For Quick Alerts
  ALLOW NOTIFICATIONS  
  For Daily Alerts

  ರಿವಿಲ್ ಆಯ್ತು 'ಮಜಾ ಟಾಕೀಸ್' ರಾಣಿಯ ಬ್ಯೂಟಿ ಸೀಕ್ರೆಟ್

  By Pavithra
  |
  Shwetha chengappa interview | Filmibeat Kannada

  ಮಜಾ ಟಾಕೀಸ್ ರಾಣಿ ಯಾರಿಗೆ ತಾನೇ ಪರಿಚಯವಿಲ್ಲ ಹೇಳಿ. ಟಿವಿ ಮುಂದೆ ಕೂತು ಧಾರಾವಾಹಿ ನೋಡುವ ಹೆಣ್ಣು ಮಕ್ಕಳಿಂದ ಹಿಡಿದು ಈಗಿನ ಪಡ್ಡೆ ಹುಡುಗರಿಗೂ ರಾಣಿಯ ಪರಿಚಯ ಇದ್ದೇ ಇರುತ್ತೆ. ಹೌದು ನಾವು ಮಾತನಾಡುತ್ತಿರುವುದು ನಟಿ ಶ್ವೇತಾ ಚಂಗಪ್ಪ ಅವರ ಬಗ್ಗೆ. ಉದಯ ವಾಹಿನಿಯಲ್ಲಿ 2003ರಲ್ಲಿ ಪ್ರಸಾರ ಆಗುತ್ತಿದ್ದ 'ಸುಮತಿ' ಧಾರಾವಾಹಿ ಮೂಲಕ ಬಣ್ಣ ಹಚ್ಚಲು ಆರಂಭ ಮಾಡಿದ ಶ್ವೇತಾ ಹೆಣ್ಣು ಮಕ್ಕಳ ಹಚ್ಚುಮೆಚ್ಚು.

  ಟಿವಿ ಮುಂದೆ ಕೂತು ಶ್ವೇತಾ ಅಭಿನಯ ನೋಡಿ ಕಣ್ಣೀರು ಸುರಿಸಿದವರೆಷ್ಟೋ ಜನರು. ಸುಮತಿಯಿಂದ ಮಜಾ ಟಾಕಿಸ್ ವರೆಗೂ ಸುಮಾರು 15 ವರ್ಷದ ಬಣ್ಣದ ಲೋಕದಲ್ಲಿ ಪ್ರಯಾಣ ಬೆಳೆಸಿರುವ ಶ್ವೇತಾ ಚಂಗಪ್ಪ ಅವನ್ನ ನೋಡಿದರೆ ಇವತ್ತಿಗೂ ಅನ್ನಿಸುವುದು ಏನು ಇವರ ಬ್ಯೂಟಿ ಸೀಕ್ರೆಟ್ ಅನ್ನುವುದು.

  ಮಜಾ ಟಾಕೀಸ್ ನಲ್ಲಿ ಅಸಾಧ್ಯವಾದುದ್ದನ್ನ ಸಾಧ್ಯ ಮಾಡಿದ ಸೃಜಾಮಜಾ ಟಾಕೀಸ್ ನಲ್ಲಿ ಅಸಾಧ್ಯವಾದುದ್ದನ್ನ ಸಾಧ್ಯ ಮಾಡಿದ ಸೃಜಾ

  ಅಂದಿಗೂ ಇಂದಿಗೂ ಕೆಲವೇ ಕೆಲವು ಬದಲಾವಣೆಗಳನ್ನ ಬಿಟ್ಟು ಬೇರೇನೂ ವ್ಯತ್ಯಾಸವಿಲ್ಲದೆ ಮುದ್ದಾಗಿ ಕಾಣಿಸಿಕೊಳ್ಳುವ ಕೊಡಗಿನ ಕುವರಿ ತಮ್ಮ ಸೌಂದರ್ಯದ ಹಿಂದಿರುವ ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ. ಮುಂದೆ ಓದಿ

  ಬಣ್ಣದ ನಂಟು ಹೇಗಿದೆ ?

  ಬಣ್ಣದ ನಂಟು ಹೇಗಿದೆ ?

  ಸುಮಾರು ಹದಿನೈದು ವರ್ಷವಾಯ್ತು ಬಣ್ಣ ಹಚ್ಚಲು ಆರಂಭ ಮಾಡಿ ಅಂದಿನಿಂದ ಇಲ್ಲಿಯವರೆಗೂ ಅಭಿನಯ ಮಾಡುತ್ತಾ, ನಿರೂಪಣೆ ಮಾಡುತ್ತಾ ಎಲ್ಲಾ ಕ್ಷೇತ್ರಗಳಲ್ಲೂ ಜನರಿಗೆ ಮನೋರಂಜನೆ ನೀಡುತ್ತಾ ಬರುತ್ತಿದ್ದೇನೆ.

  ನಿಮ್ಮ ಸೌಂದರ್ಯದ ಗುಟ್ಟೇನು?

  ನಿಮ್ಮ ಸೌಂದರ್ಯದ ಗುಟ್ಟೇನು?

  ಗೊತ್ತಿಲ್ಲ. ರಾಣಿ ಪಾತ್ರ ನೋಡಿದಾಗ ಎಲ್ಲರಿಗೂ ಅನ್ಸುತ್ತೆ ಹೆಚ್ಚು ಮೇಕಪ್ ಹಾಕ್ತಾಳೆ ಅಂತ. ಆದರೆ ನಾನು ಯಾವುದೇ ರೀತಿ ಮೇಕಪ್ ಮಾಡಿಕೊಳ್ಳಲ್ಲ. ನ್ಯಾಚುರಲ್ ಲುಕ್ ನನ್ನದು. ನನ್ನ ಸ್ಕಿನ್ ತುಂಬಾ ಸೆನ್ಸಿಟಿವ್ . ಇವತ್ತಿಗೂ ನಾನು ಬೇಬಿ ಪ್ರಾಡಕ್ಟ್ ಗಳನ್ನ ಮಾತ್ರ ಬಳಸೋದು . ಯಾವಾಗಲೂ ನಗುತ್ತಾ ಇರುತ್ತೇನೆ ಅದೇ ನನ್ನ ಲೈಫ್ ಸೀಕ್ರೆಟ್ .

  ನಿಮ್ಮ ಸ್ಟೈಲಿಶ್ ಯಾರು?

  ನಿಮ್ಮ ಸ್ಟೈಲಿಶ್ ಯಾರು?

  ನನಗೆ ಅಮ್ಮ ಸ್ಟೈಲಿಶ್. ಕೆಲವೊಮ್ಮೆ ನಾನೇ ಮಾಡಿಕೊಳ್ಳುತ್ತೇನೆ. ರಾಣಿ ಪಾತ್ರಕ್ಕೆ ಬೇಕಾಗುವ ಸೀರೆ ಅದಕ್ಕೆ ಸೂಕ್ತ ಜ್ಯೂವೆಲರಿ ಎಲ್ಲಾ ಹೊಂದಿಸಿ ಕೊಡುತ್ತಾರೆ. ಇಲ್ಲಿ ಪೂಜಾ ಲೋಕೇಶ್ ಕೂಡ ಮಾಡಿಕೊಡುತ್ತಾರೆ.

  ಡಯೆಟ್ ಮಾಡ್ತಿರಾ

  ಡಯೆಟ್ ಮಾಡ್ತಿರಾ

  ಹೌದು.. ತುಂಬಾ ಮಾಡ್ತಿದ್ದೆ. ಯಾರೇ ನನ್ನ ಎದುರಿಗೆ ನೋಡಿದವರು ಆನ್ ಸ್ಕ್ರೀನ್ ತುಂಬಾ ದಪ್ಪ ಕಾಣ್ತೀರಾ ಅಂತಾರೆ. ಎಲ್ಲಾ ತರಹದ ತಿಂಡಿ ತಿನ್ನುತ್ತೀನಿ. ಸಿಹಿ ತಿನ್ನೋದಿಲ್ಲ. ನಾನು ಕೊಡಗಿನವಳು ಆದ್ದರಿಂದ ಮಾಂಸಹಾರಿ ಆದ್ರೆ ಅದು ವಾರದಲ್ಲಿ ಒಂದು ದಿನ ಮಾತ್ರ. ನನಗೆ ನಾನೇ ರೋಲ್ಸ್ ಹಾಕೊಂಡಿದ್ದೀನಿ.

  ಬೇಸಿಗೆಗೆ ಏನು ಟಿಪ್ಸ್ ಕೊಡ್ತಿರಾ.

  ಬೇಸಿಗೆಗೆ ಏನು ಟಿಪ್ಸ್ ಕೊಡ್ತಿರಾ.

  ನನಗೆ ಸಮ್ಮರ್ ಅಂದ್ರೆ ಆಗಲ್ಲ. ಜಾಸ್ತಿ ನೀರು ಕುಡಿಬೇಕು, ಎಳನೀರು ಕುಡಿಬೇಕು, ಜ್ಯೂಸ್ ಕುಡಿತ್ತೀನಿ. ಖುಷಿ ಖುಷಿ ಆಗಿರಿ. ವ್ಯಾಯಾಮ ಮಾಡಿ .ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಫ್ಯಾಕ್ಚರ್ ಆಗಿತ್ತು ಆದ್ದರಿಂದ ವ್ಯಾಯಾಮ ಬಿಟ್ಟಿದ್ದೆ. ಈಗ ಯೋಗ ಮಾಡ್ತಿನಿ, ನೀವು ಮಾಡಿ.

  English summary
  Kannada actress Shweta Changappa has said the secret of her beauty, Shweta came completed fifteen years in film industry, Shweta is currently acting in Maja Talkies as a Raani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X