twitter
    For Quick Alerts
    ALLOW NOTIFICATIONS  
    For Daily Alerts

    39 ಲಕ್ಷ ವಂಚನೆ ಪ್ರಕರಣ: ಸನ್ನಿ ಲಿಯೋನಿ ವಿರುದ್ಧ ತನಿಖೆಗೆ ಕೋರ್ಟ್ ತಡೆ

    |

    ನಟಿ ಸನ್ನಿ ಲಿಯೋನಿಗೆ ಕೇರಳದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೇರಳದಲ್ಲಿ ಕೆಲ ವರ್ಷಗಳ ಹಿಂದೆ ಸನ್ನಿ ಲಿಯೋನಿ ಕೇರಳದ ನಗರವೊಂದರಲ್ಲಿ ಅಂಗಡಿ ಉದ್ಘಾಟನೆಗೆ ಹೋಗಿದ್ದಾಗ ಆಕೆಯನ್ನು ನೋಡಲು ಹತ್ತಾರು ಸಾವಿರ ಜನ ಒಟ್ಟಿಗೆ ಸೇರಿ ಅದು ರಾಷ್ಟ್ರೀಯ ಸುದ್ದಿಯೂ ಆಗಿಬಿಟ್ಟಿತ್ತು!

    ಆದರೆ ಸನ್ನಿಗೆ ಕೇರಳದಲ್ಲಿ ಅಭಿಮಾನಿಗಳು ಮಾತ್ರವಿಲ್ಲ ಕೆಲ ವಿರೋಧಿಗಳೂ ಇದ್ದಾರೆ. ಸನ್ನಿ ಲಿಯೋನ್ ವಿರುದ್ಧ 2019 ರಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಈ ಪ್ರಕರಣ ಸಂಬಂಧಿ ವಿಚಾರಗಳು ಆಗಾಗ್ಗೆ ಸುದ್ದಿಗೆ ಬರುತ್ತಿರುತ್ತವೆ.

    2019 ರಲ್ಲಿ ಕೇರಳ ಹಾಗೂ ದುಬೈನಲ್ಲಿ ಸ್ಟೇಜ್ ಶೋ ನೀಡಲು ಸನ್ನಿ ಲಿಯೋನಿ ಲಕ್ಷಾಂತರ ಹಣ ಪಡೆದಿದ್ದು ಅದಕ್ಕೆ ಬದಲಾಗಿ ಸ್ಟೇಜ್ ಶೋ ನೀಡಲಿಲ್ಲ ಎಂದು ಉದ್ಯಮಿಯೊಬ್ಬರು ದೂರು ದಾಖಲಿಸಿದ್ದರು. ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರೆಸದಂತೆ ಇದೀಗ ಕೇರಳ ಹೈಕೋರ್ಟ್ ತಡೆ ನೀಡಿದೆ.

    ಶಿಯಾಜ್ ಕುಂಜುಮೊಹಮ್ಮದ್ ಎಂಬುವರು ದಾಖಲಿಸಿರುವ ದೂರಿನನ್ವಯ, ಸನ್ನಿ ಲಿಯೋನಿಯು, ಕೇರಳ ಹಾಗೂ ದುಬೈನಲ್ಲಿ ಸ್ಟೇಜ್ ಶೋನಲ್ಲಿ ಡ್ಯಾನ್ಸ್ ಮಾಡಲು 39 ಲಕ್ಷ ಹಣ ಪಡೆದುಕೊಂಡಿದ್ದರು. ಆದರೆ ಸ್ಟೇಜ್ ಶೋನಲ್ಲಿ ಪ್ರದರ್ಶನ ನೀಡಿಲ್ಲ ಹಾಗೂ ಹಣವನ್ನೂ ಹಿಂದಿರುಗಿಸಿಲ್ಲ ಎಂದಿದ್ದಾರೆ. ದೂರು ದಾಖಲಿಸಿಕೊಂಡಿರುವ ಕ್ರೈಂ ಬ್ರ್ಯಾಂಚ್ ಪೊಲೀಸರು ಸನ್ನಿ ಲಿಯೋನ್ ವಿರುದ್ಧ ಕ್ರಿಮಿನಲ್ ಅಪರಾಧದಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಸನ್ನಿಯ ಪತಿ, ಸಿಬ್ಬಂದಿ ಮೇಲೂ ಎಫ್‌ಐಆರ್

    ಸನ್ನಿಯ ಪತಿ, ಸಿಬ್ಬಂದಿ ಮೇಲೂ ಎಫ್‌ಐಆರ್

    ಆದರೆ ಸನ್ನಿ ಲಿಯೋನ್ ಪರ ವಕೀಲರು ಇದನ್ನು ಖಂಡಿಸಿದ್ದು, ಇದೊಂದು ಸಿವಿಲ್ ಪ್ರಕರಣ ಇದನ್ನು ಕ್ರೈಂ ಬ್ರ್ಯಾಂಚ್‌ನ ಪೊಲೀಸರು ನಿರ್ವಹಿಸುವಂತಿಲ್ಲ ಎಂದಿದ್ದಾರೆ. ಮುಂದುವರೆದು, ಪ್ರಕರಣದಲ್ಲಿ ಸನ್ನಿ ಲಿಯೋನಿ ಹಾಗೂ ಆಕೆಯ ಪತಿ ಡ್ಯಾನಿಯಲ್ ವೆಬರ್ ಅವರದ್ದು ತಪ್ಪಿಲ್ಲವೆಂದು ವಾದಿಸಿದ್ದಾರೆ. ಸನ್ನಿ ಲಿಯೋನಿ ಮಾತ್ರವೇ ಅಲ್ಲದೆ ಆಕೆಯ ಪತಿ ಡ್ಯಾನಿಯಲ್ ವೇಬರ್ ಹಾಗೂ ಸನ್ನಿ ಲಿಯೋನಿಯ ಮ್ಯಾನೇಜರ್ ಸುನಿಲ್ ರಜಿನಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

    ಸನ್ನಿ ಲಿಯೋನಿಯದ್ದು ತಪ್ಪಿಲ್ಲವೆಂದ ವಕೀಲರು

    ಸನ್ನಿ ಲಿಯೋನಿಯದ್ದು ತಪ್ಪಿಲ್ಲವೆಂದ ವಕೀಲರು

    ಸ್ಟೇಜ್‌ ಶೋಗಾಗಿ ಹಣ ನೀಡಿ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಆ ದಿನ ಕಾರ್ಯಕ್ರಮ ನಡೆಸಲಿಲ್ಲ. ಬಲಿಕ ಹಣ ವಾಪಸ್ ಕೇಳಲಾಯ್ತು. ಆಗಲೂ, ಸನ್ನಿ ಲಿಯೋನಿ, ಹಣ ವಾಪಸ್ ನೀಡುವುದಿಲ್ಲವೆಂದು ಅದರ ಬದಲಾಗಿ ಕಾರ್ಯಕ್ರಮಕ್ಕೆ ಬೇರೆ ಸಮಯ, ದಿನಾಂಕ ನಿಗದಿ ಮಾಡಿರೆಂದು ಮನವಿ ಮಾಡಿದ್ದರು. ಅದಾಗ್ಯೂ ಆಯೋಜಕರು ಬೇರೆ ಕಾರ್ಯಕ್ರಮ ನಿಗದಿ ಮಾಡಲಿಲ್ಲ ಎಂದು ಸನ್ನಿ ಪರ ವಕೀಲರು ವಾದಿಸಿದ್ದಾರೆ.

    ರಾಜಕೀಯ ಪ್ರಭಾವ ಬಳಸಿರುವ ಆರೋಪ

    ರಾಜಕೀಯ ಪ್ರಭಾವ ಬಳಸಿರುವ ಆರೋಪ

    ದೂರುದಾರರು ತಮ್ಮ ರಾಜಕೀಯ ಪ್ರಭಾವ ಬಳಸಿ ಸನ್ನಿ ಲಿಯೋನಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವಂತೆ ಪೊಲೀಸರ ವಿರುದ್ಧ ಪ್ರಭಾವ ಬೀರಿದ್ದಾರೆ. ಉದ್ದೇಶಪೂರ್ವಕವಾಗಿ ಸನ್ನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಸನ್ನಿಯ ಬಲವಂತವಾಗಿ ವಿಚಾರಣೆಗೆ ಸಹ ಒಳಪಡಿಸಲಾಗಿದೆ. ಈಗಲೂ ನಿಯಮಕ್ಕೆ ವಿರುದ್ಧವಾಗಿ ಕ್ರಿಮಿನಲ್ ಪ್ರೊಸೀಡಿಂಗ್ಸ್‌ ನಡೆಸಲು ಕ್ರೈಂ ಬ್ರ್ಯಾಂಚ್ ಮುಂದಾಗಿದೆ ಎಂದು ವಾದಿಸಿದ್ದಾರೆ.

    ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು

    ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು

    ಈ ಹಿಂದೊಮ್ಮೆ ಸಿನಿಮಾ ಒಂದರ ಚಿತ್ರೀಕರಣಕ್ಕೆ ಸನ್ನಿ ಲಿಯೋನಿ ಕೇರಳಕ್ಕೆ ತೆರಳಿದ್ದಾಗ, ವಾರೆಂಟ್ ಅಥವಾ ಇತ್ಯಾದಿ ನಿಯಮಗಳನ್ನು ಅನುಸರಿಸದೆ ಚಿತ್ರೀಕರಣ ಸೆಟ್‌ಗೆ ನುಗ್ಗಿದ್ದ ಪೊಲೀಸರು ಸನ್ನಿ ಲಿಯೋನಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಇದು ಸಹ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸನ್ನಿ ಲಿಯೋನಿಗೆ ಮಹಿಳಾ ಸಂಘಟನೆಗಳ ಬೆಂಬಲವೂ ಆಗ ದೊರಕಿತ್ತು.

    English summary
    Kerala high court ordered stay on criminal proceedings against actress Sunny Leone in 39 lakh rs cheating case.
    Wednesday, November 16, 2022, 16:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X