For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಮಲಯಾಳಂ ಬೆಳದಿಂಗಳ ತಾರೆ ಅವಂತಿಕಾ

  By Rajendra
  |

  ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಲ್ಲು ಬೆಡಗಿಯ ಆಗಮನವಾಗಿದೆ. ಈಕೆಯ ಹೆಸರು ಅವಂತಿಕಾ ಮೋಹನ್. ಮಲಯಾಳಂ ಚಿತ್ರದಲ್ಲಿ ದೆವ್ವದ ಪಾತ್ರವನ್ನು ಪೋಷಿಸಿ ಅಲ್ಲಿನ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದಾರೆ. ಬಳಿಕ ಕಾಲೇಜು ಕನ್ಯೆಯಾಗಿ ತಮಿಳು ಪ್ರೇಕ್ಷಕರ ಹೃದಯ ಕದ್ದಿದ್ದಾರೆ. ಈಗ ಮನೋರೋಗ ವೈದ್ಯೆಯಾಗಿ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ ಅವಂತಿಕಾ.

  ಈ ಚಿತ್ರದ ನಾಯಕ ನಟ ಲೂಸ್ ಮಾದ ಅಲಿಯಾಸ್ ಯೋಗೇಶ್. ಇನ್ನೂ ಹೆಸರಿಡ ಈ ಚಿತ್ರವನ್ನು ಮಹೇಶ್ ರಾವ್ ನಿರ್ದೇಶಿಸಲಿದ್ದಾರೆ. ನಮ್ಮ ಲೂಸ್ ಮಾದನದು ಇಲ್ಲೂ ಲಾಂಗು ಮಚ್ಚು ಕೊಚ್ಚು ಪಾತ್ರ. ರೌಡಿಯಿಸಂ ಮಾಡುತ್ತಾ ಮಾಡುತ್ತಾ ಮನೋರೋಗ ವೈದ್ಯೆ ಪ್ರೇಮಪಾಶಕ್ಕೆ ಸಿಲುಕುತ್ತಾನೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮುಕ್ಕಾಲು ಸುತ್ತು ಹಾಕಿರುವ ಅವಂತಿಕಾ ತೆಲುಗು ಚಿತ್ರದಲ್ಲೂ ಅಭಿನಯಿಸಿದರೆ ಅಲ್ಲಿಗೆ ಒಂದು ಪರಿಪೂರ್ಣ ವೃತ್ತ ಪೂರ್ಣವಾಗುತ್ತದೆ. ತಮಗೆ ಉತ್ತಮ ಕಥೆ ಸಿಕ್ಕಿದರೆ ಖಂಡಿತ ತೆಲುಗಿನಲ್ಲೂ ಅಭಿನಯಿಸುತ್ತೇನೆ ಎಂದಿದ್ದಾರೆ ಅವಂತಿಕಾ.

  ಮಲಯಾಳಂನಲ್ಲಿ ಈಕೆ ಅಭಿನಯದ 'ಯಕ್ಷಿ ಫೈತ್ ಫುಲಿ ಯುವರ್ಸ್' ಎಂಬ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತಮಿಳು ನಿರ್ದೇಶಕ ಭಾರತಿರಾಜಾ ನಿರ್ದೇಶಿಸುತ್ತಿರುವ 'ಶುಕ್ರದೆಸೈ' ಎಂಬ ಚಿತ್ರಕ್ಕೂ ಈಕೆ ಆಯ್ಕೆಯಾಗಿದ್ದಾರೆ. ಏತನ್ಮಧ್ಯೆ ಕನ್ನಡದಲ್ಲೂ ಆಫರ್ ಬಂದಿರುವುದು ಈಕೆಯ ಉತ್ಸಾಹಕ್ಕೆ ರೆಕ್ಕೆಪುಕ್ಕ ಮೂಡಿದಂತಾಗಿದೆ. (ಏಜೆನ್ಸೀಸ್)

  English summary
  Model turned-actor Avanthikka Mohan debuts in yet-to-be-titled Kannada film with Loose Mada Yogesh. The movie to be directed by Mahesh Rao and Avanthika plays a psychiatrist role in this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X