Don't Miss!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- News
ಕಳಪೆ ಊಟದ ವಿರುದ್ಧ ಪ್ರತಿಭಟನೆ; ಬಳ್ಳಾರಿಯಲ್ಲಿ ಎಸ್ಟಿ ಎಸ್ಸಿ ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಹೊರಕ್ಕೆ, ಜೆಡಿಎಸ್ ಆಕ್ರೋಶ
- Sports
BGT 2023: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಲ್ರೌಂಡರ್ ಆಡೋದು ಅನುಮಾನ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Technology
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ನಟ ಸಾರ್ವಭೌಮ' ಪುನೀತ್ ಇಂಟ್ರೊಡಕ್ಷನ್ ಗಾಗಿ ದುಬಾರಿ ಸಾಂಗ್ ಶೂಟ್.!
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರವೇ 'ನಟ ಸಾರ್ವಭೌಮ'. 'ರಣ ವಿಕ್ರಮ' ಬಳಿಕ ಅಪ್ಪು ಮತ್ತು ಪವನ್ ಒಡೆಯರ್ ಒಂದಾಗಿರುವುದು ಈ ಚಿತ್ರದಲ್ಲೇ.!
ಈಗಾಗಲೇ 'ನಟ ಸಾರ್ವಭೌಮ' ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಮೈಸೂರು, ಬಳ್ಳಾರಿ ಹಾಗೂ ಕೊಲ್ಕತ್ತಾದಲ್ಲಿ 'ನಟ ಸಾರ್ವಭೌಮ' ಚಿತ್ರ ಚಿತ್ರೀಕರಣಗೊಂಡಿದೆ.
ಫೋಟೋ ಜರ್ನಲಿಸ್ಟ್ ಆಗಿ ಪುನೀತ್ ರಾಜ್ ಕುಮಾರ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರೊಂದಿಗೆ ಅನುಪಮಾ ಪರಮೇಶ್ವರನ್ ಹಾಗೂ ರಚಿತಾ ರಾಮ್ ನಾಯಕಿ ಆಗಿ ಅಭಿನಯಿಸಿದ್ದಾರೆ.
'ನಟ ಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಇಂಟ್ರೊಡಕ್ಷನ್ ಗಾಗಿ ಅತ್ಯಂತ ದುಬಾರಿ ಸಾಂಗ್ ಶೂಟ್ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಪವನ್ ಒಡೆಯರ್. ಮುಂದೆ ಓದಿರಿ...

ದುಬಾರಿ ಸಾಂಗ್ ಶೂಟ್
ಹೇಳಿ ಕೇಳಿ ಪುನೀತ್ ರಾಜ್ ಕುಮಾರ್ ಉತ್ತಮ ಡ್ಯಾನ್ಸರ್. ಹೀಗಾಗಿ, 'ನಟ ಸಾರ್ವಭೌಮ' ಚಿತ್ರದಲ್ಲಿ ಒಂದೊಳ್ಳೆ ಇಂಟ್ರೊಡಕ್ಷನ್ ಸಾಂಗ್ ಇಡಲು ಪವನ್ ಒಡೆಯರ್ ಮನಸ್ಸು ಮಾಡಿದ್ದಾರೆ. ಈ ಹಾಡಿಗಾಗಿ ದುಬಾರಿ ಬೆಲೆಯ ಸೆಟ್ ನಿರ್ಮಾಣಗೊಳ್ಳುತ್ತಿದೆ.
'ನಟ
ಸಾರ್ವಭೌಮ'ನ
ಹಾಡಿಗೆ
ವಿಜಯ
ಪ್ರಕಾಶ್,
ಶ್ರೇಯಾ
ಘೋಷಲ್
ಧ್ವನಿ

ಕಿಂಗ್ ಆಫ್ ಸಿನಿಮಾ...
''ನಟ ಸಾರ್ವಭೌಮ.. ಹೀ ಈಸ್ ದಿ ಕಿಂಗ್ ಆಫ್ ಸಿನಿಮಾ...'' ಎಂಬ ಸಾಲಿನಿಂದ ಹಾಡು ಶುರುವಾಗಲಿದ್ದು, ಪುನೀತ್ ಗಾಗಿ ನೃತ್ಯ ಸಂಯೋಜಕ ಭೂಷಣ್ ಸಖತ್ ಸ್ಟೈಲಿಶ್ ಸ್ಟೆಪ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಡಿ.ಇಮಾಮ್ ಸಂಗೀತ ನಿರ್ದೇಶನದ ಈ ಹಾಡು ಸಿಕ್ಕಾಪಟ್ಟೆ ಕಿಕ್ ಕೊಡಲಿದ್ಯಂತೆ.
ಈ
ಫೋಟೋದಲ್ಲಿರುವ
ನಟ
ಯಾರೆಂದು
ಕಂಡುಹಿಡಿಯಲು
ಸಾಧ್ಯವೇ
ಇಲ್ಲ

ಆರು ದಿನಗಳ ಕಾಲ ಶೂಟಿಂಗ್
ನವೆಂಬರ್ 12 ರಿಂದ ಈ ಹಾಡಿನ ಚಿತ್ರೀಕರಣ ಆರಂಭವಾಗಲಿದ್ದು, 6 ದಿನಗಳ ಕಾಲ ಸಾಂಗ್ ಶೂಟಿಂಗ್ ನಡೆಯಲಿದೆ. ಈ ಹಾಡಿನಲ್ಲಿ ಅಪ್ಪು ಸೂಪರ್ ಸ್ಟೈಲಿಶ್ ಆಗಿ ಕಾಣಲು ಯೋಗಿ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದಾರೆ.
'ನಟ
ಸಾರ್ವಭೌಮ'
ಸಿನಿಮಾದಲ್ಲಿದೆ
ಪಾರ್ಟಿ
ಸಾಂಗ್.!

ಡಿಸೆಂಬರ್ ನಲ್ಲಿ ಚಿತ್ರ ರಿಲೀಸ್
ನವೆಂಬರ್ ಮುಗಿಯುವುದರೊಳಗೆ 'ನಟ ಸಾರ್ವಭೌಮ' ಶೂಟಿಂಗ್ ಕಂಪ್ಲೀಟ್ ಆಗಲಿದ್ದು, ಅದಾಗಲೇ ಪೋಸ್ಟ್ ಪ್ರೊಡಕ್ಷನ್ ಗೆ ಚಾಲನೆ ಕೊಡಲಾಗಿದೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಡಿಸೆಂಬರ್ ನಲ್ಲಿ 'ನಟ ಸಾರ್ವಭೌಮ' ಚಿತ್ರ ನಿಮ್ಮೆಲ್ಲರ ಎದುರಿಗೆ ಬರಲಿದೆ.