Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಮಲ್ಲ' ಸಿನಿಮಾದ ಈ ಘಟನೆಯನ್ನು ರವಿಚಂದ್ರನ್ ಮಗನಿಗೆ ಮರೆಯೋಕೆ ಸಾಧ್ಯವಿಲ್ಲವಂತೆ
ಮೊದಲ ಮಗನನ್ನು ಈಗಾಗಲೆ ಚಿತ್ರರಂಗಕ್ಕೆ ಪರಿಚಯಿಸಿರುವ ಕನಸುಗಾರ ಎರಡನೆ ಮಗನ ಎಂಟ್ರಿಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ರವಿಚಂದ್ರನ್ ಎರಡನೆ ಮಗ ವಿಕ್ರಮ್ ಸಿನಿಮಾ ಎಂಟ್ರಿಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಕ್ರೇಜಿಸ್ಟಾರ್ ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಬಾಲನಟನಾಗಿ ಗುರುತಿಸಿಕೊಂಡವರು.
ಈಗ ಅಭಿನಯದ ಜೊತೆಗೆ ನಿರ್ದೇಶನದ ಕಡೆಗೂ ಒಲವು ಬೆಳೆಸಿಕೊಂಡಿದ್ದಾರೆ. ಸದ್ಯ ನಿರ್ದೇಶಕ ಸಹನಾ ಮೂರ್ತಿ ಸಾರಥ್ಯದಲ್ಲಿ 'ತ್ರಿವಿಕ್ರಮ' ಸಿನಿಮಾ ಮೂಲಕ ವಿಕ್ರಮ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಕಾ ಲವ್ ಸ್ಟೋರಿಯ ಸಿನಿಮಾ ಆಗಿದ್ದು ಚಿತ್ರಕ್ಕೆ 'ಹೈ ವೋಲ್ಟೇಜ್ ಲವ್ ಸ್ಟೋರಿ' ಎಂದು ಟ್ಯಾಗ್ ಲೈನ್ ನೀಡಿದ್ದಾರಂತೆ.
ವಿಕ್ರಮ್ ಕಳೆದ ವರ್ಷವೆ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಾಗಿತ್ತು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಿರಲ್ಲಿಲ್ಲ. ಈ ವರ್ಷ ಬರ್ತಿದ್ದಾರೆ. ಈಗಾಗಲೆ ವಿಕ್ರಮ್ ಚಿತ್ರಕ್ಕಾಗಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಕ್ರಮ್ ಪಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ವಿಕ್ರಮ್ ಸಂದರ್ಶನ ನೀಡುವುದು ತುಂಬ ಕಡಿಮೆ ಆದ್ರೆ. ಆದ್ರೆ ಫಿಲ್ಮಿಬೀಟ್ ಜೊತೆ ಅಪ್ಪಂದಿರ ದಿನದ ವಿಶೇಷವಾಗಿ ಅಪ್ಪನ ಬಗ್ಗೆ ಮಾತನಾಡಿದ್ದಾರೆ. ತಮ್ಮ ತಂದೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರಸಿದ್ದು ಹೀಗೆ.ಮುಂದೆ ಓದಿ..

ನಿಮಗೆ ತಂದೆ ಜತೆ ಕಳೆದಂತಹ ತುಂಬ ಸ್ಪೆಷಲ್ ದಿನಗಳು ಅಥವಾ ಘಟನೆ ಯಾವುದು?
ಮಲ್ಲ ಸಿನಿಮಾದ ಚಿತ್ರೀಕರಣದ ಸಮಯ. ಹಾವನ್ನು ಹಿಡಿದು ನಟಿಸಬೇಕಿತ್ತು. ಅದರ ಹಲ್ಲು ಕೂಡ ಕಿತ್ತಿರಲಿಲ್ಲ. ಸಡನ್ನಾಗಿ ನನಗೆ ಹಿಡಿಯೋಕೆ ಹೇಳಿದಾಗ "ಇಲ್ಲ, ನನಗೆ ಭಯ ಆಗ್ತಾ ಇದೆ ಡ್ಯಾಡಿ, ಮೊದಲು ನೀವು ಹಿಡ್ಕೊಳ್ಳಿ. ಅದನ್ನು ನೋಡ್ಕೊಂಡು ಆಮೇಲೆ ನಾನು ಹಿಡೀತೀನಿ ಅಂದೆ. ಆದರೆ ಅವರು ಕೈನಲ್ಲಿ ಹಿಡಿದುಕೊಂಡಿರಬೇಕಾದ್ರೆ ಅದು ಸ್ಲಿಪ್ ಆಗಿ ಕೆಳಗೆ ಬಿತ್ತು. ಸೆಟ್ ನಲ್ಲಿದ್ದ ಎಪ್ಪತ್ತರಷ್ಟು ಮಂದಿ ಹೆದರಿ ಓಡಿದ್ರು. ಅವರಲ್ಲಿ ನಾನೂ ಇದ್ದೆ. ಆದ್ರೆ ನಮ್ ಡ್ಯಾಡಿ ಮಾತ್ರ ಅಲ್ಲೇ ಕುಳಿತಿದ್ರು! ನನ್ನನ್ನು ವಾಪಸ್ ಕರೆಸಿ ಒಂದೆರಡು ನಿಮಿಷ ನನ್ನ ಜತೆ ಮಾತನಾಡಿದ್ರು. ಆದರೆ ಆ ಎರಡೇ ನಿಮಿಷದಲ್ಲಿ ಜೀವನ ಅಂದ್ರೆ ಏನು ಎನ್ನುವುದನ್ನು ತುಂಬ ಚೆನ್ನಾಗಿ ಹೇಳ್ಕೊಟ್ಟರು. ಈಗ ನೀನು ಹೆದರಿಕೊಂಡು ಹೋದೆ ತಾನೇ? ಹಾಗಾದರೆ ನನಗೇನಾದರೂ ನಿನಗೆ ಪರವಾಗಿಲ್ವ? "ಯಾವತ್ತೂ ಯಾವುದಕ್ಕೂ ಹೆದರಬಾರದು. ಏನೇ ಬಂದರೂ ಎದುರಿಸೋಕೆ ರೆಡಿ ಇರಬೇಕು, ನಿನ್ನ ಅಪ್ಪನಾಗಿ ಇದನ್ನೇ ನಾನು ನಿನಗೆ ಹೇಳಿಕೊಡೋದು. ಇದೇ ನಿನಗೆ ಮೊದಲನೇ ಪಾಠ. ಹೆದರಿಕೆ ಇಲ್ಲದೆ ಎಲ್ಲ ಕೆಲಸಾನೂ ಮಾಡಬೇಕು. ಕಾನ್ಫಿಡೆಂಟಾಗಿ ಮಾಡಬೇಕು. ಭಯವೇ ಬೇಡ ಎಂದಿದ್ದರು.

ತಂದೆ ಮತ್ತು ನಿಮ್ಮ ಜನ್ಮದಿನದ ಸರ್ ಪ್ರೈಸ್ ಗಿಫ್ಟ್ ಗಳ ಬಗ್ಗೆ ಹೇಳಿ?
ನನಗೆ ಸರ್ ಪ್ರೈಸ್ ಮಾಡುವಂಥ ಅವಕಾಶವನ್ನೇ ಡ್ಯಾಡಿ ನೀಡಿಲ್ಲ. ಅಂದರೆ ನನಗೆ ನಾಳೆ ಏನೋ ಬೇಕಾಗುತ್ತದೆ ಎಂದಾಗ ಅದರ ಬಗ್ಗೆ ಯೋಚಿಸೋಕೂ ಮುನ್ನವೇ ಅವರು ಅದನ್ನು ತಂದು ಕೊಡೋರು. ಹಾಗಾಗಿ ಯಾವುದರ ಅಗತ್ಯ ಬೀಳುವುದೋ ಅವೆಲ್ಲ ನನ್ನ ಬಳಿ ಮೊದಲೇ ಇದ್ದ ಕಾರಣ ಸರ್ಪ್ರೈಸ್ ಎಂದು ಅನಿಸಲೇ ಇಲ್ಲ! ಇನ್ನು ನಾನು ಮತ್ತು ಅಣ್ಣ ಎಲ್ಲ ಸೇರಿ ಅವರನ್ನು ಸರ್ಪ್ರೈಸ್ ಮಾಡೋಕೆ ಟ್ರೈ ಮಾಡುತ್ತೇವೆ. ಆದರೆ ಅವರು ಸರ್ಪ್ರೈಸೇ ಆಗಲ್ಲ! ಯಾಕೆಂದರೆ ಅವರು ಕ್ರಿಯೇಟರ್ ಅಲ್ವಾ?

ನಿಮ್ಮ ತಂದೆಯ ಇಷ್ಟವಾದ ಸಿನಿಮಾ ಮತ್ತು ಹಾಡುಗಳ ಬಗ್ಗೆ ಹೇಳಿ?
ನನಗೆ ಸಹಜವಾಗಿ ಅವರ ಎಲ್ಲ ಸಿನಿಮಾಗಳು ಕೂಡ ತುಂಬ ಇಷ್ಟ. ಅದರಲ್ಲಿಯೂ ನಾನು ಡೈರೆಕ್ಟರ್ ಆಗಲು ಹೊರಟಿರುವ ಕಾರಣ ನನಗೆ ಅವರ ಪ್ರತಿಯೊಂದು ಚಿತ್ರಗಳು ಕೂಡ ತುಂಬ ಇಷ್ಟ. ಅದರಲ್ಲಿ 'ಪ್ರೇಮಲೋಕ' ಮತ್ತು 'ರಣಧೀರ' ಎಂದೇ ಹೇಳಬಹುದು. ಹೊಸ ಚಿತ್ರಗಳ ಬಗ್ಗೆ ಕೇಳಿದರೆ ಪ್ರೀತ್ಸೋದ್ ತಪ್ಪಾ, ಏಕಾಂಗಿ, ದೃಶ್ಯ ಚಿತ್ರಗಳು ತುಂಬಾ ಇಷ್ಟವಾಗಿವೆ. ಇನ್ನು ಹಾಡುಗಳ ಬಗ್ಗೆ ಹೇಳೋದಾದರೆ ನೀವಿನ್ನೂ ಕೇಳದಿರುವ ಅವರ ಹಾಡುಗಳು ಸದ್ಯದ ಮಟ್ಟಿಗೆ ನನ್ನ ಫೇವರಿಟ್ ಆಗಿವೆ. ಅದು ರಾಜೇಂದ್ರ ಪೊನ್ನಪ್ಪ ಚಿತ್ರದ್ದು. ಅವುಗಳು ಇನ್ನೂ ಫೈನಲ್ ಆಗಿ ಬಂದಿಲ್ಲ. ಆದರೆ ನನಗೆ ಕೇಳಲು ಸಿಕ್ಕ ಅವಕಾಶದಲ್ಲಿ ಕೇಳಿ ತುಂಬ ಮೆಚ್ಚಿಕೊಂಡಿದ್ದೇನೆ.

ಅವರು ಯಾವ ಪಾತ್ರದಲ್ಲಿ ನಟಿಸಬೇಕು ಎನ್ನುವ ಆಸೆ ನಿಮ್ಮದು?
ನಾನು ಅವರನ್ನು ಒಂದು ರೀತಿ ಕಲ್ಪಿಸಿರುತ್ತೇನೆ. ಆದರೆ ಅವರು ಅದರಾಚೆಗೆ ಅವರಿಗಾಗಿ ಒಂದು ಕ್ಯಾರೆಕ್ಟರ್ ಬರೆದುಕೊಳ್ಳುತ್ತಾರೆ. ಉದಾಹರಣೆಗೆ ಹೊಸದಾಗಿ ಒಂದು ಪಾತ್ರ ಬರೆದಿಟ್ಟುಕೊಂಡಿದ್ದಾರೆ. ತುಂಬಾ ಚೆನ್ನಾಗಿದೆ. ಬಹುಶಃ ಅದನ್ನು ಸದ್ಯದಲ್ಲೇ ನಿಮ್ಮ ಮುಂದೆ ಅವರೇ ರಿವೀಲ್ ಮಾಡಬಹುದು.

ತಂದೆ ಮತ್ತು ಮನೋರಂಜನ್ ಬಿಟ್ಟು ನಿಮಗೆ ಫೇವರಿಟ್ ಯಾರು?
ನನಗೆ ಎಲ್ಲರೂ ಒಂದೊಂದು ಕಾರಣಕ್ಕೆ ಇಷ್ಟವಾಗುತ್ತಾರೆ. ಯಾಕೆಂದರೆ ಒಬ್ಬೊಬ್ಬರು ಒಂದೊಂದು ಡಿಪಾರ್ಟ್ಮೆಂಟಲ್ಲಿ ಎಕ್ಸೆಲೆಂಟ್ ಆಗಿರುತ್ತಾರೆ. ಹಾಗಾಗಿ ಒಬ್ಬರನ್ನೇ ಫೇವರಿಟ್ ಎಂದು ಹೇಳಲಾರೆ.