twitter
    For Quick Alerts
    ALLOW NOTIFICATIONS  
    For Daily Alerts

    Exclusive : ಏಳು ಬೀಳಿನ ನಂತರ ಹೀರೋ ಆಗಿ ಬಂದ್ರು 'ಫ್ರೆಂಡ್ಸ್' ಚಿತ್ರದ ನಟ

    |

    ಸಿನಿಮಾ ಅಂದ್ರೆ ಹಾಗೆ... ಯಾವಾಗ ಹೇಗೆ ಬದಲಾಗುತ್ತದೆ ಹೇಳೋಕಾಗಲ್ಲ. ಶೇರ್ ಮಾರ್ಕೆಟ್ ನ ರೀತಿ, ಹೇಗೆ ಬೇಕಾದರೂ ಶೇಕ್ ಆಗುತ್ತದೆ. ಹಾಗಾಗಿಯೇ ಸಿನಿಮಾವನ್ನೇ ನಂಬಿಕೊಂಡ ಕಲಾವಿದರ ಬದುಕು ಬದಲಾಗುತ್ತಲೇ ಇರುತ್ತದೆ.

    2002 'ಫ್ರೆಂಡ್' ಎಂಬ ಒಂದು ಸಿನಿಮಾ ಬಂದಿತ್ತು. ಅದೇ 'ತಿರುಪತಿ ತಿರುಮಲ ವೆಂಕಟೇಶ..' ಹಾಡು ಇರೋ ಸಿನಿಮಾ. ಈ ಸಿನಿಮಾದ ಕಲಾವಿದರ ಪೈಕಿ ಹರಿ ಕೂಡ ಒಬ್ಬರು. ತಮ್ಮ ದೈತ್ಯ ದೇಹ ಹಾಗೂ ಕಾಮಿಡಿ ಟೈಮಿಂಗ್ ಮೂಲಕ ಈ ನಟ ಗಮನ ಸೆಳೆದಿದ್ದರು.

    Recommended Video

    ಶ್ರದ್ಧಾ ಮಕ್ಕಳು ಬೇಡ ಎನ್ನಲು ಇಲ್ಲಿದೆ ಕಾರಣ..? | Shraddha Srinath | FILMIBEAT KANNADA

    'ಫ್ರೆಂಡ್ಸ್' ದೊಡ್ಡ ಹಿಟ್ ಆಯ್ತು. ಆದರೆ, ಹರಿ 'ಫ್ರೆಂಡ್ಸ್' ಬಳಿಕ ಕೆಲವೊಂದು ಸಿನಿಮಾ ಮಾಡಿದ್ದರು, ಯಾವುದು ದೊಡ್ಡ ಹೆಸರು ನೀಡಲಿಲ್ಲ. ಕ್ಯಾಮರಾ ಮುಂದೆ ಇರಬೇಕಿದ್ದ ಕಲಾವಿದ ಅವಕಾಶಗಳ ಕೊರತೆಯಿಂದ ಕ್ಯಾಮರಾ ಮ್ಯಾನ್ ಜೊತೆಗೆ ಕೆಲಸ ಮಾಡುವ ಪರಿಸ್ಥಿತಿ ಬಂತು.

    17 ವರ್ಷಗಳಿಂದ ತೆರೆ ಹಿಂದೆ ಕೆಲಸ ಮಾಡಿಕೊಂಡು, ಸಣ್ಣ ಪುಟ್ಟ ಪಾತ್ರಗಳಿಗೆ ಸೀಮಿತನಾಗಿದ್ದ ಈ ನಟ ಈಗ ಹೀರೋ ಆಗಿದ್ದಾರೆ. 'ಎಂ ಆರ್ ಪಿ' ಸಿನಿಮಾದ ಮೂಲಕ ಹರಿ ನಾಯಕನಾಗಿದ್ದಾರೆ.

    Interview: ಮಾತೃ ಭಾಷೆಯಲ್ಲಿ ದರ್ಶನ್ ಜೊತೆ ನಟಿಸುವುದು ಬಂಪರ್ ಖುಷಿInterview: ಮಾತೃ ಭಾಷೆಯಲ್ಲಿ ದರ್ಶನ್ ಜೊತೆ ನಟಿಸುವುದು ಬಂಪರ್ ಖುಷಿ

    ತಮ್ಮ 'ಎಂ ಆರ್ ಪಿ' ಸಿನಿಮಾದ ಬಗ್ಗೆ, ಹಾಗೂ ಇಷ್ಟು ವರ್ಷದ ಏಳು ಬೀಳಿನ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದಾರೆ. ಮುಂದೆ ಓದಿ..

    ಸಂದರ್ಶನ : ನವಿ ಕನಸು (ನವೀನ್ ಎಂ ಎಸ್)

    ನಿಮ್ಮ ಕೆರಿಯರ್ ನಲ್ಲಿ ಯಾಕೆ ಇಷ್ಟೊಂದು ದೊಡ್ಡ ಗ್ಯಾಪ್ ?

    ನಿಮ್ಮ ಕೆರಿಯರ್ ನಲ್ಲಿ ಯಾಕೆ ಇಷ್ಟೊಂದು ದೊಡ್ಡ ಗ್ಯಾಪ್ ?

    ''ಫ್ರೆಂಡ್ಸ್' ನಂತರ ನಾಲ್ಕೈದು ಸಿನಿಮಾ ಮಾಡಿದೆ. ಆದರೆ, ಅಷ್ಟೊಂದು ತೃಪ್ತಿ ನೀಡಲಿಲ್ಲ. ನಂತರ ಟೆಕ್ನಿಷಿಯಲ್ ಆಗಿ ಮುಂದುವರೆಯುವ ನಿರ್ಧಾರ ಮಾಡಿದೆ. ಕ್ಯಾಮರಾ ಮ್ಯಾನ್ ಕೃಷ್ಣ ಕುಮಾರ್ ಅವರ ಜೊತೆಗೆ ಕೆಲಸ ಮಾಡಲು ಶುರು ಮಾಡಿದೆ. ಅದರ ಜೊತೆ ಜೊತೆಗೆ ಸಿಕ್ಕ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದೆ.''

    'MRP' ಚಿತ್ರ ಹೇಗೆ ಶುರು ಆಯ್ತು?

    'MRP' ಚಿತ್ರ ಹೇಗೆ ಶುರು ಆಯ್ತು?

    ''ಈಗಲೂ ನಾನು ಟೆಕ್ನಿಷಿಯನ್ ಆಗಿಯೇ ಕೆಲಸ ಮಾಡುತ್ತಿದ್ದೆ. ಒಂದು ಒಳ್ಳೆಯ ಕಥೆ ಇದೆ ಎಂದು ನಿರ್ದೇಶಕರು ಸಂಪರ್ಕ ಮಾಡಿದರು. ನನಗಾಗಿಯೇ ಒಂದು ಕಥೆ ಮಾಡಿದ್ದೇನೆ ಎಂದರು. ನಾನು ಈ ಸಿನಿಮಾ ಮಾಡುವುದೋ... ಬೇಡವೋ ಎನ್ನುವ ಅನುಮಾನದಲ್ಲಿ ಇದ್ದೆ. ಆದರೆ, ನನಗಾಗಿ ಒಂದ ಈ ಅವಕಾಶವನ್ನು ಬಿಟ್ಟು ಬಿಡಲು ಮನಸ್ಸಾಗಲ್ಲ.''

    Exclusive Interview : ಮೊದಲ ಹಿಂದಿ ಚಿತ್ರದ ಬಗ್ಗೆ ನ್ಯಾಷನಲ್ ಸ್ಟಾರ್ ಟಾಕ್Exclusive Interview : ಮೊದಲ ಹಿಂದಿ ಚಿತ್ರದ ಬಗ್ಗೆ ನ್ಯಾಷನಲ್ ಸ್ಟಾರ್ ಟಾಕ್

    ಈಗಲೂ ಟೆಕ್ನಿಷಿಯಲ್ ಆಗಿಯೇ ಕೆಲಸ ಮಾಡುತ್ತಿದ್ದೀರಾ?

    ಈಗಲೂ ಟೆಕ್ನಿಷಿಯಲ್ ಆಗಿಯೇ ಕೆಲಸ ಮಾಡುತ್ತಿದ್ದೀರಾ?

    ಹೌದು, ಈಗಲೂ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ದರ್ಶನ್ ಸರ್ ಅವರ 'ಒಡೆಯ' ಸಿನಿಮಾದಲ್ಲೂ ನಟಿಸುತ್ತಿದ್ದೇನೆ. ಹಿಂದೆ, 'ಫ್ರೆಂಡ್ಸ್' ಸಿನಿಮಾದ ನಂತರ 'ಪೋರ್ಕಿ', ಪುನೀತ್ ಸರ್ ಅವರ 'ವಂಶಿ' ಸಿನಿಮಾಗಳಲ್ಲಿ ನಟನೆ ಮಾಡಿದ್ದೆ.

    ನಿಮ್ಮ ಮೊದಲ ಸಿನಿಮಾಯಾವುದು, ಇಂಡಸ್ಟ್ರಿಗೆ ಬಂದಿದ್ದು ಹೇಗೆ?

    ನಿಮ್ಮ ಮೊದಲ ಸಿನಿಮಾಯಾವುದು, ಇಂಡಸ್ಟ್ರಿಗೆ ಬಂದಿದ್ದು ಹೇಗೆ?

