For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಖ್ಯಾತ ನಟಿ ಶರಣ್ಯಾ ಶಶಿ ನಿಧನ

  By ಫಿಲ್ಮಿಬೀಟ್ ಡೆಸ್ಕ್
  |

  ಮಲಯಾಳಂನ ಖ್ಯಾತ ನಟಿ ಶರಣ್ಯಾ ಶಶಿ ನಿಧನರಾಗಿದ್ದಾರೆ. ಬಹು ಸಮಯದಿಂದ ಅವರು ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರು. ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು.

  ಕೆಲವು ವರ್ಷಗಳಿಂದಲೂ ಮೆದುಳಿನ ಕ್ಯಾನ್ಸರ್‌ಗೆ ಶರಣ್ಯಾ ಶಶಿ ಚಿಕಿತ್ಸೆ ಪಡೆಯುತ್ತಿದ್ದರು. ನಟಿಯು ಆರ್ಥಿಕ ಮುಗ್ಗಟ್ಟು ಅನುಭವಿಸಿದಾಗ ಅವರ ಗೆಳೆಯರು, ಆತ್ಮೀಯರು ಚಿಕಿತ್ಸೆಗೆ ಸಹಾಯ ಮಾಡಿದ್ದರು.

  ಚಿಕಿತ್ಸೆ ಪಡೆಯುತ್ತಿದ್ದಾಗಲೇ ಕಳೆದ ಮೇ ತಿಂಗಳಲ್ಲಿ ಅವರಿಗೆ ಕೋವಿಡ್ 19 ಸೋಂಕು ತಗುಲಿತ್ತು. ಕೋವಿಡ್‌ನಿಂದ ಗುಣಮುಖರಾದರೂ ಸಹ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತು. ಆಗಿನಿಂದಲೂ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತಾ ಸಾಗಿ ಕೊನೆಗೆ ಸೋಮವಾರ ಅವರು ಕೊನೆ ಉಸಿರೆಳೆದಿದ್ದಾರೆ.

  ಕೇರಳದ ಕಣ್ಣೂರಿನವರಾದ ಶರಣ್ಯಾ ಶಶಿ ಮಲಯಾಳಂನ ಚಕ್ಕೊ ರಂಧಮ್, 'ಚೋಟಾ ಮುಂಬೈ' ಹಾಗೂ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಕೇರಳದ ಜನಪ್ರಿಯ ಟಿವಿ ನಟಿಯಾಗಿಯೂ ಶರಣ್ಯಾ ಗುರುತಿಸಿಕೊಂಡಿದ್ದರು.

  ಶರಣ್ಯಾ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ''ಶರಣ್ಯಾ ಧೈರ್ಯದಿಂದ ರೋಗದ ವಿರುದ್ಧ ಹೋರಾಡಿದರು. ಅವರ ಹೋರಾಟ ಹಲವರಿಗೆ ಸ್ಪೂರ್ತಿ'' ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

  ನಟಿ ಶರಣ್ಯಾಗೆ ಕ್ಯಾನ್ಸರ್ ಇರುವುದು 2012ರಲ್ಲಿ ಗೊತ್ತಾಗಿತ್ತು. ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಅಚಾನಕ್ಕಾಗಿ ಅವರು ಉರುಳಿ ಬಿದ್ದಿದ್ದರು. ಶರಣ್ಯಾಗೆ ಮೆದುಳಿನ ಕ್ಯಾನ್ಸರ್ ಆಗಿತ್ತು. ಆಗಿನಿಂದಲೂ ಹಲವು ಶಸ್ತ್ರಚಿಕಿತ್ಸೆಗಳಿಗೆ ಶರಣ್ಯಾ ಒಳಗಾಗಿದ್ದರು. ಸಾಯುವ ಕೆಲವು ವಾರಗಳ ಹಿಂದೆಯಷ್ಟೆ ತ್ರಿವೇಂಡ್ರಮ್‌ನ ಆಸ್ಪತ್ರೆಯೊಂದರಲ್ಲಿ ಶರಣ್ಯಾಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

  ಶರಣ್ಯಾಗೆ ಅಪರೂಪದ ಬ್ರೇನ್ ಟ್ಯೂಮರ್ ಆಗಿತ್ತು. ಶಸ್ತ್ರಚಿಕಿತ್ಸೆ ಮಾಡಿ ಟ್ಯೂಮರ್ ತೆಗೆದರೂ ಮರಳಿ ಬರುತ್ತಲೇ ಇರುತ್ತದೆ ಈ ಟ್ಯೂಮರ್. ಹಾಗಾಗಿಯೇ ಸುಮಾರು 11 ಬಾರಿ ಶಸ್ತ್ರಚಿಕಿತ್ಸೆಗೆ ಶರಣ್ಯಾ ಒಳಗಾಗಿದ್ದರು. ಪ್ರತಿ ಬಾರಿ ಶಸ್ತ್ರಚಿಕಿತ್ಸೆ ಮಾಡಿದಾಗಲೂ ಲಕ್ಷಾಂತರ ಹಣ ಖರ್ಚಾಗುತ್ತಿತ್ತು. ಹಾಗಾಗಿಯೇ ಶರಣ್ಯಾ ಬರಿಗೈ ಆಗಿದ್ದರೂ ಆದರೂ ಸಹ ಅವರ ಗೆಳೆಯರು, ಹಿತೈಶಿಗಳು ಆಕೆಯ ಕೈಹಿಡಿದು ಸಹಾಯ ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು.

  ಶರಣ್ಯಾ ತಮ್ಮ ಅಭಿನಯದಿಂದ ಸೆಳೆದಷ್ಟೆ ತಮ್ಮ ಹೋರಾಟದ ಮನೋಭಾವದಿಂದಲೂ ಸೆಳೆದಿದ್ದರು. ಹಾಗಾಗಿಯೇ ಶರಣ್ಯಾ ಸಾವಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮರುಗಿದ್ದಾರೆ. ಶರಣ್ಯಾ 2014ರಲ್ಲಿ ಕ್ಸೇವಿಯರ್ ಅನ್ನು ವಿವಾಹವಾಗಿದ್ದರು. ಅವರಿಗೆ ತಾಯಿ ಮತ್ತು ಸಹೋದರ ಇದ್ದರು.

  English summary
  Malayalam actress Saranya Sasi dies at the age of 35. She was fighting with cancer from few years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X