X
ಹೋಮ್ » ಸೆಲಬ್ರಿಟಿಗಳು » ಅರ್ಜುನ್ ಜನ್ಯ
ಅರ್ಜುನ್ ಜನ್ಯ

ಅರ್ಜುನ್ ಜನ್ಯ

Music Director/Singer/Actor
ಜೀವನ ಚರಿತ್ರೆ :  ಅರ್ಜುನ್ ಜನ್ಯ  ಕನ್ನಡ ಚಿತ್ರರಂಗದ  ಸಂಗೀತ ಸಂಯೋಜಕರು, ಗಾಯಕರು, ಸಂಗೀತ ನಿರ್ದೇಶಕರು ಆಗಿದ್ದಾರೆ.ಕನ್ನಡ ಚಿತ್ರರಂಗದ ಎ ಆರ್ ರೆಹಮಾನ್ ಎನ್ನುವ ಹೆಗ್ಗಳಿಕೆ  ಪಡೆದಿರುವ  ಅರ್ಜುನ್ ಜನ್ಯ ತಮ್ಮ ಸಂಗೀತ ನಿರ್ದೇಶನದಿಂದ ಮನೆ ಮಾತಾಗಿರುವ ಪ್ರತಿಭಾವಂತ ಸಂಗೀತ ನಿರ್ದೇಶಕ. ಇವರು  ಜನಿಸಿದ್ದು 13 ಮೇ ಬೆಂಗಳೂರಿನಲ್ಲಿ.ಇವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಮೊದಲು ವಿ.ಮನೋಹರ್ ಮತ್ತು ಕೆ.ಕಲ್ಯಾಣ್ ಅವರ ಜೊತೆಯಲ್ಲಿ ಕೀಬೋರ್ಡ್ ಕಲಿಯುತ್ತಿದ್ದರು. ಇವರು ಎ.ಆರ್ ರೆಹಮಾನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಎ.ಆರ್ ರೆಹಮಾನ್ ಅವರ ಭೇಟಿಯ ನಂತರ ಇವರಿಗೆ  ಸಂಗೀತ ಸಂಯೋಜನೆ ಮಾಡಬೇಕೆಂಬ ಛಲ ಹುಟ್ಟಿಕೊಂಡಿತು. 2006 ರಲ್ಲಿ ಬಿಡುಗಡೆಗೊಂಡ "ಆಟೋಗ್ರಾಫ್ ಪ್ಲೀಸ್ "ಚಿತ್ರಕ್ಕೆ ಮೊದಲ ಸಂಗೀತ ನಿರ್ದೇಶನ ಮಾಡಿದರು. ಅಲ್ಲಿಂದ ಮುಂದೆ ಹಲವಾರು ಚಿತ್ರಗಳ ಹಾಡುಗಳಿಗೆ ಸಂಗೀತ ಸಂಯೋನೆ ಮಾಡಿದ್ದಾರೆ. 2009 ರಲ್ಲಿ ತೆರೆಕಂಡ ಬಿರುಗಾಳಿ ಚಿತ್ರದ ಮೂಲಕ ಅವರ ಹೆಸರು ಕರ್ನಾಟಕದೆಲ್ಲೆಡೆ ಪಸರಿಸಿತು .ಈ ಬಿರುಗಾಳಿ ಚಿತ್ರದ ಎಲ್ಲಾ ಹಾಡುಗಳು ಮೆಚ್ಚುಗೆಗೆ ಪಾತ್ರವಾಯಿತು. ಇದರ ನಂತರ 2010ರಲ್ಲಿ ಬಂದ ಸಂಚಾರಿ ಚಿತ್ರದ ಹಾಡುಗಳು ಕನಾಟಕದ ಜನರ ಮನಸ್ಸಲ್ಲಿ ಗಟ್ಟಿಯಾಗಿ ಉಳಿದಕೊಂಡವು. ಅರ್ಜುನ್ ಜನ್ಯಗೆ ಬ್ರೇಕ್ ನೀಡಿದ ಸಿನಿಮಾ ಅಂದರೆ, 'ಕೆಂಪೇಗೌಡ'. ಅದು ಅವರ 14ನೇ ಸಿನಿಮಾವಾಗಿತ್ತು. ಈ ಮೊದಲ ಚಿತ್ರಗಳಲ್ಲಿ   ಹಾಡುಗಳು ಒಂದು ಮಟ್ಟಕ್ಕೆ ಹಿಟ್ ಆದರೂ  ಕೆಲವು  ಸಿನಿಮಾ ಫ್ಲಾಪ್ ಆಗುತ್ತಿತ್ತು. ತಾಳ್ಮೆಯಿಂದ ಕಾದ ಜನ್ಯ ಬದುಕಿನಲ್ಲಿ 'ಕೆಂಪೇಗೌಡ' ಬಿರುಗಾಳಿಯಂತೆ ಬಂತು. ಸಂಗೀತ ನಿರ್ದೇಶಕರಾಗಿ, ಸಂಗೀತ ಸಂಯೋಜಕರಾಗಿ, ಗಾಯಕರಾಗಿ ಖ್ಯಾತಿ ಗಳಿಸಿರುವ ಇವರು ಹಲವು ದೊಡ್ಡ-ದೊಡ್ಡ ಗಾಯನ  ಸ್ಪರ್ಧೆಯಲ್ಲಿ  ತೀರ್ಪುಗಾರರಾಗಿ ಸಹ ಕಾಣಿಸಿಕೊಳ್ಳತ್ತಾರೆ. ಹೀಗೆ ಇವರು ಕನ್ನಡ ಚಿತ್ರರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಗಣೇಶ್ ಅಭಿನಯದ'99' ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡುತ್ತಿದ್ದು, , ಈ ಸಿನಿಮಾ ಜನ್ಯ ಅವರ ನೂರನೇ ಸಿನಿಮಾವಾಗಿದೆ.
ಮುಂದೆ ಓದಿ

ಅರ್ಜುನ್ ಜನ್ಯ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಮಹೇಶ್ ಬಾಬು 26 Dec 2025
ವಿಜಯ್ ಎಸ್ ಸ್ವಾಮಿ 25 Jul 2025
as Music Director
ಶಶಾಂಕ್ 06 Jun 2025
ಪ್ರೇಮ್ 08 Aug 2025

ಅರ್ಜುನ್ ಜನ್ಯ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅರ್ಜುನ್ ಜನ್ಯ

ಹೆಸರು ಅರ್ಜುನ್ ಜನ್ಯ
ಹುಟ್ಟಿದ ದಿನ 13 May 1980
ವಯಸ್ಸು 46
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅರ್ಜುನ್ ಜನ್ಯ ಆಸ್ತಿ

ಆಸ್ತಿ

ಅರ್ಜುನ್ ಜನ್ಯ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+