X
ಕನ್ನಡ » ಚಲಚಿತ್ರಗಳು » ಶಿವಮ್ಮ ಯರೆಹಂಚಿನಾಳ
ಶಿವಮ್ಮ ಯರೆಹಂಚಿನಾಳ

ಶಿವಮ್ಮ ಯರೆಹಂಚಿನಾಳ

Comedy | Drama | 14 Jun 2024 | U/A |
Kannada

2.5 /5 Users

0 /5 Filmibeat

ಶಿವಮ್ಮ ಯರೆಹಂಚಿನಾಳ ಕಥೆ

ಶಿವಮ್ಮ ಯರೆಹಂಚಿನಾಳ ಸಿನಿಮಾವನ್ನು ಜಯಶಂಕರ್ ಆರ್ಯರ್  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶರಣಮ್ಮ ಚಟ್ಟಿ ಎಂಬುವವರು ಟೈಟಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಚೆನ್ನಮ್ಮ ಅಬ್ಬೆಗೆರೆ, ಶಿವು ಅಬ್ಬೆಗೆರೆ, ಶ್ರುತಿ ಕೊಂಡೇನಹಳ್ಳಿ, ಚೆನ್ನಪ್ಪ ಹನ್ಸಿ, ಶಿವಾನಂದ್ ಸಾದರ್ ಚಿತ್ರದ ತಾರಾಗಣದಲ್ಲಿದ್ದಾರೆ. ವಿಕಾಸ್ ಯುಆರ್ಎಸ್ ಹಾಗೂ ಸೌಮ್ಯಾನಂದ ಸಾಹಿ ಛಾಯಾಗ್ರಹಣ 'ಶಿವಮ್ಮ' ಚಿತ್ರಕ್ಕಿದೆ. ಈ ಸಿನಿಮಾವನ್ನು ರಿಷಭ್ ಶೆಟ್ಟಿ ತಮ್ಮ ರಿಷಭ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಫಜರ್ ಚಲನಚಿತ್ರೋತ್ಸವದಲ್ಲಿ ಕೂಡ 'ಶಿವಮ್ಮ' ಸಿನಿಮಾ ಪ್ರಶಸ್ತಿ ಗೆದ್ದಿದ್ದು,  ಇದರ ಜೊತೆಗೆ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳು ಚಿತ್ರಕ್ಕೆ ಲಭಿಸಿದೆ. ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಇಡೀ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಊರಿನ ಗ್ರಾಮಸ್ಥರೇ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದಾರೆ. ಕಥೆ: ಯರೆಹಂಚಿನಾಳದ ಸರ್ಕಾರಿ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದ ಶಿವಮ್ಮನ ಬದುಕು ಹೇಗೆಲ್ಲಾ ಬದಲಾಗುತ್ತದೆ ಎನ್ನುವ ಕಥೆ ಚಿತ್ರದಲ್ಲಿದೆ. ಕುಟುಂಬ ಪೋಷಣೆಗಾಗಿ ಊರೆಲ್ಲಾ ಸಾಲ ಮಾಡಿಕೊಂಡ ಶಿವಮ್ಮ, ಕೊನೆಗೆ ಶಾಲಾ ಶಿಕ್ಷಕರ ಬಳಿಯೂ ಸಾಲ ಮಾಡಿ ಸಮಸ್ಯೆ ಎದುರಿಸುತ್ತಾಳೆ. ಬಳಿಕ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರ ಮಾಡಲು ಹೋಗಿ ಆಕೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎನ್ನುವ ಕಥೆಯನ್ನು ಎಳೆ ಎಳೆಯಾಗಿ ಹೇಳಲಾಗಿದೆ.  ಹಳ್ಳಿಯಲ್ಲಿ ನೆಟ್ವರ್ಕ್ ಮಾರ್ಕೆಟಿಂಗ್ ಹೆಸರಿನಲ್ಲಿ ಶಿವಮ್ಮ ಒಂದು ಉತ್ಪನ್ನವನ್ನು ಮಾರಿ ಹಣ ಮಾಡಲು ಮುಂದಾಗುತ್ತಾಳೆ. ಸರ್ವ ರೋಗಕ್ಕೂ ಇದು ರಾಮಬಾಣ ಎನ್ನುವಂತೆ ಒಂದು ಪೌಡರ್ ಊರಿಗೆಲ್ಲಾ ಹಂಚುತ್ತಾಳೆ. ಸಾಲ ಮಾಡಿ ಸಮಸ್ಯೆ ಸಿಲುಕುವ ಶಿವಮ್ಮಗೆ ಮಗಳು ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಾಗಿ ಮತ್ತೊಂದು ತಲೆನೋವು ಶುರುವಾಗುತ್ತದೆ. ಹೀಗೆ ಹಳ್ಳಿಜನರ ಜೀವನಕ್ಕೆ ಹತ್ತಿರ ಎನ್ನಿಸುವ ಕಥೆ ಚಿತ್ರದಲ್ಲಿದೆ.
Read More

ಶಿವಮ್ಮ ಯರೆಹಂಚಿನಾಳ ಕಲಾವಿದರು ಮತ್ತು ಸಿಬ್ಬಂದಿ

ಶಿವಮ್ಮ ಯರೆಹಂಚಿನಾಳ ಕ್ರೂ ಮಾಹಿತಿ

ನಿರ್ದೇಶಕ ಜಯಶಂಕರ್ ಆರ್ಯರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ರಿ‍ಷಭ್ ಶೆಟ್ಟಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಶಿವಮ್ಮ ಯರೆಹಂಚಿನಾಳ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಶಿವಮ್ಮ ಯರೆಹಂಚಿನಾಳ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+