»   » ಫಿಲ್ಮಿಬೀಟ್ ಜೊತೆ 'ಡಾನ್ಸಿಂಗ್ ಸ್ಟಾರ್' ಆನಂದ್ ಚಿಟ್ ಚಾಟ್

ಫಿಲ್ಮಿಬೀಟ್ ಜೊತೆ 'ಡಾನ್ಸಿಂಗ್ ಸ್ಟಾರ್' ಆನಂದ್ ಚಿಟ್ ಚಾಟ್

Posted By: ಸುನೀತಾ ಗೌಡ
Subscribe to Filmibeat Kannada

ಕಲರ್ಸ್ ಕನ್ನಡ (ಈಟಿವಿ ವಾಹಿನಿ) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಡಾನ್ಸಿಂಗ್ ಸ್ಟಾರ್" ಸೀಸನ್ 2 ರಿಯಾಲಿಟಿ ಶೋ ಮುಗಿದಿದ್ದು, ಮಾಸ್ಟರ್ ಆನಂದ್, ಸುಶ್ಮಿತಾ ಜೋಡಿ ಟ್ರೋಫಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಅಂತಾ ನೀವು ಕನ್ನಡ ಫಿಲ್ಮಿಬೀಟ್ ನಲ್ಲಿ ಓದಿದ್ದೀರಿ.

ಫೈನಲ್ ಎಪಿಸೋಡ್ ಶನಿವಾರ ಮತ್ತು ಭಾನುವಾರ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತದೆ. ವಿನ್ನರ್ ಆದ ಸಡಗರದಲ್ಲಿರುವ ಮಾಸ್ಟರ್ ಆನಂದ್ ಗೆ ಶುಭಕೋರುತ್ತಾ, 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಚುಟುಕು ಸಂದರ್ಶನ ಇಲ್ಲಿದೆ.

* Congratulations ಆನಂದ್......
 ಥ್ಯಾಂಕ್ ಯು ಸೋ ಮಚ್

Dancing Star Season 2 winner Master Anand chit Chat with Filmibeat Kannada Part 1

* "ಡಾನ್ಸಿಂಗ್ ಸ್ಟಾರ್" ಸೀಸನ್ 2 ವಿನ್ನರ್ ಆಗಿದ್ದೀರಾ, ಹೇಗಿದೆ ಫೀಲಿಂಗ್?

- See ಇದು ಇಡೀ ಟೀಮ್ ಎಫರ್ಟ್. ಓವರ್ ಆಲ್ ನನ್ನೊಬ್ಬರದೇ ಬರಲ್ಲಾ ಇಲ್ಲಿ. ಎಲ್ಲಾ ಟೀಮ್ ಎಫರ್ಟ್ ಹಾಕಿರೋದ್ರಿಂದ, ವೈಯಕ್ತಿಕವಾಗಿ ಅನ್ನೋದಕ್ಕಿಂತ ಈ ಒಂದು ಗೆಲುವು ಇಡೀ ಟೀಮಿಗೆ ಖುಷಿ ಇದೆ.

* ನೀವು ಹುಟ್ಟು ಡಾನ್ಸರ್ ಆಗಿರಲಿಲ್ಲಾ. ಆದ್ರೂ ನಿಮಗೆ ಡಾನ್ಸ್ ಷೋನಲ್ಲಿ ಭಾಗವಹಿಸಬೇಕು ಅಂತಾ ಯಾಕನಿಸಿತು?

