»   » 'ಫಿಲ್ಮಿಬೀಟ್ ಕನ್ನಡ' ಜೊತೆ 'ಉಸ್ತಾದ್' ದುನಿಯಾ ವಿಜಯ್ ಮನ್ ಕಿ ಬಾತ್.!

'ಫಿಲ್ಮಿಬೀಟ್ ಕನ್ನಡ' ಜೊತೆ 'ಉಸ್ತಾದ್' ದುನಿಯಾ ವಿಜಯ್ ಮನ್ ಕಿ ಬಾತ್.!

By: ಹರ್ಷಿತಾ ರಾಕೇಶ್
Subscribe to Filmibeat Kannada

ದುನಿಯಾ ವಿಜಯ್ ಖಾಕಿ ತೊಟ್ಟು ಖದರ್ ತೋರಿಸಲು ಸಜ್ಜಾಗಿದ್ದಾರೆ. ಅದು ಮತ್ತೊಮ್ಮೆ ನಿರ್ದೇಶಕ ಎಂ.ಎಸ್.ರಮೇಶ್ ಜೊತೆ.!

ಹೌದು, 'ತಾಕತ್' ಹಾಗೂ 'ಶಂಕರ್ ಐ.ಪಿ.ಎಸ್' ಚಿತ್ರಗಳ ಬಳಿಕ ನಿರ್ದೇಶಕ ಎಂ.ಎಸ್.ರಮೇಶ್ ಹಾಗೂ ದುನಿಯಾ ವಿಜಯ್ 'ಉಸ್ತಾದ್' ಚಿತ್ರದ ಮೂಲಕ ಒಂದಾಗಿದ್ದಾರೆ.


ಇಂದು ಬೆಳಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ 'ಉಸ್ತಾದ್' ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿ ಸ್ಟಾರ್ ವಿ.ರವಿಚಂದ್ರನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಾ.ರಾ.ಗೋವಿಂದು ಸೇರಿದಂತೆ ಸ್ಯಾಂಡಲ್ ವುಡ್ ನ ಅತಿರಥ ಮಹಾರಥರು 'ಉಸ್ತಾದ್' ಮುಹೂರ್ತದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.


ಅದೇ ಗ್ಯಾಪ್ ನಲ್ಲಿ ನಟ ದುನಿಯಾ ವಿಜಯ್ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತಿಗೆ ಸಿಕ್ಕಿದ್ರು. ಅವರೊಂದಿಗೆ ನಡೆದ ಸಣ್ಣ ಚಿಟ್-ಚಾಟ್ ಇಲ್ಲಿದೆ. ಓದಿರಿ....


'Ustaad' Muhoortha: Interview with Hero Duniya Vijay

* ಎಂ.ಎಸ್.ರಮೇಶ್ ನಿರ್ದೇಶನದಲ್ಲಿ 'ಶಂಕರ್ ಐ.ಪಿ.ಎಸ್' ಮತ್ತು 'ತಾಕತ್' ಚಿತ್ರಗಳಲ್ಲಿ ಅಭಿನಯ ಮಾಡಿದ್ದೀರಿ. ಈಗ ಹ್ಯಾಟ್ರಿಕ್ ಬಾರಿಸಲು ಇಬ್ಬರು ಮತ್ತೆ ಒಂದಾಗಿದ್ದೀರಿ. ಇವತ್ತು 'ಉಸ್ತಾದ್' ಚಿತ್ರದ ಮುಹೂರ್ತ ನಡೆದಿದೆ. ನಿಮ್ಮ ಫೀಲಿಂಗ್...


- ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರ ಮಾಡ್ತಾಯಿದ್ದೀನಿ ಅಂತ ಖುಷಿಯಲ್ಲಿದ್ದೀನಿ. ಪೊಲೀಸ್ ಅಂದ್ರೆ ಕೆಟ್ಟವರು ಅಂತ ಪಬ್ಲಿಕ್ ಗೆ ಒಂದು ಕೆಟ್ಟ ಅಭಿಪ್ರಾಯ ಇದೆ. ಅದು ಹಾಗಲ್ಲ, ಪೊಲೀಸ್ ನವರಲ್ಲೂ ತುಂಬಾ ಪ್ರಾಮಾಣಿಕರು ಇರ್ತಾರೆ, ಕಷ್ಟದಿಂದ ಬಂದು ಡಿಪಾರ್ಟ್ಮೆಂಟ್ ಸೇರ್ತಾರೆ, ರೈತರ ಮಕ್ಕಳು ದಕ್ಷ ಪೊಲೀಸ್ ಆಫೀಸರ್ ಆಗಿರುವುದನ್ನ ನಾವು ನೋಡಿದ್ದೀವಿ. ಎಲ್ಲಾ ಕಡೆ ಕಪ್ಪು-ಬಿಳುಪು ಹೇಗಿರುತ್ತೋ, ಹಾಗೆ ಪೊಲೀಸ್ ನವರ ಬಗ್ಗೆ ಪಾಸಿಟೀವ್ ವಿಷಯಗಳನ್ನ 'ಉಸ್ತಾದ್' ಮೂಲಕ ಹೇಳಲು ಹೊರಟಿದ್ದೀವಿ.


'Ustaad' Muhoortha: Interview with Hero Duniya Vijay

* ಹಾಗಾದ್ರೆ 'ಉಸ್ತಾದ್' ಚಿತ್ರ ನೈಜ ಘಟನೆ ಆಧಾರಿತ ಸಿನಿಮಾ ಅನ್ಬುಹುದಾ.?


- 'ಉಸ್ತಾದ್' ರಿಯಲಿಸ್ಟಿಕ್ ಸಿನಿಮಾ ಅನ್ಬಹುದು. ತುಂಬಾ ಜನ ದಕ್ಷ ಪೊಲೀಸ್ ಆಫೀಸರ್ಸ್ ಇವತ್ತು ನಮ್ಮಲ್ಲಿ ಇದ್ದಾರೆ. 'ಇವರು ದೇವರಂಥವರು' ಅಂತ ಅನಿಸಿಕೊಳ್ಳುವ ಅಧಿಕಾರಿಗಳು ಇದ್ದಾರೆ. ಅಂಥವರಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡ್ತಿದ್ದೀವಿ. ['ಮಾಸ್ತಿಗುಡಿ' ಮುಗಿಯೋ ಮುನ್ನ 'ಉಸ್ತಾದ್' ಆದ ದುನಿಯಾ ವಿಜಿ]


* ದುನಿಯಾ ವಿಜಯ್ ಅವರು ಯಾವುದರಲ್ಲಿ 'ಉಸ್ತಾದ್'..?


- ಅದನ್ನ ಎಂ.ಎಸ್.ರಮೇಶ್ ಅವರು ಹೇಳ್ಬೇಕು.


* ಅಂದ್ರೆ ಕಥೆ ನೀವಿನ್ನೂ ಕೇಳಿಲ್ಲ..?


- ಕಥೆ ಕೇಳಿದ್ದೀನಿ. ಆದ್ರೆ, 'ಉಸ್ತಾದ್' ಎಂಬ ಟೈಟಲ್ ನನ್ನ ಹತ್ತಿರ ಇತ್ತು. ಅದನ್ನ ಸರ್ ಕೇಳಿದ್ರು ಕೊಟ್ಟಿದ್ದೀನಿ. ನಾನು ಯಾವುದರಲ್ಲಿ 'ಉಸ್ತಾದ್' ಅಂತ ಸಿನಿಮಾ ನೋಡಿದ ಜನ ಹೇಳ್ತಾರೆ.


* ಅನುಪಮಾ ಶೆಣೈ ರವರ ಕಥೆ ಕೂಡ ಇದ್ಯಂತೆ ನಿಮ್ಮ ಸಿನಿಮಾದಲ್ಲಿ.?


- ಹೌದು, ಒಂದು ಎಳೆ ಇದೆ. ಎರಡು ಗಂಟೆ ಇಪ್ಪತ್ತು ನಿಮಿಷದಲ್ಲಿ ಎಲ್ಲವನ್ನೂ ಹೇಳೋಕೆ ಆಗಲ್ಲ. ಜನರಿಗೆ ಅರಿವು ಮೂಡಿಸುವ ಸಲುವಾಗಿ ನೈಜ ಘಟನೆಗಳನ್ನ ಬೇಸ್ ಮಾಡಿದ್ದೀವಿ.


* ಶೂಟಿಂಗ್ ಪ್ಲಾನ್ ಯಾವಾಗ್ಲಿಂದ?


- 'ಮಾಸ್ತಿ ಗುಡಿ' ಚಿತ್ರ ಮೊದಲು ಮುಗಿಸಬೇಕು. ಅದು ಮುಗಿದ ನಂತರ 'ಉಸ್ತಾದ್'.


* 'ಮಾಸ್ತಿ ಗುಡಿ' ಚಿತ್ರದಲ್ಲಿ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದೀರಲ್ಲಾ...


- ಹೌದು, ಸಿನಿಮಾ ಚೆನ್ನಾಗಿ ಮೂಡಿ ಬರುತ್ತಿದೆ. ನಾನು ಕೂಡ ಚಿತ್ರದ ಫಸ್ಟ್ ಪ್ರಿಂಟ್ ನೋಡಲು ಕಾಯುತ್ತಿದ್ದೇನೆ.


* 'ಉಸ್ತಾದ್' ಚಿತ್ರದಲ್ಲಿ ನಿಮ್ಮ ಲುಕ್ ಬಗ್ಗೆ ಏನು ಪ್ಲಾನ್ ಮಾಡಿದ್ದೀರಾ.?


- ತುಂಬಾ ಟಫ್ ಆಗಿ ನಿಂತುಕೊಳ್ಳಬೇಕು ಅಂತಿದ್ದೀನಿ. ಪೊಲೀಸ್ ಆಫೀಸರ್ ಅಂದ್ರೆ ಹೀಗಿರ್ಬೇಕು ಎನ್ನುವ ಹಾಗೆ ರೆಡಿ ಆಗುತ್ತೇನೆ.


* ಪೊಲೀಸ್ ಆಧಿಕಾರಿಗಳ ಪೈಕಿ ನಿಮಗೆ ಸ್ಫೂರ್ತಿ ಯಾರು?


- ತುಂಬಾ ಇದ್ದಾರೆ. ಬಿ.ಕೆ.ಶಿವರಾಂ, ಟೈಗರ್ ಅಶೋಕ್ ಕುಮಾರ್, ಎಸ್.ಕೆ.ಉಮೇಶ್ ರವರು ಇದ್ದಾರೆ.


ಸಂದರ್ಶನ : ಹರ್ಷಿತಾ ರಾಕೇಶ್

English summary
Kannada Actor, 'Black Cobra' Duniya Vijay starrer M.S.Ramesh directorial 'Ustaad' muhoortha was held today at Kanteerava Studios, Bengaluru. Here is an interview with Duniya Vijay. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada