»   »  ಇಳಿದು ಬಾ ತಾಯಿ..ಇಳಿದು ಬಾ ತಾಯಿ

ಇಳಿದು ಬಾ ತಾಯಿ..ಇಳಿದು ಬಾ ತಾಯಿ

Posted By:
Subscribe to Filmibeat Kannada

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಹಾಶಿವರಾತ್ರಿಯ ಪ್ರಯುಕ್ತ ಗಂಗೆಯ ಪವಿತ್ರ ಜಲವನ್ನು ಆಸ್ತಿಕ ಮಹಾಶಯರಿಗೆ ತಲುಪಿಸಿ ಭಗವಂತನ ಕೃಪೆಯ ಪ್ರಸಾರ ಕಾರ್ಯಕ್ರಮ ಸಾಂಗವಾಗಿ ನಡೆಸಿದೆ. ಅಧುನಿಕ ಭಗೀರಥ ಎಂದ ಅಭಿದಾನಕ್ಕೆ ಪಾತ್ರರಾಗುವ ಎಲ್ಲಾ ಅರ್ಹತೆ ಉಳ್ಳ ಮಾನ್ಯ ಮುಜರಾಯಿ ಖಾತೆ ಸಚಿವ ಕೃಷ್ಣಯ್ಯ ಶೆಟ್ಟರು ಗಂಗೆಯನ್ನು ಹೃಷಿಕೇಶದಿಂದ ರಾಜ್ಯದ ಸುಮಾರು 1500 ಶಿವನ ದೇಗುಲಗಳಿಗೆ ತಲುಪಿಸಿ, ಕಾವೇರಿ ನೀರು ಕುಡಿದು ರಾತ್ರಿ ಜಾಗರಣೆಗೆ ತಯಾರಾಗುತ್ತಿದ್ದಾರೆ.

ದೂರದಿಂದ ಭಾರತದ ಮುಡಿಯಿಂದ ಗಂಗೆಯನ್ನು ಪಾದದವರೆಗೂ ಕರೆ ತರುವ ಮುನ್ನ ಸಚಿವರು ವರಕವಿ ಬೇಂದ್ರೆ ಅವರು 1970 ರಲ್ಲಿ ಅರಿಶಿನ ಕುಂಕುಮ ಚಿತ್ರಕ್ಕೆ ಬರೆದ ' ಇಳಿದು ಬಾ. .. ತಾಯಿ.. ಇಳಿದು ಬಾ ' ಎಂಬ ಹಾಡನ್ನು ಹಾಡುತ್ತಿದ್ದರಂತೆ. ಅದೇನೆ ಇರಲಿ.. ಅಂದು ಕವಿ ಬರೆದ ಶಕ್ತಿಪೂರ್ಣ ಸಾಹಿತ್ಯಕ್ಕೆ ಸೊಗಸಾದ ಸಂಗೀತ ನೀಡಿದವರು ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ . ಪಿಬಿ ಶ್ರೀನಿವಾಸ್ ಅವರ ಕಂಚಿನ ಕಂಠದಲ್ಲಿ ಈ ಹಾಡನ್ನು ಕೇಳುತ್ತಿದ್ದರೆ ಮಿಂಚಿನ ಸಂಚಾರವಾಗುತ್ತದೆ. ಹಾಡು ಕೇಳಿ ಸಚಿವರಿಗೆ ಏನಾಯ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಸಾಹಿತ್ಯ : ವರಕವಿ ಡಾ.ದ.ರಾ.ಬೇಂದ್ರೆ
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್

ಆಆ..ಆಆ.. ಆಆ..ಆಆ..
ಓಂ..ಓಂ..ಓಂ..

ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ
ದೇವ ದೇವರನು ತಣಿಸಿ ಬಾ
ಡಿಕ್ದಿಗಂತದಲಿ ಘಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ನಿನಗೆ ಪೊಡಮಡುವೆ ನಿನ್ನ ನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ
ನೆಲೆದೆ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ
ನೀರಿರರದ ಮೀನ ಕರೆಕರೆವ ಬಾ
ಕರುಕಂಡ ಕರುಳೆ ಮನವುಂಡ ಮರುಳೆ
ಉದ್ದoಡ ಅರುಳೆ ಸುಳಿಸುಳಿದೆ ಬಾ
ಶಿವಶುಭ್ರ ಕರುಣೆ ಅತಿಗಿoಚದರುಣೆ
ವಾತ್ಸಲ್ಯವರುಣೆ ಇಳಿ ಇಳಿದು ಬಾ
ಸುರಸ್ವಪ್ನವಿದ್ದ ಪ್ರತಿಬಿಂಬವಿದ್ದ
ಉದ್ದುದ್ದ ಶುದ್ದ ನೀರೇ..ನೀರೇ..
ಎಚ್ಚೆತ್ಟು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೆ
ಸಿರಿಪಾರಿಜಾತ ವರಪಾರಿಜಾತ
ತಾರಾಕುಸುಮದಿಂದೇ
ಬೃoದಾರವoದೆ ಮಂದಾರಗಂದೆ
ನೀನೇ ತಾಯಿ ತಂದೇ
ರಸಪೂರ್ಣಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದಕನ್ಯೆ....ಕನ್ಯೆ
ಇಳಿದು ಬಾ ತಾಯಿ ಇಳಿದು ಬಾ

ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೆನೇ
ಅವತಾರವೆಂದೇ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುoಬಿ ಬಂದಂತೆ
ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೆನೇ
ಅವತಾರವೆಂದೇ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುoಬಿ ಬಂದಂತೆ

ದುಂ ದುಂ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ ದುಡುಕಿ ಬಾ
ಹರಣ ಹೊಸತಾಗೇ ಹೊಳೆದು ಬಾ
ಬಾಳು ಬೆಳಕಾಗಿ ಬೆಳೆದು ಬಾ
ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅoಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada