twitter
    For Quick Alerts
    ALLOW NOTIFICATIONS  
    For Daily Alerts

    Exclusive: "ಸರೋಜಾ ಅದೇನ್ ಪಾತ್ರನೋ ಎಂದು ಗೊಣಗುಟ್ಟಿದ್ದೆ": ಹಿರಿಯ ನಟಿ ಉಮಾಶ್ರೀ

    |

    ಕೊರೊನಾ ಲಾಕ್‌ಡೌನ್ ಸಮಯದಲ್ಲಿ 'ರತ್ನನ್ ಪ್ರಪಂಚ' ನೇರವಾಗಿ ಓಟಿಟಿಗೆ ಬಂದಿದ್ದು, ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಚಿತ್ರದಲ್ಲಿ ಇನ್ಸುರೆನ್ಸ್ ಏಜೆಂಟ್ ರತ್ನಾಕರನಾಗಿ ಡಾಲಿ ಧನಂಜಯ ನಟಿಸಿದ್ದರು. ರತ್ನನ ತಾಯಿ ಸರೋಜಾ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅಭಿನಯ ಪ್ರೇಕ್ಷಕರ ಮನಗೆದ್ದಿತ್ತು. ಅತ್ಯುತ್ತಮ ಪೋಷಕ ನಟಿ ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಉಮಾಶ್ರೀ ಅವರಿಗೆ ಸಿಕ್ಕಿದೆ. ಅವರ ಅನುಪಸ್ಥಿತಿಯಲ್ಲಿ ಧನಂಜಯ ಮೊನ್ನೆ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು.

    'ರತ್ನನ್ ಪ್ರಪಂಚ' ಚಿತ್ರದಲ್ಲಿ ತಮ್ಮ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿದ್ದು ಹಾಗೂ ಪ್ರಶಸ್ತಿ ಸಿಕ್ಕಿದ್ದರ ಬಗ್ಗೆ ಫಿಲ್ಮಿಬೀಟ್‌ ಜೊತೆ ಹಿರಿಯ ನಟಿ ಉಮಾಶ್ರೀ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಒರಟು ಒರಟಾಗಿ ಆಡುವ ಸರೋಜಾ ಜೊತೆ ರತ್ನನದ್ದು ಪ್ರತಿದಿನ ಜಗಳ ಗಲಾಟೆ. ಮೇಲ್ನೋಟಕ್ಕೆ ಅಷ್ಟು ಹಠಿಮಾರಿಯಾಗಿ ಕಾಣುವ ಸರೋಜಾಗೆ ಮಗ ಅಂದರೆ ಅಪಾರ ಪ್ರೀತಿ ಇರುತ್ತದೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳನ್ನು ಮಾಡಿ ಗೆದ್ದಿರುವ ಉಮಾಶ್ರೀ ಸಿಡುಕು, ವಾಚಾಳಿ ಅಷ್ಟೇ ಭಾವುಕಳಾದ ಸರೋಜಾ ಪಾತ್ರದಲ್ಲಿ ಜೀವಿಸಿದ್ದರು. 8 ವರ್ಷಗಳ ನಂತರ ಬಣ್ಣ ಹಚ್ಚಿದ್ದ ಹಿರಿಯ ನಟಿಗೆ ಈ ಸಿನಿಮಾ ಮೂಲಕ ಭರ್ಜರಿ ಕಂಬ್ಯಾಕ್ ಸಿಕ್ಕಿತ್ತು.

    67th Filmfare Awards South : ಯಾರ ಮಡಿಲಿಗೆ ಸೇರಿತು ಫಿಲ್ಮ್ ಫೇರ್? ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ!67th Filmfare Awards South : ಯಾರ ಮಡಿಲಿಗೆ ಸೇರಿತು ಫಿಲ್ಮ್ ಫೇರ್? ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ!

    ರಂಗಭೂಮಿಯಿಂದ ನಟನೆಯ ಪಟ್ಟುಗಳನ್ನು ಕಲಿತು ಬಂದವರು ಹಿರಿಯ ನಟಿ ಉಮಾಶ್ರೀ. ಇತ್ತೀಚೆಗೆ ಡೈನಾಮಿಕ್ ಸ್ಟಾರ್ ದೇವರಾಜ್ ಮಾತನಾಡುತ್ತಾ ಉಮಾಶ್ರೀ ಅವರೊಟ್ಟಿಗೆ ನಟಿಸೋಕೆ ಭಯವಾಗುತ್ತದೆ ಎಂದಿದ್ದರು. ಅಂತಹ ಅದ್ಭುತ ನಟಿ 'ರತ್ನನ್‌ಪ್ರಪಂಚ'ದ ಜೊತೆಗೆ ತಮ್ಮ ಸಿನಿಪ್ರಪಂಚದ ಬಗ್ಗೆ ಮಾತನಾಡಿದ್ದಾರೆ ಮುಂದೆ ಓದಿ.

    ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿದ್ದು ಹೇಗನಿಸುತ್ತದೆ?

    ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿದ್ದು ಹೇಗನಿಸುತ್ತದೆ?

    "ಬಹಳ ಸಂತೋಷ ಆಗುತ್ತಿದೆ. 8 ವರ್ಷಗಳ ನಂತರ ಚಿತ್ರರಂಗಕ್ಕೆ ರೀಎಂಟ್ರಿ ಕೊಟ್ಟ ಮೊದಲ ಸಿನಿಮಾ ರತ್ನನ್‌ಪ್ರಪಂಚ. ಈ ಸಿನಿಮಾ ಓಟಿಟಿಯಲ್ಲಿ ಹಿಟ್ ಆಗಿದೆ. ಜನ ಆ ಪಾತ್ರವನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ. ಜೊತೆಗೆ ಇಷ್ಟಪಟ್ಟಿದ್ದಾರೆ. ಪಾತ್ರಕ್ಕೆ ಪ್ರಶಸ್ತಿ ಬಂದಿರೋದು ಬಹಳ ಖುಷಿ ಆಯಿತು. ರೋಹಿತ್ ಪದಕಿ ಮಾಡಿರುವ ಸ್ಕ್ರಿಪ್ಟ್, ಅದರಲ್ಲಿ ತಾಯಿ ಪಾತ್ರವನ್ನು ಹೆಣೆದಿರುವ ಅವರ ಪ್ರತಿಭೆಗೆ ಈ ಕ್ರೆಡಿಟ್ ಸಲ್ಲಬೇಕು. ಈ ಕಥೆಯನ್ನು ಸಿನಿಮಾ ಮಾಡಿದ ಕಾರ್ತಿಕ್ ಗೌಡ ಅವರಿಗೆ ಹೋಗಬೇಕು. ಈ ಪಾತ್ರ ನನಗೆ ಕೊಟ್ಟಿದ್ದಕ್ಕೆ ಅವರಿಗರ ಧನ್ಯವಾದ. ಪ್ರೊಡಕ್ಷನ್‌ ಮ್ಯಾನೇಜರ್‌ ಬಾಬಣ್ಣ ಅವರಿಗೂ ಧನ್ಯವಾದ.

    ಜನ್ಮದಿನ: ಕಲ್ಲು-ಮುಳ್ಳಿನ ಹಾದಿಯಲ್ಲಿ ಅರಳಿದ ಹೂವು ಉಮಾಶ್ರೀಜನ್ಮದಿನ: ಕಲ್ಲು-ಮುಳ್ಳಿನ ಹಾದಿಯಲ್ಲಿ ಅರಳಿದ ಹೂವು ಉಮಾಶ್ರೀ

    ಸರೋಜಾ ಪಾತ್ರ ಮಾಡಿದ್ದರ ಬಗ್ಗೆ ಹೇಳಿ?

    ಸರೋಜಾ ಪಾತ್ರ ಮಾಡಿದ್ದರ ಬಗ್ಗೆ ಹೇಳಿ?

    "ಮೊದಲು ಈ ಪಾತ್ರ ಹೇಳಿದಾಗ, ಅಯ್ಯೋ ಬಿಡಪ್ಪಾ ಏನ್ ಈ ಪಾತ್ರ ಎಂದು ನಾನು ಗೊಣಗುಟ್ಟಿದ್ದೆ. ಆದರೂ ಪದಕಿ ಅವರು ಇಲ್ಲ ಅಮ್ಮ ನೀವು ಮಾಡಿ ಚೆನ್ನಾಗಿರುತ್ತದೆ ಎಂದಿದ್ದರು. ಅವರು ಹೇಳಿದಂತೆ ಬಹಳ ಚೆನ್ನಾಗಿ ಬಂತು. ಅವರು ಹೇಳಿದನ್ನು ಮಾಡಿದ್ದೀನಿ. ನನಗೆ ತಿಳಿದಷ್ಟು ಪಾತ್ರಕ್ಕೆ ಏನು ಬೇಕೋ ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೀನಿ. ಅದನ್ನು ಜನ ಒಪ್ಪಿದ್ದಾರೆ. ಆಶೀರ್ವದಿಸಿದ್ದಾರೆ. ಬಹಳ ಖುಷಿ ಆಗುತ್ತಿದೆ."

    ಮುಂದೆ ಯಾವೆಲ್ಲಾ ಚಿತ್ರಗಳಲ್ಲಿ ನಟಿಸ್ತಿದ್ದೀರಾ?

    ಮುಂದೆ ಯಾವೆಲ್ಲಾ ಚಿತ್ರಗಳಲ್ಲಿ ನಟಿಸ್ತಿದ್ದೀರಾ?

    ಬಹಳ ಚೆನ್ನಾಗಿದೆ. ಶಿವರಾಜ್‌ಕುಮಾರ್ ಜೊತೆ 'ವೇದ', ದರ್ಶನ್ ಜೊತೆ 'ಕ್ರಾಂತಿ', ನಂಜುಂಡಿಯವರ 'ಕಾಸಿನ ಸರ' ಮಾಡ್ತಿದ್ದೀನಿ. ಡೇವಿಡ್ ಅವರ 'ಮಾನ' ಸಿನಿಮಾ ಮುಗಿದಿದೆ. ಹೀಗೆ ನಾಲ್ಕೈದು ಸಿನಿಮಾಗಳಲ್ಲಿ ಒಳ್ಳೆ ಒಳ್ಳೆ ಪಾತ್ರ ಮಾಡಿದ್ದೀನಿ ನೋಡಬೇಕು.

    ಕಿರುತೆರೆ ಧಾರಾವಾಹಿಯ ಪುಟ್ಟಕ್ಕನ ಪಾತ್ರ?

    ಕಿರುತೆರೆ ಧಾರಾವಾಹಿಯ ಪುಟ್ಟಕ್ಕನ ಪಾತ್ರ?

    'ಪುಟ್ಟಕ್ಕನ ಮಕ್ಕಳು' ಕೂಡ ಬಹಳ ಹಿಟ್ ಆಗಿದೆ. ಎಲ್ಲೇ ಹೋದರು ಪುಟ್ಟಕ್ಕನ ಹೆಸರು ಜನರ ಬಾಯಲ್ಲಿ ಇದೆ. ಆ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಜೀ ವಾಹಿನಿಯವರು ಬಹಳ ಚೆನ್ನಾಗಿ ತಗೊಂಡು ಹೋಗ್ತಿದ್ದಾರೆ. ಹೆಣ್ಣುಮಕ್ಕಳಿಗೆ ಆತ್ಮಸ್ಥೈರ್ಯ, ಧೈರ್ಯ ತುಂಬು ನಿಟ್ಟಿನಲ್ಲಿ ಅದರಲ್ಲೂ ಈಗ ನಾವು ಹೆಣ್ಣುಮಕ್ಕಳನ್ನು ಯಾವ ರೀತಿ ಕಾಣಬೇಕು, ಪೋಷಣೆ ಮಾಡಬೇಕು ಎನ್ನುವ ಸಂದೇಶವನ್ನು ಬಹಳ ಚೆನ್ನಾಗಿ ಕೊಟ್ಟಿದ್ದಾರೆ. ಹೆಂಗಸರು, ಗಂಡಸರು ಎನ್ನದೇ ಎಲ್ಲರೂ ಆ ಪಾತ್ರವನ್ನು ಇಷ್ಟಪಡುತ್ತಿದ್ದಾರೆ. ಇವತ್ತಿಗೂ ಒಳ್ಳೆ ಟಿಆರ್‌ಪಿ ಇದೆ. ದಕ್ಷಿಣಭಾರತದಲ್ಲಿ ಒಳ್ಳೆ ಧಾರಾವಾಹಿ ಎನಿಸಿಕೊಂಡಿದೆ. ಆರಂಭದಲ್ಲಿ ದೇಶದಲ್ಲೇ 4ನೇ ಸ್ಥಾನ ಪಡೆದುಕೊಂಡಿದ್ದ ಧಾರಾವಾಹಿ ಅದು. ಆರೂರು ಜಗದೀಶ್, ರಾಘವೇಂದ್ರ ಹುಣಸೂರು ತಂಡ ಒಳ್ಳೆ ಕೆಲಸ ಮಾಡುತ್ತಿದೆ. ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ.

    ರಾಜಕಾರಣದ ಜೊತೆಗೆ ಸಿನಿಮಾ ಮುಂದುವರೆಯುತ್ತಾ?

    ರಾಜಕಾರಣದ ಜೊತೆಗೆ ಸಿನಿಮಾ ಮುಂದುವರೆಯುತ್ತಾ?

    ಪ್ರತಿ ಸಿನಿಮಾದಲ್ಲೂ ಪ್ರತಿ ಪಾತ್ರವೂ ಹಿಟ್ ಆಗುತ್ತಲೇ ಹೋಗುತ್ತಿದೆ. ಅದರಲ್ಲಿ ಕೆಲವು ಪಾತ್ರಗಳು ಬಹಳ ವಿಶೇಷ ಎನ್ನಿಸುತ್ತವೆ. 'ರತ್ನನ್ ಪ್ರಪಂಚ' ಚಿತ್ರದ ಪಾತ್ರವನ್ನು ಈಗಿನ ಜನರೇಶನ್ ಎಂಜಾಯ್ ಮಾಡ್ತಿದ್ದಾರೆ. ನನಗೆ ಈ ಪಾತ್ರ ಮಾಡಿದ್ದು ಬಹಳ ಖುಷಿ ಆಗುತ್ತದೆ. ವೃತ್ತಿಯನ್ನು ಯಾವತ್ತೂ ಕೈ ಬಿಡಲ್ಲ. ವೃತ್ತಿ ಜೊತೆಗೆ ರಾಜಕಾರಣವನ್ನು ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಅದು ಹಾಗೇ ಮುಂದುವರೆಯುತ್ತದೆ.

    OTT, ಪ್ಯಾನ್‌ ಇಂಡಿಯಾ ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯ?

    OTT, ಪ್ಯಾನ್‌ ಇಂಡಿಯಾ ಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯ?

    "ನಾವು ಹಳೇ ಕಲಾವಿದರಾಗಿ ಜನ ಥಿಯೇಟರ್‌ಗೆ ಬರೋದನ್ನು ನೋಡುವುದಕ್ಕೆ ಚೆನ್ನಾಗಿರುತ್ತದೆ. ಆಧುನಿಕ ಜಗತ್ತಿನಲ್ಲಿ ಒತ್ತಡದ ಬದಯಕಿನಲ್ಲಿ ಜನ ಲ್ಯಾಪ್‌ಟಾಪ್‌ ಅಲ್ಲೇ ಸಿನಿಮಾಗಳನ್ನು ನೋಡುತ್ತಾರೆ. ಮನೆಯಲ್ಲೇ ಹೋಂ ಮೀಡಿಯಾಗಳು ಬಂದುಬಿಟ್ಟಿದೆ. ಜಗತ್ತು, ಜೀವನ ಶೈಲಿ ಎಲ್ಲವೂ ಬದಲಾಗಿದೆ. ಅದೇ ರೀತಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. 'ರತ್ನನ್ ಪ್ರಪಂಚ' ಓಟಿಟಿಗೆ ಬಂದಾಗ ನಂಬರ್ ವನ್ ಆಗಿ ಓಡುತ್ತಿತ್ತು. ಕೆಲವೊಮ್ಮೆ ಎಜುಕೇಟೆಡ್ ಥಿಯೇಟರ್ ಬಂದು ಸಿನಿಮಾ ನೋಡಲ್ಲ, ಕೆಲವರು ಮಾಲ್‌ಗಳಿಗೆ ಹೋಗುತ್ತಾರೆ. ಡಿಜಿಟಲ್‌ ಫ್ಲಾಟ್‌ಫಾರಂಗಳಿಗೆ ಇಲ್ಲೂ ಜಾಸ್ತಿ ಜನ ಸಿನಿಮಾ ನೋಡುತ್ತಿದ್ದಾರೆ. ಬೇರೆ ಭಾಷೆಯವರು ಸಿನಿಮಾ ಹೆಚ್ಚು ನಮ್ಮ ಸಿನಿಮಾಗಳನ್ನು ನೋಡುತ್ತಿದ್ದಾರೆ. ಹಾಗಾಗಿ ವಿಸ್ತಾರವಾಗಿ ಪ್ರಪಂಚದಾದ್ಯಂತ ಕಲಾವಿದರು ತಲುಪುವಂತಾಗಿದೆ. ತಂತ್ರಜ್ಞಾನದ ಸಹಾಯದಿಂದ ನಾವೆಲ್ಲಾ ಪ್ರಪಂಚದ ಮೂಲೆ ಮೂಲೆಗೆ ತಲುಪಲು ಸಹಾಯವಾಗುತ್ತಿದೆ" ಎಂದು ಉಮಾಶ್ರೀ ತಿಳಿಸಿದ್ದಾರೆ.

    English summary
    Umashree on winning Filmfare Best Supporting Actress award for Rathnan Prapancha. know more
    Wednesday, October 12, 2022, 12:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X