For Quick Alerts
  ALLOW NOTIFICATIONS  
  For Daily Alerts

  ಮಲಯಾಳಂಗೆ ಮಂಗಳೂರು ಮೊಲ್ಲೆ ಸ್ನೇಹಾ ಉಲ್ಲಾಳ್

  By Rajendra
  |

  ಇದುವರೆಗೂ ಒಂದೇ ಒಂದು ಕನ್ನಡ ಚಿತ್ರದಲ್ಲೂ ಅಭಿನಯಿಸದ ಮಂಗಳೂರು ಮೊಲ್ಲೆ ಸ್ನೇಹಾ ಉಲ್ಲಾಳ್ ಮಲಯಾಳಂ ಚಿತ್ರರಂಗಕ್ಕೆ ಪುನಃ ರಂಗಪ್ರವೇಶ ಮಾಡಿದ್ದಾರೆ. ತೆಲುಗು, ಹಿಂದಿ ಚಿತ್ರಗಳಲ್ಲಿ ಒಂದು ಸುತ್ತು ಹಾಕಿಕೊಂಡು ಬಂದಿರುವ ಸ್ನೇಹಾ ಕೆಲ ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸಿದ್ದರು.

  ಬಳಿಕ ಆಕೆ ತೆಲುಗು, ಹಿಂದಿ ಚಿತ್ರಗಳಿಂದಲೂ ನಾಪತ್ತೆಯಾಗಿದ್ದರು. ಈಗ ಮಲಯಾಳಂನಲ್ಲಿ ದಿಢೀರ್ ಎಂದು ಪ್ರತ್ಯಕ್ಷವಾಗಿದ್ದಾರೆ. ಕೆಲ ತಿಂಗಳ ಹಿಂದೆ ತಮ್ಮ ಶೃಂಗಾರ ವಿಡಿಯೋ ಒಂದನ್ನು ಅಂತರ್ಜಾಲದಲ್ಲಿ ಹಾಕಿ ಪಡ್ಡೆಗಳ ನಿದ್ದೆಗೆ ಸಂಚಕಾರ ತಂದಿದ್ದರು ಸ್ನೇಹಾ.

  ಈಗ ಆಕೆ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಾಟ್ ಬೆಡಗಿಯರಿಲ್ಲದೆ ಮಲಯಾಳಂ ಚಿತ್ರರಂಗ ಡಲ್ ಹೊಡೆಯುತ್ತಿದೆ. ಇದ್ದಬದ್ದ ತಾರೆಗಳು ಅತ್ತೆ, ಅಮ್ಮ ಪಾತ್ರಗಳಿಗೆ ಬಡ್ತಿ ಪಡೆದಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಸ್ನೇಹಾ ಮಲಯಾಳಂಗೆ ಜಿಗಿದಿರುವುದು ಋತುಮಾನದ ಬದಲಾವಣೆಯಾ? (ಏಜೆನ್ಸೀಸ್)

  English summary
  Mangalore based actress Sneha Ullal aims to re-enter Malayalam films. Some how she wasn't able to establish herself in Bollywood. Now, it is said that the actress might make her Mollywood debut soon

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X