»   » ಗಾಯಕ ಸಿ ಅಶ್ವತ್ಥ್ 'ಸಾಧನೆಯ ಹಾದಿ' ಅನಾವರಣ

ಗಾಯಕ ಸಿ ಅಶ್ವತ್ಥ್ 'ಸಾಧನೆಯ ಹಾದಿ' ಅನಾವರಣ

Posted By:
Subscribe to Filmibeat Kannada
Dr.C Ashwath
ಸುಗಮ ಸಂಗೀತ ಗಾರುಡಿಗ ಡಾ.ಸಿ ಅಶ್ವತ್ಥ್ ಅವರ ಆಲ್ಬಂ ಮತ್ತು ಕ್ಯಾಲೆಂಡರನ್ನು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಬುಧವಾರ(ಮಾ.31) ಬಿಡುಗಡೆ ಮಾಡಿದರು. ಸುರೇಶ್ ಕುಮಾರ್ ಮಾತನಾಡುತ್ತಾ, ಅಶ್ವತ್ಥ್ ಅವರಿಗೆ ಅವರೆ ಸರಿಸಾಟಿಯಾಗಿದ್ದರು ಎಂದು ಪ್ರಶಂಸಿದರು.

'ಸಿ ಅಶ್ವತ್ಥ್ ಮತ್ತೆ ಹಾಡುತ್ತಾರೆ' ಎಂಬ ಕಾರ್ಯಕ್ರವನ್ನು ಸುಂದರ ಪ್ರಕಾಶನ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುರೇಶ್ ಕುಮಾರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಿ ಅಶ್ವತ್ಥ್ ಕುರಿತ 'ಸಾಧನೆಯ ಹಾದಿ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಿ ಅಶ್ವತ್ಥ್ ಅವರ ಸುಮಧುರ ಕಂಠದಿಂದ ಕನಕದಾಸ, ಪುರಂದರದಾಸ, ಶಿಶುನಾಳ ಶರೀಫರ ಗೀತೆಗಳು ಮೂಡಿಬಂದಿವೆ.ಹಾಗಾಗಿಯೇ ದಾಸರ ಪದಗಳನ್ನು ಜನಸಾಮಾನ್ಯರು ಇನ್ನು ಮರೆತಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.

ವಿಮರ್ಶಕರಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಕವಿಗಳಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಬಿ ಆರ್ ಲಕ್ಷ್ಮಣರಾವ್, ನಿರ್ಮಾಣ್ ಶೆಲ್ಟರ್ಸ್ ನ ಲಕ್ಷ್ಮಿನಾರಾಯಣ್, ಸಿಐಡಿ ಪೊಲೀಸ್ ಮತ್ತು ಪೊಲೀಸ್ ಮಹಾನಿರ್ದೇಶಕ ಡಿ ವಿ ಗುರುಪ್ರಸಾದ್, ಸಂಗೀತ ನಿರ್ದೇಶಕ ವಿ ಮನೊಹರ್ ಮತ್ತು ಪ್ರವೀಣ್ ಡಿ ರಾವ್ ಹಾಗೂ ಸುಂದರ ಪ್ರಕಾಶನದ ಗೌರಿ ಸುಂದರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada