»   » ಸಂದರ್ಶನ: ದಾವಣಗೆರೆ ಬೆಣ್ಣೆದೋಸೆಯಂಥ ಅದಿತಿ ನಟಿ ಆದ ಕಥೆ

ಸಂದರ್ಶನ: ದಾವಣಗೆರೆ ಬೆಣ್ಣೆದೋಸೆಯಂಥ ಅದಿತಿ ನಟಿ ಆದ ಕಥೆ

Posted By:
Subscribe to Filmibeat Kannada

ಸಿನಿಮಾ ನಟಿ ಆಗಬೇಕು ಎಂಬುದು ಸಾಕಷ್ಟು ಹುಡುಗಿಯರ ಕನಸು. ಎಷ್ಟೋ ಹುಡುಗಿಯರಿಗೆ ಅಂತಹ ಆಸೆ ಇದ್ದರು ಅದು ನೆರವೇರುವುದಿಲ್ಲ. ಆದ್ರೆ, ನಟಿ ಆಗುವ ಬಗ್ಗೆ ಯೋಚನೆನೇ ಮಾಡಿರದ ದಾವಣಗೆರೆಯ ಹುಡುಗಿ ಇಂದು ಕನ್ನಡದ ನಾಯಕಿ ಆಗಿದ್ದಾರೆ.

'ಧೈರ್ಯಂ' ಚಿತ್ರದ ನಿರ್ದೇಶಕ ಶಿವ ತೇಜಸ್ ಸಂದರ್ಶನ

ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿಯೂ ಈ ಯುವತಿ ಮಿಂಚುತ್ತಿದ್ದಾರೆ. ಆ ಹುಡುಗಿಯೇ ಅದಿತಿ ಪ್ರಭುದೇವ. ಅದಿತಿ ಪ್ರಭುದೇವ ಕಳೆದ ವಾರ ಬಿಡುಗಡೆ ಆದ 'ಧೈರ್ಯಂ' ಚಿತ್ರದ ನಟಿ. ಜೊತೆಗೆ ಕಲರ್ಸ್ ಸೂಪರ್ ವಾಹಿನಿಯ 'ನಾಗಕನ್ನಿಕೆ' ಧಾರಾವಾಹಿಯ ನಾಯಕಿ ಕೂಡ ಆಗಿದ್ದಾರೆ.

ಚಿತ್ರ ವಿಮರ್ಶೆ : ಸಾಮಾನ್ಯ ಹುಡುಗನ ಅಸಾಮಾನ್ಯ ಸಾಹಸ

ಮೂಲತಃ ಇಂಜಿನಿಯರ್ ಆಗಿರುವ ಅದಿತಿ ಸಿನಿಮಾರಂಗಕ್ಕೆ ಬಂದ ಕಥೆ ಇಂಟ್ರೆಸ್ಟಿಂಗ್ ಆಗಿದೆ. ಚಂದನವದಲ್ಲಿ ಮಿಂಚುತ್ತಿರುವ ದಾವಣಗೆರೆ ಬೆಣ್ಣೆದೋಸೆ ಅದಿತಿ ಪ್ರಭುದೇವ ಅವರ ವಿಶೇಷ ಸಂದರ್ಶನ. ಮುಂದಿದೆ ಓದಿ...

ಸಂದರ್ಶನ : ನವೀನ.ಎಂ.ಎಸ್

ತೆರೆ ಮೇಲೆ ಕಾಣಿಸಿಕೊಳ್ಳುಲು ಮೊದಲ ಅವಕಾಶ ಹೇಗೆ ಸಿಕ್ಕಿದ್ದು.?

''ನಾನು ದಾವಣಗೆರೆ ಹುಡುಗಿ. ಅಲ್ಲಿ ಚಿಕ್ಕ ಪುಟ್ಟ ಕಾರ್ಯಕ್ರಮಗಳಲ್ಲಿ ಆಂಕರಿಂಗ್ ಮಾಡುತ್ತಿದೆ. ನಂತರ ಬೆಂಗಳೂರಿನಲ್ಲಿ ಸಿನಿಮಾಗಳ ಕಾರ್ಯಕ್ರಮದಲ್ಲಿ ಅಂಕರ್ ಆಗಿ ಕೆಲಸ ಮಾಡುತ್ತಿದೆ. ಆದರು ನಾನು ನಟನೆಯನ್ನ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಒಂದು ದಿನ 'ಗುಂಡ್ಯಾನ ಹೆಂಡ್ತಿ' ಎನ್ನುವ ಸುವರ್ಣ ಚಾನೆಲ್ ನ ಧಾರಾವಾಹಿಗೆ ಹೀಗೆ ಸುಮ್ಮನೆ ಆಡಿಷನ್ ಗೆ ಹೋದೆ. ಅಲ್ಲಿ ಆಯ್ಕೆ ಆದೆ. ಈ ರೀತಿ ನನ್ನ ಜರ್ನಿ ಶುರು ಆಯ್ತು.'' - ಅದಿತಿ ಪ್ರಭುದೇವ, ನಟಿ

ಒಬ್ಬ ನಟಿ ಆಗಬೇಕು ಎನ್ನುವ ಕನಸು ಶುರುವಾಗಿದ್ದು ಯಾವಾಗ..?

''ನಾನು ಏನೂ ಅಂದುಕೊಂಡೆ ಇಲ್ಲ... ಅದಕ್ಕೆ ಆಯ್ತು ಅಂತ ಹೇಳಬಹುದೇನೋ. ನನಗೂ ಸಿನಿಮಾರಂಗಕ್ಕೂ ಸಂಬಂಧನೇ ಇಲ್ಲ. ನನ್ನ ತಂದೆ ಡಾಕ್ಟರ್, ನಾನು ಇಂಜಿನಿಯರ್. ಸಂಪ್ರದಾಯಸ್ಥ ಕುಟುಂಬದ ಹುಡುಗಿ ನಾನು. ಸೋ, ಕನಸಿನಲ್ಲಿಯೂ ನಾನು ಸಿನಿಮಾ ಮಾಡುತ್ತೇನೆ ಅಂದುಕೊಂಡಿರಲಿಲ್ಲ.'' - ಅದಿತಿ ಪ್ರಭುದೇವ, ನಟಿ

ಮೊದಲು ಧಾರಾವಾಹಿಯಲ್ಲಿ ಅವಕಾಶ ಸಿಕ್ಕಾಗ ಹೇಗೆ ಅನಿಸಿತು..?

''ಧಾರಾವಾಹಿಯಲ್ಲಿ ಆಯ್ಕೆ ಆದಾಗ ನನಗೆ ಖುಷಿ ಆಗಿರಲಿಲ್ಲ. ನಮ್ಮ ಅಪ್ಪ ಅಮ್ಮನಿಗೆ ಆಯ್ಕೆ ಆದೆ ಏನು ಮಾಡೋದು ಈಗ ಅಂತ ಹೇಳಿದೆ. ನಾನು ಇಲ್ಲಿಗೆ ಬಂದು ಯಾವಾಗ ಶೂಟಿಂಗ್, ಆಕ್ಟಿಂಗ್ ಅಂತ ಶುರು ಮಾಡಿದನೋ ಆವಾಗ ನಾನು ಹುಟ್ಟಿರುವುದೇ ಆಕ್ಟಿಂಗ್ ಮಾಡುವುದಕ್ಕೆ ನಾನು ಇಲ್ಲೇ ಏನಾದ್ರೂ ಸಾಧಿಸಬೇಕು ಅಂತ ಅನಿಸಿತ್ತು.'' - ಅದಿತಿ ಪ್ರಭುದೇವ, ನಟಿ

'ಧೈರ್ಯಂ' ಸಿನಿಮಾದ ಅನುಭವ ಹೇಗಿತ್ತು..?

''ನನಗೆ ಒಂದು ಅವಕಾಶ ಕೊಟ್ಟ ತೇಜು ಸರ್, ರಾಜ್ ಸರ್, ಅಜಯ್ ಸರ್ ಇವರನ್ನೆಲ್ಲ ನಾನು ಲೈಫ್ ಲಾಂಗ್ ಮರೆಯುವುದಿಲ್ಲ. ನಮ್ಮ ಕನ್ನಡದ ಹುಡುಗಿ ಬೆಳೆಯಲಿ ಅಂತ ಅವಕಾಶ ಕೊಟ್ಟು, ಮನೆ ಮಗಳು ತರ ನೋಡಿಕೊಳ್ಳುವುದು ಇದೆಯಲ್ಲ ಅದು ತುಂಬ ದೊಡ್ಡ ಗುಣ.'' - ಅದಿತಿ ಪ್ರಭುದೇವ, ನಟಿ

ನಿಮ್ಮ ಕನಸಿನ ಪಾತ್ರ ಯಾವುದು..?

''ನನಗೆ ನೀವು ತುಂಬ ಚೆನ್ನಾಗಿ ಇದ್ದೀರಾ ಅಂತ ಕರೆಸಿಕೊಳ್ಳುವುದಕ್ಕಿಂತ, ನೀವು ತುಂಬ ಚೆನ್ನಾಗಿ ಆಕ್ಟಿಂಗ್ ಮಾಡುತ್ತೀರಾ ಅಂದರೆ ತುಂಬ ಖುಷಿ ಆಗುತ್ತದೆ. ಸೋ, ನನಗೆ ನಟನೆಗೆ ಸ್ಕೋಪ್ ಇರುವಂತಹ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟ.'' - ಅದಿತಿ ಪ್ರಭುದೇವ, ನಟಿ

'ನಾಗಕನ್ನಿಕೆ' ಧಾರಾವಾಹಿ ಶೂಟಿಂಗ್ ಹೇಗೆ ನಡೆಯುತ್ತಿದೆ..?

''ತುಂಬ ಚೆನ್ನಾಗಿ ನಡೆಯುತ್ತಿದೆ. ಯಾವ ಸಿನಿಮಾಗೂ ಕಡಿಮೆ ಇಲ್ಲದ ರೀತಿ ಅದನ್ನು ಮಾಡುತ್ತಿದ್ದಾರೆ. ತುಂಬ ಹೊತ್ತು ಕೆಲಸ ಇದೆ ಎನ್ನುವುದು ಬಿಟ್ಟರೆ ಎಲ್ಲ ಚೆನ್ನಾಗಿದೆ. ಆ ಧಾರವಾಹಿಗೆ ತುಂಬ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ.'' - ಅದಿತಿ ಪ್ರಭುದೇವ, ನಟಿ

ಫ್ಯಾಮಿಲಿ ಮತ್ತು ಫ್ರೆಂಡ್ಸ್ ಈಗ ಏನು ಹೇಳುತ್ತಾರೆ..?

'ಸಿನಿಮಾ ನಾಯಕಿ ಆದ ಮೇಲೆ ನನಗೆ ಏನು ವ್ಯತ್ಯಾಸ ಕಾಣುತ್ತಿಲ್ಲ. ಆದರೆ ಅವರಿಗೆ ತುಂಬ ಖುಷಿ ಆಗಿದೆ. ಫ್ಯಾಮಿಲಿ ಮತ್ತು ಫ್ರೆಂಡ್ಸ್ ಎಲ್ಲರೂ ನನ್ನ ನೋಡಿ ತುಂಬ ಸಂತೋಷ ಪಡುತ್ತಿದ್ದಾರೆ.'' - ಅದಿತಿ ಪ್ರಭುದೇವ, ನಟಿ

ನಿಮಗೆ ತುಂಬ ಪ್ರಭಾವ ಬೀರಿದ ನಟ ಅಥವಾ ನಟಿ..?

''ರಾಜ್ ಕುಮಾರ್ ಸರ್. ನನ್ನ ಇಡೀ ಫ್ಯಾಮಿಲಿಗೆ ರಾಜ್ ಕುಮಾರ್ ಸರ್ ಅಂದರೆ ತುಂಬ ಇಷ್ಟ. ನನ್ನ ತಂದೆ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ. ನಾನು ನನ್ನ ತಾಯಿಯ ಹೊಟ್ಟೆಯಲ್ಲಿ ಇರುವಾಗಲಿನಿಂದ ಅಣ್ಣಾವ್ರ ಸಿನಿಮಾ ನೋಡುತ್ತಿದ್ದೇನೆ ಅಂತ ಹೇಳಿದರು ತಪ್ಪಾಗಲ್ಲ. ಅದೇ ನನಗೆ ತುಂಬ ಪ್ರಭಾವ ಬೀರಿದೆ. ಈಗಲು ನನಗೆ ಅಣ್ಣಾವ್ರನ್ನ ನೋಡಿದರೆ ಅಳು ಬರುತ್ತದೆ. ಅಣ್ಣಾವ್ರ ಸಮಾಧಿ ಹತ್ತಿರ ಹೋದರೆ ಅಳುತ್ತೇನೆ.'' - ಅದಿತಿ ಪ್ರಭುದೇವ, ನಟಿ

ಸಾಧನೆ ಮಾಡುವುದಕ್ಕೆ ಪ್ಲಾನ್ಸ್ ತುಂಬ ಮುಖ್ಯನಾ..?

''ನನಗೆ ಏನು ಅನಿಸುತ್ತದೆ ಅಂದರೆ, ಜೀವನದ ದಾರಿಯಲ್ಲಿ ಕೆಲಸ, ವ್ಯಕ್ತಿ ಏನೇ ಬಂದರು ಅದನ್ನು ಒಳ್ಳೆಯ ರೀತಿ ಸ್ವಾಗತ ಮಾಡಿಕೊಳ್ಳಿ. ಆಗ ಒಳ್ಳೆಯದೆ ಆಗುತ್ತದೆ. ಎಕ್ಸ್ ಪೆಕ್ಟೇಶನ್ಸ್ ಹರ್ಟ್ಸ್. ಅದನ್ನು ಮಾಡಿಕೊಳ್ಳದೇನೆ ಬರುವ ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡಿದರೆ ಸಾಕು ಅಂತ ನಂಬುತ್ತೇನೆ. '' - ಅದಿತಿ ಪ್ರಭುದೇವ, ನಟಿ

English summary
Dhairyam And 'Nagakannike' Serial Actress Adithi Prabhudeva Interview.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada