»   »  ದುನಿಯಾ ಸಾಧನೆ ಮುನಿಯ ಮುರಿಯಲಿದ್ದಾನೆ!

ದುನಿಯಾ ಸಾಧನೆ ಮುನಿಯ ಮುರಿಯಲಿದ್ದಾನೆ!

Subscribe to Filmibeat Kannada
Mayur Patel
ಚಿತ್ರೀಕರಣ ಮುಕ್ತಾಯವಾಗುತ್ತಿದ್ದಂತೆ ಸೆಟ್ ನಲ್ಲೇ ಧ್ವನಿಸುರುಳಿ ಬಿಡುಗಡೆ ಮಾಡಿ 'ಮುನಿಯ' ಚಿತ್ರ ವಿಶಿಷ್ಟ ಸಾಧನೆ ಮಾಡಿದೆ. ಕನ್ನಡ ಚಿತ್ರೋದ್ಯಮದ ಇತಿಹಾಸದಲ್ಲಿ ಈ ರೀತಿ ಧ್ವನಿಸುರುಳಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಮನ್ನಣೆಗೆ ನಟರಾದ ಮಯೂರ್ ಪಟೇಲ್, ಸಾಹಿತ್ಯ ಮತ್ತು ಶೀತಲ್ ಪಾತ್ರರಾಗಿದ್ದಾರೆ.

ಚಿತ್ರಕ್ಕೆ ಸೂಕ್ತ ಶೀರ್ಷಿಕೆ ಹುಡುಕಲು ಸರಿಸುಮಾರು ಒಂದು ವರ್ಷ ಕಳೆದುಹೋಯಿತು. ಮಯೂರ್ ಪಟೇಲ್ ಗಾಯಗೊಂಡ ಕಾರಣ ಚಿತ್ರೀಕರಣ ನಾಲ್ಕು ತಿಂಗಳು ತಡವಾಯಿತು ಎಂದರು ಮುನಿಯಾ ಚಿತ್ರದ ನಿರ್ಮಾಪಕ ಮುನಿರಾಜು. ''ಇನ್ನೂ 16 ದಿನಗಳ ಕಾಲ ಚಿತ್ರೀಕರಣ ಬಾಕಿ ಇದೆ. ಮೇ ತಿಂಗಳಲ್ಲಿ ಮುನಿಯಾ ತೆರೆಗೆ ಬರಲಿದ್ದಾನೆ. ಮುನಿಯನಿಗೆ ಖಂಡಿತವಾಗಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ'' ಎಂಬುದು ನಿರ್ದೇಶಕ ನಾಗಚಂದ್ರ ಅವರ ವಿಶ್ವಾಸ.

ತೆರೆಯ ಮೇಲೆ ಮುನಿಯನನ್ನು ನೋಡಿದ ಮೇಲೆ ಮಾತುಗಳಲ್ಲಿ ವಿವರಿಸುವುದು ಕಷ್ಟ.ಚಿತ್ರದಲ್ಲಿನ ಮೂರು ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ ಎಂಬ ಮಾತುಗಳು ಮಯೂರ್ ಪಟೇಲ್ ರಿಂದ ಹೊರಹೊಮ್ಮಿದವು. ''ದುನಿಯಾ ಚಿತ್ರ 200 ದಿನಗಳ ಪ್ರದರ್ಶನ ಕಂಡಿತು. ಅದೇ ರೀತಿ ನಮ್ಮ ಮುನಿಯ ಸಹ ಗೆಲುವು ಸಾಧಿಸುತ್ತಾನೆ'' ಎಂಬ ವಿಶ್ವಾಸವನ್ನು ದುನಿಯಾ ಚಿತ್ರದ ನಿರ್ಮಾಪಕ ಟಿ.ಪಿ.ಸಿದ್ಧರಾಜು ಅವರು ವ್ಯಕ್ತಪಡಿಸಿದರು.

ಮುನಿಯಾ ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಐದು ಹಾಡುಗಳಿವೆ. ಚಿತಕ್ಕೆ ಶ್ರೀಚಂದ್ರ, ಜಮಖಂಡಿ ಶಿವು, ಕವಿರಾಜ್, ಲೋಕೇಶ್ ಕೃಷ್ಣ ಸಾಹಿತ್ಯವಿದೆ . ಶ್ರೀ ಸದ್ಗುತು ಎಂಟರ್ ಟೈನರ್ಸ್ ಬ್ಯಾನರಿನಡಿ ತಾವರೆಕೆಯ ಮುನಿರಾಜು, ಕಗ್ಗದಾಸಪುರದ ಎ ರಾಜಗೋಪಾಲ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರತಂಡದೊಂದಿಗೆ ನಟ ವಿನೋದ್ ರಾಜ್, ರಾಜಕೀಯ ಧುರೀಣ ರಾಮಲಿಂಗರೆಡ್ಡಿ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ
ಮುಂಬೈ ಕನ್ನಡಿಗರಿಗಾಗಿ ಸಿ.ಅಶ್ವಥ್ ಗಾನ ಸುಧೆ
ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!
ರಾಜ್, ದಿ ಶೋ ಮ್ಯಾನ್ ಧ್ವನಿಸುರಳಿ ವಿಮರ್ಶೆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada