For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿ ಚಿತ್ರದಲ್ಲಿ ನಟಿಸಲಿದ್ದಾರೆ ಶಿವಮಣಿ!

  |

  ಪ್ರತಿಭೆಗಳನ್ನು ಗುರುತಿಸುವುದರಲ್ಲಿ ನಮ್ಮ ಪಕ್ಕದ ತಮಿಳುನಾಡು ಸದಾ ಮುಂದು. ಅವರು ಕಲಾವಿದನ ರಾಜ್ಯ, ಭಾಷೆ, ಹಿನ್ನೆಲೆಗಳಿಗಿಂತ ಆತನ ನಟನೆಯ ಪ್ರತಿಭೆಯನ್ನಷ್ಟೇ ನೋಡಿ ಅವಕಾಶ ನೀಡುತ್ತಾರೆ. ಉದಾಹರಣೆಗೆ ಯಾವುದೇ ಜನಪ್ರಿಯ ತಮಿಳು ಸಿನಿಮಾ ನೋಡಿದರೂ ಅದರ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದರು ಕರ್ನಾಟಕ, ಕೇರಳ ಅಥವಾ ಮುಂಬೈನಿಂದ ಬಂದವರಾಗಿರುತ್ತಾರೆ. ಈಗ ಆ ಪಟ್ಟಿಗೆ ನಮ್ಮ ಜನಪ್ರಿಯ ನಿರ್ದೇಶಕ, ನಟ ಶಿವಮಣಿಯವರು ಸೇರಿಕೊಂಡಿದ್ದಾರೆ.

  ನಿರ್ದೇಶಕರಾಗಿ ದೊರೆ'ಯಂಥ ಮರೆಯಲಾಗದ ಚಿತ್ರ ನೀಡಿರುವ ಇವರು, ಜಯತೀರ್ಥ ನಿರ್ದೇಶನದ ಬೆಲ್ ಬಾಟಂ' ಮೂಲಕ ನಟರಾಗಿ ಚಿತ್ರರಂಗದ ಗಮನ ಸೆಳೆದರು. ಇದೀಗ ಬೆಲ್ ಬಾಟಂ' ಸಿನಿಮಾದ ತಮಿಳು ರಿಮೇಕ್ ನಲ್ಲಿ ಕನ್ನಡದಲ್ಲಿ ನಿರ್ವಹಿಸಿದ ಪಾತ್ರವನ್ನೇ ನಟಿಸಿ ಬಂದಿದ್ದಾರೆ.

  ಮಾತ್ರವಲ್ಲ, ದಕ್ಷಿಣ ಭಾರತದ ಜನಪ್ರಿಯ ತಾರೆಯಾಗಿರುವ ವಿಜಯ್ ಸೇತುಪತಿ ಸಿನಿಮಾದಲ್ಲಿ ಕೂಡ ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಪ್ರಸ್ತುತ ಕರೊನ ವೈರಸ್ ವಿಚಾರದಲ್ಲಿ ಚಿತ್ರೋದ್ಯಮ ಕೂಡ ಸ್ಥಗಿತಗೊಂಡಿರುವ ಕಾರಣ, ತಾವು ಕೂಡ ಒಂದಷ್ಟು ಬಿಡುವು ಕಂಡುಕೊಂಡಿದ್ದಾರೆ ಶಿವಮಣಿ. ಅವರೊಂದಿಗೆ ಫಿಲ್ಮೀಬೀಟ್ ನಡೆಸಿರುವ ಮಾತುಕತೆ ಇಲ್ಲಿದೆ.

  ವಿಜಯ್ ಸೇತುಪತಿಯವರ ಚಿತ್ರದಲ್ಲಿ ನೀವು ನಟಿಸುತ್ತಿರುವುದು ನಿಜವೇ?

  ವಿಜಯ್ ಸೇತುಪತಿಯವರ ಚಿತ್ರದಲ್ಲಿ ನೀವು ನಟಿಸುತ್ತಿರುವುದು ನಿಜವೇ?

  ಹೌದು. ವಾಸ್ತವದಲ್ಲಿ ಅದರ ಚಿತ್ರೀಕರಣ ಈಗಾಗಲೇ ಒಂದಷ್ಟು ನಡೆದಿರಬೇಕಿತ್ತು. ಹಾಗಂತ ಅದು ನಡೆಯದಿರುವುದಕ್ಕೆ ಕಾರಣ, ಕೊರೊನಾ ಏನಲ್ಲ! ವಿಜಯ್ ಸೇತುಪತಿಯವರು ಬಹಳ ಬ್ಯುಸಿ ಇದ್ದರು. ಅವರು ಪ್ರಾಜೆಕ್ಟ್ ಒಪ್ಪಿಕೊಂಡಿದ್ದರೂ ಕೂಡ ಕಾಲ್‌ ಶೀಟ್ ಸಿಕ್ಕಿರಲಿಲ್ಲ. ಈಗ ಎಲ್ಲರೂ ಫ್ರೀಯಾಗಿದ್ದೇವೆ. ಆದರೆ ಚಿತ್ರೀಕರಣವೇ ಮಾಡುವಂತಿಲ್ಲ. ಇದು ವಿಪರ್ಯಾಸ.

