For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ನಾಯಕ ನಟಿಯರ 'ಚಡ್ಡಿ' ಚಳವಳಿ

  |

  ಪಕ್ಕದ ಮಲಯಾಳಂ ಸಿನಿಮಾ ಉದ್ಯಮದಲ್ಲಿ ನಾಯಕ ನಟಿಯರು ಸೇರಿಕೊಂಡು ಸದ್ದಿಲ್ಲದೆ ಸಣ್ಣದೊಂದು 'ಚಳವಳಿ' ಪ್ರಾರಂಭಿಸಿದ್ದಾರೆ. ಅದುವೇ 'ಚಡ್ಡಿ ಚಳವಳಿ'.

  ಇದೇನಿದು 'ಚಡ್ಡಿ ಚಳವಳಿ' ಹಾಸ್ಯದಂತಿದೆಯಲ್ಲಾ ಎಂದು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಗಂಭೀರವಾದ ವಿಷಯದ ಮೇಲೆಯೇ ಈ ಸಾಮಾಜಿಕ ಜಾಲತಾಣ ಚಳವಳಿ ನಡೆಯುತ್ತಿದೆ.

  C U Soon Movie Review: ಮಿತಿಯನ್ನೇ ಶಕ್ತಿಯನ್ನಾಗಿಸಿಕೊಂಡ ಸುಂದರ ಸಿನಿಮಾ

  ಕೊನೆಗೂ ಅಪ್ಪಾಜಿ ಜೊತೆ ಆಕ್ಟ್ ಮಾಡೋ ಆಸೆ ಈಡೇರಲಿಲ್ಲ | Shruthi Krishna | Filmibeat Kannada

  ಆಗಿದ್ದಿಷ್ಟೆ ಮಲಯಾಳಂ ಸಿನಿಮಾದ ನಾಯಕ ನಟಿ ಅನಸ್ವರ ರಾಜನ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಅಪ್‌ಲೋಡ್ ಮಾಡಿದ್ದರು. ಚಿತ್ರದಲ್ಲಿ ಶಾರ್ಟ್ಸ್‌ ಮತ್ತು ಶರ್ಟ್‌ ಧರಿಸಿದ್ದರು ನಟಿ. ಈ ಚಿತ್ರಕ್ಕೆ ಟ್ರೋಲರ್‌ಗಳು ವಿಪರೀತ ಟ್ರೋಲ್ ಮಾಡಿದರು. ಇಂಥಹಾ ಉಡುಪುಗಳನ್ನು ಮಹಿಳೆಯರು ಹಾಕಿಕೊಳ್ಳಬಾರದು ಎಂದೆಲ್ಲಾ ಕಮೆಂಟ್‌ಗಳು ಬಂದವು. ಇದರ ವಿರುದ್ಧ ಮಲಯಾಳಂ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

  ಅನಸ್ವರ ರಾಜನ್ ಹಾಕಿದ್ದ ಚಿತ್ರ

  ಅನಸ್ವರ ರಾಜನ್ ಹಾಕಿದ್ದ ಚಿತ್ರ

  ಇದು ಅನಸ್ವರ ರಾಜನ್ ಪೋಸ್ಟ್ ಮಾಡಿದ್ದ ಚಿತ್ರ. ಈ ಚಿತ್ರಕ್ಕೆ ಕೆಟ್ಟ ಕಮೆಂಟ್‌ಗಳು 'ನೈತಿಕ ಪೊಲೀಸ್‌ಗಿರಿ' ಮಾದರಿಯ ಕಮೆಂಟ್‌ಗಳು ಬಂದ ನಂತರ ಇದೇ ಉಡುಪಿನಲ್ಲಿ ಹಲವು ಚಿತ್ರಗಳನ್ನು ಅನಸ್ವರ ಹಂಚಿಕೊಂಡರು. 'ನಾನು ಏನು ಮಾಡುತ್ತಿದ್ದೀನೆಂದು ಚಿಂತೆಪಡಬೇಡಿ, ನಾನು ಏನು ಮಾಡುತ್ತೀದ್ದೀನೆಂದು ನಿಮಗೆ ಏಕೆ ಚಿಂತೆಯಾಗುತ್ತಿದೆ ಎಂಬ ಬಗ್ಗೆ ಯೋಚಿಸಿ' ಎಂದು ಕ್ಯಾಪ್ಷನ್ ಬರೆದಿದ್ದರು ಅನಸ್ವರ ರಾಜನ್.

  'ಮಹಿಳೆಯರಿಗೂ ಕಾಲುಗಳಿವೆ'

  'ಮಹಿಳೆಯರಿಗೂ ಕಾಲುಗಳಿವೆ'

  ಅನಸ್ವರ ರಾಜನ್ ಚಿತ್ರಕ್ಕೆ 'ನೈತಿಕ' ಕಮೆಂಟ್‌ಗಳು ಬಂದ ಕೂಡಲೇ ಮತ್ತೊಬ್ಬ ನಟಿ ರೀಮಾ ಕಲಿಂಗಲ್, ಬಿಕಿನಿ ಧರಿಸಿರುವ ಚಿತ್ರ ಇನ್‌ಸ್ಟಾಗ್ರಾಂ ನಲ್ಲಿ ಅಪ್‌ಲೋಡ್ ಮಾಡಿದರು. 'ಮಹಿಳೆಯರಿಗೂ ಕಾಲುಗಳಿವೆ' ಎಂದು ವ್ಯಂಗ್ಯದ ಕ್ಯಾಪ್ಷನ್ ಸಹ ಬರೆದಿದ್ದರು ನಟಿ.

  'ಮಿಲನ' ಖ್ಯಾತಿಯ ನಟಿ ಪಾರ್ವತಿ ವರ್ಕೌಟ್ ವಿಡಿಯೋ ವೈರಲ್

  ಮಿಲನ ನಟಿ ಪಾರ್ವತಿಯ ಚಿತ್ರ

  ಮಿಲನ ನಟಿ ಪಾರ್ವತಿಯ ಚಿತ್ರ

  ಕನ್ನಡದ ಮಿಲನ, ಪ್ರಥ್ವಿ ಸಿನಿಮಾಗಳಲ್ಲಿ ನಟಿಸಿರುವ ಪಾರ್ವತಿ ತಿರುವೋತು ಸಹ ಶಾರ್ಟ್ಸ್‌ ಧರಿಸಿರುವ ಚಿತ್ರ ಪ್ರಕಟಿಸಿ, ಮಹಿಳೆಯರಿಗೂ ಕಾಲುಗಳಿವೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ನಟಿ ಅಪೂರ್ವಾ ಭೋಸ್ ಸಹ, 'ಎಂಥಾ ಆಶ್ಚರ್ಯ ಮಹಿಳೆಯರಿಗೆ ಕಾಲುಗಳಿವೆ' ಎಂದು ಬರೆದು ಫನ್ನಿ ಚಿತ್ರವೊಂದನ್ನು ಪ್ರಕಟಿಸಿದ್ದಾರೆ.

  ನಟಿ ನಾಜರಿಯಾ ಸಹ ಬೆಂಬಲ

  ನಟಿ ನಾಜರಿಯಾ ಸಹ ಬೆಂಬಲ

  ನಂತರ ಖ್ಯಾತ ನಟಿ , ಫಹಾದ್ ಪತ್ನಿ ನಜರಿಯಾ ಸಹ ತುಂಡುಡುಗೆ ತೊಟ್ಟ ಪತಿಯೊಂದಿಗೆ ನಿಂತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದರು. ಈ ಚಿತ್ರಕ್ಕೆ ಅವರು ನೀಡಿದ ಕ್ಯಾಪ್ಷನ್ 'ಲೆಗ್‌ಡೇ'.

  ಸ್ಟಾರ್ ನಟನ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ 'ಮಿಲನ' ನಟಿ

  ಮಾಡೆಲ್ ಎಮಿ ಮ್ಯಾಥ್ಯು ಚಿತ್ರ

  ಮಾಡೆಲ್ ಎಮಿ ಮ್ಯಾಥ್ಯು ಚಿತ್ರ

  ನಂತರ ನಟಿ, ಮಾಡೆಲ್ ಎಮಿ ಮ್ಯಾಥ್ಯು ಕಾಲುಗಳು ಕಾಣುವಂತೆ ಚಿತ್ರ ಹಾಕಿ, 'ಮಹಿಳೆಯರ ಕಾಲುಗಳನ್ನು ನೋಡಿ ಸಂಸ್ಕೃತಿಗೆ ಅಪಚಾರ ಎಂದುಕೊಳ್ಳುವ ಪುರುಷರಿಗಾಗಿ ಈ ಚಿತ್ರ. ಈ ಕಾಲುಗಳು ಪುರುಷರ ಕಾಲುಗಳಿಗಿಂತಲೂ ವೇಗವಾಗಿ ಓಡಬಲ್ಲವು' ಎಂದು ಬರೆದಿದ್ದರು ನಟಿ.

  'ಮೇಲರಿಮೆ ಮನಸ್ಥಿತಿಗೆ' ಅಹಾನಾ ದಿಕ್ಕಾರ

  'ಮೇಲರಿಮೆ ಮನಸ್ಥಿತಿಗೆ' ಅಹಾನಾ ದಿಕ್ಕಾರ

  ನಟಿ ಅಹನಾ ಕೃಷ್ಣ ಸಹ ಈ ಅಭಿಯಾನಕ್ಕೆ ಬೆಂಬಲ ನೀಡಿ ಚಿತ್ರ ಪ್ರಕಟಿಸಿದ್ದಾರೆ. ಇದರ ಜೊತೆಗೆ ದೊಡ್ಡ ಪೋಸ್ಟ್‌ ಒಂದನ್ನು ಸಹ ಹಾಕಿರುವ ಅವರು, ನಾನು ಯಾವ ಉಡುಪು ಧರಿಸುತ್ತೇನೆ ಎಂಬುದು ನಿಮಗೆ ಸಂಬಂಧಿಸಿದ್ದಲ್ಲ. ಹೊಟ್ಟೆ, ಕಾಲು, ತಲೆ, ಕೈ ಎಲ್ಲವೂ ಒಂದೆ ಎಲ್ಲವೂ ನಮ್ಮ ದೇಹದ ಭಾಗಗಳೇ ಎಂದಿದ್ದಾರೆ ಅಹಾನಾ. ಇನ್ನೂ ಹಲವಾರು ನಟಿಯರು ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.

  English summary
  Malayalam actresses Parvati, Nazariya, Riya, Apoorva and many others posting pictures wearing shorts in protest of trolls and moral policing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X