»   » ಆಟಗಾರನ ನೋಡಬೇಕು ಏಕೆ? ಇಲ್ಲಿದೆ ಕಾರಣಗಳು

ಆಟಗಾರನ ನೋಡಬೇಕು ಏಕೆ? ಇಲ್ಲಿದೆ ಕಾರಣಗಳು

Posted By: ಸುನೀತಾ ಗೌಡ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ದ್ವಾರಕೀಶ್ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ 49ನೇ ಚಿತ್ರ 'ಆಟಗಾರ' ನಾಳೆ (ಆಗಸ್ಟ್ 28) ವರಮಹಾಲಕ್ಷ್ಮಿ ಹಬ್ಬದಂದು ತೆರೆ ಮೇಲೆ ಭರ್ಜರಿಯಾಗಿ ಅಪ್ಪಳಿಸಲಿದೆ.

ನಿರ್ದೇಶಕ ಕೆ.ಎಮ್ ಚೈತನ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಆಟಗಾರ' ಚಿತ್ರದ ವಿಶೇಷತೆ ಹಾಗೂ ಚಿತ್ರ ನೋಡಲು ಐದು ಕಾರಣಗಳನ್ನು ನಿಮಗೆ ನಾವು ತಿಳಿಸುತ್ತೇವೆ. ವಿಶೇಷವಾಗಿ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ 10 ಸ್ಟಾರ್ ಗಳು ಮಿಂಚಿದ್ದು, ಸಹಜವಾಗಿ ಚಿತ್ರ ಕುತೂಹಲ ಮೂಡಿಸುತ್ತಿದೆ.[ಬಿಡುಗಡೆಗೂ ಮುನ್ನವೇ ಭರ್ಜರಿ ಮೊತ್ತಕ್ಕೆ 'ಆಟಗಾರ' ಮಾರಾಟ]

ಅಂದಹಾಗೆ ನಮ್ಮ ಒನ್ ಇಂಡಿಯಾ ಫಿಲ್ಮಿಬೀಟ್ ಪ್ರತಿನಿಧಿಯೊಬ್ಬರು 'ಆಟಗಾರ' ಚಿತ್ರತಂಡದ ಕೆಲವು ಪ್ರಮುಖ ಪಾತ್ರಧಾರಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ.

ಚಿತ್ರದ ನಾಯಕ ಚಿರಂಜೀವಿ ಸರ್ಜಾ, ನಾಯಕಿ ಮೇಘನಾ ರಾಜ್, ನಿರ್ದೇಶಕ ಕೆ.ಎಮ್ ಚೈತನ್ಯ, ನಟಿ ಅನುಪ್ರಭಾಕರ್, ನಟಿ ಪಾವನಾ, ನಟಿ ಅರೋಹಿತ ಮುಂತಾದವರ ಜೊತೆ ಫಿಲ್ಮಿಬೀಟ್ ಜೊತೆ ಸಂದರ್ಶನ ನಡೆಸಿದ್ದು, 'ಆಟಗಾರ'ನ ಸಮಗ್ರ ಮಾಹಿತಿಯನ್ನು ನಾವು ನಿಮಗೆ ಕೊಡುತ್ತೇವೆ.[ವರಮಹಾಲಕ್ಷ್ಮಿ ಹಬ್ಬದಂದು ಸಂತೋಷ್ ನಲ್ಲಿ 'ಆಟಗಾರ'ನ ಅಸಲಿ ಆಟ]

ಇನ್ನೂ 'ಆಟಗಾರ'ನ ಅಸಲಿ ಆಟ ನಾಳೆ ಶುರುವಾಗಲಿದ್ದು, ನೀವು ಚಿತ್ರ ನೋಡಲು ಬೇಕಾದ ಐದು ಕಾರಣಗಳನ್ನು ತಿಳಿದುಕೊಳ್ಳಲು ಕೆಳಗಿನ ಸ್ಲೈಡ್ ನಲ್ಲಿರುವ ವಿಡಿಯೋ ಲಿಂಕ್ ಕ್ಲಿಕ್ ಮಾಡಿ..

ದ್ವಾರಕೀಶ್ 49ನೇ 'ಆಟಗಾರ'

ದ್ವಾರಕೀಶ್ ಹೋಮ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಆಟಗಾರ' ಚಿತ್ರತಂಡದ ಸಮಗ್ರ ಮಾಹಿತಿ ಸಂದರ್ಶನ ನಿಮ್ಮ ಫಿಲ್ಮಿಬೀಟಲ್ಲಿ

'ಆಟಗಾರ' ನಾಯಕ ನಟ ಚಿರಂಜೀವಿ ಸರ್ಜಾ

ಆಟಗಾರ' ಪಕ್ಕಾ ಎಂರ್ಟಟೈನರ್ ಹಾಗೂ ಪೈಸಾ ವಸೂಲ್ ಚಿತ್ರ. ಪ್ರೇಕ್ಷಕರನ್ನು ಬೇರೆ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ನಾನು ಇದೇ ಮೊದಲ ಬಾರಿಗೆ ಒಬ್ಬ ಡ್ರಗ್ ಡೀಲರ್, ಸ್ಲಂ ಹುಡುಗ ಪಕ್ಕಾ ಲೋಕಲ್ ಪಾತ್ರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.ಐರ್ಲೆಂಡ್ ನಲ್ಲಿ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಅಲ್ಲೇನು ನಡೆಯುತ್ತೆ, ಅನ್ನೋದು ಕಥೆ.

'ಆಟಗಾರ'ನ ನಾಯಕಿ ಮೇಘನಾ ರಾಜ್

ನೀವು 'ಆಟಗಾರ' ನೋಡಬೇಕು. ಚಿತ್ರದ ಫಸ್ಟ್ ಹಾಫ್ ನೋಡಿ ಸೆಕೆಂಡ್ ಹಾಫ್ ಏನಾಗುತ್ತೆ ಅನ್ನೋ ಕುತೂಹಲ ನಿಮಗೆ ಇರಬೇಕು. ಇದೊಂದು ಸಸ್ಪೆನ್ಸ್ ಡ್ರಾಮಾ. ಸಮಾಜಕ್ಕೆ ಉತ್ತಮ ಸಂದೇಶದ ಜೊತೆಗೆ ಸ್ಪೂರ್ತಿ ಯನ್ನು ನೀಡುತ್ತದೆ. ಚಿರು ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ. ಚಿತ್ರದಲ್ಲಿ ನನ್ನದು ಸೂಪರ್ ಮಾಡೆಲ್ ರೋಲ್.

ಅಸಲಿ 'ಆಟಗಾರ' ನಿರ್ದೇಶಕ ಚೈತನ್ಯ

'ಆಟಗಾರ' ಪ್ರಸ್ತುತ ಸಮಾಜಕ್ಕೆ ಹಿಡಿದ ಕೈಗನ್ನಡಿ. ಕಂಪ್ಲೀಟ್ ಕಮರ್ಷಿಯಲ್ ಚಿತ್ರ, ನಿರ್ಮಾಪಕ ಯೋಗೀಶ್ ದ್ವಾರಕೀಶ್ ಒಬ್ಬ ಟೀಮ್ ಪ್ಲೇಯರ್, ಅವರಿಗೆ ಒಂದು ಸಿನಿಮಾದ ಕಮರ್ಷಿಯಾಲಿಟಿ ತುಂಬಾ ಚೆನ್ನಾಗಿ ತಿಳಿದಿದೆ. 10 ಜನ ಮುಖ್ಯ ಪಾತ್ರಧಾರಿಗಳು, 5 ಜನ ಪೋಷಕ ಪಾತ್ರಧಾರಿಗಳು, ಅಲ್ಲದೇ 16 ಜನ ಸಪೋರ್ಟಿಂಗ್ ಪಾತ್ರಧಾರಿಗಳು ತಂಡದಲ್ಲಿದ್ದಾರೆ.

