twitter
    For Quick Alerts
    ALLOW NOTIFICATIONS  
    For Daily Alerts

    ಕ್ಲಾಪ್ ಹೊಡೆಯಲು ಕಷ್ಟ ಪಟ್ಟಿದ್ದ ಲೋಹಿತ್ 21 ವರ್ಷಕ್ಕೆ ನಿರ್ದೇಶಕನಾದರು!

    By Naveen
    |

    '''ಮನಸ್ಸಿದ್ದರೆ ಮಾರ್ಗ...', ಆತ್ಮವಿಶ್ವಾಸ ಇದ್ದರೆ ಆಕಾಶದ ಎತ್ತರಕ್ಕೆ ಬೆಳೆಯಬಹುದು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠ ಇದ್ದರೇ ಖಂಡಿತ ಯಶಸ್ಸು ಸಿಕ್ಕೆ ಸಿಗುತ್ತದೆ''. ಇಂತಹ ಮಾತುಗಳು ಹೊಸ ಉತ್ಸಾಹ ಹುಟ್ಟಿಸುತ್ತದೆ. ಈ ಮಾತುಗಳನ್ನು ಈಗ ಸತ್ಯ ಮಾಡಿ ತೋರಿಸಿರುವುದು ನಿರ್ದೇಶಕ ಲೋಹಿತ್.

    ನಿರ್ದೇಶಕ ಲೋಹಿತ್ ತಮ್ಮ ಮೊದಲ ಸಿನಿಮಾ ಹುಟ್ಟಿದ ಕಥೆಯನ್ನು 'ನನ್ನ ಮೊದಲ ಸಿನಿಮಾ' ಲೇಖನ ಸರಣಿಯಲ್ಲಿ ಹೇಳಿಕೊಂಡಿದ್ದಾರೆ. ಅವರ ಮೊದಲ ಸಿನಿಮಾ ಹಾಗೂ ಅವರ ಚಿತ್ರ ಬದುಕಿನ ಪ್ರಾರಂಭದ ದಿನಗಳ ಕಥೆ ಎಷ್ಟೋ ಯುವ ನಿರ್ದೇಶಕರಿಗೆ ಸ್ಫೂರ್ತಿ ನೀಡುತ್ತದೆ.

    ನನ್ನ ಮೊದಲ ಸಿನಿಮಾ : ಬೀದಿ ಬೀದಿ ಸುತ್ತಿ ಸಿನಿಮಾ ಮಾಡಿದ್ದರು ಮಂಜು ಸ್ವರಾಜ್ ನನ್ನ ಮೊದಲ ಸಿನಿಮಾ : ಬೀದಿ ಬೀದಿ ಸುತ್ತಿ ಸಿನಿಮಾ ಮಾಡಿದ್ದರು ಮಂಜು ಸ್ವರಾಜ್

    ಕನ್ನಡದ ಅತಿ ಕಿರಿಯ ನಿರ್ದೇಶಕರ ಪೈಕಿ ಒಬ್ಬರಾದ ಲೋಹಿತ್ 8ನೇ ಕ್ಲಾಸ್ ಇರುವಾಗಲೇ ಸಿನಿಮಾ ಹುಚ್ಚು ಬೆಳೆಸಿಕೊಂಡ ಹುಡುಗ. ಮೊದ ಮೊದಲು ಸಿನಿಮಾ ಭಾಷೆಯ ಅ ಆ ಇ ಈ ತಿಳಿಯದ ಈ ಹುಡುಗನಿಗೆ ಕ್ಲಾಪ್ ಮಾಡಲು ಕೂಡ ಸರಿಯಾಗಿ ಬರುತ್ತಿರಲಿಲ್ಲ.

    ಇಂತಹ ಹುಡುಗ ನಂತರ ತನ್ನ ಮೊದಲ ಸಿನಿಮಾವನ್ನೆ ಪ್ರಿಯಾಂಕ ಉಪೇಂದ್ರ ಅವರಿಗೆ ನಿರ್ದೇಶನ ಮಾಡಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರೇ ಲೋಹಿತ್ ಕೆಲಸವನ್ನು ಮೆಚ್ಚಿಕೊಂಡಿದ್ದರು. ಈ ರೀತಿ ತನ್ನ ಪ್ರತಿಭೆ ಮೂಲಕ ಮಾತನಾಡುವ ಲೋಹಿತ್ ಅವರ ವಿಶೇಷ ಸಂದರ್ಶನ ಮುಂದಿದೆ ಓದಿ....

    ಸಂದರ್ಶನ : ನವಿ ಕನಸು (ನವೀನ್ ಎಂ ಎಸ್)

    8ನೇ ಕ್ಲಾಸ್ ಇರುವಾಗ ದುನಿಯಾ ಸಿನಿಮಾ ನೋಡಿದೆ

    8ನೇ ಕ್ಲಾಸ್ ಇರುವಾಗ ದುನಿಯಾ ಸಿನಿಮಾ ನೋಡಿದೆ

    ''ದುನಿಯಾ' ಸಿನಿಮಾವನ್ನು ನಾನು 8ನೇ ಕ್ಲಾಸ್ ಇರುವಾಗ ನೋಡಿದೆ. ಒಂದು ಸಿನಿಮಾವನ್ನು ಹೀಗೆ ಸಹ ಮಾಡಬಹುದು ಎಂದು ಆ ಚಿತ್ರ ತೋರಿಸಿಕೊಟ್ಟಿತ್ತು. ರೆಗ್ಯೂಲರ್ ಫಾರ್ಮೆಟ್ ಬಿಟ್ಟು ಬಂದ ಸಿನಿಮಾ ಅದು. ಅದನ್ನು ನೋಡಿದ ಮೇಲೆ ನಾನು ಫಿಲ್ಮ್ ಮೇಕರ್ ಆಗಬೇಕು ಅಂತ ನಿರ್ಧಾರ ಮಾಡಿದೆ. 10ನೇ ಕ್ಲಾಸ್ ಮುಗಿಸಿ ಪಿಯುಸಿಗೆ ಬಂದ ಮೇಲೆ ಅದರ ಬಗ್ಗೆ ಪ್ರಯತ್ನ ಶುರು ಮಾಡಿದೆ.''

    ನನ್ನ ಮೊದಲ ಸಿನಿಮಾ : ನಟನೆ ಬರಲ್ಲ ಎಂದುಕೊಂಡೆ ಇಂಡಸ್ಟ್ರಿಗೆ ಬಂದಿದ್ದರು ಆಶಿಕಾ ನನ್ನ ಮೊದಲ ಸಿನಿಮಾ : ನಟನೆ ಬರಲ್ಲ ಎಂದುಕೊಂಡೆ ಇಂಡಸ್ಟ್ರಿಗೆ ಬಂದಿದ್ದರು ಆಶಿಕಾ

    ಅನೇಕರು ಅನುಭವ ಕೇಳಿದರು

    ಅನೇಕರು ಅನುಭವ ಕೇಳಿದರು

    ''ಪಿಯುಸಿ ಓದುವಾಗ ಸಿನಿಮಾ ಎನ್ನುವುದು ತಲೆಯಲ್ಲಿ ಹೋಗಿತ್ತು. ಗಾಂಧಿನಗರಕ್ಕೆ ನಮ್ಮ ಮನೆ ತುಂಬ ಹತ್ತಿರ ಆಗುತ್ತಿತ್ತು. ಒಮ್ಮೆ ಹೀಗೆ ಒಂದು ಆಫೀಸ್ ಗೆ ಹೋಗಿ 'ಸರ್ ನಾನು ಡೈರೆಕ್ಟರ್ ಆಗಬೇಕು' ಎಂದೆ. ಅವರು ಮೊದಲು ಕಥೆ ಮಾಡಿಕೋ ಎಂದರು. ಇನ್ನು ಅನೇಕರು ಅನುಭವ ಕೇಳಿದರು. ಪಿಯುಸಿ ಮುಗಿದ ಮೇಲೆ ಒಬ್ಬರ ಬಳಿ ನಿರ್ದೇಶಕ ಪ್ರದೀಪ್ ರಾಜ್ ಸರ್ ಅವರ ನಂಬರ್ ಸಿಕ್ತು. ಅನುಭವ ಇಲ್ಲ ಅಂದರೆ ಅವಕಾಶ ಸಿಗುವುದಿಲ್ಲ ಎಂದು ಮೂರು ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ ಎಂದು ಸುಳ್ಳು ಹೇಳಿ ಅವಕಾಶ ಪಡೆದೆ.''

    ನನ್ನ ಮೊದಲ ಸಿನಿಮಾ : ಅವಕಾಶ ಇಲ್ಲದಾಗ ಬರೆದ ಕಥೆ ಅದ್ಭುತ ಸೃಷ್ಟಿಸಿತು! ನನ್ನ ಮೊದಲ ಸಿನಿಮಾ : ಅವಕಾಶ ಇಲ್ಲದಾಗ ಬರೆದ ಕಥೆ ಅದ್ಭುತ ಸೃಷ್ಟಿಸಿತು!

    ಕ್ಲಾಪ್ ಮಾಡುವುದು ಸಹ ಸರಿಯಾಗಿ ಗೊತ್ತಿರಲಿಲ್ಲ

    ಕ್ಲಾಪ್ ಮಾಡುವುದು ಸಹ ಸರಿಯಾಗಿ ಗೊತ್ತಿರಲಿಲ್ಲ

    ''ಸ್ಕ್ರಿಪ್ಟ್ ಟೂ ಸ್ಕ್ರೀನ್' ಅಂತ ಒಂದು ಪುಸ್ತಕ ಇತ್ತು. ಅದರಲ್ಲಿ ಸಿನಿಮಾ ಬಗ್ಗೆ ಪ್ರತಿಯೊಂದು ಅಂಶಗಳು ಇದ್ದವು. ಅದನ್ನು ಓದಿಕೊಂಡೆ. ಮೇಕಿಂಗ್ ಬಗ್ಗೆ ಸ್ಪಲ್ಪ ತಿಳಿದುಕೊಂಡೆ. ಮೊದಲು ಕ್ಲಾಪ್ ಮಾಡುವುದು ಸಹ ಸರಿಯಾಗಿ ಗೊತ್ತಿರಲಿಲ್ಲ. ಒನ್ ಮೋರ್ ಟೆಕ್ ಎಂದರೆ ಏನು ಮಾಡೋದು ತಿಳಿಯದೆ ಸುಮ್ಮನೆ ಇದ್ದೇ. ಫಸ್ಟ್ ಡೇ ಶೂಟಿಂಗ್ ನಲ್ಲಿ ದುನಿಯಾ ವಿಜಯ್ ಸರ್ ಸೀನ್ ಇತ್ತು. ಅವರ 'ದುನಿಯಾ' ಚಿತ್ರ ನೋಡಿಯೇ ನಾನು ಚಿತ್ರರಂಗಕ್ಕೆ ಬಂದಿದ್ದೆ. ಅದೇ ರೀತಿ ಅವರ ಚಿತ್ರಕ್ಕೆ ಮೊದಲು ಬಾರಿಗೆ ಕ್ಲಾಪ್ ಮಾಡಿದೆ.''

    'ರಜನಿಕಾಂತ' ಸಿನಿಮಾಗೆ ಸಹ ನಿರ್ದೇಶಕನಾದೆ

    'ರಜನಿಕಾಂತ' ಸಿನಿಮಾಗೆ ಸಹ ನಿರ್ದೇಶಕನಾದೆ

    ''ನಿರ್ದೇಶಕ ಪ್ರದೀಪ್ ರಾಜ್ ಸರ್ ಅವರ 'ರಜನಿಕಾಂತ' ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಕೆಲಸ ಮಾಡಿದೆ. ಈ ಚಿತ್ರದ ಡಬ್ಬಿಂಗ್ ಮಾಡುವಾಗ ನನ್ನ ಕೆಲಸ ಇಷ್ಟ ಆಗಿ ದುನಿಯಾ ವಿಜಯ್ ಸರ್ ಅವರ ಬ್ಯಾನರ್ ನಲ್ಲಿ ಬಂದ 'ಜಯಮ್ಮನ ಮಗ' ಚಿತ್ರಕ್ಕೆ ಸಹ ನಿರ್ದೇಶಕನನ್ನಾಗಿ ಮಾಡಿದರು. ಆಮೇಲೆ 'ಗೋವಾ' ಎಂಬ ಚಿತ್ರಕ್ಕೆ ಕೆಲಸ ಮಾಡಿದೆ. 'ಬೆತ್ತನಗೆರೆ' ಚಿತ್ರ ಮಾಡುವ ಸಮಯಕ್ಕೆ 'ಮಮ್ಮಿ' ಸಿನಿಮಾಗೆ ಶುರು ಮಾಡಿಕೊಂಡೆ.''

