For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ 'ಲೇಡಿ ಸೂಪರ್ ಸ್ಟಾರ್' ಜೊತೆ ವಿಜಯ್ ಸೇತುಪತಿ!

  |

  ತಮಿಳು ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ನಟನೆಯ ಮೂಲಕ ಸದ್ದು ಮಾಡುತ್ತಿರುವ ವಿಜಯ್ ಸೇತುಪತಿ ಈಗ ತೆಲುಗು, ಹಿಂದಿ, ಮಲಯಾಳಂ ಇಂಡಸ್ಟ್ರಿಗಳ ಕಡೆ ಹೆಜ್ಜೆ ಹಾಕುತ್ತಿದ್ದಾರೆ.

  ಈಗಷ್ಟೇ ಚಿರಂಜೀವಿ ಜೊತೆ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಕಾಣಿಸಿಕೊಂಡ ವಿಜಯ್ ಸೇತುಪತಿ, ಹಿಂದಿಯಲ್ಲಿ ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

  ಮಮ್ಮುಟ್ಟಿ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮಂಜು ವಾರಿಯರ್ಮಮ್ಮುಟ್ಟಿ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮಂಜು ವಾರಿಯರ್

  ಈಗ ಮಾಲಿವುಡ್ನಲ್ಲಿ ಸೇತುಪತಿ ಸದ್ದು ಮಾಡ್ತಿದ್ದಾರೆ. ಇನ್ನು ಹೆಸರಿಡದ ಹೊಸ ಚಿತ್ರವೊಂದಕ್ಕೆ ಮಕ್ಕಳ್ ಸೆಲ್ವನ್ ಸಹಿ ಹಾಕಿದ್ದು, ಈ ಚಿತ್ರದಲ್ಲಿ ಮಲಯಾಳಂ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

  ಈ ಹಿಂದೆ ಜಯರಾಂ ನಟಿಸಿದ್ದ 'ಮಾರ್ಕೊನಿ ಮಥಾಯ್' ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದರು. ಈಗ ಎರಡನೇ ಮಲಯಾಳಂ ಚಿತ್ರಕ್ಕೆ ತಯಾರಿ ನಡೆದಿದ್ದು, ಈ ಚಿತ್ರಕ್ಕೆ ಸೈರಾ ಬಾನು ಹಾಗೂ ಬರಹಗಾರ ಆರ್ ಜೆ ಶಾನ್ ನಿರ್ದೇಶನ ಮಾಡಲಿದ್ದಾರಂತೆ.

  ಹಿಂದಿ ಚಿತ್ರರಂಗಕ್ಕೆ ಹೋಗಲು ವಿಜಯ್ ಸೇತುಪತಿಗೆ ಅಂಜಿಕೆ, ಕಾರಣ ಇಲ್ಲಿದೆಹಿಂದಿ ಚಿತ್ರರಂಗಕ್ಕೆ ಹೋಗಲು ವಿಜಯ್ ಸೇತುಪತಿಗೆ ಅಂಜಿಕೆ, ಕಾರಣ ಇಲ್ಲಿದೆ

  ಇನ್ನು ಮಂಜು ವಾರಿಯರ್ ಅವರು ಕೂಡ ಇತ್ತೀಚಿಗಷ್ಟೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಧನುಶ್ ನಟಿಸಿದ್ದ ಅಸುರನ್ ಚಿತ್ರದಲ್ಲಿ ನಟಿಸುವ ಮೂಲಕ ಮಂಜು ವಾರಿಯರ್ ಕಾಲಿವುಡ್ ಗೆ ಪರಿಚಯ ಆಗಿದ್ದರು.

  ಸದ್ಯ, ಇಳಯದಳಪತಿ ವಿಜಯ್ ನಟಿಸುತ್ತಿರುವ 64ನೇ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ಜೊತೆ 20ನೇ ಚಿತ್ರದಲ್ಲೂ ನಟಿಸುವ ಆಫರ್ ಬಂದಿದೆಯಂತೆ.

  English summary
  Malayalam lady superstar manju warrier sharing screen space with vijay sethupathi in upcoming movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X