ನಟಿ ಅನುಪ್ರಭಾಕರ್

'ಆಟಗಾರ' ಅಂದ್ರೆ ಒಂಥರಾ ಒಳ್ಳೆ ಬಿಸಿಬೇಳೆ ಬಾತ್. ಜೊತೆಗೆ ಚಿತ್ರದಲ್ಲಿ ವಿಭಿನ್ನವಾದ ಮೇಕಿಂಗ್ ಇದೆ. 10 ಜನ ಘಟಾನುಘಟಿಗಳು ಸೌತೆಕಾಯಿ, ಬೀನ್ಸ್, ಆಲೂಗೆಡ್ಡೆ, ಕ್ಯಾರೆಟ್ ಇದ್ದಂತೆ, ಜೊತೆಗೆ ಟೆಕ್ನಿಕಲ್ ಟೀಮ್ ಒಳ್ಳೆ ಉಪ್ಪು, ಹುಳಿ, ಖಾರ ಹಾಕಿ ಮಿಕ್ಸ್ ಮಾಡಿದ್ದಾರೆ. ಹಬ್ಬದ ದಿನ ಬಿಸಿಬೇಳೆ ಬಾತ್ ತಿನ್ನಲು 'ಆಟಗಾರ' ನೋಡಿ.

ನಟಿ ಆರೋಹಿತಾ

ನಟಿ ಆರೋಹಿತಾ ಥಿಯೇಟರ್ ನಿಂದ ಬಂದಿದ್ದು, ಮೊದಲು ಇವರಿಗೆ ಬ್ರೇಕ್ ಕೊಟ್ಟ ಸಿನಿಮಾ ಶರಣ್ ಅಧ್ಯಕ್ಷ. ಚಿತ್ರದಲ್ಲಿ ಆರೋಹಿತಾ ಹಾಸ್ಯ ನಟ ಚಿಕ್ಕಣ್ಣ ಅವರ ಗರ್ಲ್ ಫ್ರೆಂಡ್ ಆಗಿ ಕಾಣಿಸಿಕೊಂಡಿದ್ದರು. 10 ಜನ ಸ್ಟಾರ್ ಗಳೊಂದಿಗೆ ನಟಿಸಿದ್ದು, ತುಂಬಾ ಖುಷಿ ಕೊಟ್ಟಿದೆ. 'ಆಟಗಾರ' ಅಂದ್ರೆ ನಾವು ಆಡೋದು, ನಮ್ಮ ಜೊತೆ ನಿಮ್ಮನ್ನು ಆಟ ಆಡಿಸ್ತೀವಿ, ತಲೆಗೆ ಹುಳ ಬಿಡ್ತೀವಿ

ನಟಿ ಪಾವನಾ ಗೌಡ

'ಆಟಗಾರ'ದಲ್ಲಿ ನನ್ನ ಪಾತ್ರ ಒಂದು ಎನ್ ಜಿ ಓ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇರ್ತೀನಿ. ಕಾಡು ಪ್ರಾಣಿಗಳನ್ನು ಸಂರಕ್ಷಣೆ ಮಾಡೋದು ಒಂಥರಾ ಸಮಾಜ ಸೇವೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಂತರ ಐರ್ಲೆಂಡ್ ನಲ್ಲಿ ಏನಾಗುತ್ತೆ ಅದು 'ಆಟಗಾರ'ನ ಅಸಲಿ ಆಟ. 'ಆಟಗಾರ' ಆಡಿಯನ್ಸ್ ಜೊತೆಗೆ ಆಡೋ ಆಟ.

English summary
Exclusive Interview With Aatagara Team - Filmibeat. Watch Chiranjeevi Sarja, Raja Huli fame actress Meghana Raj, Gorgeous Anu Prabhakar, Director KM Chaitanya, Bombegala Love Story actress Pavana, Arohita Gowda, Sharing his experience about Kannada movie 'Aatagara'. Producer Yogish dwarakish, movie is directed by KM Chaitanya.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X