»   » ಆಕಾಶ್‌ನಲ್ಲಿ 'ಮಾಯದಂಥ ಮಳೆ' ಬಂತಣ್ಣ

ಆಕಾಶ್‌ನಲ್ಲಿ 'ಮಾಯದಂಥ ಮಳೆ' ಬಂತಣ್ಣ

Posted By:
Subscribe to Filmibeat Kannada

'ಮಾಯದಂಥ ಮಳೆ' ಬಂತಣ್ಣ ಈ ಪ್ರಸಿದ್ಧ ಜನಪದ ಗೀತೆಯನ್ನು ಕೇಳದ ಕರಣಗಳು ಕನ್ನಡ ನಾಡಿನಲ್ಲಿ ಸಿಗಲಾರವು. ಈ ಹಾಡಿನ ಮೊದಲ ಸಾಲು ಈಗ ಚಿತ್ರದ ಶೀರ್ಷಿಕೆಯಾಗಿದೆ. ಗಂಗಾಪರಮೇಶ್ವರಿ ಪ್ರೋಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ 'ಮಾಯದಂಥ ಮಳೆ" ಎಂದು ನಾಮಕರಣಗೊಂಡಿದೆ.

ಈ ಸಂಗೀತ ಪ್ರಧಾನ ಚಿತ್ರದ ಹಾಡುಗಳ ಧ್ವನಿಮುದ್ರಣ ಆಕಾಶ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಮ್ಯೂಜಿಕ್ ಮೋಹನ್ ಅವರ ಸಾರಥ್ಯದಲ್ಲಿ ಸಂಪೂರ್ಣವಾಗಿದೆ. ಕವಿರಾಜ್, ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್ ಹಾಗೂ ಮಂಜುನಾಥರಾವ್ ರಚಿಸಿರುವ ಹಾಡುಗಳನ್ನು ಖ್ಯಾತ ಗಾಯಕರಾದ ಸೋನುನಿಗಂ, ಶ್ರೇಯಾಘೋಶಾಲ್, ಹೇಮಂತ್, ಚಿತ್ರ, ಟಿಪ್ಪು ಮೇಘ ಹಾಗೂ ಮಹತಿ ಹಾಡಿದ್ದಾರೆ.

ಸಾಕಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ವೀರೇಶ್ ದೊಡ್ಡಬಳ್ಳಾಪುರ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಉಸ್ತುವಾರಿ ಹೊತ್ತಿದ್ದಾರೆ. ಕೆರೆಮಲು ಬದ್ರಿ ಚಿತ್ರದ ನಿರ್ಮಾಪಕರಾಗಿದ್ದು, ಎ.ಸಿ.ಮಹೇಂದರ್ ಛಾಯಾಗ್ರಹಣದ ನಿರ್ವಹಣೆ ಮಾಡುತ್ತಿದ್ದಾರೆ. ದೇವಸಂಪತ್ ಹಾಗೂ ಚಿನ್ನಿಪ್ರಕಾಶ್ ಅವರ ನೃತ್ಯ ನಿರ್ದೇಶನ, ಕೆಂಪರಾಜ್ ಅವರ ಸಂಕಲವಿರುವ ಚಿತ್ರದ ಚಿತ್ರೀಕರಣ ಫೆಬ್ರವರಿ ನಡುವಿನ ವೇಳೆಯಲ್ಲಿ ಆರಂಭವಾಗಲಿದೆ. ತಾರಾಬಳಗದ ಆಯ್ಕೆ ಪ್ರಗತಿಯಲ್ಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada