»   »  ಸಮಾಜಕ್ಕೆ ಕನ್ನಡಿ ಹಿಡಿಯುವ ಮುಖಪುಟ

ಸಮಾಜಕ್ಕೆ ಕನ್ನಡಿ ಹಿಡಿಯುವ ಮುಖಪುಟ

Subscribe to Filmibeat Kannada
Roopa Iyer
ಎಚ್ ಐವಿ ಏಡ್ಸ್ ಕುರಿತ ರೂಪ ಅಯ್ಯರ್ ಅವರ 'ಮುಖಪುಟ'- Cover Page ಕನ್ನಡ ಮತ್ತು ಇಂಗ್ಲಿಷ್ ಚಿತ್ರದ ಧ್ವನಿಸುರುಳಿಗಳು ಏಕಕಾಲಕ್ಕೆ ಬಿಡುಗಡೆಯಾಗಿವೆ. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಏಡ್ಸ್ ಪೀಡಿತ ಮಕ್ಕಳ ಸಾನಿಧ್ಯದಲ್ಲಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆದದ್ದು ಹೃದಯಸ್ಪರ್ಶಿಯಾಗಿತ್ತು.

ಏಡ್ಸ್ ಪೀಡತ ಮಕ್ಕಳ ಪುಟ್ಟ ಕೈಗಳಲ್ಲಿ 'ಮುಖಪುಟ' ಚಿತ್ರದ ಧ್ವನಿಸುರುಳಿಗಳು ಇದ್ದವು. ವೇದಿಕೆ ಮೇಲೆ ಮಕ್ಕಳೊಂದಿಗೆ ಮಾತಾನಾಡುತ್ತಿದ್ದ ರೂಪಾ ಅಯ್ಯರ್ ಭಾವುಕರಾಗಿದ್ದರು. ಅವರ ಮಾತುಗಳಲ್ಲಿ ಸಮಾಜದ ಮುಖಪುಟ ಅನಾವರಣಗೊಂಡಿತ್ತು. ಈ ಪುಟ್ಟ ಮಕ್ಕಳಾದರೂ ಏನು ಪಾಪ ಮಾಡಿದ್ದರು? ಎಂಬ ಅವರ ಪ್ರಶ್ನೆ ಸಮಾಜಕ್ಕೆ ಚುಚ್ಚುತ್ತಿತ್ತು. ಯುವಕರು ಶಿಕ್ಷಣದೊಂದಿಗೆ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳ ಬೇಕು ಎಂದು ಅವರು ಸಲಹೆ ನೀಡಿದರು.

ಈ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಎಚ್ ಐವಿ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನಟರಾದ ರಾಘವೇಂದ್ರ ರಾಜ್ ಕುಮಾರ್, ಜಗ್ಗೇಶ್ ಕ್ರಮವಾಗಿ ರು.1 ಲಕ್ಷ ಮತ್ತು ರು.50 ಸಾವಿರ ಸಹಾಯಧನ ನೀಡಿದರು. ವಜ್ರೇಶ್ವರಿ ಕುಮಾರ್ ರು.50 ಸಾವಿರ ಮತ್ತು ಛಾಯಾಗ್ರಾಹಕ ಐತಾಳ್ ರು.25 ಸಾವಿರ ಸಹ ನೆರವು ನೀಡಿದರು. ಸಮಾಜದ ಬಗ್ಗೆ ರೂಪ ಅಯ್ಯರ್ ಅವರ ಕಾಳಜಿ ಮುಕ್ತ ಪ್ರಶಂಸೆಗೆ ಪಾತ್ರವಾಯಿತು.

ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡುತ್ತಾ, ಇತರರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವವರು ದಯವಿಟ್ಟು ಗರ್ಭ ನಿರೋಧಕಗಳನ್ನು ಉಪಯೋಗಿಸಿ. ನಮ್ಮ ಸಮಾಜಕ್ಕೆ ಏಡ್ಸ್ ಪೀಡಿತ ಮಕ್ಕಳು ಬೇಡ ಎಂದು ಅವರು ನೇರವಾಗಿ ನುಡಿದರು. ಇದೇ ಸಂದರ್ಭದಲ್ಲಿ ಹಂಸಲೇಖ ಅವರಿಗೆ 'ಧೃವ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada