For Quick Alerts
  ALLOW NOTIFICATIONS  
  For Daily Alerts

  ಸಂದರ್ಶನ: ಉಪೇಂದ್ರ ಅಣ್ಣನ ಮಗ ನಿರಂಜನ್ ಮುಂದಿರುವ ಕನಸು

  By Bharath Kumar
  |
  Exclusive interview with Niranjan Sudheendra

  ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದಿಂದ ನಟ ನಿರಂಜನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಮೊದಲ ಅಗ್ನಿಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.

  ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಅವರ ಜೊತೆ 'ಸೆಕೆಂಡ್ ಹಾಫ್' ಚಿತ್ರದಲ್ಲಿ ತೆರೆಹಂಚಿಕೊಂಡ ನಿರಂಜನ್ ಸುಧೀಂದ್ರ ಇದೀಗ ಹೊಸ ಹೊಸ ಪ್ರಾಜೆಕ್ಟ್ ಗಳಿಗಾಗಿ ತಯಾರಾಗುತ್ತಿದ್ದಾರೆ.

  ಉಪ್ಪಿಯ ಗರಡಿಯಲ್ಲಿ ಬೆಳೆದ ನಿರಂಜನ್ ಅವರು ಮುಂದಿನ ಭವಿಷ್ಯವನ್ನ ಕನ್ನಡ ಚಿತ್ರರಂಗದಲ್ಲಿ ರೂಪಿಸಿಕೊಳ್ಳಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ರೆ, ಉಪೇಂದ್ರ ಅವರ ಅಣ್ಣನ ಮಗನ ಮುಂದಿನ ಸಿನಿಮಾಗಳು ಹೇಗಿರಲಿದೆ.? ಯಾವ ರೀತಿಯ ಚಿತ್ರಗಳನ್ನ ಮಾಡಲು ಪ್ಲ್ಯಾನ್ ಮಾಡ್ತಿದ್ದಾರೆ.? ಎಂಬುದರ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. ಪೂರ್ತಿ ಸಂದರ್ಶನ ಮತ್ತು ವಿಡಿಯೋ ಮುಂದೆ ಇದೆ ನೋಡಿ

  ನೀವು ಸಿನಿಮಾರಂಗಕ್ಕೆ ಬಂದಿದ್ದು ಹೇಗೆ.?

  ನೀವು ಸಿನಿಮಾರಂಗಕ್ಕೆ ಬಂದಿದ್ದು ಹೇಗೆ.?

  ''ಚಿಕ್ಕವಯಸ್ಸಿನಿಂದಲೂ ನಾನು ಚಿಕ್ಕಪ್ಪನ (ನಟ ಉಪೇಂದ್ರ) ಜೊತೆಯಲ್ಲಿ ಬೆಳದಿದ್ದು. ಅವರೇ ನನಗೆ ದೊಡ್ಡ ಸ್ಪೂರ್ತಿ. ಕಾಲೇಜ್ ದಿನಗಳಿಂದಲೂ ಡ್ಯಾನ್ಸ್, ನಟನೆ, ನಾಟಕಗಳಲ್ಲಿ ಹೆಚ್ಚು ಆಸಕ್ತಿ ಇತ್ತು. ನಂತರ ನಾನು ಪರ್ಫಾಮ್ ಮಾಡಬಹುದು ಅಂತ ಅನಿಸಿತು. ಈಗ 'ಸೆಕೆಂಡ್ ಹಾಫ್' ಚಿತ್ರದ ಮೂಲಕ ಅದನ್ನ ನೆರವೇರಿಸಿಕೊಳ್ಳುವತ್ತಾ ಸಾಗಿದ್ದೇನೆ '' - ನಿರಂಜನ್

  'ಸೆಕೆಂಡ್ ಹಾಫ್' ಚಿತ್ರಕ್ಕೆ ಅವಕಾಶ ಹೇಗೆ ಸಿಕ್ತು.?

  'ಸೆಕೆಂಡ್ ಹಾಫ್' ಚಿತ್ರಕ್ಕೆ ಅವಕಾಶ ಹೇಗೆ ಸಿಕ್ತು.?

  ''ನಿರ್ದೇಶಕ ಯೋಗಿ ದೇವಗಂಗೆ ಪ್ರಿಯಾಂಕಾ ಅವರ ಬಳಿ ಮಾತನಾಡಲು ಮನೆಗೆ ಬಂದಾಗ ನನ್ನ ಫೋಟೋ ನೋಡಿದ್ರು. ನಂತರ ನಮ್ಮ ಚಿಕ್ಕಮ್ಮನ ಬಳಿ ಅವರನ್ನ ಭೇಟಿ ಮಾಡ್ಬೇಕು ಅಂತ ಕೇಳಿದ್ರು. ನಾನು ಹೋಗಿ ಮೀಟ್ ಮಾಡಿದೆ. ಈ ರೀತಿ ಒಂದು ಪಾತ್ರವಿದೆ ಮಾಡಿ ಅಂದ್ರು. ನನಗೂ ಖುಷಿ ಆಯ್ತು, ಒಪ್ಕೊಂಡೆ''

  'ಸೆಕೆಂಡ್ ಹಾಫ್' ಚಿತ್ರ ನೋಡಿದ ವಿಮರ್ಶಕರು ಏನಂದ್ರು.? 'ಸೆಕೆಂಡ್ ಹಾಫ್' ಚಿತ್ರ ನೋಡಿದ ವಿಮರ್ಶಕರು ಏನಂದ್ರು.?

