»   » ದರ್ಶನ್ 50ನೇ ಸಿನಿಮಾ ಬಗ್ಗೆ ದಿನಕರ್ ಏನಂದ್ರು ಗೊತ್ತಾ

ದರ್ಶನ್ 50ನೇ ಸಿನಿಮಾ ಬಗ್ಗೆ ದಿನಕರ್ ಏನಂದ್ರು ಗೊತ್ತಾ

By: ಸುನಿ ಗೌಡ
Subscribe to Filmibeat Kannada

ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ 'ತೂಗುದೀಪ ಪ್ರೊಡಕ್ಷನ್ಸ್' ಸದಾ ಹೊಸ ಪ್ರತಿಭೆಗಳಿಗೆ ಮಣೆ ಹಾಕುತ್ತದೆ. ಅಂತೆಯೇ ಈ ಬಾರಿ ಕೂಡ ಸೂರಜ್ ಎಂಬ ಹೊಸ ಪ್ರತಿಭೆಗೆ ತಮ್ಮ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 'ಮದುವೆಯ ಮಮತೆಯ ಕರೆಯೋಲೆ' ಎಂಬ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ.

ಮೈಸೂರು ಮೂಲದ ನಟ ಸೂರಜ್ ಗೌಡ ಅವರು 2009 ರಲ್ಲಿ 'ಮಿಸ್ಟರ್ ಮೈಸೂರ್' ಮತ್ತು 2013 ರಲ್ಲಿ 'ಮಿಸ್ಟರ್ ಕರ್ನಾಟಕ' ಎಂಬ ಬಿರುದು ಪಡೆದಿರುವ ಇವರು ಅಮೂಲ್ಯ ಅವರ ಜೊತೆ ಇದೇ ಮೊದಲ ಬಾರಿಗೆ ಡ್ಯುಯೆಟ್ ಹಾಡಿದ್ದಾರೆ.

ನಟ ಸೂರಜ್ ಗೌಡ ಮತ್ತು ನಿರ್ಮಾಪಕ ದಿನಕರ್ ತೂಗುದೀಪ ಅವರು ಫಿಲ್ಮಿಬೀಟ್ ಕನ್ನಡದ ಜೊತೆ ಮಾತಿಗೆ ಸಿಕ್ಕಾಗ ಚೊಚ್ಚಲ ಸಿನಿಮಾದಲ್ಲಿ ತಮ್ಮ ಅನುಭವವನ್ನು ಸೂರಜ್ ಅವರು ಹಂಚಿಕೊಂಡರೆ, ನಿರ್ಮಾಪಕ ದಿನಕರ್ ಅವರು ಕವಿರಾಜ್ ಅವರ ಸಿನಿಮಾವನ್ನು ನಿರ್ಮಾಣ ಮಾಡಲು ಯಾಕೆ ಒಪ್ಪಿಕೊಂಡಿದ್ದು, ಎನ್ನುವ ಸತ್ಯವನ್ನು ಬಯಲು ಮಾಡಿದ್ದಾರೆ.

'MMK' movie Actor Suraj and Producer Dinakar Toogudeepa Interview

ನಟ ಸೂರಜ್ ಗೌಡ ಮತ್ತು ನಿರ್ಮಾಪಕ ದಿನಕರ್ ತೂಗುದೀಪ ಅವರ ಜೊತೆ ಫಿಲ್ಮಿಬೀಟ್ ಕನ್ನಡ ಮಾಡಿರುವ ಚಿಟ್ ಚಾಟ್ ಇಲ್ಲಿದೆ ನೋಡಿ..

* ನಾಯಕನಾಗಿ ಮೊದಲ ಅನುಭವ ಹೇಗಿತ್ತು?

- ತುಂಬಾನೇ ಖುಷಿ ಆನಿಸ್ತು, ಫಸ್ಟ್ ಟೈಮ್ ಒಂದೊಳ್ಳೆಯ ಪ್ರೊಡಕ್ಷನ್ ನಲ್ಲಿ ನನ್ನ ಸಿನಿಮಾ ಬರ್ತಾ ಇರೋದು, ಜೊತೆಗೆ ಒಳ್ಳೆಯ ಸ್ಟಾರ್ ಕಾಸ್ಟ್ ಜೊತೆ ನಟಿಸುವ ಅವಕಾಶ ಇದು ತುಂಬಾ ಒಳ್ಳೆಯ ಅನುಭವ.

* ಸ್ಟಾರ್ ನಟಿ ಅಮೂಲ್ಯ ಅವರ ಜೊತೆ ನಟನೆ ಹೇಗನಿಸ್ತು? ಭಯ ಆಯ್ತಾ?

- ಫಸ್ಟ್ ಸಿನಿಮಾದಲ್ಲಿ ಆಕ್ಟ್ ಮಾಡೋ ಮುಂಚೆ ಸ್ವಲ್ಪ ಭಯ ಇರಬಹುದಿತ್ತೇನೋ ಆದ್ರೆ ಅಮೂಲ್ಯ ಅವರು ತುಂಬಾ ಒಳ್ಳೆಯ ಸ್ನೇಹಜೀವಿ. ತುಂಬಾನೇ ಸುಲಭ ಆಯ್ತು ಅವರೊಂದಿಗೆ ಚೊಚ್ಚಲ ನಟನೆ ಮಾಡಲು, ತುಂಬಾ ಸಹಾಯದ ಜೊತೆಗೆ ಕೋ-ಅಪರೇಟ್ ಮಾಡುತ್ತಿದ್ದರು. ಒಟ್ನಲ್ಲಿ ಅವರೊಂದಿಗೆ ಕೆಲಸ ಮಾಡಿದ ಅನುಭವ ಸೂಪರ್ ಆಗಿತ್ತು.[ಎಲ್ಲರೂ ಮದುವೆಗೆ ಬನ್ನಿ ಎಂದು ಆಹ್ವಾನ ನೀಡಿದ ದರ್ಶನ್]

'MMK' movie Actor Suraj and Producer Dinakar Toogudeepa Interview

* ಬೇರೆ ಸಿನಿಮಾದಲ್ಲಿ ನಟಿಸಲು ಆಫರ್ ಬಂತಾ?

- ಬಂದಿದೆ ಆದ್ರೆ ನಾನು ಈ ಸಿನಿಮಾ ಮೊದಲು ರಿಲೀಸ್ ಆಗ್ಲಿ ನಂತರ ನೋಡೋಣ ಅಂತ ಅಂದುಕೊಂಡಿದ್ದೀನಿ. ಸದ್ಯಕ್ಕೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ದಿನಕರ್ ತೂಗುದೀಪ ಅವರು ಈ ಬಾರಿ ಒಂದು ಸಿನಿಮಾ ನಿರ್ದೇಶನ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಈ ಬಗ್ಗೆ ದಿನಕರ್ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

* ಮತ್ತೆ ಯಾವಾಗ ನಿರ್ದೇಶನಕ್ಕೆ ಬರ್ತೀರಾ?

- ಹಾ ಈ ವರ್ಷ 2016 ಗೆ ಒಂದು ಸಿನಿಮಾ ಮಾಡ್ಬೇಕು ಅಂತ ಪ್ಲಾನ್ ಇದೆ ಆದರೆ ಇನ್ನೂ ಸರಿಯಾಗಿ ಯಾವುದು ಡಿಸೈಡ್ ಆಗಿಲ್ಲ.

* ದರ್ಶನ್ ಅವರದು 50ನೇ ಸಿನಿಮಾ ನೀವೇ ಡೈರೆಕ್ಷನ್ ಮಾಡ್ತೀರಾ?

- ಹೌದು ದರ್ಶನ್ ಅವರ 50ನೇ ಸಿನಿಮಾ 'ಸರ್ವಂತರ್ಯಾಮಿ' ನಾನೇ ಡೈರೆಕ್ಟ್ ಮಾಡ್ತೀನಿ. ಈಗಾಗಲೇ ಸ್ಕ್ರಿಪ್ಟ್ ಎಲ್ಲಾ ರೆಡಿ ಇದೆ ಆದರೆ ಸ್ಕ್ರೀನ್ ಪ್ಲೇ ಮಾಡೋಕೆ ಇನ್ನೂ ಟೈಮಿದೆ.

'MMK' movie Actor Suraj and Producer Dinakar Toogudeepa Interview

* ನಿಮ್ಮ ಬ್ಯಾನರ್ ನಲ್ಲಿ ಹೊಸಬರಿಗೆ ಅವಕಾಶ ಕೊಡಲು ಕಾರಣ

- ಕಾರಣ ಏನೂ ಇಲ್ಲ ಕಥೆ ಹೇಗೆ ಡಿಮ್ಯಾಂಡ್ ಮಾಡುತ್ತೋ ಹಂಗೆ, 'ಜೊತೆ ಜೊತೆಯಲಿ' ಮಾಡುವಾಗಲೂ ಹಂಗೆ ಒಬ್ಬ ಹೊಸಬ ಬೇಕಾಯಿತು ಸೋ ಹೊಸಬರಿಗೆ ಚಾನ್ಸ್ ಕೊಟ್ಟೆ. ಆಮೇಲೆ ನವಗ್ರಹದಲ್ಲಿ 9 ಜನರನ್ನು ಡಿಮ್ಯಾಂಡ್ ಮಾಡಿತ್ತು 9 ಜನ ವಿಲನ್ ಗಳ ಮಕ್ಕಳನ್ನು ಹಾಕಿಕೊಂಡು ಸಿನಿಮಾ ಮಾಡಿದ್ವಿ. ಆಮೇಲೆ 'ಬುಲ್ ಬುಲ್' ಸಿನಿಮಾದಲ್ಲಿ ಹೊಸ ಹಿರೋಯಿನ್ ಬೇಕಿತ್ತು ಅದಕ್ಕೆ ರಚಿತಾ ರಾಮ್ ಗೆ ಅವಕಾಶ ಕೊಟ್ವಿ.

* ಕವಿರಾಜ್ ಅವರ ಚೊಚ್ಚಲ ಸಿನಿಮಾವನ್ನೇ ಯಾಕೆ ನಿಮಗೆ ನಿರ್ಮಾಣ ಮಾಡಬೇಕೆನಿಸಿತು?

- ಅದೇ ಕಥೆ ಇಷ್ಟ ಆಯ್ತು, ನಾವು ಯಾವಾಗ್ಲೂ ಅವರು ಡೈರೆಕ್ಷನ್ ಚೆನ್ನಾಗಿ ಮಾಡ್ತಾರೆ ಅಂತ ನಿರ್ಮಾಣ ಮಾಡಲ್ಲ ಕಥೆ ಚೆನ್ನಾಗಿತ್ತು ಅದಕ್ಕೋಸ್ಕರ ನನ್ನ ಬ್ಯಾನರ್ ಅಲ್ಲಿ ಮಾಡಬೇಕು ಅಂತ ಸ್ವಾರ್ಥಕ್ಕೋಸ್ಕರಾನೇ ಈ ಸಿನಿಮಾ ಮಾಡಿದ್ದು.

English summary
Kannada Movie 'Maduveya Mamatheya Kareyole' releasing this week (January 8th). Kannada Actor Suraj and Producer Dinakar Toogudeepa spoke to Filmibeat. Actor Sooraj Shared his experience about 'Maduveya Mamatheya Kareyole' movie shooting. Here is the Exclusive Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada