»   » 'ಬಿಗ್ ಬಾಸ್' ಸದಸ್ಯರ ಅಸಲಿ ಮುಖಗಳನ್ನ ಬಿಚ್ಚಿಟ್ಟ ಶೀತಲ್ ಶೆಟ್ಟಿ!

'ಬಿಗ್ ಬಾಸ್' ಸದಸ್ಯರ ಅಸಲಿ ಮುಖಗಳನ್ನ ಬಿಚ್ಚಿಟ್ಟ ಶೀತಲ್ ಶೆಟ್ಟಿ!

Written By:
Subscribe to Filmibeat Kannada

ಸುದ್ದಿ ನಿರೂಪಕಿ ಹಾಗೂ ಚಲನಚಿತ್ರ ನಟಿ ಶೀತಲ್ ಶೆಟ್ಟಿ ತಮ್ಮ 12 ವಾರಗಳ ಅದ್ಭುತ ಆಟದಿಂದ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಮನೆಯಿಂದ ಹೊರಬಂದಿರುವ ಶೀತಲ್ 'ಬಿಗ್ ಬಾಸ್' ಮನೆಯಲ್ಲಿರುವ ಸದಸ್ಯರ ಅಸಲಿ ಮುಖಗಳನ್ನ ಬಿಚ್ಚಿಟ್ಟಿದ್ದಾರೆ .['ಬಿಗ್ ಬಾಸ್ ಕನ್ನಡ-4': ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಔಟ್.!]

''ವಾಣಿಶ್ರೀ ಅವರು ಮೊದಲ ವಾರ ಹೊರಹೋಗುವ ಸ್ವರ್ಧಿಯಾಗಿರಲಿಲ್ಲ. 'ಸಂಜನಾ-ಭುವನ್' ಜೋಡಿಯ ಬಗ್ಗೆ? 'ಗ್ರೂಪ್ ಡೀಲ್' ಬಗ್ಗೆ? ಪ್ರಥಮ್ ಬಗ್ಗೆ? ಮಾಳವಿಕಾ ಹಾಗೂ ಮೋಹನ್ ಅವರ ಅರ್ಹತೆ ಬಗ್ಗೆ? ಯಾರಿಗೆ ಗೆಲ್ಲುವ ಅರ್ಹತೆಯಿದೆ.... ಹೀಗೆ ಹಲವು ವಿಷ್ಯಗಳನ್ನ ಶೀತಲ್ ಶೆಟ್ಟಿ ನೇರವಾಗಿ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ವಾಣಿಶ್ರೀ ಮೊದಲ ವಾರ ಹೋಗ್ಬೇಕಿದ್ದವರಲ್ಲ!

''ವಾಣಿಶ್ರೀ ಅವರು ಮೊದಲ ವಾರ ಹೋಗ್ಬೇಕಿದ್ದವರಲ್ಲ. ಅವರು ತುಂಬಾ ಸ್ಟ್ರಾಂಗ್ ಮಹಿಳೆ. ಸ್ಟ್ರಾಂಗ್ ವುಮೆನ್ ಗೆ ಅವರು ಒಂದು ರೀತಿ ಮಾದರಿಯಾಗಿದ್ದರು. ಯಾಕಂದ್ರೆ ಬೆಳಿಗ್ಗೆ 6 ಗಂಟೆಗೆ ಎದ್ದು ಎಲ್ಲ ಕೆಲಸ ಮುಗಿಸಿ ರೆಡಿಯಾಗಿ ಕೂರುತ್ತಿದ್ದರು. ಒಂದು ವಾರದಲ್ಲೇ ತಮ್ಮ ಬಗ್ಗೆ ಸ್ಟ್ರಾಂಗ್ ಆಗಿ ಹೇಳಿಕೊಂಡಿದ್ದರು''[ವಿಡಿಯೋ:'ಬಿಗ್ ಬಾಸ್' ಮನೆಯಿಂದ ಹೊರಬಂದ ಶೀತಲ್ ಶೆಟ್ಟಿ ಹೇಳಿದ್ದೇನು? ]

ಗ್ರೂಪ್ ಡೀಲ್ ಗೂ ನನಗೆ ಸಂಬಧವಿಲ್ಲ

''ಮೊದಲು ನಿರಂಜನ್, ಶಾಲಿನಿ, ಕೀರ್ತಿ ಗ್ರೂಪ್ ಅಂತ ಹೇಳ್ತಿದ್ರು, ಅಮೇಲೆ ನಿರಂಜನ್ ಹೋದ, ಆ ಜಾಗಕ್ಕೆ ನಾನು ಬಂದೆ ಅಂದ್ರು. ತುಂಬಾ ಫ್ರಾಂಕ್ ಆಗಿ ಹೇಳ್ಬೇಕು ಅಂದ್ರೆ ಆ ಗ್ರೂಪ್ ಬಗ್ಗೆ ನನಗೆ ಗೊತ್ತಿಲ್ಲ. ಮೂರು ತಿಂಗಳು ಒಟ್ಟಿಗೆ ಇರ್ತಿವಿ ಅಂದ್ರೆ, ಎಲ್ಲರೂ ಹತ್ರನೂ ಒಂದೇ ತರ ಇರೋಕೆ ಆಗಲ್ಲ. ನಮಗೆ ಇಷ್ಟ ಆಗೋರಗೆ ಹತ್ರ ಆಗ್ತಿವಿ, ಇಷ್ಟ ಆಗ್ದೆ ಇರೋರಿಗೆ ದೂರವಾಗ್ತಿವಿ. ಪ್ರತಿಯೊಬ್ಬರು ಜೊತೆ ಜೊತೆಯಲ್ಲಿ ಇರ್ತಿದ್ದರು. ಒಂದು ಪಾಸಿಟೀವ್ ವ್ಯಕ್ತಿತ್ವ ಇರೋ ಜಾಗದಲ್ಲಿ ಜಾಸ್ತಿ ಜನ ಇರ್ತಾರೆ. ಅದನ್ನ ಗ್ರೂಪಿಸಂ ಎನ್ನವುದಾದರೇ ನಾನು ಆ ಗ್ರೂಪ್ ನಲ್ಲಿ ಇದ್ದೆ ಎನ್ನುವುದಕ್ಕೆ ಖುಷಿಪಡ್ತಿನಿ''

ಸಂಜನಾ-ಭುವನ್ ಬಗ್ಗೆ!

''ಸಂಜನಾ ಮತ್ತು ಭುವನ್ ಜೋಡಿ ಬಗ್ಗೆ ನಾನು ಏನೂ ಹೇಳೊಕೆ ಇಷ್ಟಪಡಲ್ಲ. ಯಾಕಂದ್ರೆ ಅದು ನಮಗೆ ಮ್ಯಾಟರ್ ಆಗ್ದೆ ಇರೋ ವಿಚಾರ. ಇವರು ವಿಚಾರದಲ್ಲೂ ನನ್ನ ಬ್ಲೇಮ್ ಮಾಡಿದ್ದರು. ಸಂಜನಾ-ಭುವನ್ ಮತ್ತು ಪ್ರಥಮ್ ಅವರ ವಿಷ್ಯವನ್ನ ಹಿಂದೆಗಡೆಯಿಂದ ನೋಡಿ ನಗುವುದಕ್ಕಿಂತ, ನೇರವಾಗಿ ಮಾತಾಡಿ ಕ್ಲಿಯರ್ ಮಾಡೋಣ ಎನ್ನುವುದು ಮಾತ್ರ ನನ್ನ ಉದ್ದೇಶವಾಗಿತ್ತು. ಅದನ್ನ ನಾನು ಮಾಡದೆ. ಸಂಜನಾ-ಭುವನ್ ಮದುವೆ ಮಾಡಿಕೊಳ್ತಾರೆ ಅಂದ್ರೆ ನನಗೆ ಖುಷಿ, 100% ನನ್ನ ಕರೆದ್ರೆ ನಾನು ಅವರ ಮದುವೆಗೆ ಹೋಗ್ತಿನಿ''

ಪ್ರಥಮ್ ಅಂದ್ರೆ ಏನು?

''ಪ್ರಥಮ್ ಆರಂಭದ ದಿನಗಳಲ್ಲಿ ಎಲ್ಲರಿಗೂ ಕಿರಿಕಿರಿ ಆಗಿದ್ದು ಹೌದು. ಪ್ರಥಮ್ ಗೆ ಇಷ್ಟೊಂದು ಜನ ಫ್ಯಾನ್ಸ್ ಇದ್ದಾರೆ. ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಆಡೋ ಹಾಗೆ ಏನಾದರೂ, ಫ್ಯಾನ್ಸ್ ಮಧ್ಯೆ ಆಡಿದ್ರೆ, ಎಲ್ಲರೂ ಶಾಕ್ ಆಗ್ಬಿಡ್ತಾರೆ. ಏನೇ ಮಾತಾಡಿದ್ರೂ ಅರ್ಥ ಆಗ್ತಿರಿಲಿಲ್ಲ. ಬಟ್, ಹೋಗ್ತಾ ಹೋಗ್ತಾ ಸ್ವೀಟ್ ಆಗ್ತಾ ಬಂದ. ದಿನ ಕಳೆದ ಹಾಗೆ ಪ್ರಥಮ್ ಇಷ್ಟ ಆಗ್ತಾ ಬರ್ತಾನೆ. ನನಗೆ ಅನ್ಸುತ್ತೆ ಪ್ರಥಮ್ ಗೆ ನೋವು ಹೆಪ್ಪುಗಟ್ಟಿದೆ. ಅವನು ಬೆಳೆದು ಬಂದ ರೀತಿ, ಮನೆಬಿಟ್ಟು ಬಂದ ಘಟನೆ, ಒಳ್ಳೆ ಫ್ಯಾಮಿಲಿಯಿಂದ ಬಂದ ಹುಡುಗ ಪ್ರಥಮ್. ಅದರಲ್ಲಿ ಎಲ್ಲ ತುಂಬಾ ಗಟ್ಟಿಯಾಗಿದ್ದಾನೆ. ತುಂಬಾ ಜ್ಞಾನಯಿದೆ. ಪ್ರಥಮ್ ಗೆದ್ದರೆ ನನಗೆ ಖುಷಿಯಿದೆ''

ಮಾಳವಿಕಾ-ಮೋಹನ್ ಗೆ ಅರ್ಹತೆಯಿಲ್ಲ!

''ಮಾಳವಿಕಾ ಹಾಗೂ ಮೋಹನ್ ಇಬ್ಬರಿಗೂ ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ ಅರ್ಹತೆಯಿಲ್ಲ. ಅವರು ಬರಿ ಹೆಸರು ಮಾಡಿದ್ದಾರೆ, ಅವರು ಅನುಭವವಾಗಿ ಎಮಭ ವಿಚಾರಕ್ಕೆ ಜನ ಅವರಿಗೆ ವೋಟ್ ಮಾಡಿದ್ರೆ ಓಕೆ. ಆದ್ರೆ, ಅವರೇನಾದರೂ ವಿನ್ನರ್ ಆದ್ರೆ, ನನಗೆ ದೊಡ್ಡ ನಿರಾಸೆ ಆಗುತ್ತೆ''

ರೇಖಾ ವಿನ್ ಆಗ್ಬೇಕು!

''ರೇಖಾ ಒಂದು ಅದ್ಭುತ ವ್ಯಕ್ತಿ. ಅವರಿಗೆ ಗೆಲ್ಲುವ ಅರ್ಹತೆಯಿದೆ. ಅವರ ಜೊತೆ ತುಂಬಾ ವಿಷ್ಯಗಳನ್ನ ಹಂಚಿಕೊಂಡಿದ್ದಾರೆ. ಅವರು ಬ್ಯಾಲೆನ್ಸ್ ಆಗಿದ್ದಾರೆ. ಮಾನವೀಯತೆಯಲ್ಲಿ ಸೂಪರ್. ಟಾಸ್ಕ್ ವಿಚಾರದಲ್ಲೂ ಟ್ಯಾಲೆಂಟೆಡ್. ಸೋ ಎಲ್ಲ ವಿಭಾಗದಲ್ಲೂ ರೇಖಾ ದಿ ಬೆಸ್ಟ್. ಅವರು ವಿನ್ ಆದ್ರೆ, ಚೆನ್ನಾಗಿರುತ್ತೆ''

ವಿಡಿಯೋ ನೋಡಿ

''ಶೀತಲ್ ಶೆಟ್ಟಿ ಅವರೊಂದಿಗೆ ನಿಮ್ಮ ಫಿಲ್ಮಿ ಬೀಟ್ ನಡೆಸಿರುವ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ''.(ಈ ಲಿಂಕ್ ಕ್ಲಿಕ್ ಮಾಡಿ, ವಿಡಿಯೋ ನೋಡಿ)

English summary
Here is the interview of News Anchor and Kannada Actress Sheethal Shetty after elimination from Bigg Boss Kannada 4 reality show. Watch the video..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada