»   »  ನಮ್ಮ ಮನೆಯಂಗಳದಿ ಬೆಳೆದೊಂದು ಹೂ

ನಮ್ಮ ಮನೆಯಂಗಳದಿ ಬೆಳೆದೊಂದು ಹೂ

Subscribe to Filmibeat Kannada

ಅರುವತ್ತರ ದಶಕದಲ್ಲಿ ತೆರೆಕಂಡ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ 'ಕುಲವಧು'(1963) ಸಹ ಒಂದು. ರಾಜ್ ಕುಮಾರ್, ಲೀಲಾವತಿ ಅವರ ಜನಪ್ರಿಯ ಜೋಡಿ, ಜಿ.ಕೆ.ವೆಂಕಟೇಶ್ ಸಂಗೀತದ ಮೋಡಿ ಚಿತ್ರಪ್ರೇಮಿಗಳನ್ನು ಎಲ್ಲ ಕಾಲದಲ್ಲೂ ಕಟ್ಟಿಹಾಕುವಂಥ ಚಿತ್ರ! ವೀ ಸೀತಾರಾಮಯ್ಯ ಅವರ ಲೇಖನಿಯಿಂದ ಹೊಮ್ಮಿದ ಗೀತೆಗೆ ಎಸ್.ಜಾನಕಿ ಧ್ವನಿಯಾಗಿದ್ದರು. ವಿಸೀ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದಟ್ಸ್ ಕನ್ನಡ ಓದುಗರಿಗಾಗಿ ಈ ಗೀತೆ.

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು

ಮರೆಮೋಸ ಕೊಂಕುಗಳನರಿಯಳಿವಳು ಇನಿಸ ವಿಶ್ವಾಸವನು ಕಂಡರಿಯಳು
ಕಷ್ಟಗಳ ಸಹಿಸದೆಯೆ ಕಾಣದೆಯೇ ಬೆಳೆದವಳು ಸಲಹಿಕೊಳಿರಿಮಗಳ ಓಪ್ಪಿಸುವೆವು

ನಿಮಗಿವಳು ನೀಡುತಿಹ ಹಾಲು ಹಣ್ಣುಗಳ ಸವಿ ಎಂದೆದೂ ಅವಳ ನಡೆ ನಿಮ್ಮ ಪರವಾಗಿ
ನಮ್ಮ ಕುಲ ಮನೆಗಳಿಗೆ ಹೊರಗಾಗಿ ಬಂದಿಹಳು ನಿಮ್ಮ ಕುಲವನು ಬೆಳಸೆ ಬಂದಿರುವಳು

ನಿನ್ನ ಮಡದಿಯ ಕೊಂಡು ಸುಖವಾಗಿರವ್ ಮಗುವೆ ನಿಮ್ಮ ಸೊಸೆ ಸೋದರಿಯು ಕೊಳ್ಳಿರಿವಳ
ನಿಮ್ಮ ಕೀರುತಿ ಬೆಳೆಯಲಿ ಇವಳ ಸೌಜನ್ಯದಲಿ ನಿಮ್ಮ ಕುಲಶೀಲಗಳು ಪರಿಮಳಿಸಲಿ

ಹೆತ್ತಮನೆಗಿಂದು ಹೊರಗಾದೆ ನೀ ಮಗಳೆ ಈ ಮನೆಯೇ ಈ ಇವರೆ ನಿನ್ನವರು ಮುಂದೆ
ಇವರೆ ತಾಯ್ಗಳು ಸಖರು ಭಾಗ್ಯವನು ಬೆಳಸುವರು ಇವರ ದೇವರೆ ನಿನ್ನ ದೇವರುಗಳು
ನಿಲ್ಲು ಕಣ್ಣರೊಸಿಕೊಳು ನಿಲ್ಲು ತಾಯ್ ಹೋಗುವೆವು ತಾಯಿರ ತಂದೆಯಿರ ಕೊಳ್ಳಿರಿವಳ
ಎರಡು ಮನೆಗಳ ಹೆಸರು ಖ್ಯಾತಿ ಉಳಿವಂತೆ ತುಂಬಿದಾಯುಶ್ಯದಲಿ ಬಾಳಿ ಬದುಕು

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada