»   » ನೀವು ಅಂದುಕೊಂಡಂಗಿಲ್ಲ ವಿನಯ್ ರವರ 'ರನ್ ಆಂಟನಿ' ಸಿನಿಮಾ.!

ನೀವು ಅಂದುಕೊಂಡಂಗಿಲ್ಲ ವಿನಯ್ ರವರ 'ರನ್ ಆಂಟನಿ' ಸಿನಿಮಾ.!

Posted By:
Subscribe to Filmibeat Kannada

ಸದಭಿರುಚಿಯ ಚಿತ್ರಗಳಿಗೆ ವರನಟ ಡಾ.ರಾಜ್ ಕುಮಾರ್ ಬ್ಯಾನರ್ ಹೆಸರುವಾಸಿ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ, ಇಡೀ ಕುಟುಂಬ ಕೂತು ನೋಡಬಹುದಾದ, ಒಂದು ನವಿರಾದ ಪ್ರೇಮಕಥೆ ಇರುವ ಚಿತ್ರಗಳು ರಾಜ್ ಕುಟುಂಬ ಒಡೆತನದ 'ವಜ್ರೇಶ್ವರಿ ಕಂಬೈನ್ಸ್' ಸಂಸ್ಥೆಯಿಂದ ಹೊರಬಂದಿವೆ.

ಈಗ ಅದೇ ವಜ್ರೇಶ್ವರಿ ಹಾಸ್ಪಿಟಾಲಿಟೀಸ್ ಸಂಸ್ಥೆಯಿಂದ ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಚಿತ್ರ 'ರನ್ ಆಂಟನಿ' ತೆರೆಗೆ ಬರಲು ತಯಾರಾಗುತ್ತಿದೆ. [ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಸ್ಪೆಷಾಲಿಟೀಸ್ ಗೊತ್ತಾ?]


interview-with-run-antony-director-raghu-shastry

'ರನ್ ಆಂಟನಿ' ಕೂಡ ಇಂದಿನ ಜನರೇಷನ್ ಗೆ ತಕ್ಕಂತೆ ಒಂದು ಲವ್ ಸ್ಟೋರಿ ಸಿನಿಮಾ ಇರಬಹುದು ಅಂತ ನೀವೆಲ್ಲಾ ಅಂದುಕೊಂಡಿದ್ದರೆ, ನಿಮ್ಮ ಊಹೆ ತಪ್ಪು. 'ರನ್ ಆಂಟನಿ' ಅಪ್ಪಟ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ.


'ರನ್ ಆಂಟನಿ' ಚಿತ್ರದ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ನಿರ್ದೇಶಕ ರಘು ಶಾಸ್ತ್ರಿ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ, ಓದಿರಿ....


interview-with-run-antony-director-raghu-shastry

* ನಿಮ್ಮ ಚೊಚ್ಚಲ ನಿರ್ದೇಶನದ 'ರನ್ ಆಂಟನಿ' ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ನಿಮ್ಮ ಫೀಲಿಂಗ್....
ನಾನು ಯಾವುದನ್ನೂ ಎಕ್ಸ್ ಪೆಕ್ಟ್ ಮಾಡಿರ್ಲಿಲ್ಲ. ಕೆಲವು ಕಥೆಗಳನ್ನು ರೆಡಿ ಮಾಡಿ ಇಟ್ಕೊಂಡಿದ್ದೆ. ಅದನ್ನ ಕೇಳಿ ರಾಘಣ್ಣ ಓಕೆ ಅಂದಿದ್ದೆ ಒಂದು ಸಂಭ್ರಮ ನನಗೆ. ಅಲ್ಲಿಂದ ಅವರ ಫ್ಯಾಮಿಲಿಯಲ್ಲಿ ನಾನೂ ಒಬ್ಬ ಆಗಿದ್ದೀನಿ. ಅವರ ಮನೆ ಮಗನ ಹಾಗೆ ನನ್ನನ್ನೂ ನೋಡಿಕೊಂಡಿದ್ದಾರೆ. ಇವತ್ತು ಗ್ರ್ಯಾಂಡ್ ಆಡಿಯೋ ಲಾಂಚ್ ಆಗಿದೆ. ಖುಷಿ ಇದೆ. ['ರನ್ ಆಂಟನಿ' ಟೀಸರ್ ಬಹಳ ಥ್ರಿಲ್ಲಿಂಗಾಗಿದೆ ಕಣ್ರೀ..!]


* ಅಷ್ಟು ಸುಲಭವಾಗಿ ರಾಘವೇಂದ್ರ ರಾಜ್ ಕುಮಾರ್ ಕಥೆ ಒಪ್ಪುವವರಲ್ಲ. ಹೌದಾ.?
ಗೊತ್ತಿಲ್ಲ. ನಾನು ಅವರಿಗೆ ಕಥೆ ಹೇಳಿದ್ಮೇಲೆ, 'ಈಗಿನ ಜನರೇಷನ್ ಗೆ ತಕ್ಕಂತೆ ಕಥೆ ಇದೆ. ಅದಕ್ಕೆ ಒಪ್ಪಿಕೊಂಡಿದ್ದೀನಿ, ಸಿನಿಮಾ ಮಾಡೋಣ' ಅಂತ ರಾಘಣ್ಣ ಹೇಳಿದ್ರು. ವಿನಯ್ ಗೆ ರೆಗ್ಯೂಲರ್ ಸಿನಿಮಾ ಬಿಟ್ಟು ಬೇರೆ ತರಹ ಮಾಡ್ಬೇಕು ಅಂತ ಅವರಿಗೂ ಪ್ಲಾನ್ ಇತ್ತು. ಅದಕ್ಕೆ ಸರಿಯಾಗಿ ನನ್ನ ಕಥೆಯೂ ಹಾಗೇ ಇತ್ತು. ಒಪ್ಪಿಕೊಂಡರು.


interview-with-run-antony-director-raghu-shastry

* ಹೊಸ ತರಹ ಅಂದ್ರೆ...
ಮಾಸ್ ಇಲ್ಲದೇ, ಹೊಡೆದಾಟ ಬಡಿದಾಟ ಇಲ್ಲದೇ, ನರೇಷನ್ ನಲ್ಲಿ ಒಂದು ವಿಭಿನ್ನ ಪ್ರಯತ್ನವನ್ನ 'ರನ್ ಆಂಟನಿ' ಚಿತ್ರದಲ್ಲಿ ಮಾಡಿದ್ದೀವಿ. ಇದೇ ರಾಘಣ್ಣನಿಗೆ ಇಷ್ಟ ಆಗಿದ್ದು. [ಸಂದರ್ಶನ: 'ರನ್ ಆಂಟನಿ' ಆಡಿಯೋ ಆಲ್ಬಂನ ಸ್ಪೆಷಾಲಿಟಿ ಏನು?]


* 'ರನ್ ಆಂಟನಿ' ಟೀಸರ್ ನೋಡಿದ್ರೆ, ಸಸ್ಪೆನ್ಸ್ ಮೂವಿ ಇದ್ದ ಹಾಗಿದ್ಯಲ್ಲಾ?
ಹೌದು, ಇದು ಔಟ್ ಅಂಡ್ ಔಟ್ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಇದರಲ್ಲಿ ಒಂದು ರೋಮ್ಯಾಂಟಿಕ್ ಲವ್ ಸ್ಟೋರಿ ಕೂಡ ಇದೆ. ಮುಂದೆ ಏನಾಗುತ್ತೆ ಅಂತ ನೀವು ತಿಳಿದುಕೊಳ್ತೀರೋ, ಅದಕ್ಕೆ ವಿರುದ್ಧವಾದ ಟ್ವಿಸ್ಟ್ ಸಿಕ್ಕುತ್ತೆ. ಆ ತರಹದ ಚಿತ್ರ ಇದು.


interview-with-run-antony-director-raghu-shastry

* 'ರನ್ ಆಂಟನಿ' ರಿಲೀಸ್ ಪ್ಲಾನ್ ಯಾವಾಗ?
ಜೂನ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಇದೆ. ನೋಡ್ಬೇಕು.

English summary
Kannada Actor Vinay Rajkumar starrer 'Run Antony' is an out and out Suspense-Thriller movie. Here is an interview with the Director Raghu Shastry. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada