For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಟಿಯ ಅಪಹರಣ ಪ್ರಕರಣ: ನಟನಿಗೆ ಆಪತ್ತು

  |

  ಮೂರು ವರ್ಷಗಳ ಹಿಂದೆ ನಡೆದಿದ್ದ ಕೇರಳದ ಖ್ಯಾತ ನಟಿಯೊಬ್ಬರ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಯು ಫೆಬ್ರವರಿ 16 ರಿಂದ ಮತ್ತೆ ಪ್ರಾರಂಭವಾಗಲಿದ್ದು, ಆರೋಪಿ ನಟನಿಗೆ ಆತಂಕ ಎದುರಾಗಿದೆ.

  ಕನ್ನಡ ಸೇರಿದಂತೆ ಇನ್ನೂ ಕೆಲವು ಭಾಷೆಗಳಲ್ಲಿ ನಟಿಸಿರುವ ಕೇರಳದ ಖ್ಯಾತ ನಟಿಯೊಬ್ಬರನ್ನು 2017 ರಲ್ಲಿ ಗುಂಪೊಂದು ಅಪಹರಣ ಮಾಡಿ, ಚಲಿಸುತ್ತಿರುವ ಕಾರಿನಲ್ಲಿಯೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತ್ತು. ಆ ಸಮಯದಲ್ಲಿ ಈ ಪ್ರಕರಣ ಭಾರಿ ಸದ್ದು ಮಾಡಿತ್ತು.

  ಪ್ರಕರಣದ ವಿಚಾರಣೆಯು ಕೇರಳದ ವಿಶೇಷ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಕೋವಿಡ್ ಲಾಕ್‌ಡೌನ್ ಹಾಗೂ ಆರೋಪಿಗಳು, ಸಾಕ್ಷಿಗಳಿಗೆ ಕೋವಿಡ್ ಬಂದ ಕಾರಣ ಪ್ರಕರಣದ ವಿಚಾರಣೆ ನಿಂತಿತ್ತು. ಇದೀಗ ಮತ್ತೆ ವಿಚಾರಣೆ ಆರಂಭವಾಗಿದ್ದು, ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಕೇರಳದ ಪ್ರಖ್ಯಾತ ಸಿನಿಮಾ ನಟ ಸಹ ಇದ್ದಾರೆ.

  ಖ್ಯಾತ ನಟ ದಿಲೀಪ್ ಸಹ ಆರೋಪಿ

  ಖ್ಯಾತ ನಟ ದಿಲೀಪ್ ಸಹ ಆರೋಪಿ

  ಕೇರಳದ ಖ್ಯಾತ ನಟರಾದ ದಿಲೀಪ್ ಸಹ ನಟಿಯ ಅಪಹರಣ ಪ್ರಕರಣದಲ್ಲಿ ಆರೋಪಿ ಆಗಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿಲ್ಲ ಕಾರಣ ವಿಚಾರಣೆಯನ್ನು ಮುಂದೂಡಲಾಗಿತ್ತು. ಇದೀಗ ಕೋವಿಡ್‌ನಿಂದ ದಿಲೀಪ್ ಗುಣಮುಖರಾಗಿದ್ದು, ಅವರ ವಿಚಾರಣೆಯನ್ನು ಫೆಬ್ರವರಿ 16 ರಂದು ಮಾಡುವ ಸಂಭವ ಇದೆ.

  ಅಪ್ರೂವರ್ ಆಗಿ ಬದಲಾಗಲಿರುವ ಆರೋಪಿ

  ಅಪ್ರೂವರ್ ಆಗಿ ಬದಲಾಗಲಿರುವ ಆರೋಪಿ

  ಅದೇ ದಿನ ಪ್ರಕರಣದ ಆರೋಪಿ ವಿಷ್ಣು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯ ಮಾಡಲಿದೆ. ವಿಷ್ಣು ತಾನು ಅಪ್ರೂವರ್ ಆಗಿ ಬದಲಾಗುವುದಾಗಿ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಂಡಿದ್ದಾನೆ. ಪ್ರಕರಣದ ಪ್ರಮುಖ ಆರೋಪಿ ಜೈಲಿನಲ್ಲಿದ್ದ ಪುಲ್ಸೇರಿ ಸುನಿಗೆ ಮೊಬೈಲ್ ತೆಗೆದುಕೊಂಡು ಹೋಗಿ ಕೊಟ್ಟಿದ್ದ ಆರೋಪ ಎದುರಿಸುತ್ತಿದ್ದಾನೆ.

  ಬಂಧನಕ್ಕೊಳಗಾಗಿದ್ದ ನಟ ದಿಲೀಪ್ ಗೆ ಜಾಮೀನು ದೊರೆತಿತ್ತು

  ಬಂಧನಕ್ಕೊಳಗಾಗಿದ್ದ ನಟ ದಿಲೀಪ್ ಗೆ ಜಾಮೀನು ದೊರೆತಿತ್ತು

  ಬಂಧನಕ್ಕೊಳಗಾಗಿದ್ದ ನಟ ದಿಲೀಪ್‌ ಗೆ ಜಾಮೀನು ನೀಡಲಾಗಿದ್ದು, ಜಾಮೀನನ್ನು ರದ್ದು ಮಾಡುವಂತೆ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ಮನವಿಯ ವಿಚಾರಣೆ ನಡೆಯಲಿದೆ. ಜೈಲಿನ ಒಳಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವಂತೆ ವಿಷ್ಣುಗೆ ಸೂಚನೆ ಕೊಟ್ಟಿದ್ದದ್ದು ನಟ ದಿಲೀಪ್ ಎನ್ನಲಾಗುತ್ತಿದ್ದು, ಇದೇ ಕಾರಣ ಮುಂದಿಟ್ಟುಕೊಂಡು ಜಾಮೀನು ರದ್ದುಪಡಿಸುವಂತೆ ಮನವಿ ಮಾಡಲಾಗಿದೆ.

  ಪ್ರಶಾಂತ್ ನೀಲ್ ಹೇಳಿದ ಸುಳ್ಳನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟ ರವಿ ಬಸ್ರೂರ್
  ಕನ್ನಡದ ಸ್ಟಾರ್ ನಟರ ಜೊತೆ ನಟಿಸಿದ್ದಾರೆ ಆ ನಟಿ

  ಕನ್ನಡದ ಸ್ಟಾರ್ ನಟರ ಜೊತೆ ನಟಿಸಿದ್ದಾರೆ ಆ ನಟಿ

  ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ಗಣೇಶ್ ಇನ್ನೂ ಕೆಲವು ಪ್ರಮುಖ ನಾಯಕ ನಟರೊಂದಿಗೆ ನಟಿಸಿದ್ದ ಖ್ಯಾತ ನಟಿಯನ್ನು ಗುಂಪೊಂದು ಅಪಹರಿಸಿ, ಚಲಿಸುತ್ತಿರುವ ಕಾರಿನಲ್ಲಿಯೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಆ ಆಘಾತದಿಂದ ಹೊರಬಂದಿರುವ ನಟಿ, ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಸಿನಿಮಾ ನಿರ್ಮಾಪಕರೊಬ್ಬರನ್ನು ವಿವಾಹ ಆಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

  English summary
  Kerala actress abduction case inquiry will resume from February 16. Accused actor Dileep is in trouble.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X