ಮಾಯಾನಗರಿ ಸಿನಿಮಾವನ್ನು
ಶಂಕರ್ ಆರಾಧ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ
ಅನೀಶ್ ತೇಜಶ್ವರ್ ನಾಯಕನಾಗಿ ಹಾಗೂ
ಶ್ರಾವ್ಯ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ತೇಜು, ಚಿಕ್ಕಣ್ಣ, ದ್ವಾರಕೀಶ್, ಅವಿನಾಶ್, ಶರತ್ ಲೋಹಿತಾಶ್ವ, ಭರತ್ ಸಾಗರ್, ಸುಚೇಂದ್ರ ಪ್ರಸಾದ್ ಹಾಗೂ ನಿಹಾರಿಕಾ ತಾರಾಗಣದಲ್ಲಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಹಾಗೂ ಶ್ರೀನಿವಾಸ್ ಅಲ್ಲಕಾ ಛಾಯಾಗ್ರಹಣವಿದೆ. ಶ್ವೇತಾ ಶಂಕರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಚಿತ್ರದುದ್ದಕ್ಕೂ ಮಾಂತ್ರಿಕ ಮತ್ತು ಭ್ರಮೆ ತುಂಬಿದ ಅನುಭವವನ್ನು ಕಟ್ಟಿಕೊಡಲಾಗಿದೆ.
ಬಿಡುಗಡೆ: ಮಾಯಾನಗರಿ ಸಿನಿಮಾ 2023ರ ಡಿಸೆಂಬರ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.