»   » ನನ್ನ ಮೊದಲ ಸಿನಿಮಾ : ರೈಟರ್ ಆಗಿದ್ದ ಚೇತನ್ ಡೈರೆಕ್ಟರ್ ಆದ ಸ್ವಾರಸ್ಯಕರ ಸಂಗತಿ

ನನ್ನ ಮೊದಲ ಸಿನಿಮಾ : ರೈಟರ್ ಆಗಿದ್ದ ಚೇತನ್ ಡೈರೆಕ್ಟರ್ ಆದ ಸ್ವಾರಸ್ಯಕರ ಸಂಗತಿ

By Naveen
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ''ಒಬ್ಬ ನಿರ್ದೇಶಕನಿಗೆ ಮೊದಲನೇ ಸಿನಿಮಾ ಎನ್ನುವುದು ಬಹಳ ಮುಖ್ಯ. ಮೊದಲ ಅವಕಾಶದಲ್ಲಿ ನಮ್ಮನ್ನು ನಾವು ಪ್ರೂ ಮಾಡಿಕೊಳ್ಳಲಿಲ್ಲ ಅಂದರೆ ಎರಡನೇ ಚಾನ್ಸ್ ಅನೇಕರಿಗೆ ಸಿಗಲ್ಲ. ಒಬ್ಬ ನಿರ್ದೇಶಕ ರಿಜಿಸ್ಟರ್ ಆಗುವುದಕ್ಕೆ ಮೊದಲ ಸಿನಿಮಾ ಬಹಳ ಮುಖ್ಯ.'' ಹೀಗೆ ಹೇಳಿದ್ದು ನಿರ್ದೇಶಕ ಚೇತನ್ ಕುಮಾರ್.

  'ನನ್ನ ಮೊದಲ ಸಿನಿಮಾ' ಸರಣಿ ಲೇಖನದಲ್ಲಿ ನಿರ್ದೇಶಕ ಚೇತನ್ ಕುಮಾರ್ ತಮ್ಮ ಮೊದಲ ಸಿನಿಮಾ 'ಬಹದ್ದೂರ್' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ರೈಟರ್ ಆಗಿ ಚಿತ್ರರಂಗಕ್ಕೆ ಬಂದಿದ್ದ ಚೇತನ್ ಕುಮಾರ್ ಅನಿರೀಕ್ಷಿತವಾಗಿ ಡೈರೆಕ್ಟರ್ ಆದರು. ಮೊದಲ ಸಿನಿಮಾದಲ್ಲಿಯೇ ಯಶಸ್ವಿ ನಿರ್ದೇಶಕ ಆದರು. ಇನ್ನು ಒಬ್ಬ ನಿರ್ದೇಶಕನಿಗೆ ಮೊದಲ ಸಿನಿಮಾದಲ್ಲಿ ಎದುರಾಗುವ ಕಷ್ಟದ ಬಗ್ಗೆ ಹೇಳಿಕೊಂಡಿರುವ ಚೇತನ್ 'ಬಹದ್ದೂರ್' ಸಿನಿಮಾ ಹುಟ್ಟಿದ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..

  ನೀನೇ ಡೈರೆಕ್ಷನ್ ಮಾಡು ಎಂದರು ಅರ್ಜುನ್ ಸರ್ಜಾ

  ''ಮಂಜುಳ ಟಾಕೀಸ್ ಎನ್ನುವ ಒಂದು ಸಿನಿಮಾವನ್ನು ನಾನು ಮೊದಲು ಡೈರೆಕ್ಷನ್ ಮಾಡಬೇಕಿತ್ತು. ಆ ಚಿತ್ರಕ್ಕೆ ಕಥೆ, ಡೈಲಾಗ್ ಎಲ್ಲ ಬರೆದುಕೊಳ್ಳುತ್ತಿದೆ. ಆಗ ನನ್ನ ಗೆಳೆಯ ಧ್ರುವನಿಗೆ ಒಂದು ಕಥೆ ಮಾಡಿದೆ. ನನ್ನ ಬಳಿ ಆಗ 'ಬಹದ್ದೂರ್' ಎನ್ನುವ ಟೈಟಲ್ ಇತ್ತು. 'ಅದ್ದೂರಿ' ಸಿನಿಮಾಗೆ ಕೆಲಸ ಮಾಡಿದ್ದರಿಂದ ಈ ಸಿನಿಮಾದ ಕಥೆಯನ್ನು ಧ್ರುವ ಜೊತೆಗೆಯೇ ಮಾಡಿದ್ದು. ಮೊದಲು ಈ ಸಿನಿಮಾಗೆ ನಾನು ಡೈರೆಕ್ಟರ್ ಅಂತ ಆಗಿರಲಿಲ್ಲ. ನಾನು ಜಸ್ಟ್ ಕಥೆ ಮಾಡಿದ್ದೆ. ಅರ್ಜುನ್ ಸರ್ಜಾ ಸರ್ ಗೆ ಕಥೆ ಹೇಳಿದೆ. ಅವರು ನೀನೇ ಮಾಡು ಅಂತ ಹೇಳಿದರು. ಅಲ್ಲಿಂದ ಸಿನಿಮಾ ಶುರು ಆಯ್ತು.

  'ಅರ್ಜುನ್' ಎನ್ನುವ ಹೆಸರು ತುಂಬ ವಿಶೇಷ

  ''ಅರ್ಜುನ್ ಎನ್ನುವ ಹೆಸರು ನನಗೆ ತುಂಬ ಸ್ಪೆಷಲ್. ನಾನು ಮೊದಲು ಹಾಡು ಬರೆದದ್ದು ಅರ್ಜುನ್ ಜನ್ಯ ಅವರ ಸಂಗೀತದಲ್ಲಿ. ಮೊದಲು ಕೆಲಸ ಮಾಡಿದ್ದು ಎ.ಪಿ.ಅರ್ಜುನ್ ಅವರ ಬಳಿ, ಜೊತೆಗೆ ನನಗೆ ನಿರ್ದೇಶನ ಮಾಡು ಅಂತ ಮೊದಲು ಹೇಳಿದ್ದು ಅರ್ಜುನ್ ಸರ್ಜಾ. ಹೀಗೆ ಅರ್ಜುನ ಎನ್ನುವ ಹೆಸರು ನನಗೆ ತುಂಬ ವಿಶೇಷ.''

  ರಾಧಿಕಾ ಮೇಡಂ ಪಾತ್ರ

  ''ನಮ್ಮ ಮನೆ ಹುಡುಗಿ ಎನ್ನುವ ರೀತಿ ಕಾಣುವ ಹುಡುಗಿ ಬೇಕಾಗಿತ್ತು. ನಾವು ಬರೆದ ಪಾತ್ರಕ್ಕೆ ಅವತ್ತು ರಾಧಿಕಾ ಪಂಡಿತ್ ಬಿಟ್ಟರೆ ಬೇರೆ ಸೂಕ್ತ ಅನಿಸಲಿಲ್ಲ. 'ಅದ್ದೂರಿ' ಮೂಲಕ ಧ್ರುವ ಮತ್ತು ರಾಧಿಕಾ ಪಂಡಿತ್ ಜೋಡಿ ಹಿಟ್ ಆಗಿತ್ತು. ಹಿಟ್ ಜೋಡಿಯನ್ನು ಜನ ಪದೇ ಪದೇ ನೋಡಲು ಬಯಸುತ್ತಾರೆ. ಈ ರೀತಿ ರಾಧಿಕಾ ಮೇಡಂ ಈ ಸಿನಿಮಾಗೆ ಬಂದರು.''

  ಒಬ್ಬ ನಿರ್ದೇಶಕನಿಗೆ ತಾಳ್ಮೆ ಇರಬೇಕು

  ''ತಾಳ್ಮೆ ಎನ್ನುವುದು ಒಬ್ಬ ನಿರ್ದೇಶಕನಿಗೆ ಇರಬೇಕಾದ ಅಂಶ. ನನ್ನನ್ನು ಇಂದು ಕಾಯುತ್ತಿರುವುದೇ ತಾಳ್ಮೆ. ನನ್ನ 'ಬಹದ್ದೂರ್' ಮತ್ತು 'ಭರ್ಜರಿ' ಎರಡು ಸಿನಿಮಾಗಳು ಕೂಡ ತೊಂದರೆ ಆಯಿತು. ಒಬ್ಬ ನಿರ್ದೇಶಕ ಟೀಂ ಲೀಡರ್ ಆಗಿರುತ್ತಾನೆ ಎಲ್ಲವನ್ನು ಸರಿಯಾಗಿ ಮ್ಯಾನೆಜ್ ಮಾಡಬೇಕು. ತುಷಾರ್ ಅಹಮದ್ ಅವರ ಜೊತೆಗೆ ಡೈಲಾಗ್ ಬರೆಯುತ್ತದೆ. ನನ್ನ ಕಥೆಯನ್ನು ನಾನು ಚೆನ್ನಾಗಿ ಹೇಳಬಲ್ಲೆ. ಕಥೆ ಹೇಳುವುದು ಒಬ್ಬ ನಿರ್ದೇಶಕನ ಆತ್ಮವಿಶ್ವಾಸವನ್ನು ಹೇಳುತ್ತದೆ. ಅರ್ಜುನ್ ಸರ್ಜಾ ಅವರಿಗೆ ತುಂಬ ಸಲ ಕಥೆ ನರೇಷನ್ ಕೊಟ್ಟಿದ್ದೇನೆ. 30 ಬಾರಿ ಚೆನೈಗೆ ಹೋಗಿ ಬಂದಿದೆ. ಅವರಿಂದ ತುಂಬ ಕಲಿತಿದ್ದೇನೆ. ಅವರಿಗೆ ಕಥೆ ಹೇಳವಾಗಲೇ ವಿತ್ ಆರ್ ಆರ್ ಹೇಳುತ್ತಿದೆ. ಒತ್ತಡ ಎನ್ನುವುದು ಪ್ರತಿ ನಿರ್ದೇಶಕನಿಗೆ ಇರುತ್ತದೆ.''

  ನಾನು ತೆಗೆದ ಮೊದಲ ಶಾಟ್ ಇದೆ

  ''ದೇವಸ್ಥಾನಕ್ಕೆ ರಾಧಿಕಾ ಮೇಡಂ ಮತ್ತು ಧ್ರುವ ಬರುತ್ತಾರೆ ಮಾಂಟೆಜ್ ಶಾಟ್ ಅದು. ಅದು ನನ್ನ ಮೊದಲ ನಿರ್ದೇಶಕದ ಶಾಟ್ ಆಗಿತ್ತು. ಇಡೀ ಸಿನಿಮಾದ ವಿಶ್ಯೂವಲ್ ನನ್ನ ತಲೆಯಲ್ಲಿ ಇತ್ತು. ನಾನು ಡೈರೆಕ್ಟರ್ ಆಗುವುದಕ್ಕಿಂತ ಮುಂಚೆಯಿಂದ ಎಡಿಟಿಗ್ ಇಷ್ಡ ಆಗಿತ್ತು. ಕಾಲೇಜ್ ನಿಂದ ಚಿಕ್ಕ ಪುಟ್ಟ ಎಡಿಟಿಗ್ ಮಾಡುತ್ತಿದ್ದೆ. 'ಬಹದ್ದೂರ್' ಚಿತ್ರಕ್ಕೆ ಸ್ಪಾಟ್ ಎಡಿಟಿಗ್ ಯೂಸ್ ಮಾಡಿದ್ದೆ. ಬೆಳ್ಳಗೆಯಿಂದ ಶೂಟ್ ಮಾಡಿದ್ದನ್ನು ಸಂಜೆ ಎಲ್ಲರೂ ನೋಡಿಕೊಂಡು ಹೋಗುತ್ತಿದ್ದರು. ಒಂದು ಸಿನಿಮಾದ ತಪ್ಪು ಅದರ ನಿರ್ದೇಶಕನಿಗಿಂತ ಜಾಸ್ತಿ ಯಾರಿಗೂ ಗೊತ್ತಿರುವುದಿಲ್ಲ. ಸಿನಿಮಾದ ಫೈನಲ್ ಕಾಪಿ ಬರುವ ವೇಳೆಗೆ ಒಬ್ಬ ಡೈರೆಕ್ಟರ್ ಅದನ್ನು 400 ಬಾರಿ ನೋಡಿತ್ತಾನೆ.. ಪ್ರತಿ ಹಂತದಲ್ಲಿ ನಾವು ಸಿನಿಮಾವನ್ನು ನೋಡಿರುತ್ತೇವೆ. 'ಭರ್ಜರಿ' ಸಿನಿಮಾವನ್ನು ಅಪ್ ಲೋಡ್ ಮಾಡಿ ಬಂದವನು ಈ ವರಗೆ ಫುಲ್ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡೆ ಇಲ್ಲ.''

  ರವಿ ಸರ್ ಕ್ಲಾಪ್ ಮಾಡಿದ್ದರು, ಅಪ್ಪು ಸರ್ ಕ್ಯಾಮರಾ ಆನ್ ಮಾಡಿದ್ದರು..

  ''ಸಿನಿಮಾಗೆ ಕ್ಲಾಪ್ ಮೊದಲು ಬೇರೆ ಯಾರೋ ಅಂತ ಅಂದುಕೊಂಡಿದ್ವಿ, ನೋಡಿದರೆ ರವಿಚಂದ್ರನ್ ಸರ್ ಕ್ಲಾಪ್ ಮಾಡಿದರು. ಅಪ್ಪು ಸರ್ ಅಣ್ಣಾವ್ರ ಸಮಾಧಿ ಹತ್ತಿರ ಬಂದಿದ್ದರು ನಮಗೆ ವಿಶ್ ಮಾಡಲು ಬಂದು ಹಾಗೆ ಅವರೇ ಸಿನಿಮಾಗೆ ಕ್ಯಾಮರಾ ಆನ್ ಮಾಡಿದರು. ಇದೆಲ್ಲ ಮ್ಯಾಜಿಕ್. ಫಸ್ಟ್ ಶಾಟ್ ಅರ್ಜುನ್ ಸರ್ಜಾ ಸರ್ ಡೈರೆಕ್ಷನ್ ಮಾಡಿದರು. ನಂತರ ಸಿನಿಮಾಗೆ ಸಾಕಷ್ಟು ಅಡಚಣೆಗಳು ಬಂತು, ನಿರ್ಮಾಪಕರ ಸಮಸ್ಯೆ ಆಯ್ತು. ಇನ್ನೊಬ್ಬ ನಿರ್ಮಾಪಕರು ಬಂದರು ಅವರು ಟೇಕ್ ಆಫ್ ಮಾಡಿದರು. ಏನೇ ಕಷ್ಟ ಪಟ್ಟರು ಒಂದು ಗೆಲುವು ಎಲ್ಲವನ್ನು ಮರೆಸುತ್ತದೆ. ಮೊದಲೇ ಸಿನಿಮಾದಲ್ಲಿಯೇ ದೊಡ್ಡ ಕಲಾವಿದರು ಇದ್ದರು.''

  ಫೈಟ್ ಸೀನ್ ನಲ್ಲಿ ಧ್ರುವ ಮಂಡಿಗೆ ಪೆಟ್ಟಾಗಿತ್ತು

  ''ಹುಬ್ಬಳ್ಳಿಯಲ್ಲಿ ಒಂದು ಫೈಟ್ ಸೀನ್ ಶೂಟ್ ಮಾಡುವಾಗ ಧ್ರುವ ಅವರಿಗೆ ಮಂಡಿಗೆ ಪೆಟ್ಟಾಗಿತ್ತು. ಆ ಘಟನೆ ಯಾವಾಗಲೂ ನೆನಪಾಗುತ್ತದೆ. ಅಷ್ಟೊಂದು ಶ್ರಮ ಹಾಕಿ ಫೈಟ್ ತೆಗೆದಿದ್ವಿ. ಆನ್ ಸ್ಕ್ರೀನ್ ನೋಡಿದಾಗ ಅದರ ಎಫೆಕ್ಟ್ ಜಾಸ್ತಿ. ಹುಬ್ಬಳ್ಳಿ ಮಣ್ಣಿನಲ್ಲಿ ಕರೆಂಟ್ ಇದೆ ಎನ್ನುವ ಸಂಭಾಷಣೆಯ ಆ ಸೀನ್ ತುಂಬ ರೋಚಕವಾಗಿತ್ತು. ಅಲ್ಲಿವರೆಗೆ ಹುಡುಗಿಯನ್ನು ಓಡಿಸಿಕೊಂಡು ಹೋದರೆ ಮಾತ್ರ ಹೀರೋ ಎನ್ನುವ ಹಾಗೆ ಇತ್ತು. ಆದರೆ ನಾವು ಅದನ್ನು ಉಲ್ಟಾ ಮಾಡಿದ್ವಿ. ಹುಡುಗಿಯನ್ನು ಬಿಟ್ಟು ಕೊಡುವವನು ಸಹ ಹೀರೋ ಅಂತ ತೋರಿಸಿದ್ವಿ. ಹೆಣ್ಣು ಮಕ್ಕಳ ಅಪ್ಪ ಅಮ್ಮನಿಗೆ ಸಿನಿಮಾ ಇಷ್ಟ ಆಯ್ತು. ಯಾವಾಗಲೂ ಹುಡುಗಿಯನ್ನು ಮಾತ್ರ ಇಷ್ಟ ಪಡುವುದಿಲ್ಲ ಹುಡುಗಿಯ ಮನೆಯವರನ್ನು ಇಷ್ಟ ಪಡಬೇಕು ಎನ್ನುವುದು ಹೊಸ ಥಾಟ್.''

  ಸೋಲು ಗೆಲುವು ಬಿಟ್ಟು ಒಳ್ಳೆಯ ಸಿನಿಮಾ ಮಾಡಬೇಕು

  ''ಭಯ ಎನ್ನುವುದನ್ನು ಓವರ್ ಕಮ್ ಮಾಡಿದವನು ಯಾವಾಗಲೂ ಚೆನ್ನಾಗಿ ಇರುತ್ತಾನೆ. ಸೋಲು ಗೆಲುವು ಎನ್ನುವನ್ನು ಬಿಟ್ಟು ಒಳ್ಳೆಯ ಸಿನಿಮಾ ಮಾಡಬೇಕು ಸೋತರು ಸಿನಿಮಾ ಮಾಡುತ್ತೇನೆ. ಗೆದ್ದರು ಸಿನಿಮಾ ಮಾಡುತ್ತೇನೆ. ಸಿನಿಮಾವನ್ನು ಪ್ರೀತಿಸಬೇಕು. ಇವತ್ತಿನ ಕಷ್ಟಗಳ ಬಗ್ಗೆ ತಲೆ ಕೆಡಿಸಕೊಳ್ಳಬಾರದು. ಲೇಟ್ ಆದರೂ ಪರವಾಗಿಲ್ಲ ಆನ್ ಸ್ಕ್ರೀನ್ ಸೂಪರ್ ಆಗಿ ಇರಬೇಕು ಅಷ್ಟ. ಬಿಡುಗಡೆಯ ಮೊದಲು ನನ್ನ ಸಿನಿಮಾಗಳನ್ನು ನಾನು ಇಡೀ ಚಿತ್ರತಂಡಕ್ಕೆ ತೋರಿಸಿತ್ತೇನೆ. ಎಲ್ಲ ಪಾಸಿಟಿವ್ ಮೂಡ್ ನಲ್ಲಿ ಇರುತ್ತೇವೆ. ಜನರ ರೆಸ್ಪಾನ್ಸ್ ನಾವು ಅಂದುಕೊಂಡಿದ್ದಕ್ಕಿಂತ ಹತ್ತು ಪಟ್ಟು ಜೋರಾಗಿತ್ತು. ಅರ್ಜುನ್ ಸರ್ಜಾ ಸರ್ ರಿಲೀಸ್ ದಿನ ಬಂದಿದ್ದರು. ಎಲ್ಲ ಖುಷಿಯ ಸಂದರ್ಭ. ಒಂದು ಕುತೂಹಲ ಇತ್ತು. ಇಷ್ಟು ವರ್ಷದ ಶ್ರಮ ದೊಡ್ಡ ಜವಾಬ್ದಾರಿ ಮ್ಯಾಜಿಕಲ್ ಡೇ.''

  ಮೊದಲ ಅವಕಾಶವನ್ನು ಸರಿಯಾಗಿ ಪ್ರೂ ಮಾಡಿಕೊಳ್ಳಬೇಕು

  ''ನಿರ್ದೇಶಕನಿಗೆ ಮೊದಲನೇ ಸಿನಿಮಾ ಎನ್ನುವುದು ಬಹಳ ಮುಖ್ಯ. ಮೊದಲ ಅವಕಾಶದಲ್ಲಿ ನಮ್ಮನ್ನು ನಾವು ಪ್ರೂ ಮಾಡಿಕೊಳ್ಳಲಿಲ್ಲ ಅಂದರೆ ಎರಡನೆ ಚಾನ್ಸ್ ಅನೇಕರಿಗೆ ಸಿಗಲ್ಲ. ಒಬ್ಬ ನಿರ್ದೇಶಕ ರಿಜಿಸ್ಟರ್ ಆಗುವುದಕ್ಕೆ ಮೊದಲ ಸಿನಿಮಾ ಬಹಳ ಮುಖ್ಯ. ಅದರ ಜೊತೆಗೆ ಹೇಳಬೇಕು ಅಂದರೆ ನಿರ್ದೇಶಕನಿಗೆ ಪ್ರತಿ ಸಿನಿಮಾ ಸಹ ಮೊದಲ ಸಿನಿಮಾನೇ.''

  English summary
  Nanna Modala Cinema Series: Kannada director Chethan kumar spoke about his first movie 'Bahaddur' in an exclusive interview with FilmiBeat Kannada.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more