  `ಕೊರೊನ’ದಿಂದ ಉಂಟಾಗಿರುವ ಅನಿರೀಕ್ಷಿತ ರಜಾದಲ್ಲಿ ಏನು ಮಾಡುತ್ತಿದ್ದೀರಿ?

  `ಕೊರೊನ’ದಿಂದ ಉಂಟಾಗಿರುವ ಅನಿರೀಕ್ಷಿತ ರಜಾದಲ್ಲಿ ಏನು ಮಾಡುತ್ತಿದ್ದೀರಿ?

  ನನಗೆ ಮೊದಲಿನಿಂದಲೂ ಓದುವ ಹವ್ಯಾಸ ಇದೆ. ಹಾಗಾಗಿ ಪುಸ್ತಕ ಕೈಯ್ಯಲ್ಲಿದ್ದರೆ ಸಮಯ ಹೇಗೆ ಕಳೆಯುತ್ತಿದೆ ಎನ್ನುವ ಅರಿವೇ ಆಗುವುದಿಲ್ಲ. ಪ್ರಸ್ತುತ ನಾನು ಪರಮಹಂಸ ಯೋಗಾನಂದರ `ಯೋಗಿಯ ಆತ್ಮಕತೆ'ಯ ಓದುಗನಾಗಿದ್ದೇನೆ. ಅದರಲ್ಲಿ ಅವರು ವಾಸ್ತವ, ಸನ್ಯಾಸ ಮತ್ತು ಆಧ್ಯಾತ್ಮಿಕತೆಯನ್ನು ಒಂದಾಗಿಸಿ ವಿಚಾರಗಳನ್ನು ಹೇಳಿದ್ದಾರೆ. ನಾನು ಓದುತ್ತಿರುವ ಮತ್ತೊಂದು ಪುಸ್ತಕದ ಹೆಸರು `ಥಿಂಕ್ ಬಿಗ್' ಎನ್ನುವಂಥದ್ದು. ಅದರ ಲೇಖಕ ನೆಪೋಲಿಯನ್ ಹಿಲ್. ವಿಶೇಷ ಏನೆಂದರೆ ಎರಡನ್ನೂ ಆಗಾಗ ಸ್ವಲ್ಪ ಸ್ವಲ್ಪ ಮಿಕ್ಸ್ ಮಾಡ್ಕೊಂಡು ಓದುತ್ತೇನೆ!

  ನಿಮ್ಮ ಕೌಟುಂಬಿಕ ಜೀವನ ಹೇಗಿದೆ?

  ನಿಮ್ಮ ಕೌಟುಂಬಿಕ ಜೀವನ ಹೇಗಿದೆ?

  ಚೆನ್ನಾಗಿದೆ. ನಿಮಗೆಲ್ಲ ತಿಳಿದಿರುವಂತೆ ನಾನು ವಿವಾಹವಾಗಿರುವುದು ನಟಿ ತುಳಸಿಯನ್ನು. ನಮಗೊಬ್ಬ ಮಗ, ಹೆಸರು ಸಾಯಿ ತರುಣ್ ಅಂತ. ಅವನು ಗೌತಮ್ ವಾಸುದೇವ ಮೆನನ್ ಅವರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ. ತುಳಸಿಯೂ ಚೆನ್ನೈನಲ್ಲಿದ್ದಾಳೆ. ಅದಕ್ಕೆ ಕಾರಣ ಮಗನನ್ನು ನೋಡಬೇಕು ಎನ್ನುವುದಷ್ಟೇ ಅಲ್ಲ; ಆಕೆಯ ಎಂಬತ್ತೈದು ವರ್ಷದ ತಾಯಿಯನ್ನು ಸ್ವತಃ ನೋಡಿಕೊಳ್ಳಬೇಕು ಎನ್ನುವ ಮನೋಭಾವವೂ ಅವಳದ್ದು. ಯಾಕೆಂದರೆ ಎಂಟು ತಿಂಗಳ ಮಗುವಿನಿಂದಲೇ ತನ್ನನ್ನು ನಟಿಯಾಗಿ ಪರದೆಗೆ ತೋರಿಸಿದ, ಚಿತ್ರೀಕರಣದಲ್ಲಿ ಜತೆಗಿದ್ದು ಪ್ರೋತ್ಸಾಹಿಸಿದ ತಾಯಿಯನ್ನು ಇಂದು ತಾನು ಕೂಡ ಜತೆಯಲ್ಲೇ ಇದ್ದು ನೋಡಿಕೊಳ್ಳಬೇಕು ಎನ್ನುವ ಆಕಾಂಕ್ಷೆ ಆಕೆಯದ್ದು. ತಾಯಿ ತನ್ನ ಉಳಿದ ಮಕ್ಕಳಿಗೆ ನೀಡಿದ್ದಕ್ಕಿಂತ ಹೆಚ್ಚು ಸಮಯವನ್ನು ತನಗಾಗಿ ನೀಡಿದ್ದಾರೆ ಎನ್ನುವ ಭಾವ ಆಕೆಯದ್ದು.

  English summary
  Kannada movie director, Actor Shivamani talked with Kannada filmibeat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X