For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ರೀಮೇಕ್ ಚಿತ್ರ ಅಪ್ಪಿಕೊಂಡ ಉಪೇಂದ್ರ

  By Rajendra
  |

  'ಸೂಪರ್' ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರು ಅವರು ರೀಮೇಕ್ ಚಿತ್ರವನ್ನು ಅಪ್ಪಿಕೊಂಡಿರುವುದು ವಿಶೇಷ. ಮಲಯಾಳಂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ 'ಬೆಸ್ಟ್ ಆಕ್ಟರ್' ಚಿತ್ರವನ್ನು ಕನ್ನಡಕ್ಕೆ ತರುವ ಸಿದ್ಧತೆಯಲ್ಲಿದ್ದಾರೆ ಉಪೇಂದ್ರ.

  ಮಾರ್ಟಿನ್ ಪ್ರಕ್ಕಟ್ ನಿರ್ದೇಶಿಸಿ ದ್ದ ಚಿತ್ರದಲ್ಲಿ ಮಮ್ಮುಟ್ಟಿ ನಾಯಕ ನಟರಾಗಿ ಅಭಿನಯಿಸಿದ್ದರು. ಕನ್ನಡದ ಚಿತ್ರಕ್ಕೂ ಮಾರ್ಟಿನ್ ಅವರೇ ಆಕ್ಷನ್, ಕಟ್ ಹೇಳಲಿದ್ದು, ಉಪೇಂದ್ರ ಅವರೊಂದಿಗೆ ಈಗಾಗಲೆ ಒಂದು ಸುತ್ತಿನ ಮಾತುಕತೆಯೂ ನಡೆಸಿದ್ದಾರಂತೆ. ಕತೆ ಕೇಳಿದ ಉಪೇಂದ್ರ ಕೂಡ ಥ್ರಿಲ್ ಆಗಿದ್ದಾರೆ ಎಂಬುದು ಸದ್ಯದ ಮಾಹಿತಿ.

  ಹೆಚ್ಚಿನ ಬದಲಾವಣೆಗಳಿಲ್ಲದೆ ಮೂಲ ಕತೆಯನ್ನು ಯಥಾವತ್ತಾಗಿ ಕನ್ನಡಕ್ಕೆ ತರುವ ಯೋಚನೆಯಲ್ಲಿದ್ದಾರೆ ನಿರ್ದೇಶಕರು. ಈ ಚಿತ್ರ ಉಪೇಂದ್ರ ವೃತ್ತಿ ಜೀವನದಲ್ಲಿ ಮತ್ತೊಂದು ತಿರುವು ನೀಡಲಿದೆ ಎಂಬ ಮಾತುಗಳಿಗೂ ಬರವಿಲ್ಲ. ಉಪೇಂದ್ರ ಕೂಡ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು ಮುಂಬರುವ ಆರು ತಿಂಗಳಲ್ಲಿ ಬೆಸ್ಟ್ ಆಕ್ಟರ್ ಸೆಟ್ಟೇರಲಿದೆ ಎಂಬುದು ಗಾಂಧಿನಗರದ ತಾಜಾ ಸಮಾಚಾರ.

  English summary
  Real star Upendra returned to direction after 10 years through the movie Super. Now, Kannada superstar is coming to remakes. Uppi is gearing to act in Martin Prakkat's directorial debut venture Best Actor, which stars Malayalam actor Mammootty in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X