್ ಗೆ ಪ್ರಾಣಿ ಮೇಲೆ ಪ್ರೀತಿ. ಅವರಿಂದ ಈಗ ನಮಗೂ ಸ್ವಲ್ಪ ಹಂಗ್ಹಂಗೆ ಗಾಳಿ ಬೀಸ್ತಾಯಿದೆ.

* ಈಗ ದರ್ಶನ್ ಫಾರ್ಮ್ ಹೌಸ್ ನಲ್ಲೂ 'ಟಾಕಿಂಗ್ ಸ್ಟಾರ್' ಇದ್ದಾರಲ್ಲ.!

- ಹೌದು, ಆ ಜೋಡಿ ಎತ್ತು ನೋಡಿದ ತಕ್ಷಣವೇ ನಾನು ಹೇಳಿದೆ. 'ಒಂದು ಗಜ, ಇನ್ನೊಂದು ಸೃಜ' ಅಂತ. ಅದೇ ತರಹ ನಾಮಕರಣ ಮಾಡೋಣ ಅಂತ ಒಂದಕ್ಕೆ 'ಚಾಲೆಂಜಿಂಗ್ ಸ್ಟಾರ್ ಗಜ' ಅಂತ, ಮತ್ತೊಂದಕ್ಕೆ 'ಟಾಕಿಂಗ್ ಸ್ಟಾರ್ ಸೃಜ' ಅಂತ ಇಟ್ವಿ.

* ಸೃಜನ್ ಗೆ 'ತಾವು ನಕ್ಕು, ಜನರನ್ನ ನಗಿಸುವುದು ಇಷ್ಟವೋ' ಇಲ್ಲ, ಸೀರಿಯಸ್ ಆಗಿ ಜನರನ್ನ ಸೀಟಿನ ತುದಿಗೆ ಕೂರಿಸುವುದು ಇಷ್ಟವೋ.?

- ಜನ ನನ್ನ ಕಾಮಿಡಿ ಇಷ್ಟಪಡುವುದರಿಂದ ನಾನು ಅದನ್ನೇ ಮುಂದುವರಿಸಬೇಕು ಅನ್ಸುತ್ತೆ. ಜೊತೆಗೆ ನನಗೆ ಬರುವಂತಹ ಕ್ಯಾರೆಕ್ಟರ್ ಗಳನ್ನೂ ಸ್ವೀಕರಿಸಿ, ಅದಕ್ಕೆ ನ್ಯಾಯ ಒದಗಿಸಬೇಕಾಗುತ್ತದೆ. ಈಗ ನಾನು 'ಚಕ್ರವರ್ತಿ' ಚಿತ್ರದಲ್ಲಿ ಮಾಡುತ್ತಿರುವುದು ಕಂಪ್ಲೀಟ್ ಸೀರಿಯಸ್ ಕ್ಯಾರೆಕ್ಟರ್. ಅದರಲ್ಲಿ ಕಾಮಿಡಿ ಬರಲ್ಲ. ರೆಟ್ರೋ ಲುಕ್ ಇದೆ. ಹೀಗಾಗಿ ನಟನಾಗಿ, ಬಂದ ಎಲ್ಲಾ ಪಾತ್ರಗಳನ್ನ ಅಚ್ಚುಕಟ್ಟಾಗಿ ಅಭಿನಯಿಸೋಕೆ ನನಗೆ ಇಷ್ಟ.

* ಇವತ್ತು ನಿಮ್ಮ ತಾಯಿಯ (ಗಿರಿಜಾ ಲೋಕೇಶ್) ಕಣ್ಣಲ್ಲಿ ಖುಷಿ ಕಾಣ್ತಿತ್ತು..!

- ಇದಕ್ಕಾಗಿ 16 ವರ್ಷ ಸೈಕಲ್ ಹೊಡೆದಿದ್ದೀನಿ. ಸೃಜನ್ ಲೋಕೇಶ್ 'ಟಾಕಿಂಗ್ ಸ್ಟಾರ್' ಆಗುವುದಕ್ಕೆ ಹದಿನಾರು ವರ್ಷ ಬೇಕಾಯ್ತು. ಆ ಹದಿನಾರು ವರ್ಷದ ಸಂತೋಷ ಇವತ್ತು ನನ್ನ ತಾಯಿಯ ಕಣ್ಣಲ್ಲಿ ಕಾಣ್ತಿದೆ.

* ಅಪ್ಪ ಇದ್ದಿದ್ರೆ...

- ಡಬಲ್ ಖುಷಿ ಆಗ್ತಿತ್ತು. ಮಜಾ ಮಾಡ್ಬಿಡ್ತಾಯಿದ್ದೆ. ಅಪ್ಪ ಇದ್ದಾರಲ್ಲ...ನನ್ನ ಮಗ..!

English summary
Kannada Actor, 'Talking Star' Srujan Lokesh is celebrating his 36th birthday today. On this occasion, 'Golmaal Brothers' movie was launched in Kanteerava Studios, Bengaluru. Here is an interview with Srujan Lokesh. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada