»   » 'ನೂರೊಂದು ನೆನಪು'ಗಳನ್ನು ಹೊತ್ತು ತರುತ್ತಿರುವ 'ಆ ದಿನಗಳು' ಚೇತನ್ ಸಂದರ್ಶನ

'ನೂರೊಂದು ನೆನಪು'ಗಳನ್ನು ಹೊತ್ತು ತರುತ್ತಿರುವ 'ಆ ದಿನಗಳು' ಚೇತನ್ ಸಂದರ್ಶನ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಟ 'ಆ ದಿನಗಳು' ಚೇತನ್ ಚಂದನವನದಲ್ಲಿ ಕಾಣಿಸಿಕೊಳ್ಳೋದು ಅಪರೂಪ. ತಾವು ಸಿನಿಮಾ ಕ್ಷೇತ್ರಕ್ಕೆ ಬಂದಾಗ ಪರವಾಗಿಲ್ಲ. ಅಟ್ ಲಿಸ್ಟ್ ಎರಡು ವರ್ಷಕ್ಕೊಂದಾದರೂ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಈಗ ಅವರು ತೆರೆ ಮೇಲೆ ಕಂಡು ಸುಮಾರು ಮೂರು ವರ್ಷಗಳಿಗಿಂತ ಹೆಚ್ಚು ದಿನಗಳೇ ಕಳೆದಿವೆ.

ಆದ್ರೆ 'ವರ್ಷಕ್ಕೊಂದೇ ಸಿನಿಮಾ ಮಾಡಿದ್ರು ಒಳ್ಳೆ ಸಿನಿಮಾ ಮಾಡಬೇಕು. ಉತ್ತಮ ಕಥೆ ಇರಬೇಕು. ಆ ಚಿತ್ರದಿಂದ ನಾನು ಏನಾದ್ರು ಕಲಿಯಬೇಕು' ಅನ್ನೋ ಚೇತನ್ ಈಗ 'ನೂರೊಂದು ನೆನಪು'ಗಳನ್ನು ಸಿನಿ ರಸಿಕರಿಗಾಗಿ ಹೊತ್ತು ತಂದಿದ್ದಾರೆ.


ಹೌದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದ ನಟ ಚೇತನ್ ತಮ್ಮ ಬಿಜಿ ಸೆಡ್ಯೂಲ್ ನಲ್ಲಿಯೂ ಅಭಿನಯಿಸಿರುವ 'ನೂರೊಂದು ನೆನಪು' ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಚೇತನ್ ಗೆ ಜೋಡಿಯಾಗಿ ಮೇಘನಾ ರಾಜ್ ನಟಿಸಿದ್ದಾರೆ. ಈ ಚಿತ್ರದ ಹಿನ್ನೆಲೆಯಲ್ಲಿ ನಟ ಚೇತನ್ ಅವರೊಂದಿಗೆ ನಿಮ್ಮ ಫಿಲ್ಮಿ ಬೀಟ್ ಸಂದರ್ಶನ ನಡೆಸಿದೆ. ಚೇತನ್ ಚಿತ್ರದ ಬಗ್ಗೆ ಮತ್ತು ಅನುಭವಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.


ಸಂದರ್ಶನ; ಸುನೀಲ್ ಬಿಂಡಹಳ್ಳಿ


'ಮೈನಾ' ತೆರೆಕಂಡು 4 ವರ್ಷಗಳು ಕಳೆದವು, ಈಗ 'ನೂರೊಂದು ನೆನಪು' ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಲಾಂಗ್ ಗ್ಯಾಪ್ ಗೆ ಕಾರಣ..

ನನಗೆ ತುಂಬಾ ಒಳ್ಳೆ ಕಥೆಗಳು 'ಮೈನಾ' ನಂತರ ಬಂದ್ವು. ಆದರೆ ಸಿನಿಮಾ ಮಾಡ್ವೇಕು ಅಂತ ಅನಿಸ್ಲಿಲ್ಲ. ಮೈನಾ ನನಗೆ ಬಹಳ ಇಷ್ಟವಾದ ಕಥೆ. ಕನ್ನಡದಲ್ಲೂ ಇಂತಹ ಸಿನಿಮಾ ಬಂತಲ್ಲ ಅನ್ನೋದು ಖುಷಿ. ಕನ್ನಡ ಚಿತ್ರರಂಗದ ಹೆಮ್ಮೆ. ಅದ್ರಲ್ಲೂ ಇಂತಹ ಸಿನಿಮಾ ನನಗೆ ಒಲಿದು ಬಂದಿದ್ದು ನನ್ನ ಅದೃಷ್ಟ ಅಂತಾನೆ ಹೇಳಬಹುದು .ಆದಾದ ನಂತರ ಬಹಳ ಸಿನಿಮಾಗಳು ಬಂದ್ವು ಅದ್ರೆ ನನಗೆ ಯಾವುದನ್ನು ಮಾಡಬೇಕು ಅಂತ ಇಷ್ಟ ಆಗ್ಲಿಲ್ಲ.
'ಬ್ಯೂಟಿಫುಲ್ ಮನಸ್ಸುಗಳು' ಅದ್ಭುತ ಚಿತ್ರಕಥೆ

ಇತ್ತೀಚೆಗೆ ತೆರೆಕಂಡ 'ಬ್ಯೂಟಿಫುಲ್ ಮನಸ್ಸುಗಳು', 'ತಿಥಿ', ಸಿನಿಮಾಗಳು ಇಷ್ಟವಾದವು. ಆದರೆ 'ಮೈನಾ' ಅಂತಹ ಸಿನಿಮಾ, ಆ ಒಂದು ಟೀಮ್ ನಂತಹ ಕಥೆ ಸಿಕ್ರೆ ಖಂಡಿತ ಆಗಾಗ ಸಿನಿಮಾದಲ್ಲಿ ತೊಡಗಿಕೊಳ್ಳುತ್ತೇನೆ. ಅದ್ರೆ ಅಂತಹ ಸಿನಿಮಾ ಕಥೆ ಬರೋದು ಬಹಳ ಕಡಿಮೆ. ಪ್ರತಿ ಸಿನಿಮಾಗಳಲ್ಲೂ ಲೌವ್ ಸ್ಟೋರಿ ಇರುತ್ತೆ. ಆದ್ರೆ 'ಮೈನಾ' ಸಿನಿಮಾ ಅಂತಹ ವಿಭಿನ್ನ ಲೌವ್ ಸ್ಟೋರಿ ಬರಿಯೊದಂದ್ರೆ ಸಾಮನ್ಯದ ಮಾತಲ್ಲ. ಹಾಗಂತ ಅದಾದಮೇಲೆ ಒಳ್ಳೇ ಲೌವ್ ಸ್ಟೋರಿ ಸಿನಿಮಾಗಳು ಬಂದಿಲ್ಲ ಅಂತಲ್ಲ ಬಂದಿವೆ ಅದ್ರೆ ನನಗೆ ಆ ಸಿನಿಮಾದಷ್ಟು ಯಾವುದು ಇಷ್ಟವಾಗಿಲ್ಲ.


'ನೂರೊಂದು ನೆನಪು'ಗಳಲ್ಲಿ ಏನೇನಿದೆ?

'ನೂರೊಂದು ನೆನಪು' ಸಿನಿಮಾ ಬಗ್ಗೆ ಹೇಳಬೇಕು ಅಂದ್ರೆ ಕಾಲೇಜ್ ಲೈಫ್ ಸ್ಟೋರಿ, ಪ್ರೀತಿ ಇದೆ. ಫ್ಯಾಮಿಲಿಗೆ ಸಂಬಂಧಿಸಿದ ಕಥೆಯಿದೆ.


'ನೂರೊಂದು ನೆನಪು' ಅಂದ್ರೆ ನಿಮಗೆ ನೆನಪಾಗುವುದು?

ನನಗೆ ಆ ಒಂದು ರೆಟ್ರೋ ಫೀಲ್ ಅಂದ್ರೇನೆ ತುಂಬಾ ಇಷ್ಟ. ನೆನಪುಗಳು ಅಂದ್ರೇನೆ ಅದ್ಭುತ. ನೆನಪುಗಳಿಗೆ ನಾವು ಜೀವತುಂಬಿ ನಟನೆ ಮಾಡುವುದು ಇನ್ನೂ ಅದ್ಭುತ. ಆ ಒಂದು ಡ್ರೆಸ್ ಕೋಡ್... ಅಭಿನಯ.....ತುಂಬಾನೆ ಇಷ್ಟ ಆಯ್ತು. ಈ ಸಿನಿಮಾದಲ್ಲಿ ಪಾತ್ರಕ್ಕೂ ನಮಗೂ ಸಂಬಂಧನೆ ಇಲ್ಲ. ಬೇರೆ ಒಂದು ಪ್ರಪಂಚದಲ್ಲಿ ಆಕ್ಟಿಂಗ್ ಮಾಡುತ್ತಿದ್ದೀವಿ ಅನ್ನೋ ಅನುಭವ ಖುಷಿಕೊಡ್ತು. ಎರಡನೇಯದಾಗಿ ಇದೊಂದು ಕಾದಂಬರಿ ಆಧಾರಿತ ಚಿತ್ರ ಅನ್ನೋದು ಇಷ್ಟವಾಗಿದ್ದು.


ಮರಾಠಿಯ 'ದುನಿಯಾ ದಾರಿ' ಕಾದಂಬರಿ ಆಧಾರಿತ ಚಿತ್ರ..

ನಿರ್ಮಾಪಕರು ಮತ್ತು ಚಿತ್ರಕಥೆ ಬರಹಗಾರರು ಬೆಳಗಾಂನವರು. ಚಿತ್ರ ರಿಮೇಕ್ ಆದರೂ ಸಹ 'ದುನಿಯಾ ದಾರಿ' ಎಂಬ ಕಾದಂಬರಿಯನ್ನು ಓದಿ, ಇದರಲ್ಲಿ ಮತ್ತು ಮರಾಠಿ ಚಿತ್ರದಲ್ಲಿ ಎರಡರಲ್ಲೂ ಉತ್ತಮ ಅಂಶಗಳನ್ನು ಆಯ್ದುಕೊಂಡು ಚಿತ್ರ ರೂಪಿಸಲಾಗಿದೆ. ಕಾದಂಬರಿ ಆಧಾರಿತ ಅಂದಾಗ ಚಿತ್ರಕಥೆಗೆ ಸ್ಟ್ರೆಂತ್ ಇದ್ದೇ ಇರುತ್ತೆ. ಕಾದಂಬರಿಯೇ ನಮ್ಮ ಕಲೆಗೆ, ಸಾಹಿತ್ಯಕ್ಕೆ ಮೂಲ. ಇನ್ನು ಕನ್ನಡದ ಕಾದಂಬರಿಯಾಗಿದ್ರೆ ಇನ್ನು ಸಂತೋಷ ಆಗಿರೋದು.


ಚಿತ್ರದಲ್ಲಿ ತುಂಬಾ ಚಾಲೆಂಜಿಂಗ್ ಅನಿಸಿದ್ದು..?

-ಚಿತ್ರಕ್ಕೆ ಮೊದಲೇ ಸಾಂಗ್ ಮಾಡಿರಲಿಲ್ಲ. ಆದ್ರೆ ಹಾಡುಗಳೇ ಇಲ್ಲದೇ, ಇದೆ ಅಂತ ಎಕ್ಸ್ ಪ್ರೆಸ್ ಮಾಡುತ್ತಾ ಡ್ಯಾನ್ಸ್ ಮಾಡಬೇಕಿತ್ತು. ಅದು ತುಂಬಾ ಕಷ್ಟ ಆಯ್ತು. ಹೊಸ ಅನುಭವ ಸಹ. ಆದ್ರೆ ತೀರಾ ಡ್ಯಾನ್ಸ್ ಇಲ್ಲಾ. 4 ಹಾಡುಗಳಿವೆ. ಎಲ್ಲಾ ಮಾಂಟಾಜ್ ಸಾಟ್ಸ್ ರೀತಿಯ ಹಾಡುಗಳು.


ಮೇಘನಾ ರಾಜ್ ಅವರೊಂದಿಗೆ ಅಭಿನಯ ಮಾಡಿದ ಅನುಭವ ಹೇಗಿತ್ತು?

ಅವರು ಅಷ್ಟು ಚಿಕ್ಕ ವಯಸ್ಸಿಗೆ 42 ಸಿನಿಮಾಗಳಲ್ಲಿ ನಟಿಸಿರೋದು ಅದ್ಭುತ. ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ ಅಷ್ಟೆ. ಆದ್ರೆ ಅವರು ಬಹುಭಾಷಾ ನಟಿ ಅನ್ನೋದನ್ನ ಮರೆಯೋಹಾಗಿಲ್ಲ. ಕನ್ನಡ ಭಾಷೆನಾ ತುಂಬಾ ಚೆನ್ನಾಗಿ ಮಾತಾಡ್ತಾರೆ. ಅಲ್ಲದೇ ರಂಗಭೂಮಿಯಿಂದ ಬಂದಿದ್ದಾರೆ. ತುಂಬಾ ನ್ಯಾಚುರಲ್ ಆಗಿ ಪಾತ್ರವನ್ನು ಕ್ಯಾರಿ ಮಾಡಿದ್ದಾರೆ.


ಮುಂದಿನ ಸಿನಿಮಾಗಳು ಯಾವುವು?

'ಆಕಾಶ್', 'ಅರಸು' ಚಿತ್ರ ನಿರ್ದೇಶಕ ಮಹೇಶ್ ಬಾಬು ಡೈರೆಕ್ಷನ್ ನಲ್ಲಿ ಒಂದು ಚಿತ್ರ 70 ಪರ್ಸೆಂಟ್ ಮುಗಿದಿದೆ. ಆದ್ರೆ ಇನ್ನೂ ಟೈಟಲ್ ಇಟ್ಟಿಲ್ಲ.


ಸಿನಿಮಾ ಅಂತ ಬಂದಾಗ ಯಾವುದಕ್ಕೆ ಪ್ರಾಮುಖ್ಯತೆ ಕೊಡ್ತೀರಾ?

ಕಥೆ-ಚಿತ್ರಕಥೆ. ನಂತರ ಒಂದು ಒಳ್ಳೆ ತಂಡ ಇರಬೇಕು. ಇನ್ನೊಂದು ಆ ಚಿತ್ರದಿಂದ ಹೊಸದಾಗಿ ನಾನು ನನ್ನ ಜೀವನಕ್ಕೆ ಏನಾದ್ರು ಕಲಿಯಬೇಕು ಅನಿಸಬೇಕು.


'ನೂರೊಂದು ನೆನಪು' ಯಾಕ್ ನೋಡ್ಬೇಕು?

-ಒಂದು ಫ್ಯಾಮಿಲಿ ಎಂಟರ್ ಟೈನರ್ ಚಿತ್ರ. 80 ರ ದಶಕಕ್ಕೆ ಹೊಂದಿಕೊಳ್ಳುವ ಒಂದು ಅದ್ಭುತ ಛಾಯಾಗ್ರಹಣ ಇದೆ.


English summary
'Aa Dinagalu' fame Chetan Starrer Upcoming Movie 'Noorondu Nenapu' is all set to release. Here is Chetan Interview related to 'Noorondu Nenapu' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada