Just In
Don't Miss!
- News
ಬಜೆಟ್ನಲ್ಲಿ ಪ್ರಸ್ತಾಪಿಸಿರುವ "ಬ್ಲಾಕ್ ಚೈನ್" ಎಂದರೇನು?, ಏನಿದರ ಉಪಯೋಗ?
- Automobiles
ನ್ಯೂ ಜನರೇಷನ್ ಟಾಟಾ ಸಫಾರಿ ಖರೀದಿಗೆ ಇಷ್ಟು ದಿನಗಳ ಕಾಲ ಕಾಯಲೇಬೇಕು!
- Finance
ಮಾರ್ಚ್ 09ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ
- Sports
ದಿಲ್ಶನ್ ಅಬ್ಬರದಾಟ, ಸೌತ್ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಶ್ರೀಲಂಕಾ ಲೆಜೆಂಡ್ಸ್ಗೆ ಭರ್ಜರಿ ಜಯ
- Lifestyle
ದಿನ ಭವಿಷ್ಯ: ನಿಮ್ಮ ರಾಶಿಯ ಪ್ರಕಾರ ಮಂಗಳವಾರ ನಿಮಗೆ ಹೇಗಿರಲಿದೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇತಿಹಾಸದಲ್ಲೇ ಮೊದಲು: ವಿನ್ನರ್ ಇಲ್ಲದೆ ಮುಗಿದ ಬಿಗ್ ಬಾಸ್
ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಬಿಗ್ ಬಾಸ್ ಪ್ರಸಾರವಾಗುತ್ತಿರುವುದು ಗೊತ್ತಿರುವ ವಿಷಯವೇ. ಕನ್ನಡದಲ್ಲಂತೂ ಅದು ಸೂಪರ್ ಹಿಟ್ ರಿಯಾಲಿಟಿ ಶೋ.
ಆದರೆ ಬಿಗ್ ಬಾಸ್ ಪ್ರಾಂಚೈಸಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿನ್ನರ್ ಇಲ್ಲದೆ ಬಿಗ್ ಬಾಸ್ ಶೋ ಮುಕ್ತಾಯವಾಗಿದೆ.
ಪಾರ್ನ್ ವೆಬ್ಸೈಟ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಯ ಚಿತ್ರ, ಫೋನ್ ನಂಬರ್
ಹೌದು, ಮಲೆಯಾಳಂ ನಲ್ಲಿ ಬಿಗ್ ಬಾಸ್ 2 ನಡೆಯುತ್ತಿತ್ತು. ಅದನ್ನು ಖ್ಯಾತ ನಟ ಮೋಹನ್‌ಲಾಲ್ ನಡೆಸಿಕೊಡುತ್ತಿದ್ದರು. ಆದು ವಿನ್ನರ್ ಇಲ್ಲದೆಯೇ ಮುಕ್ತಾಯ ಕಂಡಿದೆ.
ಕೇರಳದಾದ್ಯಂತ ಬಿಗ್ ಬಾಸ್ ಶೋ ಭಾರಿ ಹಿಟ್ ಆಗಿತ್ತು. ಅದರಲ್ಲಿಯೂ ಬಿಗ್ ಬಾಸ್ 2 ಅಂತೂ ಕೋಟ್ಯಂತರ ಪ್ರೇಕ್ಷಕರನ್ನು ತಲುಪಿತ್ತು. ರಿಯಾಲಿಟಿ ಶೋ ಸೂಪರ್ ಹಿಟ್ ಆಗಿ ನಡೆಯುತ್ತಿತ್ತು. ಆದರೆ ಅಂತಿಮ ದಿನ ತಲುಪದೇ ಮುಕ್ತಾಯ ಕಂಡಿದೆ.

ಫಿನಾಲೆಯನ್ನೇ ತಲುಪಲಿಲ್ಲ ಬಿಗ್ ಬಾಸ್
ಚೆನ್ನಾಗಿ ನಡೆಯುತ್ತಿದ್ದ ಬಿಗ್ ಬಾಸ್ 2, ಫಿನಾಲೆಗೆ ಇನ್ನು ನಾಲ್ಕು ವಾರ ಇದ್ದಾಗ ಏಕಾಏಕಿ ರದ್ದಾಗಿದೆ. ಇನ್ನು ನಾಲ್ಕು ವಾರ ಕಳೆದಿದ್ದರೆ ವಿನ್ನರ್ ಯಾರೆಂಬುದು ಗೊತ್ತಾಗುತ್ತಿತ್ತು. ಆದರೆ ಆ ಒಳಗಾಗಿ ಕಾರ್ಯಕ್ರಮವೇ ರದ್ದಾಗಿದೆ. ಸ್ಪರ್ಧಾಳುಗಳನ್ನು ಹೊರಗೆ ಕರೆದುಕೊಂಡು ಬರಲಾಗಿದೆ.

ಬಿಗ್ ಬಾಸ್ ಅನ್ನು ರದ್ದು ಮಾಡಿದ ಚಾನೆಲ್
ಕೊರೊನಾ ಭೀತಿಯಿಂದಾಗಿ ಚೆನ್ನಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಬಿಗ್ ಬಾಸ್ 2 ಅನ್ನು ಚಾನೆಲ್ ರದ್ದುಗೊಳಿಸಿದೆ. ರಾಜ್ಯವೇ ಕೊರೊನಾ ಭೀತಿಯಲ್ಲಿರುವಾಗ ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲ ಹಾಗೂ ಚಿತ್ರೀಕರಣವನ್ನು ಬಂದ್ ಮಾಡುವ ನಿರ್ಧಾರವನ್ನು ಸಿನಿಮಾ ರಂಗವು ತೆಗೆದುಕೊಂಡಿರುವ ಕಾರಣ ರಿಯಾಲಿಟಿ ಶೋ ಬಂದ್ ಮಾಡಲಾಗಿದೆ.
ಕೊರೊನಾ ಭೀತಿ ನಡುವೆಯೇ ಬಿಗ್ಬಾಸ್ ಸ್ಪರ್ಧಿಗೆ ಭರ್ಜರಿ ಸ್ವಾಗತ: ಬುಕ್ ಆಯ್ತು ಕೇಸ್

ಮನೆಯ ಒಳಕ್ಕೆ ಹೋಗಲಿದ್ದಾರೆ ಮೋಹನ್ ಲಾಲ್
ಈಗಾಗಲೇ ಹೊರ ಬಿದ್ದಿರುವ ಪ್ರೋಮೋ ಗಳ ಪ್ರಕಾರ, ಮೋಹನ್ ಲಾಲ್ ಶುಕ್ರವಾರದ ಎಪಿಸೋಡ್‌ನಲ್ಲಿ ಬಿಗ್ ಬಾಸ್ ಮನೆಯ ಒಳಕ್ಕೆ ಹೋಗಿ. ಸ್ಪರ್ಧಿಗಳಿಗೆ ಕೊರೊನಾ ವೈರಸ್ ಬಗ್ಗೆ ತಿಳಿಸಿ, ವಿಶ್ವದಾದ್ಯಂತ ಉಂಟಾಗಿರುವ ತುರ್ತು ಸ್ಥಿತಿಯ ಬಗ್ಗೆ ತಿಳಿಸಿ ಅವರನ್ನೆಲ್ಲಾ ಹೊರಗೆ ಕರೆದುಕೊಂಡು ಬರಲಿದ್ದಾರೆ.

ಎಂಟು ಮಂದಿ ಆರೋಗ್ಯ ಸಮಸ್ಯೆ ನೀಡಿ ಹೊರಬಂದಿದ್ದರು
ಮಲೆಯಾಳಂ ಬಿಗ್ ಬಾಸ್ 2 ನಲ್ಲಿ ಎಂಟು ಮಂದಿ ಸ್ಪರ್ಧಾಳುಗಳು ಆರೋಗ್ಯ ಸಮಸ್ಯೆ ನೀಡಿ ಸ್ಪರ್ಧೆಯಿಂದ ಹೊರಕ್ಕೆ ಬಂದಿದ್ದರು. ಆದರೆ ಆರು ಮಂದಿ ಮಾತ್ರವೇ ವಾಪಸ್ ಬಂದರು ಇಬ್ಬರು ವಾಪಸ್ ಬರಲಿಲ್ಲ. ಇದು ಸಹ ದಾಖಲೆಯೇ.