    ''ನಾನು ಬೆಂಗಳೂರಿನಲ್ಲಿಯೇ ಹುಟ್ಟಿ, ಇಲ್ಲೇ ಓದು ಮುಗಿಸಿದೆ. ನಿರ್ದೇಶಕ ಶಿವಮಣಿಯವರು ನಮ್ಮ ಅಣ್ಣ. ಮನೆಯಲ್ಲಿ ತುಂಬ ಕಷ್ಟ ಇತ್ತು. ನನ್ನ ಓದಿಸಲು ಮನೆಯಲ್ಲಿ ಬಹಳ ಕಷ್ಟಪಟ್ಟರು. ನಮ್ಮ ಅಣ್ಣ, ಅತ್ತಿಗೆ ಬಹಳ ಪ್ರೋತ್ಸಾಹ ನೀಡಿದ್ದರು. ನಾನು ಅವರಿಂದಲೇ ಸಿನಿಮಾಗೆ ಬಂದೆ. ಟೆಕ್ನಿಷಿಯನ್ ಆಗಿ ಕೆಲಸ ಶುರು ಮಾಡಿದೆ. ಮೊದಲು ನಟಿಸಿದ ದೊಡ್ಡ ಸಿನಿಮಾವೇ ಫ್ರೆಂಡ್ಸ್.''

    ಕಲಾವಿದನಾಗಿ ಅವಕಾಶಗಳು ಇಲ್ಲದಿದ್ದಾಗ ಬೇಸರ ಆಗಿತ್ತಾ?

    ಕಲಾವಿದನಾಗಿ ಅವಕಾಶಗಳು ಇಲ್ಲದಿದ್ದಾಗ ಬೇಸರ ಆಗಿತ್ತಾ?

    ''ಬೇಜಾರು ಏನು ಇಲ್ಲ. ಸಿನಿಮಾದಲ್ಲಿ ಒಂದು ದಿನ ಅದೃಷ್ಟ ಬರುತ್ತೆ.. ಹೋಗುತ್ತೆ. ಏನೇ ಇದ್ದರೂ, ನಾನು ಈಗಲೂ ಸಿನಿಮಾದಲ್ಲಿಯೇ ಇದ್ದೇನೆ. ಕೆಲಸ ಮಾಡುತ್ತಿದ್ದೇನೆ. ನಾನು ಪ್ರಯತ್ನಗಳನ್ನು ಬಿಟ್ಟಿಲ್ಲ. ಅದಿಲ್ಲ ಅಂದರೆ ಇದು.. ಇದಿಲ್ಲ ಅಂದರೆ ಅದು.''

    ಸಣ್ಣ ಪುಟ್ಟ ಪಾತ್ರಗಳಿಂದ ಈಗ ಲೀಡ್ ರೋಲ್, ಭಯ ಆಗ್ತಿದ್ಯಾ?

    ಸಣ್ಣ ಪುಟ್ಟ ಪಾತ್ರಗಳಿಂದ ಈಗ ಲೀಡ್ ರೋಲ್, ಭಯ ಆಗ್ತಿದ್ಯಾ?

    ''ನಾನೇ ಲೀಡ್ ರೋಲ್ ಎಂದಾಗ ತುಂಬ ಭಯ ಇರುತ್ತದೆ. ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ನಿರ್ಮಾಪಕರು ನಮ್ಮನ್ನು ನಂಬಿ ಬಂಡವಾಳ ಹಾಕಿರುತ್ತಾರೆ. ಒಂದು ವರ್ಷದಿಂದ ಡ್ಯಾನ್ಸ್, ಫೈಟ್, ಡೈಲಾಗ್ ಕಲಿತಿದ್ದೇನೆ. ನನ್ನ ಕೈನಲ್ಲಿ ಆದ ಪ್ರಯತ್ನ ಮಾಡಿದ್ದೇನೆ.''

    ಮುಂದೆ ಇನ್ನಷ್ಟು ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆಯೇ?

    ಮುಂದೆ ಇನ್ನಷ್ಟು ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆಯೇ?

    ''ಹೌದು, ಒಳ್ಳೆಯ ಅವಕಾಶಗಳಿಗಾಗಿ ಬಹಳ ಕಾಯುತ್ತಿದ್ದೇನೆ. ಮುಂದೆ ಒಳ್ಳೆಯ ಚಾನ್ಸ್ ಸಿಗಬೇಕು. ಅವಕಾಶಗಳು ಇದ್ದರೆ ಏನಾದರೂ ಮಾಡಬಹುದು. ಸಿನಿಮಾದಲ್ಲಿಯೇ ಆಗಲಿ, ಟಿವಿಯಲ್ಲಿ ಆಗಲಿ ಒಳ್ಳೆಯ ಅವಕಾಶಗಳು ಬರಲಿ.''

    English summary
    Friends kannada movie actor Hari turns as hero from MRP movie. Here is the Hari interview.
    Tuesday, September 10, 2019, 17:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X