  ಮುಂದಿನ ದಿನಗಳಲ್ಲಿ ಯಾವ ರೀತಿ ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದೀರಾ?

  ಮುಂದಿನ ದಿನಗಳಲ್ಲಿ ಯಾವ ರೀತಿ ಸಿನಿಮಾ ಮಾಡ್ಬೇಕು ಅಂದುಕೊಂಡಿದ್ದೀರಾ?

  ''ನನಗೆ ಮಾಸ್ ಸಿನಿಮಾಗಳು ಮಾಡ್ಬೇಕು ಅನ್ನೋದು ಇಷ್ಟ. ಮಾಸ್ ಕ್ಯಾರೆಕ್ಟರ್ ಮಾಡ್ಬೇಕು ಅನ್ನೋ ಆಸೆ. ಎಲ್ಲ ರೀತಿಯ ಪಾತ್ರಗಳನ್ನ ಕೂಡ ಮಾಡ್ತೀನಿ. ಒಬ್ಬ ಕಲಾವಿದ ಎಲ್ಲ ರೀತಿಯ ಪಾತ್ರವನ್ನ ಮಾಡ್ಬೇಕು. ಆಗಲೆ ಅವರು ಬೆಳೆಯಲು ಸಾಧ್ಯ''

  ಉಪೇಂದ್ರ ಕುಟುಂಬ ಎನ್ನುವುದು ನಿಮಗೆ ಪ್ಲಸ್ ಅಥವಾ ಮೈನಸ್.?

  ಉಪೇಂದ್ರ ಕುಟುಂಬ ಎನ್ನುವುದು ನಿಮಗೆ ಪ್ಲಸ್ ಅಥವಾ ಮೈನಸ್.?

  ''ಎಲ್ಲವೂ ಪ್ಲಸ್ ಪಾಯಿಂಟ್. ಯಾಕಂದ್ರೆ, ಅವರ ಆರ್ಶೀವಾದ ನಮ್ಮ ಮೇಲಿದೆ. ಉಪೇಂದ್ರ ಅವರ ಕುಟುಂಬದಿಂದ ಒಬ್ಬ ನಟ ಅಂದ್ಮೇಲೆ ಒಂದು ನಿರೀಕ್ಷೆ ಇರುತ್ತೆ, ಅದನ್ನ ನಾವು ಪ್ರೂವ್ ಮಾಡಲೇಬೇಕು. ಅದರಲ್ಲೀ ಬೇಜಾರು ಮಾಡಬಾರದು''

  ವಿಮರ್ಶೆ : ಫಸ್ಟ್ ಹಾಫ್ ಸಪ್ಪೆ, 2nd ಹಾಫ್ ಪರ್ವಾಗಿಲ್ಲ ವಿಮರ್ಶೆ : ಫಸ್ಟ್ ಹಾಫ್ ಸಪ್ಪೆ, 2nd ಹಾಫ್ ಪರ್ವಾಗಿಲ್ಲ

  ನೀವು ಬಾಲನಟನಾಗಿ ಅಭಿನಯಿಸಿದ್ದೀರಂತೆ ಹೌದಾ?

  ನೀವು ಬಾಲನಟನಾಗಿ ಅಭಿನಯಿಸಿದ್ದೀರಂತೆ ಹೌದಾ?

  ''ಉಪೇಂದ್ರ ಅವರ 'ಎ' ಸಿನಿಮಾದಲ್ಲಿ ನಾನು ನನಗೆ ಗೊತ್ತಿಲ್ಲದ ಹಾಗೆ ಅಭಿನಯಿಸಿದ್ದೇನೆ. ಚಿತ್ರದ ಆರಂಭದಲ್ಲಿ ಒಂದು ಮಗು ಅಳುತ್ತೆ. ಆ ಮಗು ನಾನೇ. 7ನೇ ತರಗತಿ ಓದುವಾಗ 'ಬಳ್ಳಾರಿ ನಾಗ' ಅಂತ ವಿಷ್ಣುವರ್ಧನ್ ಸರ್ ಅವರ ಸಿನಿಮಾದಲ್ಲಿ ಅವರ ಜೂನಿಯರ್ ಪಾತ್ರ ಮಾಡಿದ್ದೆ. ಅವರ ಜೊತೆ ಅಭಿನಯಿಸೋಕೆ ಒಂದು ಅವಕಾಶ ಸಿಕ್ತು ಅನ್ನೋದೆ ಖುಷಿ''

  ಮುಂದಿನ ಪ್ರಾಜೆಕ್ಟ್ ಗಳು ಯಾವುದು.?

  ಮುಂದಿನ ಪ್ರಾಜೆಕ್ಟ್ ಗಳು ಯಾವುದು.?

  ''ಈ ಸಿನಿಮಾ ಮುಗಿಲಿ ಅಂತ ಸುಮ್ಮನಿದ್ದೆ. ತುಂಬಾ ಜನ ನಿರ್ದೇಶಕರು ಬಂದು ಕೇಳ್ತಿದ್ದಾರೆ. ತುಂಬಾ ವಿಭಿನ್ನವಾದ ಕಥೆಗಳನ್ನ ತರ್ತಿದ್ದಾರೆ. ಈಗ ಕತೆಗಳನ್ನ ಕೇಳುತ್ತಿದ್ದೇನೆ. ಒಂದೊಳ್ಳೆ ಪ್ರಾಜೆಕ್ಟ್ ಮಾಡುವ ಆಸೆಯಿದೆ. ಈಗ ಕೆಲಸ ಆರಂಭವಾಗಬೇಕಿದೆ. ಸದ್ಯದಲ್ಲೇ ಅನೌನ್ಸ್ ಮಾಡ್ತೇವೆ''

  ನಿಮ್ಮ ಡ್ಯಾನ್ಸ್ ಜರ್ನಿ ಬಗ್ಗೆ ಹೇಳಿ.?

  ನಿಮ್ಮ ಡ್ಯಾನ್ಸ್ ಜರ್ನಿ ಬಗ್ಗೆ ಹೇಳಿ.?

  ''ಕಾಲೇಜ್ ದಿನಗಳಿದಂಲೂ ಡ್ಯಾನ್ಸ್ ಅಂದ್ರೆ ನನಗೆ ತುಂಬಾ ಇಷ್ಟ. ಕಾಲೇಜ್ ನಲ್ಲಿ ನಮ್ಮದೊಂದು ಟೀಮ್ ಇತ್ತು. ಆ ಟೀಮ್ ಮೂಲಕ ಎಲ್ಲ ಕಾಲೇಜ್ ಗಳಲ್ಲೂ ನಡೆಯುತ್ತಿದ್ದ ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದೀವಿ. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದೇನೆ''.

  ನಿಮ್ಮ ಸಿನಿಮಾ ನೋಡಿದ್ಮೇಲೆ ಸಿಕ್ಕಿರುವ ದೊಡ್ಡ ಮೆಚ್ಚುಗೆ ಯಾವುದು.?

  ನಿಮ್ಮ ಸಿನಿಮಾ ನೋಡಿದ್ಮೇಲೆ ಸಿಕ್ಕಿರುವ ದೊಡ್ಡ ಮೆಚ್ಚುಗೆ ಯಾವುದು.?

  ''ನಮ್ಮ ಚಿಕ್ಕಪ್ಪ ಅವರಿಂದ. ಸಿನಿಮಾ ಎಲ್ಲ ಮುಗಿದಮೇಲೆ ಅವರು ಸಿನಿಮಾ ನೋಡಿದ್ರು. 'ನೀನೊಬ್ಬ ದೊಡ್ಡ ಹೀರೋ ಆಗ್ತೀಯಾ' ಎಂದು ಶುಭಹಾರೈಸಿದ್ರು. ನಾನು ಕೂಡ ಅದಕ್ಕೆ ನ್ಯಾಯ ಒದಗಿಸಿದ್ದೇನೆ ಅನಿಸಿದೆ. ಯಾಕಂದ್ರೆ, ಎಲ್ಲರೂ ನನ್ನ ಪಾತ್ರವನ್ನ ಮೆಚ್ಚಿಕೊಂಡ್ರು''

  ನಿಮ್ಮ ಕ್ರಶ್ ಯಾರು.? ನಿಮಗೆ ಯಾರ್ ಹೀರೋಯಿನ್ ಆಗ್ಬೇಕು.?

  ನಿಮ್ಮ ಕ್ರಶ್ ಯಾರು.? ನಿಮಗೆ ಯಾರ್ ಹೀರೋಯಿನ್ ಆಗ್ಬೇಕು.?

  ''ತುಂಬಾ ಜನ ಇಷ್ಟ ಆಗ್ತಾರೆ. ಸದ್ಯ, ಆಶಿಕಾ ರಂಗನಾಥ್, ರಶ್ಮಿಕಾ ಮಂದಣ್ಣ ಅವರನ್ನ ತೆರೆಮೇಲೆ ನೋಡೋಕೆ ಒಂಥರಾ ಖುಷಿ. ಇನ್ನು ಹೀರೋಯಿನ್ ಅಂತ ಹೇಳೋದಾದರೇ, ತುಂಬಾ ಜನ ಇದ್ದಾರೆ. ಸ್ಕ್ರಿಪ್ಟ್ ನೋಡಿ ಆಯ್ಕೆ ಮಾಡ್ಕೋಬೇಕು''

  ಸಂದರ್ಶನದ ವಿಡಿಯೋ ನೋಡಿ

  English summary
  Niranjan Sudheendra relative of Sandalwood real star upendra has begun his sandalwood journey. He has shared screen with his aunt Priyanka upendra in 2nd half movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X