- ಇದು ಹೇಗೆ ಅಂದ್ರೆ "ಡಾನ್ಸಿಂಗ್ ಸ್ಟಾರ್" ಸೆಲೆಬ್ರಿಟಿಗಳ ಷೋ, ಇವಾಗ ಕಾಮನ್ ಮ್ಯಾನ್ ಗೆ ಆಡೀಷನ್ ಮಾಡಿ ಕಾಲ್ ಫಾರ್ ಮಾಡೋವಂತಹ ಷೋ ಅಲ್ಲಾ. ಚಾನಲ್ ಆಲ್ ರೆಡಿ ಒಬ್ರು ಸೆಲೆಬ್ರಿಟಿಗೆ ಡೇಟ್ ಯಾವಾಗ ಮ್ಯಾಚ್ ಆಗುತ್ತೋ, ಅವರು ಯಾವಾಗ ಸಿಗ್ತಾರೆ ಅನ್ನೋದನ್ನ ನೋಡ್ಕೊಂಡು ಸೆಲೆಕ್ಟ್ ಮಾಡಲಾಗುತ್ತದೆ.

ಆಸ್ ಇಟ್ ಇಸ್ ನಾನು ಕಲರ್ಸ್ ಕನ್ನಡದಲ್ಲಿ "ರೋಬೋ ಫ್ಯಾಮಿಲಿ" ಸೀರಿಯಲ್ ಮಾಡ್ತಾ ಇದ್ದುದರಿಂದ ನನ್ನನ್ನು ಸೆಲೆಕ್ಟ್ ಮಾಡಿದ್ದಾರೆ. ಮತ್ತು ಅಲ್ಲಿ ಭಾಗವಹಿಸುವ ಎಲ್ಲಾ ಸೆಲೆಬ್ರಿಟಿಗಳು ಒಂದೊಂದು ವರ್ಗವನ್ನು ಪ್ರತಿನಿಧಿಸ್ತಾರೆ. ಉದಾಹರಣೆಗೆ: ಒಬ್ರು ಆರ್.ಜೆ, ಸಿಂಗರ್, ಆರ್ಟಿಸ್ಟ್, ಸೆಂಟಿಮೆಂಟ್ ಆರ್ಟಿಸ್ಟ್ ಅಂತಾ ಇರುತ್ತಾರೆ. ಈವಾಗ ಕಾಮಿಡಿ ಆರ್ಟಿಸ್ಟ್ ಬೇಕು ಅಂತಾದಾಗ ನಾನು ಸೆಲೆಕ್ಟ್ ಆದೆ.

Dancing Star Season 2 winner Master Anand chit Chat with Filmibeat Kannada Part 1

* ನಿಮ್ಮದೇ ಡೈರೆಕ್ಷನ್ ಕಮ್ ಪ್ರೊಡಕ್ಷನಲ್ಲಿ "ರೋಬೋ ಫ್ಯಾಮಿಲಿ" ಸೀರಿಯಲ್ ಬರ್ತಾ ಇದೆ. ಅದಕ್ಕೂ ಡಾನ್ಸ್ ಪ್ರಾಕ್ಟೀಸ್ ಗೂ ಕ್ಲ್ಯಾಷ್ ಆಗ್ತಾ ಇರಲಿಲ್ವಾ?

- ನಾನು ಇಲ್ಲದೇ ಇರುವ ಸಂದರ್ಭಗಳಲ್ಲಿ "ರೋಬೋ ಫ್ಯಾಮಿಲಿ"ಯ ಡೈರೆಕ್ಷನ್ ಹಾಗೆ ಸೀರಿಯಲ್‌ನ ಎಲ್ಲಾ ಜವಾಬ್ದಾರಿಗಳನ್ನು, ನನ್ನ ತಮ್ಮ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸೀರಿಯಲ್‌ನಲ್ಲಿ ನನ್ನ ಭಾಗದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಮಧ್ಯಾಹ್ನ ದಿಂದ ಸಾಯಂಕಾಲ, ಮಧ್ಯರಾತ್ರಿಯವರೆಗೂ ಡಾನ್ಸ್ ಪ್ರಾಕ್ಟೀಸ್ ಆಮೇಲೆ ಬೆಳಿಗ್ಗೆ ಮತ್ತೆ ಶೂಟಿಂಗ್. ಈ ಥರಾ ಬ್ಯಾಲೆನ್ಸ್ ಮಾಡುತ್ತಿದ್ದೆ.

* ನೀವು ಷೋ ನ ಪ್ರತಿ ಎಪಿಸೋಡ್ ಗೂ ವಿಭಿನ್ನ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದೀರಿ ಅದಕ್ಕಾಗಿ ಹೇಗೆ ಪ್ಲಾನ್ ಮಾಡ್ತಾ ಇದ್ರಿ.

ಆಕ್ಚುವಲಿ ನಾನು ಕೋರಿಯೋಗ್ರಾಫಿಂಗ್ ಚೇಂಜ್ ಮಾಡಿದ ಮೇಲೆ ಇ ಥರದಾ ಪ್ಲಾನ್ ಮಾಡಿದ್ದು. ಮೊದಲು ಇದ್ದ ಕೋರಿಯೋಗ್ರಾಫರ್ ಗಳ ಜೊತೆ ನನ್ನ ಐಡಿಯಾಗಳು ಅಷ್ಟಾಗಿ ಮ್ಯಾಚ್ ಆಗ್ತಾ ಇರಲಿಲ್ಲಾ. ಯಾವಾಗ್ಲೂ ನನಗೆ ಮಾಕ್ಸ್ ಕಮ್ಮಿ ಬರೋದು, ಏನಪ್ಪಾ ಇಷ್ಟು ಎಫರ್ಟ್ ಹಾಕಿದ್ರು ಈ ಥರಾ ಆಗ್ತಾ ಇದೆ, ಅಂದಾಗ ಜಡ್ಜಸ್ ಗಳನ್ನು ಅರ್ಥ ಮಾಡಿಕೊಳ್ಳೋಕೆ ಸಾದ್ಯ ಆಯ್ತು.

Dancing Star Season 2 winner Master Anand chit Chat with Filmibeat Kannada Part 1

ಯಾಕಂದ್ರೆ ಇಲ್ಲಿ ವಿಭಿನ್ನ ಪ್ರದರ್ಶನಗಳೇ ಜಾಸ್ತಿ ಕ್ಲಿಕ್ ಆಗುತ್ತವೆ ಅಂತಾ. ನಂತರ ನಾವು ಪ್ರತೀ ಎಪಿಸೋಡ್ ಗಳಿಗೂ ಡಿಫರೆಂಟ್ ಫಾರ್ಮೆಷನ್ ಗಳನ್ನು ತರೋದಿಕ್ಕೆ ಶುರು ಮಾಡಿದೆವು. ಇವಾಗ ಏನಪ್ಪಾ ಅಂದ್ರೆ ಒಂದು ಗಾದೆ ಮಾತು ಇದೆಯಲ್ವಾ 'ಪ್ರಯತ್ನಗಳು ವಿಫಲ ಆಗಬಹುದು ಆದರೆ ಪ್ರಯತ್ನ ಮಾಡುವುದಕ್ಕೆ ವಿಫಲರಾಗಬಾರದು' ಎನ್ನುವಂತೆ ನಮ್ಮ ಪ್ರಯತ್ನಕ್ಕೆ ಫಲ ಸಿಗ್ತಾ ಹೋಯ್ತು. ಹಾಗಾಗಿ ಪ್ರತಿ ವಾರ ವಿಭಿನ್ನ ಐಟಂ ತರುತ್ತಾ ಇದ್ದದ್ದು ಇಷ್ಟ ಆಯ್ತು.

ಮುಂದಿನ ಭಾಗದಲ್ಲಿ ಡೇಂಜರ್ ಝೋನ್ ಗೆ ಬಂದಿದ್ದು, ಗೆಲುವು ಯಾರಿಗೆ ಅರ್ಪಿಸಿದರು? ಬಿಗ್ ಬಾಸ್ 3ನಲ್ಲಿ ಆನಂದ್ ಬಗ್ಗೆ ಓದಿ

English summary
Dancing Star Season 2 winner Master Anand chit Chat with Filmibeat Kannada. Master Anand won a cash prize of Rs 10 lakh along with a memento.The show was judged by actor V Ravichanadaran, Priya Mani and Mayuri Upadhya. hosted by Akul Balaji.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X