»   » ಚಿತ್ರರಂಗಕ್ಕೆ ಎಂದಿಗೂ ಬರಲ್ಲ ಎಂದ ರಾಜ್ ಮೊಮ್ಮಗಳು

ಚಿತ್ರರಂಗಕ್ಕೆ ಎಂದಿಗೂ ಬರಲ್ಲ ಎಂದ ರಾಜ್ ಮೊಮ್ಮಗಳು

Posted By:
Subscribe to Filmibeat Kannada
ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯ ರಾಮ್ ಕುಮಾರ್ ಕೊಟ್ಟ ಹೊಸ ಸುದ್ದಿ | Oneindia Kannada

ಡಾ ರಾಜ್ ಕುಮಾರ್ ಕುಟುಂಬದ ಕಡೆಯಿಂದ ಪಾರ್ವತಮ್ಮ ರಾಜ್ ಕುಮಾರ್ ಹೊರತು ಪಡಿಸಿದರೆ ಹೆಣ್ಣು ಮಕ್ಕಳು ಸಂಪೂರ್ಣವಾಗಿ ಸಿನಿಮಾರಂಗದಲ್ಲಿ ಯಾರು ತೊಡಗಿಸಿಕೊಂಡಿಲ್ಲ. ಶಿವಣ್ಣನ ಕಿರಿಯ ಪುತ್ರಿ 'ಅಂಡಮಾನ್' ಸಿನಿಮಾದಲ್ಲಿ ಅಭಿನಯಿಸಿದ ನಂತರ ಮತ್ತೆ ಸಿನಿಮಾರಂಗದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಕೆಲ ದಿನಗಳಿಂದ ಅಣ್ಣಾವ್ರ ಮೊಮ್ಮಗಳು ಸಿನಿಮಾರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ.

ಪೂರ್ಣಿಮಾ ಅವರ ಮಗಳಾದ ಧನ್ಯ ರಾಮ್ ಕುಮಾರ್ ಚಿತ್ರದಲ್ಲಿ ಅಭಿನಯಿಸುತ್ತಾರಂತೆ ಅದಕ್ಕಾಗಿ ಪೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಈಗಾಗಲೇ ಎಲ್ಲಾ ರೀತಿಯ ತಯಾರಿ ಮಾಡಿದ್ದಾರೆ ಎಂದು ಗಾಂಧಿನಗರದ ಗಲ್ಲಿಯಲ್ಲಿ ಸುದ್ದಿ ಹರಿದಾಡುತ್ತಿದೆ. ಸಾಕಷ್ಟು ವರ್ಷಗಳಿಂದ ರಾಜ್ ಫ್ಯಾಮಿಲಿಯನ್ನ ನೋಡಿಕೊಂಡು ಬರುತ್ತಿರುವ ಅಭಿಮಾನಿಗಳು ಇದೆಲ್ಲಾ ಹೇಗೆ ಸಾಧ್ಯ ಎಂದು ಯೋಚನೆ ಮಾಡುತ್ತಿದ್ದಾರೆ.

ಹಾಗಾದರೆ ಧನ್ಯ ರಾಮ್ ಕುಮಾರ್ ಏನು ಮಾಡುತ್ತಿದ್ದಾರೆ? ಫೋಟೋ ಶೂಟ್ ಮಾಡಿಸಿದ್ದು ನಿಜನಾ? ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿ ಎಂಟ್ರಿ ಪಡೆದುಕೊಳ್ಳುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಇದೇ ಮೊದಲ ಬಾರಿಗೆ ನೇರವಾಗಿ ಧನ್ಯ ರಾಮ್ ಕುಮಾರ್ ಅವರೇ ಫಿಲ್ಮೀ ಬೀಟ್ ಜೊತೆ ಸಂದರ್ಶನದ ಮೂಲಕ ಉತ್ತರ ಕೊಟ್ಟಿದ್ದಾರೆ. ಮುಂದೆ ಓದಿ

ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತೀರಾ ಎನ್ನುವ ಸುದ್ದಿ ನಿಜನಾ?

ಸುದ್ದಿ ಹರಿದಾಡುತ್ತಿದೆ ಎನ್ನುವುದು ಗೊತ್ತಾಗಿದೆ. ನಾನು ಯಾವುದೇ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ಇಂದು ಮಾತ್ರವಲ್ಲ, ಮುಂದೆ ಎಂದೆಂದಿಗೂ ಸಿನಿಮಾದಲ್ಲಿ ನಾನು ಅಭಿನಯಿಸುವುದು ಸುಳ್ಳು.

ಧೀರೇನ್ ರಾಮ್ ಕುಮಾರ್ ಅವರ ಫೋಟೋ ಶೂಟ್ ಗೆ ನೀವೇ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದೀರಾ?

ಹೌದು ನನಗೆ ಸ್ಟೈಲಿಂಗ್ ಮಾಡುವುದೆಂದರೆ ಬಳಹ ಇಷ್ಟ ಆದ್ದರಿಂದ ಆ ಕೆಲಸವನ್ನ ನಾನು ತುಂಬಾ ಪ್ರೀತಿಯಿಂದ ಇಷ್ಟ ಪಟ್ಟು ಮಾಡುತ್ತೇನೆ. ಧೀರೇನ್ ಸಿನಿಮಾರಂಗಕ್ಕೆ ಬರುವ ಮುಂಚೆ ಲುಕ್ ಟೆಸ್ಟ್ ಫೋಟೋ ಶೂಟ್ ಮಾಡಿಸಿದ್ದರು ಅದಕ್ಕಾಗಿ ನಾನೇ ಸ್ಟೈಲಿಂಗ್ ಮಾಡಿದ್ದೇ.

ಸಿನಿಮಾದಲ್ಲಿ ಸಹೋದರ ಧೀರೇನ್ ಅಥವಾ ಪುನೀತ್ ರಾಜ್ ಕುಮಾರ್ ಅವರಿಗೆ ಸ್ಟೈಲಿಂಗ್ ಮಾಡುವ ಅವಕಾಶ ಸಿಕ್ಕರೆ?

ಖಂಡಿತ ಮಾಡುತ್ತೇನೆ. ಆ ರೀತಿಯ ಅವಕಾಶ ಸಿಕ್ಕಿರೆ ನಿಜಕ್ಕೂ ಖುಷಿಯಿಂದ ಒಪ್ಪಿಕೊಳ್ಳುತ್ತೇನೆ. ತೆರೆ ಹಿಂದೆ ಕೆಲಸ ಮಾಡುವುದು ಚೆನ್ನಾಗಿರುತ್ತದೆ ಎನ್ನಿಸುತ್ತೆ.

ಧನ್ಯ ಅವರ ಬಗ್ಗೆ ಚಿಕ್ಕದಾದ ಪರಿಚಯ ಮಾಡಿಕೊಡಿ

ನನಗೆ ಹಾಡುವುದು ಎಂದರೆ ತುಂಬಾ ಇಷ್ಟ. ಕೆಲವು ದಿನಗಳ ಹಿಂದೆಯಷ್ಟೆ ನಾನು ನನ್ನ ವಿದ್ಯಾಭ್ಯಾಸ(bachelors in media studies) ವನ್ನು ಮುಗಿಸಿದ್ದೇನೆ. ಸದ್ಯ ಸಾರ್ವಜನಿಕ ಸಂಪರ್ಕ (PR) ಆಗಿ ಕೆಲಸ ಮಾಡುತ್ತಿದ್ದೇನೆ.

ಕುಟುಂಬದ ಬಗ್ಗೆ ಅಪ್ಪ ಅಮ್ಮನ ಬಗ್ಗೆ ಏನು ಹೇಳುತ್ತೀರಾ?

ಅಪ್ಪ-ಅಮ್ಮ ಮತ್ತು ಅಣ್ಣನ ಬಗ್ಗೆ ತುಂಬಾ ಖುಷಿ ಇದೆ, ಎಲ್ಲಾ ಕುಟುಂಬ ಸದಸ್ಯರು ಆಗಾಗ ಒಟ್ಟಿಗೆ ಸೇರುತ್ತೇವೆ ಆ ಕ್ಷಣಗಳು ಯಾವಾಗಲೂ ನೆನಪಿನಲ್ಲಿ ಉಳಿಯುವ ಕ್ಷಣಗಳು.

English summary
Dhanya Kumar has made it clear that she will not act in the films. Dhanya Kumar granddaughter of Dr. Rajkumar, she is currently working as Public Relations Officer

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada