»   »  ಸೋನುನಿಗಂ ಕನ್ನಡ ಆಲ್ಬಂ 'ನೀನೆ ಬರಿ ನೀನೆ'

ಸೋನುನಿಗಂ ಕನ್ನಡ ಆಲ್ಬಂ 'ನೀನೆ ಬರಿ ನೀನೆ'

Subscribe to Filmibeat Kannada

ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಂ ಅವರ ಚೊಚ್ಚಲ ಕನ್ನಡ ಆಲ್ಪಂ 'ನೀನೆ ಬರಿ ನೀನೆ' ಬಿಡುಗಡೆಯಾಗಿದೆ. ಉದ್ಯಮಿ ಅಶೋಕ್ ಖೇಣಿ ಈ ಆಲ್ಪಂನ ನಿರ್ಮಾಪಕರು. ಖ್ಯಾತ ಗೀತ ರಚನೆಕಾರ ಜಯಂತ ಕಾಯ್ಕಿಣಿ ಸಾಹಿತ್ಯವಿದೆ. ಸೋನು ನಿಗಂ ಹಾಡುವುದರೊಂದಿಗೆ ಬಾಲಿವುಡ್ ರೂಪದರ್ಶಿ ಮಾಧುರಿ ಕುಲಕರ್ಣಿ ಅವರೊಂದಿಗೆ ಅಭಿನಯಿಸಿದ್ದಾರೆ.

ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೋಟೇಲ್ ನಲ್ಲಿ ಆಲ್ಬಂ ಬಿಡುಗಡೆ ಮಾಡಿದ ನಂತರ ಖೇಣಿ ಮಾತನಾಡುತ್ತಾ, ಕರ್ನಾಟಕಕ್ಕೆ ನನ್ನ ಕೈಲಾದ ಕೊಡುಗೆ ನೀಡಬೇಕು ಎಂಬುದು ನನ್ನ ಬಹುದಿನದ ಬಯಕೆ. ಕನ್ನಡಿಗರು ಸಹ ನನ್ನ ಮೇಲೆ ಅಪಾರ ಅಭಿಮಾನ ತೋರಿದ್ದಾರೆ. ಕನ್ನಡ ಸಂಗೀತೋದ್ಯಮಕ್ಕೆ ನನ್ನ ಈ ಅಳಿಲು ಸೇವೆ ಸಂತೋಸ ತಂದಿದೆ ಎಂದರು.

ಆಲ್ಬಂ ತರಬೇಕೆಂಬ ನನ್ನಲ್ಲಿನ ಬಹುದಿನದ ತುಡಿತವನ್ನು ಬಾಲಿವುಡ್ ಗಾಯಕ ಸೋನು ನಿಗಂ ಬಳಿ ಹೇಳಿದೆ. ಬಾಲಿವುಡ್ ಗಿಂತಲೂ ಕನ್ನಡದಲ್ಲಿ ಅವರು ಹಾಡಿರುವ ಗೀತೆಗಳು ಜನಪ್ರಿಯವಾಗಿವೆ. ಆಲ್ಬಂ ಮಾಡಿಕೊಡಲು ಅವರು ಕೂಡಲೆ ಒಪ್ಪಿದರು. ಇದರ ಫಲಿತವೇ 'ನೀನೇ ಬರಿ ನೀನೆ'. ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ. ಸಂಗೀತ ಪ್ರೇಮಿಗಳು ಆಲ್ಬಂನಲ್ಲಿನ ಹಾಡುಗಳನ್ನು ಕೇಳಿ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದು ಖೇಣಿ ವಿನಂತಿಸಿಕೊಂಡರು.

ಗೀತ ರಚನೆಕಾರ ಜಯಂತ ಕಾಯ್ಕಿಣಿ ಮಾತನಾಡುತ್ತಾ, ಇದೇ ಮೊದಲ ಬಾರಿಗೆ ನನ್ನ ರಚನೆಯ ಗೀತೆಗಳು ಆಲ್ಬಂ ರೂಪದಲ್ಲಿ ಹೊರಬರುತ್ತಿರುವುದು ನನಗೆ ತುಂಬ ಸಂತಸ ತಂದಿದೆ. ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಆಲ್ಬಂನಲ್ಲಿನ ಸುಂದರ ತಾಣಗಳನ್ನು ನೋಡಿದರೆ ನಿಮಗೇ ಈ ವಿಷಯ ಮನದಟ್ಟಾಗುತ್ತದೆ ಎಂದರು.

ಒಟ್ಟು ಒಂಭತ್ತು ಹಾಡುಗಳನ್ನು ಒಳಗೊಂಡಿರುವ ಆಲ್ಬಂ ಗೀತೆಗಳನ್ನು ಮೈಸೂರು , ಮಡಿಕೇರಿ, ಕಾವೇರಿ ನಿಸರ್ಗಧಾಮ, ಬೆಂಗಳೂರು, ನಂದಿ ಗಿರಿಧಾಮದಲ್ಲಿ ಚಿತ್ರೀಕರಿಸಲಾಗಿದೆ. ಖೇಣಿ ಅವರ ಬಾಲ್ಯ ಜೀವನದಿಂದ ಹಿಡಿದು ಪ್ರಸ್ತುತ ಜೀವನದವರೆಗೂ ಕತೆ ಸಾಗಲಿದೆ. ಖೇಣಿ ಅವರ ಜೀವನಗಾಥೆ ಆಲ್ಬಂನಲ್ಲಿ ಸಾಗಲಿದೆ. ಖೇಣಿಯಾಗಿ ಸೋನು ನಿಗಂ ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada