ಬೆಂಗಳೂರಿನಲ್ಲಿ ಮಸಾಲಾ ಚಿತ್ರಗಳಿಗೆ ಭರ್ಜರಿ ಕಲೆಕ್ಷನ್!
ಈಗ ಲಾಂಗು, ಮಚ್ಚು, ಕೊಚ್ಚು ಚಿತ್ರಗಳಿಗಿಂತ ಮಸಾಲಾ ಚಿತ್ರಗಳು ಬೆಂಗಳೂರಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ. 'ಎ' ಪ್ರಮಾಣ ಪತ್ರ ಈ ಚಿತ್ರಗಳ ಪೋಸ್ಟರ್‌ಗಳು ಮಾತ್ರ ಆಕರ್ಷವಾಗಿರುತ್ತವೆ. ಆದರೆ ಮೇಲೆ ಥಳುಕು ಒಳಗೆ ಹುಳುಕು ಎಂಬುದು ಚಿತ್ರಗಳನ್ನು ನೋಡಿದ ಪ್ರೇಕ್ಷಕರ 'ಅನುಭವ'. ಆಟೋ ಚಾಲಕರು, ಟ್ಯಾಕ್ಸಿ ಡ್ರೈವರ್‌ಗಳು ಹಾಗೂ ಭಗ್ನ ಹೃದಯಗಳೇ ಈ ಚಿತ್ರಗಳ ಗಿರಾಕಿಗಳು.
ಸದ್ಯಕ್ಕೆ ಬೆಂಗಳೂರಿನ ಸವಿತಾ, ಶಾರದಾ ಹಾಗೂ ವಿನಾಯಕ ಚಿತ್ರಮಂದಿರಗಳಲ್ಲಿ ತಮಿಳು ಮತ್ತು ಮಲಯಾಳಂ ದೇವರ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡಿಕೊಡುತ್ತಿವೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ತೀರಾ ಕಷ್ಟದ ದಿನಗಳಲ್ಲೂ ಈ ಚಿತ್ರಮಂದಿರಗಳಲ್ಲಿ ಮಾತ್ರ ತುಂಬಿದ ಗೃಹಗಳಲ್ಲಿ ಪ್ರದರ್ಶನ.
ಈ ಚಿತ್ರಗಳಿಕೆ ಬರುವ ಪ್ರೇಕ್ಷಕರಿಗೆ ಭಾಷೆ ಅರ್ಥವಾಗದಿದ್ದರೂ ಪರ್ವಾಗಿಲ್ಲ ಕರ್ಣಾನಂದಕ್ಕಿಂತ ನಯನ ಮನೋಹರ ದೃಶ್ಯಗಳಿದ್ದರೆ ಸಾಕು ಎಂದು ಭಾವಿಸಿರುತ್ತಾರೆ. ಚಿತ್ರಮಂದಿರಕ್ಕೆ ಬರುವ ಶೇಕಡಾ 80 ಪ್ರೇಕ್ಷಕರು ಕದ್ದುಮುಚ್ಚಿ ಬಂದವರೇ ಆಗಿರುತ್ತಾರೆ ಎಂಬುದು ವಿಶೇಷ. ರಹಸ್ಯಮ್ (ತೆಲುಗು ಕಲರ್), ಸ್ವಪ್ನ ರಾತ್ರಿಗಳ್ (ತಮಿಳು) ಚಿತ್ರಗಳ ಕಲೆಕ್ಷನ್ ಜೋರಾಗಿದೆ ಎಂಬುದು ಸುದ್ದಿ.


Click it and Unblock the Notifications











