»   » 'ಮಮ್ಮಿ' ಆದ ಪ್ರಿಯಾಂಕಾ ಉಪೇಂದ್ರ ಜೊತೆ ಸಣ್ಣ ಮಾತುಕತೆ

'ಮಮ್ಮಿ' ಆದ ಪ್ರಿಯಾಂಕಾ ಉಪೇಂದ್ರ ಜೊತೆ ಸಣ್ಣ ಮಾತುಕತೆ

Posted By:
Subscribe to Filmibeat Kannada

''ಮಮ್ಮಿ' ಆದ ಪ್ರಿಯಾಂಕಾ ಉಪೇಂದ್ರ'' ಅಂದತಕ್ಷಣ, ಉಪ್ಪಿ ಮಡದಿ ಮತ್ತೊಂದು ಬಾರಿ ಗರ್ಭಿಣಿ ಆಗಿದ್ದಾರೆ ಅಂತ ಭಾವಿಸಬೇಡಿ. ನಾವು ಹೇಳ್ತಿರೋದು ಅಪ್ಪಟ ರೀಲ್ ಕಹಾನಿ.

'ಪ್ರಿಯಾಂಕಾ' ಚಿತ್ರದ ಬಳಿಕ ನಟಿ ಪ್ರಿಯಾಂಕಾ ಉಪೇಂದ್ರ 'ಮಮ್ಮಿ...save me' ಸಿನಿಮಾದಲ್ಲಿ ಏಳು ತಿಂಗಳ ತುಂಬು ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. [ಸಖತ್ ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಟ್ರೈಲರ್]

ಇದೇ ತಿಂಗಳ ಕೊನೆಯ ವಾರ 'ಮಮ್ಮಿ...save me' ಸಿನಿಮಾ ಬಿಡುಗಡೆ ಆಗಲಿದೆ. ವಿದೇಶದಲ್ಲಿ ನಡೆದಿರುವ ಆಘಾತಕಾರಿ ಘಟನೆಯನ್ನ ಆಧಾರಿಸಿ, ಯುವ ನಿರ್ದೇಶಕ ಲೋಹಿತ್, 'ಮಮ್ಮಿ...save me' ಎಂಬ ಹಾರರ್-ಥ್ರಿಲ್ಲರ್ ಚಿತ್ರವನ್ನ ತಯಾರು ಮಾಡಿದ್ದಾರೆ.

'ಮಮ್ಮಿ...save me' ಚಿತ್ರದ ಕುರಿತು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನಟಿ ಪ್ರಿಯಾಂಕಾ ಉಪೇಂದ್ರ ನೀಡಿರುವ ಸಂದರ್ಶನ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ, ಓದಿರಿ....

* 'ಮಮ್ಮಿ...save me' ಚಿತ್ರದ ಸ್ಪೆಷಾಲಿಟಿ ಬಗ್ಗೆ ಹೇಳಿ....

- 'ಮಮ್ಮಿ...save me' ಚಿತ್ರದ ಸ್ಪೆಷಾಲಿಟಿ ಏನಂದ್ರೆ, ಇದು ಹಾರರ್ ಸಿನಿಮಾ. ಇಡೀ ಚಿತ್ರದ ಮೂಡ್ ಒಂಥರಾ ಇದೆ. ಇದರಲ್ಲಿ ಅಮ್ಮ-ಮಗಳ ಭಾವನೆಗಳು ಜಾಸ್ತಿ ಇದೆ. ತುಂಬಾ ಫ್ರೆಶ್ನೆಸ್ ಇದೆ. ತುಂಬಾ ರಿಯಲಿಸ್ಟಿಕ್ ಆಗಿ ಸಿನಿಮಾ ಶೂಟ್ ಮಾಡಿದ್ದೇವೆ. [ಚಿತ್ರಪಟ: 'ಮಮ್ಮಿ' ಟ್ರೈಲರ್ ಲಾಂಚ್ ನಲ್ಲಿ ಮಸ್ತ್ ಜೋಕ್ ಮಾಡಿದ ತಾರಾ]

* 'ಮಮ್ಮಿ...save me' ಚಿತ್ರವನ್ನ ನೀವು ಒಪ್ಪಿಕೊಳ್ಳಲು ಕಾರಣ.?

- ನನಗೆ ಹಾರರ್ ಸಿನಿಮಾಗಳು ಅಂದ್ರೆ ತುಂಬಾ ಇಷ್ಟ. ಚಿಕ್ಕವಯಸ್ಸಿನಿಂದಲೂ ನಾನು ಹಾರರ್ ಫ್ಯಾನ್. ಇದುವರೆಗೂ ನಾನು ಹಾರರ್ ಮೂವಿ ಮಾಡಿರ್ಲಿಲ್ಲ. ಈಗ ಹಾರರ್ ಜನಪ್ರಿಯವಾಗುತ್ತಿದೆ. ಹೀಗಾಗಿ, ರಿಯಲಿಸ್ಟಿಕ್ ಹಾರರ್ ಸಬ್ಜೆಕ್ಟ್ ನನ್ನ ಮುಂದೆ ತಂದಾಗ ಒಪ್ಪಿಕೊಂಡೆ. ಅದರಲ್ಲೂ ಗರ್ಭಿಣಿ ಪಾತ್ರ ಇದ್ದಿದ್ರಿಂದ ನನಗೆ ಇಷ್ಟ ಆಯ್ತು.

* ಇದು ಸಂಪೂರ್ಣ ಹೊಸಬರ ತಂಡ. ಅವರ ವರ್ಕ್ ಹೇಗಿದೆ.?

- ತುಂಬಾ ಪ್ಲಾನಿಂಗ್ ಇದೆ ಅವರಲ್ಲಿ. ಶಾಟ್ ಟು ಶಾಟ್ ನನಗೆ ಎಕ್ಸ್ ಪ್ಲೇನ್ ಮಾಡಿದ್ರು. ನಿರ್ದೇಶಕ ಲೋಹಿತ್ ರವರ ಅಪ್ರೋಚ್ ನನಗೆ ಇಷ್ಟ ಆಯ್ತು. ಅವರಲ್ಲಿ ಪ್ರತಿಭೆ ಇದೆ ಅನ್ನೋದು ನನಗೆ ಗೊತ್ತಾಯ್ತು. ಎಲ್ಲಕ್ಕಿಂತ ಹೆಚ್ಚಾಗಿ ಹೊಸಬರ ಜೊತೆ ಕೆಲಸ ಮಾಡುವುದಕ್ಕೆ ನನಗೆ ಇಷ್ಟ. ಸೀನಿಯರ್ ಆರ್ಟಿಸ್ಟ್ ಆಗಿ ನಾವು ಹೊಸಬರಿಗೆ ಸಪೋರ್ಟ್ ಮಾಡ್ಬೇಕು.

* ನಿಮ್ಮ ಮಗಳ ಪಾತ್ರದಲ್ಲಿ ಯುವಿನಾ ಅಭಿನಯಿಸಿದ್ದಾರೆ. ಆ ಪುಟಾಣಿ ಬಗ್ಗೆ ಹೇಳಿ....

- ತುಂಬಾ ಟ್ಯಾಲೆಂಟ್ ಇರುವ ಹುಡುಗಿ. ಅಷ್ಟು ಚಿಕ್ಕವಯಸ್ಸಲ್ಲಿ ಕನ್ನಡ ಭಾಷೆ ಕಲಿತು, ಡಬ್ಬಿಂಗ್ ಕೂಡ ಮಾಡಿದ್ದಾಳೆ. ನಮಗೆ ಜಾಸ್ತಿ ಶೂಟಿಂಗ್ ಇರ್ತಿದದ್ದು ರಾತ್ರಿ ಹೊತ್ತು. ನಮಗೆ ಸುಸ್ತಾಗುತ್ತಿತ್ತು. ಆದ್ರೆ, ಆಕೆ ಮಾತ್ರ ಸದಾ ಲೈವ್ಲಿ ಆಗಿರ್ತಿದ್ಲು. ಹಾರರ್ ಚಿತ್ರ ಆಗಿದ್ದರೂ, ಶೂಟಿಂಗ್ ನಲ್ಲಿ ಭಯ ಪಡ್ಲಿಲ್ಲ. ಆಕೆ ನಮಗೆ ಸ್ಫೂರ್ತಿ.

* 'ಮಮ್ಮಿ...save me' ಚಿತ್ರದಲ್ಲಿ ಏಳು ತಿಂಗಳ ತುಂಬು ಗರ್ಭಿಣಿ ಪಾತ್ರ ನಿರ್ವಹಿಸಿದ್ದೀರಾ. ಎಷ್ಟು ಚಾಲೆಂಜಿಂಗ್ ಆಗಿತ್ತು.?

- ಈ ಚಿತ್ರಕ್ಕಾಗಿ ನಾನು ಸ್ವಲ್ಪ ದಪ್ಪ ಆಗಿದ್ದೀನಿ. ತೂಕ ಹೆಚ್ಚಿಸಿಕೊಂಡಿದ್ದೆ. ಇಡೀ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ನೋವಿನಿಂದ ಕೂಡಿರುವಂಥದ್ದು. ನಾನು ಕೂಡ ತಾಯಿ. ಹೀಗಾಗಿ ಗರ್ಭಿಣಿ ಆಗಿದ್ದಾಗ, ಫೀಲ್ ಹೇಗಿರುತ್ತೆ ಅನ್ನೋದು ನನಗೆ ಗೊತ್ತು. ಅದನ್ನೆಲ್ಲಾ ಅನುಭವಿಸಿ ತೆರೆಮೇಲೆ ತರಲು ಪ್ರಯತ್ನ ಪಟ್ಟಿದ್ದೇನೆ.

* 'ಮಮ್ಮಿ...save me' ನೈಜ ಘಟನೆ ಆಧಾರಿತ ಚಿತ್ರವಂತೆ.! ಹೌದಾ.?

- ಹೌದು, ಇದು ಫಾರಿನ್ ನಲ್ಲಿ ನಡೆದ ಒಂದು ಘಟನೆ. ಅದನ್ನ ಆಧಾರವಾಗಿಟ್ಟು ಕಥೆ ರೆಡಿ ಮಾಡಿದ್ದಾರೆ.

* 'ಮಮ್ಮಿ...save me' ಬಿಡುಗಡೆ ಯಾವಾಗ?

- ಜುಲೈ ಕೊನೆಯ ವಾರ 'ಮಮ್ಮಿ...save me' ರಿಲೀಸ್ ಆಗಲಿದೆ.

* 'ಮಮ್ಮಿ...save me' ಟ್ರೈಲರ್ ನೋಡಿದ್ರಾ.?

- ಈಗಾಗಲೇ ಬಿಡುಗಡೆ ಆಗಿರುವ 'ಮಮ್ಮಿ...save me' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿರಿ...

English summary
Kannada Actress Priyanka Upendra revealed that Kannada Movie 'Mummy Save Me', Directed by Lohith is based on a real incident. Here is an interview with Priyanka Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada