For Quick Alerts
  ALLOW NOTIFICATIONS  
  For Daily Alerts

  '...ರೆ'ದಲ್ಲಿ ಏನಿದೆಯೋ? ಸುನೀಲ್ ಕುಮಾರ್ ದೇಸಾಯಿ ಸಂದರ್ಶನ

  By ಸುನೀತಾ ಗೌಡ
  |

  ಹಾಸ್ಯದ ಜೊತೆ ಜೊತೆಗೆ ಭಾವನೆಗಳ ಮಗ್ಗುಲಗಳನ್ನು ಒಂದೊಂದಾಗಿ ಪರಿಚಯಿಸುತ್ತಾ ಹೋಗುವ ವಿಭಿನ್ನ 'ರೆ' ಸಿನಿಮಾ ಈ ವಾರ (ಮಾರ್ಚ್ 4) ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ.

  ಲಾಂಗ್ ಗ್ಯಾಪ್ ತೆಗೆದುಕೊಂಡು ಕಮ್ ಬ್ಯಾಕ್ ಮಾಡಿರುವ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು 'ರೆ' ಯಕ್ಷಪ್ರಶ್ನೆ ಎಂಬ ಅಡಿಬರಹ ಇರುವ ವಿಭಿನ್ನ ಹಾಸ್ಯಮಯ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.[ದೇಸಾಯಿ ಅವರ 'ತಂದಾನ ತಂದನಾನ' ಈಗ 'ಯಕ್ಷಪ್ರಶ್ನೆ'!]

  'ನಮ್ಮೂರ ಮಂದಾರ ಹೂವೆ' ಚಿತ್ರ ಆದ ನಂತರ ಬರೋಬ್ಬರಿ ಎರಡು ದಶಕಗಳ ನಂತರ ಒಂದಾದ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ಒಂದಾಗಿದ್ದು, 'ರೆ' ಮೂಲಕ ಮೋಡಿ ಮಾಡಲು ಹೊರಟಿದ್ದಾರೆ.

  ಇದೀಗ ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರನ್ನು 'ರೆ' ಚಿತ್ರದ ಬಗ್ಗೆ ಮಾತಾನಾಡಿಸಲು ನಿಮ್ಮ ಫಿಲ್ಮಿಬೀಟ್ ಕನ್ನಡ ಸಂಪರ್ಕಿಸಿದಾಗ ಚಿತ್ರದ ಬಗ್ಗೆ ಹಲವಾರು ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡರು.[ಎರಡು ದಶಕಗಳ ನಂತ್ರ ಒಂದಾದ 'ನಮ್ಮೂರ ಮಂದಾರ..' ಜೋಡಿ]

  ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಜೊತೆ ಫಿಲ್ಮಿಬೀಟ್ ಕನ್ನಡ ನಡೆಸಿದ ಚಿಟ್ ಚಾಟ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಪ್ರಶ್ನೆ: ನಿಮ್ಮ ಚಿತ್ರಕ್ಕೆ 'ತಂದನಾ..ತಂದನಾನ' ಅಂತ ಟೈಟಲ್ ಇಟ್ಟಿದ್ದಿದ್ರೆ?

  ಪ್ರಶ್ನೆ: ನಿಮ್ಮ ಚಿತ್ರಕ್ಕೆ 'ತಂದನಾ..ತಂದನಾನ' ಅಂತ ಟೈಟಲ್ ಇಟ್ಟಿದ್ದಿದ್ರೆ?

  ಸುನೀಲ್ ಕುಮಾರ್: ಈ ಚಿತ್ರಕ್ಕೆ ಒಂದು ನಿರ್ದಿಷ್ಟ 'ಹೆಸರು' ಅಂತ ಇಲ್ಲ. 'ತಂದಾನ ತಂದಾನನ'.. ಅಂತ ಇದ್ರೆ ಪಬ್ಲಿಕ್ ಅರ್ಥ ಮಾಡಿಕೊಳ್ಳಲ್ಲ. ಈಗ ಇಟ್ಟಿರುವ 'ರೇ' ಹೆಸರಿಗೂ ಕೂಡ ನಿರ್ದಿಷ್ಟ ಅರ್ಥ ಅಂತ ಇಲ್ಲ. ಎಲ್ಲಾ ಅವರವರ ಭಾವಕ್ಕೆ. ಯಾರು ಹೇಗೆ ಅರ್ಥ ಮಾಡ್ಕೋತಾರೊ ಹಾಗೆ. ಗೆಲ್ತಾರೆ, ಸೋಲ್ತಾರೆ, ಮಾತನಾಡಿದರೆ, ಹೋದರೆ, ಬಂದರೆ, ಅಂತ. ಯಾರು, ಹೇಗೆ 'ರೇ' ಅನ್ನೋದನ್ನ ತುಂಬುತ್ತಾರೋ ಹಾಗೆ. ಎಲ್ಲಾ ಪ್ರೇಕ್ಷಕರಿಗೆ ಬಿಟ್ಟಿದ್ದು.['ಬೆಳದಿಂಗಳ ಬಾಲೆ' ಪ್ರತ್ಯಕ್ಷ; ಮತ್ತೆ ತೆರೆಮೇಲೆ ಸುಮನ್ ನಗರ್ಕರ್]

  * ಈ ಚಿತ್ರದಲ್ಲಿ ರಮೇಶ್ ಅರವಿಂದ್ ಇಲ್ಲದೇ ಹೋಗಿದ್ದಿದ್ರೆ

  * ಈ ಚಿತ್ರದಲ್ಲಿ ರಮೇಶ್ ಅರವಿಂದ್ ಇಲ್ಲದೇ ಹೋಗಿದ್ದಿದ್ರೆ

  - ರಮೇಶ್ ಅರವಿಂದ್ ಇಲ್ಲದೇ ಇದ್ದಿದ್ದರೆ ಬೇರೆಯವರನ್ನು ಹಾಕಿಕೊಂಡು ಮಾಡ್ತಾ ಇದ್ದೆ ಅಂತ ಅಲ್ಲ. ಅವರಿಗೆ ಸೂಕ್ತವಾದ ಪಾತ್ರ ಇತ್ತು. ನಾನು ಸ್ಕ್ರಿಪ್ಟ್ ರೆಡಿ ಮಾಡಿದಾಗ ಈ ಪಾತ್ರಕ್ಕೆ ರಮೇಶ್ ಅವರೇ ಸೂಕ್ತ ಅಂತ ಅನಿಸಿದಾಗ ಹೋಗಿ ಅವರನ್ನು ಭೇಟಿ ಮಾಡಿದೆ ಅವರೂ ಒಪ್ಪಿಕೊಂಡರು. ಯಾಕಂದ್ರೆ ಅವರಿಗೆ ನನ್ನ ಕೆಲಸದ ಮೇಲೆ ವಿಶ್ವಾಸ ಇತ್ತು. ಅನಂತ್ ನಾಗ್ ಅವರಿಗೂ ಸೂಕ್ತವಾದ ಪಾತ್ರ ಇದೆ ಅವರೂ ಸಂತೋಷದಿಂದ ಒಪ್ಪಿಕೊಂಡರು. ಇಲ್ಲಿರುವ ಎಲ್ಲಾ ಪಾತ್ರಧಾರಿಗಳಿಗೂ ಸೂಕ್ತವಾದ ಪಾತ್ರ ಇದೆ. ಎಲ್ಲರೂ ಪಾತ್ರಕ್ಕೆ ಜೀವಂತಿಕೆ ಕೊಟ್ಟು ನಟಿಸಿದ್ದಾರೆ.

  * ಈ ಚಿತ್ರದಲ್ಲಿ ಲವ್ ಸ್ಟೋರಿ ಇಲ್ಲಾ ಅಂದಿದ್ರೆ..

  * ಈ ಚಿತ್ರದಲ್ಲಿ ಲವ್ ಸ್ಟೋರಿ ಇಲ್ಲಾ ಅಂದಿದ್ರೆ..

  - ಇದು ಲವ್ ಸ್ಟೋರಿ ಅನ್ನೋದಕ್ಕಿಂತ ಜಾಸ್ತಿ, ಒಂದು ರೀತಿ ಲವ್ ಸ್ಟೋರಿ, ಒಂದು ರೀತಿ ಮದುವೆ ಸ್ಟೋರಿ, ಒಂದು ರೀತಿ ಬೇರೆ ಅನುಭವ ಕೊಡುವ ಚಿತ್ರ. ಅಂದ್ರೆ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳುವ ಥರ, ನಿಮ್ಮನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳುವ ಥರ, ನಿಮಗೆ ಬೆಳಗ್ಗೆ ಎದ್ದಾಗಿನಿಂದ ಮಲಗುವವರೆಗೂ ಕಾಡುವ ಪ್ರಶ್ನೆ, ಮಾಡದಿದ್ರೆ, ಹೋಗದಿದ್ರೆ, ಅಂತ ಬರೀ ಪ್ರಶ್ನೆಗಳ ಜೊತೆಗೆನೇ ನಾವು ಜೀವನ ಸಾಗಿಸುತ್ತೇವೆ. ಇದಕ್ಕೆ ಉತ್ತರ ಕೂಡ ಇಲ್ಲ. ಅದಕ್ಕೆ ನಾವು ಯಕ್ಷಪ್ರಶ್ನೆ ಅಂತ ಅಡಿಬರಹ ಕೂಡ ಕೊಟ್ಟಿದ್ದೇವೆ.

  * ರಮೇಶ್ ಮತ್ತು ಅನಂತ್ ನಾಗ್ ಒಂದಾಗದೇ ಹೋಗಿದಿದ್ರೆ..

  * ರಮೇಶ್ ಮತ್ತು ಅನಂತ್ ನಾಗ್ ಒಂದಾಗದೇ ಹೋಗಿದಿದ್ರೆ..

  - ಇವಾಗ ಪಾತ್ರಗಳನ್ನು ಮಾಡಲು ಅವರೂ ಒಪ್ಪಿದ್ದಾರೆ ಅಲ್ವಾ. ಅವರಿಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿರುತ್ತದೆ. ಅವರವರ ಪಾತ್ರವನ್ನು ಕಟ್ಟಿಕೊಡುವ ಮೂಲಕ ಅವರ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುತ್ತಾರೆ ಅಂತ ಗೊತ್ತಿತ್ತು. ನ್ಯಾಯ ಒದಗಿಸಿದ್ದಾರೆ ಕೂಡ. ಹಾಗಾಗಿ ಅವರನ್ನು ತೆರೆ ಮೇಲೆ ನೋಡಲು ಜನ ಕೂಡ ಇಷ್ಟಪಡುತ್ತಾರೆ.

  * ರಮೇಶ್ ಅರವಿಂದ್, ಅನಂತ್ ನಾಗ್, ಸೇರಿದಂತೆ....ಎಲ್ಲರ ಡೇಟ್ಸ್ ಕ್ಲ್ಯಾಶ್ ಆಗಿದಿದ್ರೆ

  * ರಮೇಶ್ ಅರವಿಂದ್, ಅನಂತ್ ನಾಗ್, ಸೇರಿದಂತೆ....ಎಲ್ಲರ ಡೇಟ್ಸ್ ಕ್ಲ್ಯಾಶ್ ಆಗಿದಿದ್ರೆ

  - ಡೇಟ್ಸ್ ನಲ್ಲಿ ಕ್ಲ್ಯಾಶ್ ಆಗೋ ಪ್ರಶ್ನೆನೇ ಬರ್ಲಿಲ್ಲ. ನಾವು ಮೊದಲೇ ಶೆಡ್ಯೂಲ್ ಮಾಡಿದ್ವಿ. ಅನಂತ್ ನಾಗ್ ಅವರು ಬ್ಯುಸಿ ಇದ್ರು ಅಂತ ಮೊದಲೇ ಡೇಟ್ ಕೊಟ್ಟಿದ್ರು, ಸೋ ಅವರ ಶೂಟಿಂಗ್ ಬೇಗ ಮಾಡಿದ್ವಿ. ರಮೇಶ್ ಅವರು ಅಷ್ಟೊಂದು ಕಮಿಂಟ್ ಮೆಂಟ್ಸ್ ಇಟ್ಟುಕೊಂಡಿರಲಿಲ್ಲ. ಮತ್ತೆ ಬೇರೆಯವರೆಲ್ಲ ಅಷ್ಟೊಂದು ಬ್ಯುಸಿ ನಟ-ನಟಿಯರು ಯಾರು ಇರ್ಲಿಲ್ಲಾ. ಹರ್ಷಿಕಾ ಪೂನಚ್ಚ ಅವರು ಫ್ರೀ ಇದ್ರು. ಹಾಗೆ ನಮಗೆ ಎಲ್ಲವೂ ಸುಲಭ ಆಯ್ತು.

  * ದೇಸಾಯಿ ಮತ್ತೊಂದು ಥ್ರಿಲ್ಲರ್ ಸಿನಿಮಾ ಮಾಡಿದಿದ್ರೆ...

  * ದೇಸಾಯಿ ಮತ್ತೊಂದು ಥ್ರಿಲ್ಲರ್ ಸಿನಿಮಾ ಮಾಡಿದಿದ್ರೆ...

  - ಥ್ರಿಲ್ಲರ್ ಸಿನಿಮಾ ಮಾಡ್ತಾರೆ.

  * ಸಿನಿಮಾದಲ್ಲಿ ಸುಮನ್ ನಗರ್ಕರ್ ಇಲ್ದಿದ್ರೆ

  * ಸಿನಿಮಾದಲ್ಲಿ ಸುಮನ್ ನಗರ್ಕರ್ ಇಲ್ದಿದ್ರೆ

  - ಇದಕ್ಕೆ 'ರೇ' ಅನ್ನೋದು. ಈ ಚಿತ್ರದಲ್ಲಿ ಅವರು ಒಂದು ನಿಮಿಷ ಬಂದು ಹೋಗ್ತಾರೆ. ಹೀಗೆ ಒಂದು ಸನ್ನಿವೇಶ ಬಂತು, ಆ ಸನ್ನಿವೇಶ ವಿಚಾರ ಮಾಡ್ತಾ ಇದ್ದಾಗ, ಸುಮನ್ ಅವರು ಆಕಸ್ಮಿಕವಾಗಿ ಅಮೆರಿಕದಿಂದ ಭಾರತಕ್ಕೆ ಬಂದ್ರು. ಕೊನೆ ಹಂತದಲ್ಲಿ ಬಂದಿದ್ರು ಅವರು ಈ ಸಿನಿಮಾದಲ್ಲಿ ನಟನೆ ಮಾಡಿದ್ರು. ಬಂದಿಲ್ಲಾಂದ್ರೆ ಈ ಸಿನಿಮಾದಲ್ಲಿ ನಟನೆ ಮಾಡ್ತಾ ಇರ್ಲಿಲ್ಲ.

  * ರೇ...ವರ್ಷದ ಹಿಂದೆ ತೆರೆಗೆ ಬಂದಿದ್ರೆ

  * ರೇ...ವರ್ಷದ ಹಿಂದೆ ತೆರೆಗೆ ಬಂದಿದ್ರೆ

  - 10 ವರ್ಷ ಅಂತ ಯಾಕೆ ಕೇಳಿಲ್ಲಾ. ಇದು ಏಳೆಂಟು ವರ್ಷದ ಹಿಂದೆ ಬರಬೇಕಿತ್ತು. ಹಿಂದೆ ಬಂದಿದ್ರೆ, ಅಥವಾ ಈಗ ಬರದೇ ಹೋಗಿದ್ದಿದ್ರೆ, ಮುಂದಿನ ವರ್ಷ ಬರ್ತಿತ್ತೋ ಇಲ್ವೋ ಅಂತ ಗೊತ್ತಿಲ್ಲ ಅಲ್ವಾ. ಅದಕ್ಕೆ ಈ ಅನಿಶ್ಚಿತೆಗಳು ಸುತ್ತಾಡ್ತಾ ಇರೋದ್ರಿಂದ ಈ ಸಿನಿಮಾಗೆ 'ರೇ' ಅಂತ ಹೆಸರಿಟ್ಟಿದ್ದು.

  * ಮುಂಚಿನ ಹಾಗೆ, ದೇಸಾಯಿ ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೆ

  * ಮುಂಚಿನ ಹಾಗೆ, ದೇಸಾಯಿ ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೆ

  - ಎಲ್ಲರೂ ನೋಡ್ತಾ ಇದ್ರು.

  * ದೇಸಾಯಿ ಹಳೆಯ ಫಾರ್ಮ್ ಗೆ ಮರಳಿದ್ರೆ

  * ದೇಸಾಯಿ ಹಳೆಯ ಫಾರ್ಮ್ ಗೆ ಮರಳಿದ್ರೆ

  - ಇದ್ರಲ್ಲಿ ಹೊಸತನ ಇದೆ. ಹಳೆಯ ಫಾರ್ಮ್ ಹೊಸದಾಗಿ ಬಂದಿದೆ. ನಮ್ಮೂರ ಮಂದಾರ ಹೂವೆ ಇದರ ಮುಂದೆ ಹಳೆಯದಾಗುತ್ತೆ.

  * ಒಟ್ಟಾರೆ ರೇ....

  * ಒಟ್ಟಾರೆ ರೇ....

  - ಇದೊಂದು ಕಾಲ್ಪನಿಕವಾಗಿ ನಡೆದ ಕಥೆ. ಮನಸ್ಸಿಗೆ ಮುದ ನೀಡುತ್ತೆ ಮತ್ತು ಸಂತೋಷವನ್ನುಂಟು ಮಾಡುತ್ತದೆ. ಜೊತೆಗೆ ಎಲ್ಲರಿಗೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ.

  * ಪ್ರೇಕ್ಷಕರು ರೇ....ನೋಡಿದ್ರೆ...

  * ಪ್ರೇಕ್ಷಕರು ರೇ....ನೋಡಿದ್ರೆ...

  - ನೋಡ್ತಾ'ರೇ', ಖಂಡಿತ ನೋಡ್ತಾರೆ, ಚಿತ್ರದಲ್ಲಿ ಏನಿದೆ ಅಂತ ಚಿತ್ರ ನೋಡಿದವರಿಗೆ ಗೊತ್ತಾಗುತ್ತೆ.

  English summary
  Kannada Movie 'Re' releasing this week (March 4th). Director Sunil Kumar Desai spoke to Filmibeat. 'Re' Director Sunil Kumar Desai Shared his experience about 'Re' film. Here is the exclusive interview.
  Friday, March 4, 2016, 19:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X