For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಟ್ರಾಫಿಕ್‌ಗೆ ಕೈಹಾಕಿದ ಕ್ರೇಜಿಸ್ಟಾರ್

  By Rajendra
  |

  ಕನ್ನಡದಲ್ಲಿ ಸಖತ್ ಬಿಜಿಯಾಗಿರುವ ಕ್ರೆಜಿಸ್ಟಾರ್ ರವಿಚಂದ್ರನ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಮಲಯಾಳಂ ಚಿತ್ರರಂಗದ ಮೇಲೆ ಕಣ್ಣಾಕಿದ್ದಾರೆ. ಮಲಯಾಳಂನಲ್ಲಿ ಸೂಪರ್ ಡೂಪರ್ ಹಿಟ್ ಆದ 'ಟ್ರಾಫಿಕ್' ಚಿತ್ರವನ್ನು ಕನ್ನಡದಲ್ಲಿ ತರಲು ಹೊರಟಿದ್ದಾರೆ.

  ಬಹುಶಃ ಈ ಚಿತ್ರ ಅವರ ಸ್ವಂತ ಬ್ಯಾನರ್‌ನಲ್ಲಿ ನಿರ್ಮಾಣವಾಗುವ ಸಾಧ್ಯತೆಗಳಿವೆ. ಚಿತ್ರಕತೆ ಸೊಗಸಾಗಿರುವುದೇ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿರಲು ಕಾರಣ ಎನ್ನುತ್ತವೆ ಮೂಲಗಳು. ಏತನ್ಮಧ್ಯೆ ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜಿಲೋಕ' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪರಮಶಿವ, ಕೀಚಕ, ಚಿತ್ರಗಳು ಕೂಡ ನಿರ್ಮಾಣ ಹಂತದಲ್ಲಿವೆ.

  ರವಿಚಂದ್ರನ್ ಅವರ ಮಹತ್ವಾಕಾಂಕ್ಷಿ 'ಮಂಜಿನ ಹನಿ' ಎಲ್ಲಿಗೆ ಬಂತೋ ಬಿಡುಗಡೆ ಯಾವಾಗ ಎಂಬ ಬಗ್ಗೆ ಪಕ್ಕಾ ಮಾಹಿತಿ ಇಲ್ಲ. ಮೋಹನ್ ನಿರ್ದೇಶನದ 'ನರಸಿಂಹ' ಹಾಗೂ ರವಿ ಶ್ರೀವತ್ಸ ನಿರ್ದೇಶನದ 'ದಶಮುಖ' ಚಿತ್ರಗಳು ಒಂದರ ಹಿಂದೆ ಒಂದು ಬಿಡುಗಡೆಯಾಗಲಿವೆ. ಫೆಬ್ರವರಿ 17ಕ್ಕೆ 'ನರಸಿಂಹ'ನನ್ನು ತೆರೆಗೆ ತರಲು ಸಿದ್ಧತೆಗಳು ನಡೆಯುತ್ತಿವೆ. (ಏಜೆನ್ಸೀಸ್)

  English summary
  Crazy Star Ravichandran to remade Malayalam Super Hit film Traffic. Sources says that Ravichandran has showed lot of interest in remaking this film and may even produce the film under his own banner or may agree to for any other producer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X