For Quick Alerts
  ALLOW NOTIFICATIONS  
  For Daily Alerts

  ಈ 15 ಚಿತ್ರಗಳ ಕಥೆ, ನಿರೂಪಣೆಗೆ ಅದೆಷ್ಟು ತಾಕತ್ತು ಇರಬೇಡ!

  |

  ಕೆಲವೊಂದು ಸಿನಿಮಾಗಳ ಕಥೆಯೇ ಹಾಗೆ. ಜೊತೆಗೆ ಬಿಗಿಯಾದ ನಿರೂಪಣೆ, ಚಿತ್ರಕ್ಕೆ ಪೂರಕವಾದ ಸಂಭಾಷಣೆ, ಸಂಗೀತ ಮುಂತಾದವುಗಳು ಇದ್ದು ಬಿಟ್ಟರೆ ಚಿತ್ರ ಸೂಪರ್ ಹಿಟ್ ಆಗೋದು ಗ್ಯಾರಂಟಿ.

  ಮೂಲ ಚಿತ್ರವೊಂದು ಯಶಸ್ವಿಯಾದರೆ ಅದು ಇತರ ಭಾಷೆಗಳಿಗೆ ರಿಮೇಕ್ ಆಗುವ ಪರಿಪಾಠ ಇಂದು ನಿನ್ನೆಯದಲ್ಲ. ದಕ್ಷಿಣದ ಚಿತ್ರಗಳನ್ನು ಹಿಂದಿಗೆ, ಹಿಂದಿಯ ಯಶಸ್ವಿ ಚಿತ್ರಗಳನ್ನು ದಕ್ಷಿಣದ ಚಿತ್ರೋದ್ಯಮದ ರಿಮೇಕ್ ಮಾಡಿದ ಉದಾಹರಣೆಗಳು ಬೇಕಾದಷ್ಟಿವೆ.

  ಆ ಕಾಲದಲ್ಲೇ ವರನಟ ರಾಜಕುಮಾರ್ ಅಭಿನಯದ ಚಿತ್ರಗಳು ಹಿಂದಿ, ತಮಿಳು, ತೆಲುಗಿಗೆ ರಿಮೇಕ್ ಆಗಿದ್ದುಂಟು. ಹಾಗೆಯೇ, ಎನ್ಟಿಆರ್, ಎಂಜಿಆರ್, ಶಿವಾಜಿ ಗಣೇಶನ್ ಮುಂತಾದವರ ಚಿತ್ರಗಳೂ ಕನ್ನಡದಲ್ಲಿ ರಿಮೇಕ್ ಆಗಿದೆ.

  ಆದರೆ ಮೂಲ ಭಾಷೆಯ ಚಿತ್ರ ಮೂರು ಅಥವಾ ಅದಕ್ಕಿಂತಲೂ ಹೆಚ್ಚಿನ ಭಾಷೆಗೆ ರಿಮೇಕ್ ಆದ ಉದಾಹರಣೆಗಳು ಅಷ್ಟಾಗಿ ಸಿಗುವುದಿಲ್ಲ. ಜೊತೆಗೆ, ವಿವಿಧ ಭಾಷೆಗಳಲ್ಲಿ ರಿಮೇಕ್ ಆದ ಚಿತ್ರಗಳು ಮೂಲ ಚಿತ್ರದಂತೆ ಎಲ್ಲವೂ ಸೂಪರ್ ಹಿಟ್ ಆಗಿತ್ತು ಎಂದು ಹೇಳಲೂ ಆಗುವುದಿಲ್ಲ.

  2002ರಿಂದೀಚೆಗೆ ಮೂಲ ಚಿತ್ರವೊಂದು, ಕನ್ನಡವೂ ಸೇರಿ ಮೂರು ಅಥವಾ ಅದಕ್ಕಿಂತಲೂ ಹೆಚ್ಚಿನ ಭಾಷೆಗೆ ರಿಮೇಕಾದ ಆಯ್ದ ಕೆಲವು ಚಿತ್ರಗಳ ಪಟ್ಟಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

  ನಾಗರಹಾವು

  ನಾಗರಹಾವು

  ಬಾಲಿವುಡ್ ಬಾದಶಾ ಶಾರೂಖ್ ಖಾನ್ ವೃತ್ತಿ ಜೀವನಕ್ಕೆ ಬ್ರೇಕ್ ನೀಡಿದ ಬಾಜಿಗರ್ ಚಿತ್ರವನ್ನು ಅಬ್ಬಾಸ್ ಮಸ್ತಾನ್ ನಿರ್ದೇಶಿಸಿದ್ದರು. 1993ರಲ್ಲಿ ಬಿಡುಗಡೆಯಾದ ಚಿತ್ರ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ರಿಮೇಕ್ ಆಗಿದ್ದವು. ಆದರೆ ಮೂಲ ಚಿತ್ರದಷ್ಟು ಯಾವ ಭಾಷೆಯಲ್ಲೂ ಯಶಸ್ವಿಯಾಗಲಿಲ್ಲ. ತಮಿಳಿನಲ್ಲಿ ರಮ್ಕಿ, ತೆಲುಗಿನಲ್ಲಿ ವೆತಗಾಡು ಮತ್ತು ಕನ್ನಡದಲ್ಲಿ ಉಪೇಂದ್ರ ಅಭಿನಯದ 2002ರಲ್ಲಿ ಬಿಡುಗಡೆಯಾದ ನಾಗರಹಾವು ಮೂಲ ಭಾಷೆಯಿಂದ ರಿಮೇಕ್ ಆದ ಚಿತ್ರಗಳು.

  ಆಪ್ತಮಿತ್ರ

  ಆಪ್ತಮಿತ್ರ

  ಫಾಜಿಲ್ ನಿರ್ದೇಶನದ ಮಲಯಾಳಂ ಚಿತ್ರ ಮನಿಚಿತ್ರತಾಜು ಚಿತ್ರದಲ್ಲಿ ಮೋಹನ್ ಲಾಲ್, ಶೋಭನಾ ಮುಂತಾದವರು ನಟಿಸಿದ್ದರು. ಇದಾದ ನಂತರ 2004ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ ವಿಷ್ಣು ಸರ್ ಪ್ರಮುಖ ತಾರಾಗಣದಲ್ಲಿದ್ದ ಆಪ್ತಮಿತ್ರ. ಇದಾದ ನಂತರ ರಜನೀಕಾಂತ್ ಅಭಿನಯದ ತಮಿಳು, ತೆಲುಗಿನಲ್ಲಿ ಬಿಡುಗಡೆಯಾದ ಚಂದ್ರಮುಖಿ, ಬೆಂಗಾಳಿಯಲ್ಲಿ ರಾಜಮೋಹಿ ಮತ್ತು ಹಿಂದಿಯಲ್ಲಿ ಭೂಲ್ ಭಲಯ್ಯಾ ಚಿತ್ರ ರಿಮೇಕ್ ಆಯಿತು. ಎಲ್ಲಾ ಭಾಷೆಯ ಚಿತ್ರಗಳೂ ಸೂಪರ್ ಹಿಟ್ ಆಗಿದ್ದವು.

  ವಿಷ್ಣುಸೇನಾ

  ವಿಷ್ಣುಸೇನಾ

  ಎ ಆರ್ ಮುರುಗದಾಸ್ ನಿರ್ದೇಶನದ ರಮಣ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ವಿಜಯಕಾಂತ್, ಸಿಮ್ರನ್ ಮುಂತಾದವರಿದ್ದರು. ತೆಲುಗಿನಲ್ಲಿ ರಿಮೇಕ್ ಆದ ಚಿರಂಜೀವಿ ಅಭಿನಯದ ಠಾಗೋರ್ ಚಿತ್ರ ಯಶಸ್ವಿಯಾಗಿತ್ತು. ಆದರೆ 2005ರಲ್ಲಿ ವಿಷ್ಣುವರ್ಧನ್ ಅಭಿನಯದ ರಮಣ ಚಿತ್ರದ ರಿಮೇಕ್ ವಿಷ್ಣುಸೇನಾ ಯಶಸ್ವಿಯಾಗಲಿಲ್ಲ. ಕೆಲ ದಿನಗಳ ಹಿಂದೆ ಅಕ್ಷಯ್ ಕುಮಾರ್ ಅಭಿನಯದ ಮೂಲ ಚಿತ್ರದ ಹಿಂದಿ ರಿಮೇಕ್ ಗಬ್ಬರ್ ಈಸ್ ಬ್ಯಾಕ್ ಭರ್ಜರಿ ಯಶಸ್ಸು ಪಡೆದಿತ್ತು.

  ಆಟೋಗ್ರಾಫ್

  ಆಟೋಗ್ರಾಫ್

  ಚೇರನ್ ನಿರ್ದೇಶನದ ತಮಿಳು ಆಟೋಗ್ರಾಫ್ ಮೂಲ ಚಿತ್ರದಲ್ಲಿ ಚೇರನ್, ಸ್ನೇಹಾ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದರು. ಈ ಚಿತ್ರ ತೆಲುಗು (ನಾ ಆಟೋಗ್ರಾಫ್) ಮತ್ತು ಕನ್ನಡದಲ್ಲಿ ಸುದೀಪ್ ನಿರ್ದೇಶಿಸಿ, ನಟಿಸಿ ಮತ್ತು ನಿರ್ಮಿಸಿ ಮೈ ಆಟೋಗ್ರಾಫ್ ಚಿತ್ರವನ್ನು 2006ರಲ್ಲಿ ತೆರೆಗೆ ತಂದಿದ್ದರು. ಮೂರೂ ಭಾಷೆಯಲ್ಲಿ ಚಿತ್ರ ಹಿಟ್ ಆಗಿತ್ತು.

  ಪರೋಡಿ

  ಪರೋಡಿ

  ಕ್ರಾಂತಿವೀರ್ ಚಿತ್ರವೆಂದಾಗ ಕಣ್ಣೆದುರು ಬರುವುದು ನಾನಾ ಪಟೇಕರ್ ಅಭಿನಯ. ಮೆಹುಲ್ ಕುಮಾರ್ ನಿರ್ದೇಶನದ ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲೂ ರಿಮೇಕ್ ಆಗಿತ್ತು. ಮೂಲ ಚಿತ್ರ ತೆಲುಗಿನಲ್ಲಿ ಪುಣ್ಯಭೂಮಿ ನಾದೇಶಂ ಮತ್ತು 2007ರಲ್ಲಿ ಬಿಡುಗಡೆಯಾದ ಉಪೇಂದ್ರ ಅಭಿನಯದ ಪರೋಡಿ ಎನ್ನುವ ಹೆಸರಿನಲ್ಲಿ ರಿಮೇಕ್ ಆಗಿದ್ದವು. ಹಿಂದಿ ಹೊರತು ಪಡಿಸಿ ಇತರ ಭಾಷೆಯಲ್ಲಿ ಚಿತ್ರ ದಯನೀಯ ಸೋಲುಂಡಿತ್ತು.

  ವೀರಮದಕರಿ

  ವೀರಮದಕರಿ

  ಎಸ್ ಎಸ್ ರಾಜಮೌಳಿ ನಿರ್ದೇಶನದ ವಿಕ್ರಮಾರ್ಕುಡು ಚಿತ್ರದ ಪ್ರಮುಖ ಭೂಮಿಕೆಯಲ್ಲಿ ರವಿತೇಜಾ, ಅನುಷ್ಕಾ ಶೆಟ್ಟಿ ಇದ್ದರು. ಈ ಚಿತ್ರವನ್ನು ವೀರಮದಕರಿ (2009) ಟೈಟಲಿನಲ್ಲಿ ಸುದೀಪ್ ನಟಿಸಿ, ನಿರ್ದೇಶಿಸಿದ್ದರು. ಇನ್ನು ಈ ಚಿತ್ರ ತಮಿಳಿನಲ್ಲಿ ಸಿರುತೈ, ಹಿಂದಿಯಲ್ಲಿ ರೌಡಿ ರಾಥೋಡ್, ಬೆಂಗಾಳಿಯಲ್ಲಿ ಬಿಕ್ರಂ ಸಿಂಗ ಎನ್ನುವ ಹೆಸರಿನಲ್ಲಿ ರಿಮೇಕ್ ಗೊಂಡಿತ್ತು.

  ಜಾಲಿ ಡೇಸ್

  ಜಾಲಿ ಡೇಸ್

  ತೆಲುಗಿನಲ್ಲಿ ಶೇಖರ್ ಕಮ್ಮುಲಾ ನಿರ್ದೇಶನದ ಮೂಲ ಹ್ಯಾಪ್ಪಿ ಡೇಸ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ವರುಣ್, ತಮನ್ನಾ ಮುಂತಾದವರಿದ್ದರು. ಈ ಚಿತ್ರ ತಮಿಳಿನಲ್ಲಿ ಇನಿದು ಇನಿದು ಹೆಸರಿನಲ್ಲಿ ಮತ್ತು ಕನ್ನಡದಲ್ಲಿ ಜಾಲಿಡೇಸ್ (2009) ಹೆಸರಿನಲ್ಲಿ ರಿಮೇಕ್ ಗೊಂಡಿತ್ತು. ಕನ್ನಡದಲ್ಲಿ ಪ್ರದೀಪ್, ಐಶ್ವರ್ಯಾ, ಸ್ಪೂರ್ಥಿ ಮುಂತಾದವರಿದ್ದರು. ಮೂರೂ ಭಾಷೆಯಲ್ಲಿ ಚಿತ್ರ ಯಶಸ್ವಿಯಾಗಿತ್ತು.

  ಪುಂಡ

  ಪುಂಡ

  ಮೂಲ ತಮಿಳು ಪೊಲ್ಲಾದವನ್ ಚಿತ್ರದ ತಾರಾಗಣದಲ್ಲಿ ಧನುಶ್, ರಮ್ಯಾ ಮುಂತಾದವರಿದ್ದರು. ಈ ಚಿತ್ರ ತೆಲುಗು (ಕುರ್ರಡು), ಬೊರ್ಬಾದ್ (ಬೆಂಗಾಳಿ) ಮತ್ತು ಕನ್ನಡದಲ್ಲಿ ಯೋಗೀಶ್, ಮೇಘನಾರಾಜ್, ಶರತ್ ಲೋಹಿತಾಶ್ವ ಪ್ರಮುಖ ಭೂಮಿಕೆಯಲ್ಲಿ ಪುಂಡ (2010) ಹೆಸರಿನಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ಚಿತ್ರ ಅಷ್ಟಾಗಿ ಕಲೆಕ್ಷನ್ ಮಾಡಿಲ್ಲ.

  ಹುಡುಗ್ರು

  ಹುಡುಗ್ರು

  ಸಮುತಿರಕಿರಣಿ ನಿರ್ದೇಶನದ ಮೂಲ ತಮಿಳು ನಾಡೋಡಿಗಳ್ ಚಿತ್ರ ಕೂಡಾ ಐದು ಭಾಷೆಗಳಿಗೆ ರಿಮೇಕ್ ಆಗಿತ್ತು. ತೆಲುಗಿನಲ್ಲಿ ಶಂಭೋ ಶಿವ ಶಂಭು, ಮಲಯಾಳಂ ನಲ್ಲಿ ಇದು ನಮ್ಮದೇ ಕಥಾ, ಬೆಂಗಾಲಿಯಲ್ಲಿ ರನ್ ಬೆಂಗಾಲಿ, ಹಿಂದಿಯಲ್ಲಿ ರಂಗ್ರೀಜ್ ಹೆಸರಿನಲ್ಲಿ ರಿಮೇಕ್ ಆಗಿದ್ದವು. ಇದಲ್ಲದೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಯೋಗೀಶ್ ಪ್ರಮುಖ ಭೂಮಿಕೆಯಲ್ಲಿ ಹುಡುಗ್ರು (2011) ಎನ್ನುವ ಟೈಟಲ್ ನಲ್ಲಿ ಚಿತ್ರ ರಿಮೇಕ್ ಆಗಿತ್ತು. ತಮಿಳು ಮತ್ತು ಕನ್ನಡದಲ್ಲಿ ಮಾತ್ರ ಚಿತ್ರ ಕ್ಲಿಕ್ ಆಗಿತ್ತು.

  ಕೆಂಪೇಗೌಡ

  ಕೆಂಪೇಗೌಡ

  ತಮಿಳಿನಲ್ಲಿ ಹರಿ ನಿರ್ದೇಶನದ, ಸೂರ್ಯ ಮತ್ತು ಅನುಕ್ಷಾ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿರುವ ಸಿಂಗಂ ಚಿತ್ರ ಹಲವು ಭಾಷೆಗಳಿಗೆ ರಿಮೇಕ್ ಆಗಿತ್ತು. ಸುದೀಪ್ ಅಭಿನಯದ 2011ರಲ್ಲಿ ಬಿಡುಗಡೆಯಾದ ಕೆಂಪೇಗೌಡ, ಹಿಂದಿಯಲ್ಲಿ ಅಜಯ್ ದೇವಗನ್ ಅಭಿನಯದ ಸಿಂಗಂ ಮತ್ತು ಬೆಂಗಾಳಿಯಲ್ಲಿ ಜೀತ್ ಅಭಿನಯದ ಶೋತ್ರು ರಿಮೇಕ್ ಆದ ಚಿತ್ರಗಳು. ಮೂಲ ಚಿತ್ರದಂತೆ ಎಲ್ಲಾ ಭಾಷೆಯಲ್ಲೂ ಚಿತ್ರ ಹಿಟ್ ಆಗಿತ್ತು.

  ಬಾಡಿಗಾರ್ಡ್

  ಬಾಡಿಗಾರ್ಡ್

  2010ರಲ್ಲಿ ಸಿದ್ದಿಕಿ ನಿರ್ದೇಶಿಸಿದ್ದ ಮೂಲ ಮಲಯಾಳಂ ಚಿತ್ರ ಬಾಡಿಗಾರ್ಡ್, ಈ ಚಿತ್ರ ಒಟ್ಟು ಐದು ಭಾಷೆಗಳಲ್ಲಿ ರಿಮೇಕ್ ಆಗಿತ್ತು. ತಮಿಳಿನಲ್ಲಿ ಕಾವಲನ್, ಹಿಂದಿ, ತೆಲುಗು ಮತ್ತು ಬೆಂಗಾಳಿ ಭಾಷೆಯಲ್ಲಿ ಬಾಡಿಗಾರ್ಡ್ ಹೆಸರಿನಲ್ಲೇ ಚಿತ್ರ ರಿಮೇಕ್ ಆಗಿತ್ತು. ಇನ್ನು ಕನ್ನಡದಲ್ಲಿ ನವರಸನಾಯಕ ಜಗ್ಗೇಶ್ ಸ್ವಂತ ಬ್ಯಾನರಿನಲ್ಲಿ (2011) ಈ ಚಿತ್ರ ನಟಿಸಿ, ನಿರ್ಮಿಸಿ ಕೈಸುಟ್ಟು ಕೊಂಡಿದ್ದರು.

  ಧೂಳ್

  ಧೂಳ್

  ತಮಿಳು ತಿರುವಿಲಾಯೈದಲ್ ಆರಂಭಂ ಚಿತ್ರವನ್ನು ಭೂಪತಿ ಪಾಂಡ್ಯನ್ ನಿರ್ದೇಶಿಸಿದ್ದರು. ಈ ಚಿತ್ರ ತೆಲುಗಿನಲ್ಲಿ (ತಕಾರಿ), ಬೆಂಗಾಲಿಯಲ್ಲಿ (ಈಡಿಯಟ್), ಒರಿಯಾದಲ್ಲಿ (ರಂಗೀಲಾ ತೋಕಾ) ಮತ್ತು ಕನ್ನಡದಲ್ಲಿ ಧೂಳ್ (2011) ಹೆಸರಿನಲ್ಲಿ ರಿಮೇಕ್ ಗೊಂಡಿತು. ಕನ್ನಡದ ರಿಮೇಕ್ ನಲ್ಲಿ ಯೋಗೀಶ್, ಐಂದ್ರಿತಾ ರೇ ಪ್ರಮುಖ ಭೂಮಿಕೆಯಲ್ಲಿದ್ದರು. ತಮಿಳು ಚಿತ್ರ ಯಶಸ್ವಿಯಾದಷ್ಟು ಬೇರೆ ಭಾಷೆಯಲ್ಲಿ ಚಿತ್ರ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ.

  ಪ್ರೇಮ್ ಅಡ್ಡಾ

  ಪ್ರೇಮ್ ಅಡ್ಡಾ

  ಎಂ ಶಶಿಕುಮಾರ್ ನಿರ್ದೇಶನದ ತಮಿಳು ಚಿತ್ರ ಸುಬ್ರಮಣ್ಯಪುರಂ ಚಿತ್ರದ ಪ್ರಮುಖ ತಾರಾಗಣದಲ್ಲಿ ಜೈ, ಸ್ವಾತಿ ಮುಂತಾದವರಿದ್ದರು. ಈ ಚಿತ್ರ ತೆಲುಗಿನಲ್ಲಿ (ಅನಂತಪುರಂ 1980) ಮತ್ತು ಕನ್ನಡದಲ್ಲಿ ಪ್ರೇಮ್ ಅಡ್ಡಾ (2012) ಹೆಸರಿನಲ್ಲಿ ರಿಮೇಕ್ ಆಗಿತ್ತು. ಕನ್ನಡದಲ್ಲಿ ಪ್ರೇಮ್, ಕೃತಿ ಕರಬಂಧ ಪ್ರಮುಖ ಭೂಮಿಕೆಯಲ್ಲಿದ್ದರು. ಮೂಲ ಚಿತ್ರ ಹಿಟ್ ಆದಷ್ಟು ಬೇರೆ ಭಾಷೆಯಲ್ಲಿ ಚಿತ್ರ ಯಶಸ್ಸು ಪಡೆಯಲಿಲ್ಲ.

  ದೃಶ್ಯ

  ದೃಶ್ಯ

  ಜೀತು ಜೋಸೆಫ್ ನಿರ್ದೇಶನದ ಮೂಲ ಮಲಯಾಳಂ ಚಿತ್ರದಲ್ಲಿ ಮೋಹನ್ ಲಾಲ್, ಮೀನಾ ನಟಿಸಿದ್ದರು. ಈ ಚಿತ್ರ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗಿದ್ದವು. ತೆಲುಗು ಮತ್ತು ಹಿಂದಿಯಲ್ಲಿ ದೃಶ್ಯಂ, ತಮಿಳಿನಲ್ಲಿ ಪಾಪನಾಶಂ ಮತ್ತು ಕನ್ನಡದಲ್ಲಿ (2014) ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಭೂಮಿಕೆಯಲ್ಲಿ ದೃಶ್ಯ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಯಿತು. ಎಲ್ಲಾ ಭಾಷೆಗಳಲ್ಲಿ ಚಿತ್ರ ಸೂಪರ್ ಹಿಟ್ ಆಗಿದ್ದವು.

  ಚಂದ್ರಲೇಖ

  ಚಂದ್ರಲೇಖ

  ಮೂಲ ತೆಲುಗು (ಪ್ರೇಮ ಕಥಾ ಚಿತ್ರಂ) ಚಿತ್ರದಲ್ಲಿ ಸುಧೀರ್ ಬಾಬು, ನಂದಿತಾ ಮುಂತಾದವರಿದ್ದರು. ಈ ಚಿತ್ರ ತಮಿಳಿನಲ್ಲಿ (ಡಾರ್ಲಿಂಗ್) ಮತ್ತು ಕನ್ನಡದಲ್ಲಿ ಚಂದ್ರಲೇಖ (2014) ಟೈಟಲಿನಲ್ಲಿ ರಿಮೇಕ್ ಆದವು. ಕನ್ನಡದ ಅವತರಣಿಕೆಯಲ್ಲಿ ಚಿರಂಜೀವಿ ಸರ್ಜಾ, ಶ್ವಾನ್ವಿ ಮುಂತಾದವರಿದ್ದರು. ಕನ್ನಡದಲ್ಲಿ ಈ ಚಿತ್ರ ಹಿಟ್ ಆಗಿತ್ತು.

  English summary
  Original movie remade in several languages including Kannada. The list of 15 such films.
  Monday, August 3, 2015, 16:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X