ಶಂಕರ್ ಚಿತ್ರದಲ್ಲಿ ಮೋಹನ್ ಲಾಲ್, ಪ್ರಭಾಸ್?
ನಿರ್ದೇಶಕ ಶಂಕರ್, ಕಮಲ್ ಹಾಸನ್ ನಾಯಕತ್ವದ ಸಿನಿಮಾ ಮಾಡಲಿದ್ದಾರೆಂಬುದು ಈ ಹಿಂದೆ ಸುದ್ದಿಯಾಗಿದೆ. ಇದೀಗ ಬಿಗ್ ಬಜೆಟ್ ನ ಆ ಚಿತ್ರಕ್ಕೆ ಪ್ರಭಾಸ್ ಹಾಗೂ ಮೋಹನ್ ಲಾಲ್ ಕೂಡ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಜೊತೆಗೆ ಬಂದ ಇನ್ನೊಂದು ಸುದ್ದಿಯೆಂದರೆ ಕಮಲ್ ಜೊತೆ ಅವರಿಬ್ಬರೂ ತೆರೆ ಹಂಚಿಕೊಳ್ಳುತ್ತಿಲ್ಲ.
ಬದಲಿಗೆ ಆ ಚಿತ್ರ ತಮಿಳು, ಮಲೆಯಾಳಂ ಹಾಗೂ ತೆಲುಗು, ಹೀಗೆ ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಆಯಾ ಬಾಷೆಗಳ ಚಿತ್ರಗಳಲ್ಲಿ ಕ್ರಮವಾಗಿ ಕಮಲ್ ಹಾಸನ್, ಮೋಹನ್ ಲಾಲ್ ಹಾಗೂ ಪ್ರಭಾಸ್ ನಟಿಸಲಿದ್ದಾರೆ. ಆದರೆ ಇವೆಲ್ಲವೂ ನಿರ್ದೇಶಕ ಶಂಕರ್ ಕಡೆಯಿಂದ ನಿರ್ಧಾರವಾಗಬೇಕಿದೆ.
ಈ ಚಿತ್ರಕ್ಕೆ ತೆಗೆದುಕೊಂಡಿರುವ ಕಥೆ ಕೆಲವು ವರ್ಷಗಳ ಹಿಂದೆ ಕಮಲ್ ಹಾಸನ್ ಬರೆದದ್ದು. ಕಥೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು. ಆಸ್ಕರ್ ರವಿಚಂದ್ರನ್ ಈ ಚಿತ್ರವನ್ನು ನಿರ್ಮಿಸಲಿದ್ದು ಹಾಲಿವುಡ್ ಸ್ಟಾರ್ ಜಾಕೀ ಚಾನ್ ಪ್ರಮುಖ ಪಾತ್ರವೊಂದನ್ನು ಪೋಷಿಸಲಿದ್ದಾರೆ ಎನ್ನಲಾಗಿದೆ. ಶಂಕರ್ ಬಾಯಿಂದ ಬಂದ ಮೇಲೆ ಎಲ್ಲವೂ ಪಕ್ಕಾ ಎನ್ನಬಹುದಾಗಿದೆ.
More from Filmibeat
English summary
We have reported that Shankar is expected to helm the mega-budget project starring Kamal Hassan. The latest to hear about the film is that mana Prabhas and Malayalam superstar Mohanlal are also part of the movie.


Click it and Unblock the Notifications











