twitter

    ನಟಸಾರ್ವಭೌಮ ವಿಶೇಷತೆಗಳು

    ಜನೇವರಿ 5,2019 ರಂದು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಜರುಗಿತು. ಈ ಸಮಾರಂಭದಲ್ಲಿ ರಾಘವೇಂದ್ರ ರಾಜಕುಮಾರ್‌ರವರ ಪುತ್ರ ಯುವರಾಜ ಕುಮಾರ್ ನೃತ್ಯ ಪ್ರದರ್ಶನ ನೀಡಿದರು.

    1.ಚಿತ್ರದ ವಿತರಣಾ ಹಕ್ಕುಗಳು ಧೀರಜ್ ಎಂಟರ್‌ಪ್ರೈಸಸ್‌ಗೆ 22 ಕೋಟಿಗೆ ಮಾರಾಟವಾಗಿವೆ.

    2.ಚಿತ್ರದಲ್ಲಿ ಪುನೀತ ರಾಜಕುಮಾರ್ ಬಳಸಿರುವ ಕ್ಯಾಮೆರಾದ ಬೆಲೆ 13.56 ಲಕ್ಷ ರೂಪಾಯಿ.

    3.ಪುನೀತ ಸಿನಿಜೀವನದಲ್ಲೇ ಮೊದಲ ಬಾರಿಗೆ ಹಾರರ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ರವಿ ಬಸ್ರೂರ್‌ರ ಹಾರರ್ ಚಿತ್ರ `ಕಟಕ'ದಲ್ಲಿ ಹಿನ್ನಲೆ ಧ್ವನಿ ಮೂಲಕ ಸಂದೇಶ ನೀಡಿದ್ದರು. 

     
    4. ಚಿತ್ರದ ಟ್ರೇಲರ್‌ನ್ನು ಜನೇವರಿ 25 ಕ್ಕೆ ಬಿಡುಗಡೆ ಮಾಡಿತು. ಸೆನ್ಸಾರ್‌ನಿಂದ ಯಾವುದೇ ಕಟ್ ಅಥವಾ ಮ್ಯೂಟ್ ಇಲ್ಲದೆ U/A ಸರ್ಟಿಫಿಕೇಟ್ ಪಡೆದ ನಟಸಾರ್ವಭೌಮ ಫೆಬ್ರವರಿ 7,2019 ಕ್ಕೆ ವಿಶ್ವದಾದ್ಯಂತ ಬಿಡುಗೆಡೆಯಾಯಿತು. 

    5.ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಫ್ರಥಮ ಬಾರಿಗೆ ಚಿತ್ರವೊಂದು ಸತತವಾಗಿ 24 ಗಂಟೆ ಪ್ರದರ್ಶನ ಕಂಡ ದಾಖಲೆ ನಟಸಾರ್ವಭೌಮ ಚಿತ್ರದ ಹೆಸರಿಗೆ ಸೇರಿತು. ಚಿತ್ರ ಬಿಡುಗಡೆ ದಿನಾಂಕ ಫೆಬ್ರವರಿ 7,2019 ರ ಮಧ್ಯರಾತ್ರಿ 12 ರಿಂದ ಮರುದಿನ ಮಧ್ಯರಾತ್ರಿ 12 ರವರೆಗೆ ಸತತವಾಗಿ ಚಿತ್ರ ಪ್ರದರ್ಶನವಾಯಿತು.

    6.ಚಿತ್ರ ಬಿಡುಗಡೆಯ ಮೊದಲ ಬೆಂಗಳೂರಿನಲ್ಲಿ 550 ಕ್ಕೂ ಹೆಚ್ಚು  ಪ್ರದರ್ಶನಗಳನ್ನು ಕಂಡ ಮೊದಲ ಚಿತ್ರವಾಗಿ `ನಟಸಾರ್ವಭೌಮ' ದಾಖಲಾಯಿತು.ಈ ಹಿಂದೆ ಕೆಜಿಎಫ್ ಚಿತ್ರ ಬೆಂಗಳೂರಿನಲ್ಲಿ ಮೊದಲ ದಿನ 525 ಶೋಗಳನ್ನು ಪಡೆದುಕೊಂಡಿತ್ತು.

    7.ನಟಸಾರ್ವಭೌಮ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದೆ.ಚಿತ್ರದ ವಿಜಯಯಾತ್ರೆಯನ್ನು ಪುನೀತ್ ರಾಜ್ಯದ ಹಲವು ಭಾಗಗಳ ಥಿಯೇಟರ್‌ಗಳಿಗೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಆಚರಿಸಿದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X