    ನನ್ನನ್ನು ನೋಡಿ ವಾಪಸ್ ಕಳುಹಿಸುತ್ತಿದ್ದರು

    ನನ್ನನ್ನು ನೋಡಿ ವಾಪಸ್ ಕಳುಹಿಸುತ್ತಿದ್ದರು

    ''ಹಾರರ್ ಎನ್ನುವುದು ನನ್ನ ತಲೆಯಲ್ಲಿ ಇರಲಿಲ್ಲ. ನಾನು ದೆವ್ವ ಅಂದರೆ ಈಗಲೂ ಸಿಕ್ಕಾಪಟ್ಟೆ ಹೆದರುತ್ತೇನೆ. ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಮೇಲೆ ಒಂದು ಕಥೆ ಮಾಡಿಕೊಂಡೆ. ಅದನ್ನು ಸಾಕಷ್ಟು ಜನರಿಗೆ ಅಪ್ರೊಚ್ ಮಾಡಿದೆ. ಆದರೆ, ನಾನು ನೋಡುವುದಕ್ಕೆ ಸಣ್ಣ ಹುಡುಗನ ರೀತಿ ಇದ್ದೇನೆ ಎಂದು ನನ್ನನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಕಥೆ ಕೇಳದೆ ನನ್ನನ್ನು ನೋಡಿ ವಾಪಸ್ ಕಳುಹಿಸುತ್ತಿದ್ದರು.

    ಸಿನಿಮಾ ಮಾಡೋಣ ಎಂದು ಪ್ರಿಯಾಂಕ ಮೇಡಂ ಧೈರ್ಯ ನೀಡಿದರು

    ಸಿನಿಮಾ ಮಾಡೋಣ ಎಂದು ಪ್ರಿಯಾಂಕ ಮೇಡಂ ಧೈರ್ಯ ನೀಡಿದರು

    ''ನನ್ನನ್ನು ನಾನು ಸಾಬೀತು ಮಾಡಿಕೊಳ್ಳಬೇಕಿತ್ತು. ಆಗ ಹಾರರ್ ಟ್ರೆಂಡ್ ಇರಲಿಲ್ಲ. ಆಗ ಹೀರೋಯಿನ್ ಸೆಂಕ್ರಿಕ್ ಹಾರರ್ ಸಿನಿಮಾ ಮಾಡೋಣ ಎಂದು ಪ್ಲಾನ್ ಮಾಡಿದೆ. ಏಳು ತಿಂಗಳ ಒಬ್ಬ ಪ್ರಗ್ನೆಂಟ್ ಮಹಿಳೆ ಮೇಲೆ ಕಥೆ ಮಾಡಿದೆ. ಅದು ತುಂಬ ಹೊಸದಾಗಿ ಇತ್ತು. ಆ ಪಾತ್ರ ಬರೆಯುತ್ತ ಹೋದ ಹಾಗೆ ಪ್ರಿಯಾಂಕ ಉಪೇಂದ್ರ ಮೇಡಂ ಹೆಸರು ಬಂತು. ಅವರಿಗೆ ಹೋಗಿ ಕಥೆ ಹೇಳುವಾಗ ಇಷ್ಟ ಪಟ್ಟು ಒಪ್ಪಿಕೊಂಡರು. ಸಂಭಾವನೆ ಬಗ್ಗೆ ಕೇಳಿದಾಗ ಮೊದಲು ಸಿನಿಮಾ ಮಾಡೋಣ ಎಂದು ಧೈರ್ಯ ನೀಡಿದರು.''

    ಮಮ್ಮಿ ಸಿನಿಮಾ ನನ್ನ ಪಾಲಿಗೆ ತುಂಬ ಸ್ಪೆಷಲ್

    ಮಮ್ಮಿ ಸಿನಿಮಾ ನನ್ನ ಪಾಲಿಗೆ ತುಂಬ ಸ್ಪೆಷಲ್

    ''ಆರರಿಂದ ಎಂಟು ತಿಂಗಳವರಗೆ ಕಥೆ ಮಾಡಿಕೊಂಡೆ. ಹಾರರ್ ನನ್ನ ಜಾನರ್ ಆಗಿರಲಿಲ್ಲ. ಆದರೂ ಚಿತ್ರ ಮಾಡಿದೆ. ಜನರನ್ನು ಎದುರಿಸುವುದು ಬಹಳ ಕಷ್ಟ. ಕಮರ್ಷಿಯಲ್ ಅಂಶಗಳು ಇಲ್ಲದೆ ಒಂದು ಚಿತ್ರ ಮಾಡುವುದು ತುಂಬ ಚಾಲೆಂಜ್ ಆಗಿ ಇತ್ತು. ಪ್ರಿಯಾಂಕ ಮೇಡಂ ನನ್ನನ್ನು ತುಂಬ ನಂಬಿದ್ದರು. ಕಥೆ ಹೇಳಿದ ನಂತರ ಎಲ್ಲದಕ್ಕೂ ಸಪೋರ್ಟ್ ಮಾಡಿದರು. ಇಂದಿಗೂ 'ಮಮ್ಮಿ' ಸಿನಿಮಾನೇ ನನಗೆ ಅವಕಾಶಗಳನ್ನು ಕೊಡಿಸುತ್ತಿದೆ. ಅದು ನನ್ನ ಪಾಲಿಗೆ ತುಂಬ ಸ್ಪೆಷಲ್.''

    ತೆರೆ ಮೇಲೆ ಸಿನಿಮಾ ನೋಡಿದಾಗ ಕಣ್ಣೀರು ಬಂತು

    ತೆರೆ ಮೇಲೆ ಸಿನಿಮಾ ನೋಡಿದಾಗ ಕಣ್ಣೀರು ಬಂತು

    ''ಮೊದಲ ದಿನ ಅಪರ್ಣ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಯ್ತು. ಏಕ ಕಾಲಕ್ಕೆ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆ ಮಾಡಿದ್ವಿ. ಎರಡು ವರ್ಷದ ಶ್ರಮ ಆ ಚಿತ್ರದ ಮೇಲೆ ಇತ್ತು. ಸಿನಿಮಾವನ್ನು ತೆರೆ ಮೇಲೆ ನೋಡಿದಾಗ ಕಣ್ಣೀರು ಬಂತು. ಅದು ಮರೆಯಲಾಗದ ಅನುಭವ. ಈಗೀಗ ಸಿನಿಮಾ ನೋಡಿದಾಗ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನಿಸುತ್ತದೆ. ಇಂದಿಗೂ 'ಮಮ್ಮಿ' ಸಿನಿಮಾದ ಕ್ವಾಲಿಟಿ ಬಗ್ಗೆ ಎಲ್ಲರೂ ಮಾತನಾಡುತ್ತಾರೆ.''

    ಉಪ್ಪಿ ಸರ್, ಪ್ರಿಯಾಂಕ ಮೇಡಂ ನನ್ನ ಜೀವನದ ವಿಶೇಷ ವ್ಯಕ್ತಿಗಳು

    ಉಪ್ಪಿ ಸರ್, ಪ್ರಿಯಾಂಕ ಮೇಡಂ ನನ್ನ ಜೀವನದ ವಿಶೇಷ ವ್ಯಕ್ತಿಗಳು

    ''ಪ್ರಿಯಾಂಕ ಮೇಡಂ ರೀತಿ ಉಪೇಂದ್ರ ಸರ್ ಕೂಡ ತುಂಬ ಸಪೋರ್ಟ್ ಮಾಡಿದ್ದರು. ಉಪ್ಪಿ ಸರ್ ಗೆ ಕಥೆ ಹೇಳುವಾಗ ತುಂಬ ಭಯ ಇತ್ತು. ಅವರು ಸಿನಿಮಾ ನೋಡಿ ಸೂಪರ್ ಆಗಿದೆ ಎಂದರು. ರಿಲೀಸ್ ಹಿಂದಿನ ದಿನ ರಾತ್ರಿ 1 ಗಂಟೆಗೆ ಚಿತ್ರಮಂದಿರದಲ್ಲಿ ಕುಳಿತ್ತಿದ್ದೆ. ಮೇಡಂ ಕಾಲ್ ಮಾಡಿದ್ರು.. ಉಪ್ಪಿ ಸರ್ ಮಾತನಾಡಿ 'ಒಳ್ಳೆ ಸಿನಿಮಾ ಆಗುತ್ತೆ ತಲೆ ಕೆಡಿಸಿಕೊಳ್ಳಬೇಡಿ' ಎಂದು ಹೇಳಿದ್ದರು. ಹೈದರಾಬಾದ್ ಗೆ ಬಂದು ಸಿನಿಮಾದ ತುಂಬ ಪ್ರಚಾರ ಮಾಡಿದರು. ಉಪ್ಪಿ ಸರ್ ಹಾಗೂ ಪ್ರಿಯಾಂಕ ಮೇಡಂ ಇಬ್ಬರು ನನ್ನ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿರುವ ವ್ಯಕ್ತಿಗಳು.''

    English summary
    Nanna Modala Cinema Series: Kannada director Lohith spoke about his first movie 'Mummy save me' in an exclusive interview with FilmiBeat Kannada.
    Saturday, September 1, 2018, 19:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X