For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಅಭಿಮಾನಿಯಿಂದ ಅನುಚಿತ ವರ್ತನೆ, ಕಪಾಳಕ್ಕೆ ಬಾರಿಸಿದ ನಟಿ

  |

  ಮಲಯಾಳಂ ಸ್ಟಾರ್ ನಟಿ ಸಾನಿಯಾ ಐಯ್ಯಪ್ಪನ್ ಕೆಟ್ಟ ಸನ್ನಿವೇಶವೊಂದನ್ನು ದಿಟ್ಟತನದಿಂದಲೇ ಎದುರಿಸಿದ್ದಾರೆ. ತಮ್ಮ ಮೈಮುಟ್ಟಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬನ ಕಪಾಳಕ್ಕೆ ಭಾರಿಸಿದ್ದಾರೆ ನಟಿ.

  ಸ್ಟಾರ್ ನಟ ನಿವೀನ್ ಪೌಲಿ ಸೇರಿದಂತೆ ಇತರ ಸ್ಟಾರ್ ನಟರೊಟ್ಟಿಗೆ 'ಸ್ಯಾಟರ್ಡೆ ನೈಟ್' ಹೆಸರಿನ ಸಿನಿಮಾದಲ್ಲಿ ನಟಿ ಸಾಯಿನಾ ಐಯ್ಯಪ್ಪನ್ ನಟಿಸಿದ್ದು ಸಿನಿಮಾದ ಪ್ರಚಾರವನ್ನು ಕೇರಳದ ವಿವಿಧ ನಗರಗಳಲ್ಲಿ ಅದ್ಧೂರಿಯಾಗಿ ಮಾಡಲಾಗುತ್ತಿದೆ.

  ಸಲ್ಮಾನ್ ಖಾನ್ ಕಾರನ್ನು ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಹಿಂಬಾಲಿಸಿದ್ದೇಕೆ? ಇಂಟ್ರೆಸ್ಟಿಂಗ್ ಸ್ಟೋರಿ!ಸಲ್ಮಾನ್ ಖಾನ್ ಕಾರನ್ನು ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಹಿಂಬಾಲಿಸಿದ್ದೇಕೆ? ಇಂಟ್ರೆಸ್ಟಿಂಗ್ ಸ್ಟೋರಿ!

  ನಿನ್ನೆ (ಸೆಪ್ಟೆಂಬರ್ 27) ರಂದು ಚಿತ್ರತಂಡವು ಕ್ಯಾಲಿಕಟ್‌ನ ಮಾಲ್‌ ಒಂದರಲ್ಲಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿತ್ತು. ಭಾರಿ ಸಂಖ್ಯೆಯ ಜನ ಅಲ್ಲಿ ನೆರೆದಿದ್ದರಿಂದ ನಟರು ಜನರ ನಡುವಿನಿಂದ ಹಾದು ಹೊರಹೋಗುವುದು ಕಷ್ಟವಾಗಿತ್ತು.

  ಭಾರಿ ನೂಕಾಟ ತಳ್ಳಾಟದ ನಡುವೆ ನಟಿ ಸಾನ್ಯಾ ಐಯ್ಯಪ್ಪನ್ ವೇದಿಕೆಯಿಂದ ಇಳಿದು ಜನರ ನಡುವೆ ಹೋಗುವಾಗ ವ್ಯಕ್ತಿಯೊಬ್ಬ ಅನುಚಿತವಾಗಿ ನಟಿಯ ಮೈ ಮುಟ್ಟಿದ್ದಾನೆ, ಕೂಡಲೇ ಆತನ ಕಪಾಳಕ್ಕೆ ಹೊಡೆದಿದ್ದಾರೆ ನಟಿ ಸಾನ್ಯಾ ಐಯ್ಯಪ್ಪನ್. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

  ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸಹ ಬರೆದುಕೊಂಡಿರುವ ಸಾನ್ಯಾ ಐಯ್ಯಪ್ಪನ್, ''ನಾನು ಹಾಗೂ ನನ್ನ ತಂಡ ನಮ್ಮ ಹೊಸ ಸಿನಿಮಾ 'ಸ್ಯಾಟರ್ಡೆ ನೈಟ್' ಪ್ರಚಾರಕ್ಕಾಗಿ ಕ್ಯಾಲಿಕಟ್‌ನ ಮಾಲ್‌ ಒಂದಕ್ಕೆ ತೆರಳಿದ್ದೆವು. ಮಾಲ್‌ನಲ್ಲಿ ಭಾರಿ ಸಂಖ್ಯೆಯ ಜನ ಸೇರಿದ್ದರು. ಸೆಕ್ಯುರಿಟಿಗಳು ನಮಗೆ ಭದ್ರತೆ ನೀಡಲು, ಜನರನ್ನು ಕಂಟ್ರೋಲ್ ಮಾಡಲು ಹರಸಾಹಸ ಪಡಬೇಕಾಯಿತು'' ಎಂದಿದ್ದಾರೆ.

  ''ಇವೆಂಟ್ ಮುಗಿದ ಬಳಿಕ ನಾನು ಹಾಗೂ ನನ್ನ ಸಹ ನಟಿ ವೇದಿಕೆ ಇಳಿದು ಹೋಗಬೇಕಾದರೆ ಕೆಲವರು ನನ್ನ ಸಹನಟಿಯೊಟ್ಟಿಗೆ ಕೆಟ್ದಾಗಿ ವರ್ತಿಸಿದರು. ಆಘಾತಕ್ಕೊಳಗಾದ ಆಕೆಗೆ ಪ್ರತಿಕ್ರಿಯೆ ಕೊಡುವ ಸಮಯವೂ ದೊರಕಲಿಲ್ಲ. ಬಳಿಕ ನನಗೂ ಅದೇ ರೀತಿಯ ಕೆಟ್ಟ ಅನುಭವ ಆಯಿತು, ಆ ಸಂಗತಿಯಿಂದ ಉಂಟಾದ ಶಾಕ್‌ನಿಂದ ನಾನು ಕೂಡಲೇ ರಿಯಾಕ್ಟ್ ಮಾಡಿದೆ. ಅದನ್ನು ನೀವೆಲ್ಲ ವಿಡಿಯೋದಲ್ಲಿ ನೋಡಿದ್ದೀರ'' ಎಂದಿದ್ದಾರೆ ಸಾನಿಯಾ.

  ''ಯಾರೂ ಸಹ ಈ ರೀತಿಯ ದೈಹಿಕ ಹಿಂಸೆಯನ್ನು ಸಹಿಸುವಂತಾಗದೇ ಇರಲಿ. ಮಹಳೆಯ ವಿರುದ್ಧ ದೌರ್ಜನ್ಯ, ಅನುಚಿತ ವರ್ತನೆ ತೋರುವ ಇಂಥಹಾ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಿ'' ಎಂದು ನಟಿ ಮನವಿ ಮಾಡಿದ್ದಾರೆ. ಸಾನಿಯಾ ಐಯ್ಯಪ್ಪನ್ ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಮ್ಮುಟ್ಟಿ, ದುಲ್ಕರ್ ಸಲ್ಮಾನ್ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಇದೀಗ ನಿವೀನ್ ಪೋಲಿ ಜೊತೆಗೆ 'ಸ್ಯಾಟರ್ಡೆ ನೈಟ್' ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Malayalam actress Saniya Iyappan hit a man who misbehaved with her. She was promoting her movie Saturday Night when a guy touched her body improperly.
  Wednesday, September 28, 2022, 17:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X