For Quick Alerts
  ALLOW NOTIFICATIONS  
  For Daily Alerts

  ಉದ್ಯಮಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 'ಶೈಲೂ' ನಟಿ ಭಾಮಾ

  |

  ಮಲಯಾಳಂ ಮೂಲದ ನಟಿ ಭಾಮಾ ದಾಂಪತ್ಯ ಜೀವನ ಪ್ರವೇಶಿಸಲು ಸಜ್ಜಾಗಿದ್ದು, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಂಗಳವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಉದ್ಯಮಿ ಅರುಣ್ ಎಂಬುವರ ಜೊತೆ ನಟಿ ಎಂಗೇಜ್ ಆಗಿದ್ದಾರೆ.

  ಭಾಮಾ ಅವರ ಹತ್ತಿರ ಸಂಬಂಧಿಗೆ ಅರುಣ್ ಆತ್ಮೀಯ ವ್ಯಕ್ತಿಯಾಗಿದ್ದರು. ನಂತರ ಮನೆಯವರ ಜೊತೆ ಮಾತನಾಡಿ ಮದುವೆ ನಿಶ್ಚಿಯ ಮಾಡಲಾಗಿದೆ. ಕೇರಳ ಮೂಲದ ಅರುಣ್ ಕೆನಡಾದಲ್ಲಿ ವ್ಯಾಸಂಗ ಮಾಡಿದ್ದಾರೆ.

  ಇದೇ ತಿಂಗಳಲ್ಲಿ ಮದುವೆ ನಡೆಯಲಿದ್ದು, ಕೊಚ್ಚಿಯಲ್ಲಿ ಕೇರಳ ಸಂಪ್ರದಾಯದಂತೆ ವಿವಾಹ ಜರುಗಿಸಲು ಹಿರಿಯ ನಿಶ್ಚಿಯಿಸಿದ್ದಾರಂತೆ. ನಟಿಯ ಸ್ನೇಹಿತರು, ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಈ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರಂತೆ.

  ಕನ್ನಡದಿಂದ ದೂರವಾದರು ಮಲೆಯಾಳಂನ ಈ ನಟಿಯರುಕನ್ನಡದಿಂದ ದೂರವಾದರು ಮಲೆಯಾಳಂನ ಈ ನಟಿಯರು

  2007ರಲ್ಲಿ 'ನಿವೇದ್ಯಂ' ಚಿತ್ರದ ಮೂಲಕ ಮಲಯಾಳಂ ಇಂಡಸ್ಟ್ರಿ ಪ್ರವೇಶಿಸಿದ ನಟಿ 30ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಭಾಷೆಯ ಜೊತೆಗೆ ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

  ಮಲಯಾಳಂ ಭಾಷೆ ಬಿಟ್ಟರೆ ಭಾಮಾ ಅತಿ ಹೆಚ್ಚು ಸಿನಿಮಾ ಮಾಡಿರುವ ಕನ್ನಡದಲ್ಲಿ. 2010ರಲ್ಲಿ ಯಶ್ ಅಭಿನಯಿಸಿದ್ದ 'ಮೊದಲ ಸಲ' ಸಿನಿಮಾ ಮೂಲಕ ಕನ್ನಡಕ್ಕೆ ಬಂದ ನಂತರ ಶೈಲೂ, ಒಂದು ಕ್ಷಣದಲ್ಲಿ, ಆಟೋರಾಜ, ಬರ್ಫಿ, ಅಪ್ಪಯ್ಯ, ಅಂಬರ, ಅರ್ಜುನ, ರಾಗ ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Malayalam actress Bhama engaged with businessman Arun on Tuesday at Kochi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X