For Quick Alerts
  ALLOW NOTIFICATIONS  
  For Daily Alerts

  ಭಟ್ಟರ ಕೈಚಳಕ ಭಗ್ನಪ್ರೇಮಿಗಳ ಗೀತೆ: ಯಾರಿಗೆ ಹೇಳೋಣ...

  By Mahesh
  |

  ನಿರ್ದೇಶಕ, ಚಿತ್ರ ಸಾಹಿತಿ ಯೋಗರಾಜ್ ಭಟ್ಟರ ಶಿಷ್ಯ ಪವನ್ ಕುಮಾರ್ ನಿರ್ದೇಶನದ ಮೊದಲ ಚಿತ್ರ 'ಲೈಫು ಇಷ್ಟೇನೆ' ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ತೆರೆ ಕಾಣುವ ಸಾಧ್ಯತೆಯಿದೆಯಂತೆ. ದಿಗಂತ್ ನಟಿಸಿರುವ ಈ ಚಿತ್ರದ ಹಾಡುಗಳು ಯುವಕ/ತಿಯರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ.

  ಯೋಗರಾಜ್ ಭಟ್ ರ ಕೈಚಳಕದಿಂದ ಹೊರಹೊಮ್ಮಿರುವ 'ಯಾರಿಗೆ ಹೇಳೋಣ..ನಮ್ಮ ಲವ್ ಪ್ರಾಬ್ಲಂ' ಗೀತೆ ಫೇಸ್ ಬುಕ್ ನಲ್ಲಿ ಯಾರೋ ಪುಣ್ಯಾತ್ಮ ಹರಿಬಿಟ್ಟಿದ್ದಾನೆ. ಮನೋಮೂರ್ತಿ ಸಂಗೀತವಿರುವ ಈ ಹಾಡು ಭಗ್ನಪ್ರೇಮಿಗಳ ರಾಷ್ಟ್ರಗೀತೆಯಾಗುವುದರಲ್ಲಿ ಸಂಶಯವೇ ಇಲ್ಲ. ಒಮ್ಮೆ ಓದಿ ನೋಡಿ...

  ಯಾರಿಗ್ ಹೇಳೋಣ ನಮ್ ಪ್ರಾಬ್ಲಮ್ಮು...ಹುಡುಗರ ನೋವಿಗೆ ಇಲ್ಲಾ ಮುಲಾಮು

  ಹಳೆ ಗರ್ಲ್ ಫ್ರೆಂಡ್ಸ್ ಗೆಲ್ಲಾ ದೊಡ್ಡ ಸಲಾಮ್ಮು..ಕಿವಿ ನೀವು ಇಟ್ಟ ದೊಡ್ಡ ಹೂವೇ ಖಾಯಮ್

  ಎಲ್ಲಿ ಇದ್ರೂ ನೀವ್ ಹೆಂಗೆ ಇದ್ರೂ ಬಾತರೂಮ್ ನಲ್ಲಾದ್ರೂ ಹಾಡಿ ನಮ್ಮ ಪೋಯಂ

  ಮಾಜಿ ಹುಡುಗಿರ ಲೈಫೇ ತುಂಬಾ ಆರಾಮು...[ಯಾರಿಗೆ..]

  ತುಂಬಾ ಸಣ್ಣ ಹುಡ್ಗ ಅಂಥಾ, ಅಂದುಕೊಂಡಿದ್ದೆ ನಾನು..ಏಳನೇ ಕ್ಲಾಸಲ್ಲಿ

  ಗೆಜ್ಜೆ ಸೌಂಡು ಮಾಡಿಕೊಂಡು ಕುಂಟಟೋಲ್ಲೆ ಆಡ್ತಾ ಬಂದ್ಲು, ಹೆಸರು ವೈಶಾಲಿ

  ಯಾಕೋ ಏನೋ ನಮ್ಮ ದೇವ್ರು ಬತ್ತಿ ಹಿಡೋದ್ ಕಲ್ತ್ ಬಿಟ್ಟವ್ನೇ

  ಹುಡುಗಿಯರ ಎದುರು ಮಾತಾಡ್ದಂತೆ ನಾಲಗೆ ಮೇಲೆ ಕುಂತ್ಕೊಂಡವ್ನೆ

  ನಾನು ವೈಶಾಲಿಗೆ ಲವ್ ಯೂ ಅಂಥಾ ಹೇಳೋಕೆ ಆಗ್ಲಿಲ್ಲ

  ಆಕೆ ನನಗಿಂತ ಒಂದು ಫೂಟೂ... ಎತ್ತರ ಬೆಳೆದುಬಿಟ್ಲಲ್ಲ

  ಯಾರಿಗೆ ಹೇಳೋಣ ನಮ್ಮ ಹೈಟೂ ಪ್ರಾಬ್ಲಮ್ಮು..

  ವೈಶಾಲಿ ನೀ ಯಾಕೆ ಕುಡಿದೆ ಕಾಂಪ್ಲಾನೂ...

  ಶೀಲಾ ಸಿಕ್ಲು ಪಿಯೂಸಿಲಿ..ಖಾರ ಕಮ್ಮಿ ಹಾಕಿಸಿಕೊಂಡು ಪಾನಿಪೂರಿ ತಿಂದ್ವಿ

  ಕೈನೆಟಿಕ್ಕಿನಲ್ಲಿ ಇಬ್ರು ಒಬ್ಬರೇ ಕುಂತ ಹಾಗೆ ಕುಂತು ಓಡಾಡಿಕೊಂಡು ಇದ್ವಿ

  ಸ್ಯಾಂಕಿ ಟ್ಯಾಂಕಿನಲ್ಲಿ ಅವಳ ಜೊತೆ ಈಜಾಜಿದ ಕನಸು ಬಿತ್ತು

  ಮಿಡ್ ನೈಟಿನಲ್ಲಿ ಮೈಸೂರು ರೋಡ್ ನಮ್ಮಿಬ್ರನ್ನಾ ನೋಡ್ತಾ ಇತ್ತು

  ಲವ್ವೂ ನೆತ್ತಿಗೆ ಹತ್ತಿ ನಾನು ಮರೆತೆ ಕಾಲೇಜು ಮೆಟ್ಲೂ...

  ಆದ್ರೆ ಒಂದು ದಿವ್ಸ.. ಸೀದಾ ಬಂದು ರಾಖಿ ಕಟ್ಬಿಟ್ಲೂ...

  ಯಾರಿಗ್ ಹೇಳೋಣ ಎಲ್ಲರಿಗೂ ಸೇಮ್ ಪ್ರಾಬ್ಲಮ್ಮು

  ಹೆಣ್ಮಕ್ಕಳಿಗೆ ಅಣ್ಣ ಆಗಿ ಬಿಟ್ಕೊಂಡೆ ರಮ್ಮೂ..

  ಡಿಗ್ರಿ ಮಾಡುವಾಗ ಒಮ್ಮೆ ಬಸ್ಸು ಪಾಸಿಗಂತ ನಾನು ಕ್ಯೂನಲ್ಲಿ ಹೋದೆ

  ನನ್ನ ಹಿಂದೆ ನಿಂತೋಳಿಗೆ ತುಟಿ ಪಕ್ಕ ಮಚ್ಚೆ ಇತ್ತು.. ಹೆಸರು ಹೇಳಲಾರೆ

  ಅರ್ಧ ಸೆಕೆಂಡ್ ಸಾಕು ನಂಗೆ ಬೀಳೋದಕ್ಕೆ ಲವ್ವಿನಲ್ಲಿ..

  ಆಮೇಲೆ ಏನು ಆಯ್ತು ಅಂಥಾ ನಿಮ್ಗೆ ನಾನು ಹೆಂಗೆ ಹೇಳ್ಲಿ

  ಅವಳಿಗೆ ನಾನು ನೂರಒಂದನೇ ಬಾಯ್ ಫ್ರೆಂಡ್ ಆಗಿದ್ದೆ ಕಂಡ್ರಿ

  ಸೆಂಚೂರಿ ಹೊಡೆದೊಳ್ ಮುಂದೆ ನಾನು ಬಚ್ಚಾ ಆಗಿದ್ದೆ ಕಂಡ್ರಿ

  ಯಾರಿಗ್ ಹೇಳೋಣ ನಮ್ಮ ನೆಕ್ಸ್ಟ್ ಪ್ರಾಬ್ಲಮ್ಮು..

  ನನ್ನ ಫ್ಯಾಶ್ ಬ್ಯಾಕೆ.........ಚ್ಯೂಯಿಂಗ್ ಗಮ್ಮೂ..

  English summary
  Actor Diganth starrer Life Ishtene movie song Yarige Helona nam love problem is going round in social network sites. Yogaraj Bhat's Assistant Pawan Kumar is making debut as director through this movie. Lyrics penned by Yogaraj Bhat and Mano Murthy has scored melodious music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X